ಗಾರ್ಮೆಂಟ್‌ ಮ್ಯಾನುಫ್ಯಾಕ್ಚರಿಂಗ್‌ ಟೆಕ್ನಾಲಜಿ ಪದವಿ ಕೋರ್ಸ್‌ಗೆ  ಅರ್ಜಿ ಆಹ್ವಾನ ಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್‌  ಕಾಲೇಜಿನಲ್ಲಿ ಸೇಫ್ಟಿ ಕೋರ್ಸ್‌ಗೆ ಅರ್ಜಿ ಆಹ್ವಾನ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿವಿಯಿಂದ ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿ

ಬಳ್ಳಾರಿ (ಜು.7): ಸಿದ್ಧ ಉಡುಪು ಸಂಶೋಧನಾ ತರಬೇತಿ ವಿನ್ಯಾಸ ಮತ್ತು ಅಭಿವೃದ್ಧಿ ಕೇಂದ್ರ ಬಳ್ಳಾರಿ (Garment Research Training Design And Development Center) ಸಂಸ್ಥೆಯು 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಥಮ ಬಿಎಸ್ಸಿ (ಗಾರ್ಮೆಂಟ್‌ ಮ್ಯಾನುಫ್ಯಾಕ್ಚರಿಂಗ್‌ ಟೆಕ್ನಾಲಜಿ) ವೃತ್ತಿಪರ ಪದವಿ ಕೋರ್ಸ್‌ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಜಂಟಿ ನಿರ್ದೇಶಕರು, ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೃತ್ತಿಪರ ಪದವಿ ಕೋರ್ಸ್‌ ಪ್ರವೇಶಾತಿಗೆ ಯಾವುದೇ ದ್ವಿತೀಯ ಪಿಯುಸಿ (ಕಲೆ, ವಾಣಿಜ್ಯ, ವಿಜ್ಞಾನ, ಶಿಕ್ಷಣ) ವಿಭಾಗದಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ಅರ್ಹರಿರುತ್ತಾರೆ. ಪ್ರವೇಶಾತಿಗೆ ಕೊನೆಯ ದಿನಾಂಕ ಆ.06 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಗರದ ನಲ್ಲಚೆರುವು ಮೊದಲನೇಯ ರೈಲ್ವೇ ಗೇಟ್‌ ಹತ್ತಿರ, ಜಿಲ್ಲಾ ಕ್ರೀಡಾಂಗಣ ಮೈದಾನ ರಸ್ತೆಯ ಜಿಆರ್‌ಟಿಡಿಸಿ ಕಾಲೇಜಿನ ಪ್ರಾಂಶುಪಾಲರ ಕಚೇರಿ ಹಾಗೂ ಮೊ:9845715502 ಹಾಗೂ ಬೋಧಕ ಸಿಬ್ಬಂದಿಗಳ ಮೊ:9741264655, 9844862576, 9844474235, 8123126127, 8277477912 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ವಾಯುಪಡೆ ಫ್ಲೈಯಿಂಗ್‌ ಬ್ರ್ಯಾಂಚ್‌ಗೆ ಮಂಗಳೂರಿನ ಮನಿಷಾ ಆಯ್ಕೆ

ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಕೆಲ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ:
ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್‌ (Bellary Government Polytechnic) 2022-23ನೇ ಸಾಲಿನ ಡಿಪ್ಲೋಮಾ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಪ್ರಥಮ ಸೆಮಿಸ್ಟರ್‌ ಡಿಪ್ಲೋಮಾ ಇನ್‌ ಇಂಡಸ್ಟ್ರಿಯಲ್‌ ಸೇಫ್ಟಿಕೋರ್ಸ್‌ ಪ್ರವೇಶಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವೇಶ ಬಯಸುವ ಅಭ್ಯರ್ಥಿಗಳು ಜು. 12ರ ಸಂಜೆ 5:30ರ ವರೆಗೆ ಸಂಸ್ಥೆಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮೆರಿಟ್‌ ಪಟ್ಟಿಯನ್ನು ಜು. 13ರಂದು ಮಧ್ಯಾಹ್ನ 3ಕ್ಕೆ ಸಂಸ್ಥೆಯಲ್ಲಿ ಪ್ರಕಟಿಸಲಾಗುತ್ತದೆ. ಆಕ್ಷೇಪಣೆಗಳಿಗಾಗಿ ಜು.14 ಮಧ್ಯಾಹ್ನ 1ಕ್ಕೆ ಖುದ್ದಾಗಿ ಹಾಜರಾಗತಕ್ಕದ್ದು. ಪ್ರವೇಶ ಪ್ರಕ್ರಿಯೆಯು ಜು15ರಂದು ಬೆಳಗ್ಗೆ 9ರಿಂದ ಪ್ರಾರಂಭವಾಗುವುದು ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆ ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲರ ಕಚೇರಿ ಹಾಗೂ ದೂ.08392-242228ಗೆ ಸಂಪರ್ಕಿಸಬಹುದು.

DGCA ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಭಾರತದ ಮೊದಲ ಟ್ರಾನ್ಸ್ಜಂಡರ್ ಫೈಲಟ್

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿವಿಯಿಂದ ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿ
ಮೈಸೂರು (ಜು.7): ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿವಿಯಿಂದ (ignou) ಜುಲೈ ಸಾಲಿನ ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜು.30 ರವರೆಗೆ ವಿಸ್ತರಿಸಲಾಗಿದೆ ಎಂದು ವಿವಿ ಸಹಾಯಕ ಪ್ರಾದೇಶಿಕ ನಿರ್ದೇಶಕಿ ಡಾ. ಹೇಮಾಮಾಲಿನಿ ತಿಳಿಸಿದರು.

ಸ್ನಾತಕ, ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ, ಸ್ನಾತಕೋತ್ತರ ಸರ್ಟಿಫಿಕೇಟ್‌ ಮತ್ತು ಸರ್ಟಿಫಿಕೇಟ್‌ ಕೋರ್ಸ್‌ಗಳಿಗೆ ಆನ್‌ಲೈನ್‌ ವಿಧಾನದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಗರದ ಶೇಷಾದ್ರಿ ಅಯ್ಯರ್‌ ರಸ್ತೆಯಲ್ಲಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಧ್ಯಯನ ಕೇಂದ್ರಕ್ಕೆ ಖುದ್ದು ಭೇಟಿ ಇಲ್ಲವೇ ದೂ. 0821- 2423374, ಮೊ. 99012 36476 ಸಂಪರ್ಕಿಸಬಹುದು ಎಂದರು.

ಇಂದಿರಾಗಾಂಧಿ ಮುಕ್ತ ವಿವಿಯಿಂದ ನೀಡುವ ಪದವಿ, ಸ್ನಾತಕೋತ್ತರ ಪದವಿ, ಸರ್ಟಿಫಿಕೇಟ್‌, ಡಿಪ್ಲೊಮಾ ಕೋರ್ಸ್‌ಗಳಿಗೆ ಭಾರತೀಯ ವಿಶ್ವ ವಿದ್ಯಾನಿಲಯಗಳ ಸಂಘ, ಯುಜಿಸಿ ಮೊದಲಾದವುಗಳಿಂದ ಪ್ರಮಾಣೀಕರಿಸಲಾಗುತ್ತಿದೆ. ಅಲ್ಲದೆ, ಎಲ್ಲಾ ವಿವಿಗಳ ಪದವಿಗಳಿಗೆ ಸಮಾನವಾಗಿರುತ್ತದೆ ಎಂದು ಅವರು ತಿಳಿಸಿದರು.

18 ವರ್ಷ ತುಂಬಿದ ಎಲ್ಲಾ ವಯಸ್ಸಿನವರು ಕೋರ್ಸ್‌ಗಳಿಗೆ ಬೇಕಾಗಿರುವ ಶೈಕ್ಷಣಿಕ ಅರ್ಹತೆ ಹೊಂದಿದ್ದರೆ ಪ್ರವೇಶ ಪಡೆಯಬಹುದಾಗಿದೆ. ಹೀಗಾಗಿ, ವಿಶೇಷವಾಗಿ ಗೃಹಿಣಿಯರು, ಶೋಷಿತರು, ಉದ್ಯೋಗಿಗಳು, ವೃತ್ತಿಪತರರು, ಸೈನಿಕರು, ಶಾಲೆ ಹಾಗೂ ಕಾಲೇಜನ್ನು ಅರ್ಧಕ್ಕೇ ಬಿಟ್ಟವರು ಸಹ ಪ್ರಯೋಜನಪಡೆಯಬಹುದು ಎಂದು ಅವರು ವಿವರಿಸಿದರು. ಪ್ರಾದೇಶಿಕ ಕೇಂದ್ರದ ಸಿದ್ದರಾಜು, ರವಿ, ರಮೇಶ್‌ ಇದ್ದರು.