Asianet Suvarna News Asianet Suvarna News

SSLC Time Table ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

2021-22ನೇ ಸಾಲಿನ SSLC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ವೇಳಾಪಟ್ಟಿ ಪ್ರಕಟಿಸಿದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ
ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪರೀಕ್ಷೆ

SSLC annual exams provisional time table released by Karnataka Secondary Education Examination Board rbj
Author
Bengaluru, First Published Jan 6, 2022, 8:04 PM IST

ಬೆಂಗಳೂರು, (ಜ.06): ಕರ್ನಾಟಕದಲ್ಲಿ ಪ್ರಸ್ತುತ ಕೊರೋನಾ ಹಾಗೂ ಒಮಿಕ್ರಾನ್ ತಾಂಡವವಾಡುತ್ತಿದೆ. ಇದರ ಮಧ್ಯೆ ಎಸ್‌ಎಸ್‌ಎಲ್‌ಸಿ(10ನೇ ತರಗತಿ) ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ.
 
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(Karnataka Secondary Education Examination Board) ಇಂದು (ಜ.06)   2021-22ನೇ ಸಾಲಿನ 10ನೇ ತರಗತಿ (SSLC)ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪರೀಕ್ಷೆಗಳು ನಡೆಯಲಿವೆ.

Coronavirus ಶಾಲಾ-ಕಾಲೇಜು ಬಂದ್ ಬಗ್ಗೆ ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ

ಈ ವೇಳಾಪಟ್ಟಿಗೆ ಅಭ್ಯರ್ಥಿಗಳು, ಪೋಷಕರು ಆಕ್ಷೇಪಣೆಯನ್ನು ದಿನಾಂಕ 06-01-2022ರಿಂದ 14-01-2022ರೊಳಗಾಗಿ ಸಲ್ಲಿಸುವಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ಈ ದಿನಾಂಕದೊಳಗೆ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗದಿದ್ದಲ್ಲಿ ವೇಳಾಪಟ್ಟಿಯೇ ಅಂತಿಮ ಎಂದು ತೀರ್ಮಾನಿಸಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ.

ವೇಳಾಪಟ್ಟಿ ಈ ಕೆಳಗಿನಂತಿದೆ
ಮಾರ್ಚ್ 28 - ಕನ್ನಡ
ಮಾರ್ಚ್ 30 - ದ್ವಿತೀಯ ಭಾಷೆ ಇಂಗ್ಲೀಷ್, ಕನ್ನಡ
ಏಪ್ರಿಲ್ 1 - ಅರ್ಥಶಾಸ್ತ್ರ
ಏಪ್ರಿಲ್‌ 4 - ಗಣಿತ, ಸಮಾಜ ಶಾಸ್ತ್ರ
ಏಪ್ರಿಲ್ 6 - ಸಮಾಜ‌ ವಿಜ್ಞಾನ
ಏಪ್ರಿಲ್ 8 - ತೃತೀಯ ಭಾಷೆ ಹಿಂದಿ
ಏಪ್ರಿಲ್ 11 - ವಿಜ್ಞಾನ

ಕೊರೋನಾ ಭಯದ ಮಧ್ಯೆ ಇದೀಗ ಎಸ್‍ಎಸ್‍ಎಲ್‍ಸಿ ವೇಳಾಪಟ್ಟಿ ಪ್ರಕಟಗೊಂಡಿದದ್ದು ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಆತಂಕಕ್ಕೀಡು ಮಾಡಿದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಆತಂಕಗೊಳ್ಳುವುದು ಬೇಡ. ಚೆನ್ನಾಗಿ ಓದಿಕೊಂಡು ಪರೀಕ್ಷೆ ಬರೆಯಿರಿ.

ಈ ಹಿಂದೆ ಕೂಡ ಕೊರೋನಾ ಸಂದರ್ಭದಲ್ಲೂ ಸಹ ರಾಜ್ಯ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಯಶಸ್ವಿಯಾಗಿ ಪರೀಕ್ಷೆಗಳನ್ನ ನಡೆಸಿತ್ತು. ಅದರಂತೆ ಈ ಸಲವೂ ಸಹ ಎಲ್ಲಾ ಕ್ರಮಗಳನ್ನ ಕೈಗೊಳ್ಳುತ್ತಿದೆ. 

ಬೆಂಗಳೂರಲ್ಲಿ ಶಾಲಾ-ಕಾಲೇಜು ಬಂದ್
 

ಕೊರೋನಾ  ಹಾಗೂ ಓಮಿಕ್ರಾನ್ ( Omicron) ನಿಯಂತ್ರಣಕ್ಕಾಗಿ ಬೆಂಗಳೂರು ನಗರದಲ್ಲಿ 10, 11 ಮತ್ತು 12ನೇ ತರಗತಿ ಹೊತುಪಡಿಸಿ, 1 ರಿಂದ 9ನೇ ತರಗತಿವರೆಗೆ ಎಲ್ಲಾ ಮಾದರಿಯ ಶಾಲೆಗಳನ್ನು ಬಂದ್  ಮಾಡಲಾಗಿದೆ.

ಬೆಂಗಳೂರು ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಯಥಾಸ್ಥಿತಿಯಲ್ಲಿ ಶಾಲೆಗಳು ನಡೆಯಲಿವೆ ಎಂದು ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿನ ಬೆಂಗಳೂರು ಉತ್ತರ, ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ, ಎಲ್ ಕೆಜಿ, ಯುಕೆಜಿ ಹಾಗೂ 1 ರಿಂದ 9ನೇ  ತರಗತಿಗಳನ್ನು ದಿನಾಂಕ 06-01-2022 ರಿಂದ ದಿನಾಂಕ 19-01-2022ರವರೆಗೆ ಅಥವಾ ಮುಂದಿನ ಆದೇಶದವೆರೆಗ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಿದೆ.

ಆನ್ ಲೈನ್, ಇತರೆ ಮಾರ್ಗಗಳ ಮೂಲಕ ಕಲಿಕಾ, ಬೋಧನಾ ಚಟುವಟಿಕೆಗಳನ್ನು, ಮುಂದುವರೆಸಲು ಸೂಚಿಸಿದ್ದು, ಕೊರೋನಾ ಮುಂಜಾಗ್ರತೆಯ ಕಟ್ಟು ನಿಟ್ಟಿನ ಕ್ರಮದೊಂದಿಗೆ 10, 11 ಮತ್ತು 12ನೇ ತರಗತಿಗಳನ್ನು ಎಂದಿನಂತೆ ಆಫ್‌ಲೈನ್ ಕ್ಲಾಸ್ ನಡೆಸಲು ಹೇಳಿದೆ.

10 ರಿಂದ ದ್ವಿತೀಯ ಪಿಯುಸಿ ತರಗತಿಗಳು ಎಂದಿನಂತೆ ಸೋಮವಾರದಿಂದ ಶುಕ್ರವಾರದವರೆಗೆ ನಡೆಯಲಿವೆ. ಇದರೊಂದಿಗೆ ಮೆಡಿಕಲ್, ಪ್ಯಾರಾ ಮೆಡಿಕಲ್, ನರ್ಸಿಂಗ್ ವಿದ್ಯಾರ್ಥಿಗಳಿಗೂ ಯಾವುದೇ ನಿರ್ಬಂಧ ಹೇರಿಲ್ಲ.ಉಳಿದ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಭೌತಿಕ ತರಗತಿಗಳು ನಡೆಯಲಿವೆ. ವಿಕೆಂಡ್ ಕರ್ಫ್ಯೂ ಹೊರತುಪಡಿಸಿ, ಉಳಿದಂತೆ ಎಲ್ಲ ದಿನಗಳಲ್ಲೂ ಕೋವಿಡ್ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಿ ತರಗತಿಯನ್ನು ನಡೆಸಬಹುದಾಗಿದೆ.‌

ರೂಪ್ಸಾ ಸಂಘದ ಅಧ್ಯಕ್ಷರ ಅಭಿಪ್ರಾಯ
ಸಾಂಕ್ರಾಮಿಕ ರೋಗದಿಂದ ಜನರನ್ನು ರಕ್ಷಿಸುವುದರ ಜೊತೆಗೆ ಮಕ್ಕಳ ಶಿಕ್ಷಣ ಕುಂಠಿತ ಆಗದಂತೆ ಎಚ್ಚರ ವಹಿಸಲು ಖಾಸಗಿ ಶಾಲೆಗಳ ಸಂಘಟನೆಗಳು ಆಗ್ರಹಿಸಿವೆ. ಮಂಗಳವಾರ ನಡೆದ ಸಿಎಂ ನೇತೃತ್ವದ ಸಭೆಯಲ್ಲಿ ಬೆಂಗಳೂರು ನಗರಕ್ಕೆ ಸೀಮಿತವಾಗಿ ಮುಂದಿನ 15 ದಿನಗಳಿಗೆ 1-9 ನೇ ತರಗತಿ ಹಾಗೂ ಪದವಿ ಕಾಲೇಜುಗಳ ಭೌತಿಕ ತರಗತಿ ಬಂದ್ ಮಾಡಬೇಕು ಎಂದು ನಿರ್ಣಯ ತೆಗೆದುಕೊಂಡಿದೆ. ಹಾಗೇ ಗ್ರಾಮೀಣ ಭಾಗಗಳಿಗೆ ಶಾಲೆ ನಡೆಸಿ ಎಂದಿರುವುದನ್ನು ಸ್ವಾಗತಿಸುತ್ತೇವೆ ಅಂತ ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

ಆದರೆ ಬೆಂಗಳೂರು ವಿದ್ಯಾರ್ಥಿಗಳ ಸಂಬಂಧ ಆತಂಕ ಇದ್ದು, ಕಳೆದ ಎರಡು ವರ್ಷಗಳಲ್ಲಿ 6ನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ ಕೇವಲ 7 ತಿಂಗಳು ಮಾತ್ರ ಭೌತಿಕ ತರಗತಿಗಳು ನಡೆದಿವೆ. ಉಳಿದ 17 ತಿಂಗಳು ಶಾಲಾ ಶಿಕ್ಷಣ ದಿಂದ ವಂಚಿತರಾಗಿರುವ ವಿದ್ಯಾರ್ಥಿಗಳಲ್ಲಿ ಕಲಿಕೆ ಮರೀಚಿಕೆ ಆಗಿ ಅವರ ಮುಂದಿನ ಭವಿಷ್ಯ ಶೂನ್ಯ ಆಗುವ ಎಲ್ಲಾ ಮುನ್ಸೂಚನೆಗಳು ಗೋಚರಿಸುತ್ತಿವೆ ಅಂತ ಲೋಕೇಶ್ ತಾಳಿಕಟ್ಟೆ ಆತಂಕ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios