ಸೋರುತ್ತಿರುವ ಶಾಲೆ : ಆತಂಕದಲ್ಲೇ ಮಕ್ಕಳಿಗೆ ಪಾಠ ಹೇಳುತ್ತಿರುವ ಶಿಕ್ಷಕರು
ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತ ಮಳೆಯಾಗುತ್ತಿರುವ ಕಾರಣ ತಾಲೂಕಿನ ಶೇ.80ರಷು ಶಾಲೆಗಳು ಸೋರಲು ಆರಂಭಿಸಿವೆ. ಇದರಿಂದ ಆತಂಕದ ಮಧ್ಯೆಯೇ ಮಕ್ಕಳು ಪಾಠ ಆಲಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಅಥಣಿ: ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತ ಮಳೆಯಾಗುತ್ತಿರುವ ಕಾರಣ ತಾಲೂಕಿನ ಶೇ.80ರಷು ಶಾಲೆಗಳು ಸೋರಲು ಆರಂಭಿಸಿವೆ. ಇದರಿಂದ ಆತಂಕದ ಮಧ್ಯೆಯೇ ಮಕ್ಕಳು ಪಾಠ ಆಲಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ತಾಲೂಕಿನ ಸುಮಾರು 200 ಶಾಲಾ ಛಾವಣಿ ಬಿರುಕು ಬಿಟ್ಟು ಸೋರುತ್ತಿವೆ. ಇವೆಲ್ಲ ಶಾಲಾ ಕಟ್ಟಡಗಳು ಸರ್ವ ಶಿಕ್ಷಣ ಅಭಿಯಾನ ಯೋಜನೆಯಲ್ಲಿ ಸುಮಾರು 10 ವರ್ಷಗಳ ಹಿಂದಷ್ಟೇ ನಿರ್ಮಾಣವಾದ ಕಟ್ಟಡಗಳಾಗಿವೆ. ಆದರೆ, ಶಾಲೆಗಳು ಕಳಪೆ ಕಾಮಗಾರಿಯಿಂದ ಕೂಡಿರುವ ಕಾರಣ ಇದೀಗ ಮಳೆಗೆ ಸೋರಲು ಆರಂಭಿಸಿವೆ. ಆದರೆ, ಹಳೇ ಹಂಚಿನ, ತಗಡಿನ ಶಾಲೆಗಳು ಇನ್ನೂ ಗಟ್ಟಿಮುಟ್ಟಾಗಿವೆ.
ಗುರುವಾರ ತಾಲೂಕಿನ ಪಾರ್ಥನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಚಾವಣಿ ಕುಸಿದು ಬಿದಿದೆ. ಆದರೆ, ಯಾವುದೇ ಅಪಾಯ ಆಗಿಲ್ಲ. ಆದರೆ, ಶಾಲೆಯ ಇನ್ನೂ ಎರಡು ಕೊಠಡಿಗಳು ಶಿಥಿಲಾವಸ್ಥೆಯಲ್ಲಿ ಇವೆ. ಹೀಗಾಗಿ ಇಲ್ಲಿನ ಪಾಲಕರು ಈ ಕಟ್ಟಡ ಕಟ್ಟಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಹೊಸ ಕೋಣೆ ನಿರ್ಮಾಣ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಸೋರುತ್ತಿರುವ ಸರ್ಕಾರಿ ಶಾಲಾ ಕಟ್ಟಡ: ಮಕ್ಕಳ ಗೋಳು ನೋಡಲಾಗದೇ ಶಾಲೆಯ ಛಾವಣಿ ಏರಿದ ಪೋಷಕರು
ತಾಲೂಕಿನಲ್ಲಿ ಮಳೆಯಿಂದ ಸೋರಿದ ಕೋಣೆಗಳ ಪೈಕಿ 180 ಕೋಣೆಗಳು ಸಂಪೂರ್ಣ ಶಿಥಿಲ ಆಗಿವೆ. ಅದು ಪಾಠ ಮಾಡಲು ಯೋಗ್ಯವಾದ ಸ್ಥಳವಲ್ಲ. ಅವುಗಳನ್ನು ಸಂಪೂರ್ಣ ಕೆಡವಿ ಕಟ್ಟಲೆ ಬೇಕಾಗುತ್ತದೆ. ಇದರ ಬಗ್ಗೆ ವರದಿ ಸಿದ್ಧ ಮಾಡಿ ಸರ್ಕಾರಕ್ಕೆ ಕಳಿಸಲಾಗುವುದು. ಅದಲ್ಲದೇ ಸುಮಾರು 125 ಶಾಲೆಗಳ ಆವರಣದಲ್ಲಿ ಹೆಸ್ಕಾಂ ವಿದ್ಯುತ್ ಕಂಬ ಟ್ರಾನ್ಸ್‌ಪಾರ್ಮರ್‌ಗಳನ್ನು ಇಲಾಖೆ ಅಳವಡಿಸಿದೆ. ಅವುಗಳು ಮಕ್ಕಳ ಆಟಕ್ಕೆ ಅಪಾಯವಾಗಿವೆ. ತಕ್ಷಣ ತೆಗೆಯಲು ಹೆಸ್ಕಾಂಗೆ ಪತ್ರ ವ್ಯವಹಾರ ಮಾಡಲಾಗಿದೆ ಎಂದು ಈ ಬಗ್ಗೆ ಕ್ಷೇತ್ರ ಶಿಕ್ಷಣಧಿಕಾರಿ ಬಸವರಾಜ ತಳವಾರ ಪ್ರತಿಕ್ರಿಯಿಸಿದ್ದಾರೆ.
ತಾಲೂಕಿನಲ್ಲಿ ಕಳಪೆ ಕಾಮಗಾರಿ ಆದ ಶಾಲೆಗಳ ಬಗ್ಗೆ ಸರ್ವೆ ಮಾಡಬೇಕು. ಹಾಳಾದ ಕಟ್ಟಡಗಳನ್ನು ಸಂಪೂರ್ಣವಾಗಿ ಕೆಡವಿ ಕಟ್ಟಿಸಬೇಕು. ಅವುಗಳ ಕೆಲಸ ಬೇಗ ನಡೆಯಬೇಕು ಎಂದು ಆಮ್ಆದ್ಮಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಪತಕುಮಾರ ಶೆಟ್ಟಿ ಆಗ್ರಹಿಸಿದ್ದಾರೆ.
ಹೊಸಪೇಟೆ: ಮಕ್ಕಳಿಗೆ ದೇವಸ್ಥಾನದ ಆವರಣವೇ ಪಾಠಶಾಲೆ..!
ಸೋರುವ ಶಾಲೆಗಳೆಂದರೆ ಅವು ನಮ್ಮ ಸರ್ಕಾರಿ ಶಾಲೆಗಳು ಎಂದು ಸರ್ವೆ ಸಾಮಾನ್ಯವಾಗಿ ಕೆಲವರು ಹಾಸ್ಯ ಮಾಡುತ್ತಾರೆ. ಅದು ಸತ್ಯ ಅನಿಸುತದೆ. ಸರ್ವ ಶಿಕ್ಷಣ ಅಭಿಯಾನದಲ್ಲಿ ನಿರ್ಮಿತವಾದ ಶೇ.70 ಶಾಲೆಯ ಕಟ್ಟಡಗಳ ಕಳಪೆ ಕಾಮಗಾರಿಗಳಾಗಿವೆ. ನಿಜವಾಗಿ ನಿರೀಕ್ಷೆ ಮಟ್ಟದ ಪ್ರಗತಿ ಆಗಿಲ್ಲ.
ಎಂದು ಕರವೇ ಕಾರ್ಯದರ್ಶಿ ಜಗನಾಥ ಭಾಮನೆ ಬೇಸರ ವ್ಯಕ್ತಪಡಿಸಿದರು.