Asianet Suvarna News Asianet Suvarna News

School Code ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಹೊಸದಾಗಿ ಶಾಲಾ ಸಂಕೇತ ಪಡೆಯಲು ದಿನಾಂಕ ವಿಸ್ತರಣೆ

* 2021-22 ನೇ ಸಾಲಿನ SSLC ಪರೀಕ್ಷೆ
* ಶಾಲಾ ಸಂಕೇತ ಪಡೆಯಲು ದಿನಾಂಕ ವಿಸ್ತರಣೆ
* ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ದಿನಾಂಕ ದಿನಾಂಕ ವಿಸ್ತರಣೆ ‌ಮಾಡಿದ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ

Application date extends for New school code Over SSLC Exams rbj
Author
Bengaluru, First Published Jan 7, 2022, 9:50 PM IST

ಬೆಂಗಳೂರು, (ಜ.07): ಹೊಸದಾಗಿ ಪ್ರಾರಂಭಗೊಂಡ ಸರ್ಕಾರಿ, ಅನುದಾನಿತ ಹಾಗೂ ‌ಮಾನ್ಯತೆ ಪಡೆದ ಶಾಲೆಗಳಿಗೆ ಸಂಕೇತ (School Code) ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ವಿದ್ಯಾರ್ಥಿಗಳನ್ನು ಎಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ(SSLC Exams) ನೋಂದಾಯಿಸಲು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಶಾಲಾ ಸಂಕೇತ ಪಡೆಯಲು ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ.

SSLC Time Table ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು (Online Application) ದಿನಾಂಕವನ್ನು ವಿಸ್ತರಣೆ ‌ಮಾಡಿ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(Karnataka Secondary Education Examination Board)  ಸುತ್ತೋಲೆ ಹೊರಡಿಸಿದೆ. ಜನವರಿ 7 ಕೊನೆಯ ದಿನವಾಗಿತ್ತು. ಇದೀಗ ಜನವರಿ 17 ರವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ.

ಹೊಸದಾಗಿ ಆರಂಭಗೊಂಡಿರುವ ಸರ್ಕಾರಿ, ಅನುದಾನಿತ ಮತ್ತು ಮಾನ್ಯತೆ ಪಡೆದ ಅನುದಾನರಹಿತ ಶಾಲೆಗಳು ಮೊದಲ ಬಾರಿಗೆ ವಿದ್ಯಾರ್ಥಿಗಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಲು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಶಾಲಾ ಸಂಕೇತ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸ್ಸೆಸ್ಸೆಲ್ಸಿ ಆರಂಭಗೊಂಡಿರುವ ಶಾಲೆಗಳು ಶಾಲಾ ಸಂಕೇತ ಪಡೆಯುವುದು ಕಡ್ಡಾಯ. ಈ ಶಾಲೆಗಳು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರ ಮೂಲಕ ಪ್ರಸ್ತಾವವನ್ನು ಭೌತಿಕವಾಗಿ ಮಂಡಳಿಗೆ ಸಲ್ಲಿಸಿ ಶಾಲಾ ಸಂಕೇತ ಪಡೆಯುವುದು ಈವರೆಗೂ ರೂಡಿಯಲ್ಲಿತ್ತು. ಆದರೆ, 2020-21ನೇ ಸಾಲಿನಿಂದ ಹೊಸ ಶಾಲಾ ಸಂಕೇತ ಪಡೆಯಲು ಶಾಲಾ ಆಡಳಿತ ಮಂಡಳಿಯು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸುವನ್ನು ಕಡ್ಡಾಯಗೊಳಿಸಲಾಗಿದೆ. 

ಪ್ರೌಢ ಶಿಕ್ಷಣ ಮಂಡಳಿಯ ವೆಬ್‌ಸೈಟ್‌ನಲ್ಲಿ ಶಾಲಾ ಮಂಜೂರಾತಿ ಪತ್ರ ಹಾಗೂ ಶಾಲಾ ಮಾನ್ಯತೆ ನವೀಕರಣದ ಆದೇಶದ ಪ್ರತಿಗಳನ್ನು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಪಿಡಿಎಫ್ ಮಾದರಿಯಲ್ಲಿ ಸ್ಕ್ಯಾನ್ ಮಾಡಿಕೊಂಡು ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಗೆ ಅನುಗುಣವಾಗಿ ಸಲ್ಲಿಸಬೇಕು.

ಎಸ್‌ಎಲ್‌ಸಿ ವೇಳಾಪಟ್ಟಿ ಪ್ರಕಟ
ಕರ್ನಾಟಕದಲ್ಲಿ ಪ್ರಸ್ತುತ ಕೊರೋನಾ ಹಾಗೂ ಒಮಿಕ್ರಾನ್ ತಾಂಡವವಾಡುತ್ತಿದೆ. ಇದರ ಮಧ್ಯೆ ಎಸ್‌ಎಸ್‌ಎಲ್‌ಸಿ(10ನೇ ತರಗತಿ) ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ.
 
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(Karnataka Secondary Education Examination Board) ಇಂದು (ಜ.06)   2021-22ನೇ ಸಾಲಿನ 10ನೇ ತರಗತಿ (SSLC)ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪರೀಕ್ಷೆಗಳು ನಡೆಯಲಿವೆ.

ಈ ವೇಳಾಪಟ್ಟಿಗೆ ಅಭ್ಯರ್ಥಿಗಳು, ಪೋಷಕರು ಆಕ್ಷೇಪಣೆಯನ್ನು ದಿನಾಂಕ 06-01-2022ರಿಂದ 14-01-2022ರೊಳಗಾಗಿ ಸಲ್ಲಿಸುವಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ಈ ದಿನಾಂಕದೊಳಗೆ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗದಿದ್ದಲ್ಲಿ ವೇಳಾಪಟ್ಟಿಯೇ ಅಂತಿಮ ಎಂದು ತೀರ್ಮಾನಿಸಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ.

ವೇಳಾಪಟ್ಟಿ ಈ ಕೆಳಗಿನಂತಿದೆ
ಮಾರ್ಚ್ 28 - ಕನ್ನಡ
ಮಾರ್ಚ್ 30 - ದ್ವಿತೀಯ ಭಾಷೆ ಇಂಗ್ಲೀಷ್, ಕನ್ನಡ
ಏಪ್ರಿಲ್ 1 - ಅರ್ಥಶಾಸ್ತ್ರ
ಏಪ್ರಿಲ್‌ 4 - ಗಣಿತ, ಸಮಾಜ ಶಾಸ್ತ್ರ
ಏಪ್ರಿಲ್ 6 - ಸಮಾಜ‌ ವಿಜ್ಞಾನ
ಏಪ್ರಿಲ್ 8 - ತೃತೀಯ ಭಾಷೆ ಹಿಂದಿ
ಏಪ್ರಿಲ್ 11 - ವಿಜ್ಞಾನ
 

Follow Us:
Download App:
  • android
  • ios