ವಿಟಿಯು ವಿಶ್ವವಿದ್ಯಾನಿಲಯದ ಧೋರಣೆಯಿಂದಾಗಿ ದಾವಣಗೆರೆ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಇದೀಗ ಕಾಲೇಜಿನಲ್ಲಿದ್ದ ಪಿಜಿ ಕೋರ್ಸ್ ಗಳನ್ನು ರದ್ದುಗೊಳಿಸಿ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸುವ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಎಬಿವಿಪಿ ಆರೋಪಿಸಿದೆ.

ವರದಿ : ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ. (ಅ.20): ವಿಟಿಯು ವಿಶ್ವವಿದ್ಯಾನಿಲಯದ ಧೋರಣೆಯಿಂದಾಗಿ ದಾವಣಗೆರೆ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಇದೀಗ ಕಾಲೇಜಿನಲ್ಲಿದ್ದ ಪಿಜಿ ಕೋರ್ಸ್ ಗಳನ್ನು ರದ್ದುಗೊಳಿಸಿ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸುವ ಷಡ್ಯಂತ್ರ ರೂಪಿಸಲಾಗುತ್ತಿದೆ ಇದು ಖಂಡನೀಯ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ನಗರಾಧ್ಯಕ್ಷ ಪವನ್ ರೇವಣ್ಕರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಫಿಯಾದಿಂದಾಗಿ ಸರ್ಕಾರದ ಸಂಸ್ಥೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ.ಪ್ರತಿ ವರ್ಷವೂ ವಿ.ಟಿ.ಯು ತನ್ನ ವ್ಯವಸ್ಥೆಗಿಂತಲೂ ತನ್ನ ದುರ್ವ್ಯವಸ್ಥೆಯಿಂದಾಗಿಯೇ ಹೆಚ್ಚು ಸುದ್ದಿಯಲ್ಲಿದೆ.ಈಗಲೂ ವಿಟಿಯು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಬರುವ ಕಾಲೇಜುಗಳಲ್ಲಿ ಪರಿಕ್ಷಾ ಮತ್ತು ಪಠ್ಯಕ್ರಮದ ವಿಚಾರವಾಗಿ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲ. ಇದೀಗ ಕಾಲೇಜಿನಲ್ಲಿದ್ದ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ರದ್ದುಗೊಳಿಸಲಾಗಿದೆ. ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹಕ್ಕನ್ನು ಮೊಟಕು ಗೊಳಿಸುವ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು. 2004 ನೇ ಇಸವಿಯಿಂದ ಇಲಿಯವರೆಗೂ, ಯು.ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂ.ಟೆಕ್‌ ಒಟ್ಟು 8 ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಇಡೀ ರಾಜ್ಯಕ್ಕೆ ಈ ಒಂದು ಕಾಲೇಜು ಮಾತ್ರ ಬಡ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿತ್ತು, ಪ್ರಸ್ತುತ ಈ ವರ್ಷದಲ್ಲಿ ಪ್ರಾಚಾರ್ಯರ ಬೇಜವಾಬ್ದಾರಿತನದಿಂದ ಎಂ.ಟೆಕ್ ಕೋರ್ಸ್ ಮುಚ್ಚಿಸಲು ವಿಶ್ವವಿದ್ಯಾಲಯದಿಂದ ಆದೇಶ ಬಂದಿದೆ. ಇದರಿಂದ ರಾಜ್ಯ ಮತ್ತು ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ.

ಉಪ ಕುಲಪತಿಗಳಾದ ವಿದ್ಯಾಶಂಕರ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಸಮಸ್ಯೆ ಆಲಿಸಬೇಕು ಹಾಗೂ ಈ ಹಿಂದಿನ ವಿ.ಸಿ ಮಾಡಿ ಹೊಗಿರುವ ಆದೇಶ ರದ್ದು ಮಾಡಿ ಸ್ನಾತಕೋತ್ತರ ಕೋರ್ಸ್‌ಗಳನ್ನು ಮರು ಸ್ಥಾಪಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳು,ಶಾಸಕರು, ಸಂಸದರು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರಮುಖೇನ ಮನವಿ ಸಲ್ಲಿಸಲಾಗಿದೆ ಎಂದರು.

ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾತಿಗೆ ನ.30 ಕೊನೆ ದಿನ: ಸಚಿವ ಅಶ್ವತ್ಥ್‌ ನಾರಾಯಣ

ಎಬಿವಿಪಿಯಿಂದ ಕುಲಸಚಿವರಿಗೆ ಮನವಿ ಸಲ್ಲಿಕೆ: ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕ ಪದವಿಯ ಮೂರನೇ ಹಾಗೂ ಐದನೇ ಸೆಮಿಸ್ಟರ್‌ನ ಫಲಿತಾಂಶ ಪ್ರಕಟಿಸುವಂತೆ ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ನಿರ್ಮಲರಾಜುಗೆ ಎಬಿವಿಪಿಯಿಂದ ಮನವಿ ಸಲ್ಲಿಸಲಾಯಿತು.

ಪರೀಕ್ಷೆ ಮುಗಿದು ಏಳು ತಿಂಗಳು ಕಳೆದಿದ್ದು ಮರುಮೌಲ್ಯಮಾಪನ ಪರೀಕ್ಷಾ ಫಲಿತಾಂಶ ಪ್ರಕಟಿಸಿಲ್ಲ. 6ನೇ ಸೆಮಿಸ್ಟರ್‌ ಪರೀಕ್ಷೆಗಳೂ ಮುಗಿದಿದ್ದರೂ ಕೂಡ ಹಿಂದಿನ ಸೆಮಿಸ್ಟರ್‌ ಮರುಮೌಲ್ಯಮಾಪನ ಫಲಿತಾಂಶ ಪ್ರಕಟಿಸಿಲ್ಲ. ಇದರಿಂದ ಮುಂದಿನ ಉನ್ನತ ವ್ಯಾಸಂಗಕ್ಕೆ ಹೋಗಲು ಹಾಗೂ ಉದ್ಯೋಗಕ್ಕೆ ಹೋಗಲು ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

RAICHURU: 2ನೇ ತರಗತಿ ವಿದ್ಯಾರ್ಥಿಗಳಿಗೆ ಎಬಿಸಿಡಿ ಕಲಿಸಿಕೊಡದ ಶಿಕ್ಷಕ, ಎಸಿ ತರಾಟೆ

2021-22ನೇ ಸಾಲಿನ ಸ್ನಾತಕ ಪದವಿಗಳ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಥಮ ವರ್ಷದ ಪ್ರಥಮ ಸೆಮಿಸ್ಟರ್‌ ಪರೀಕ್ಷೆ ಮುಗಿದು 5 ತಿಂಗಳಾಗಿದರೂ ಇಲ್ಲಿವರೆಗೂ ಫಲಿತಾಂಶ ಪ್ರಕಟಿಸಿಲ್ಲ. ಅಕ್ಟೋಬರ್‌ 28ರಂದು ಎರಡನೇ ಸೆಮಿಸ್ಟರ್‌ ಪರೀಕ್ಷೆ ಇದ್ದು ಹಾಗೂ ಸರ್ಕಾರಿ ಹಾಸ್ಟೆಲ್‌ ವಿದ್ಯಾರ್ಥಿ ವೇತನ ಅರ್ಜಿ ಹಾಕಲು ತೊಂದರೆ ಉಂಟಾಗಿದೆ. ಫಲಿತಾಂಶ ಬೇಗನೇ ಪ್ರಕಟಿಸಬೇಕು. ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕ ಪದವಿ ವಿದ್ಯಾರ್ಥಿಗಳ ಮೂರನೇ, ಐದನೇ ಸೆಮಿಸ್ಟರ್‌ ಮರುಮೌಲ್ಯಮಾಪನ ಫಲಿತಾಂಶ ಹಾಗೂ ಪ್ರಥಮ ಸೆಮಿಸ್ಟರ್‌ ಫಲಿತಾಂಶ ಪ್ರಕಟಿಸಿ ಹಾಗೂ ಎರಡನೇ ಸೆಮಿಸ್ಟರ್‌ ಪರೀಕ್ಷೆಯಲ್ಲಿ ಒಂದೊಂದು ದಿನ ಆದರೂ ಅಂತರ ನೀಡಿ ಅನೂಕೂಲ ಮಾಡಿಕೊಡಬೇಕಾಗಿ ವಿದ್ಯಾರ್ಥಿಗಳ ಪರವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮನವಿ ಮಾಡಿದೆ.

ತುಮಕೂರು ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟಿಲ್‌, ರವಿಕುಮಾರ್‌, ರೋಹಿತ್‌ಗೌಡ, ತರುಣ್‌ಗೌಡ, ಪ್ರಮೋದ್‌, ನವ್ಯ, ಮದುಮಾಲ, ಮೋನಿಶ, ಅಭಿಷೇಕ್‌, ನಿತೀನ್‌, ಪುರುಷೋತ್ತಮ್‌, ಅನನ್ಯ, ಮಾನಸ, ಸಿಂಧು, ಪಿಂಕಿ, ಸೈಯ್ಯದ್‌ ಇತರರು ಉಪಸ್ಥಿತರಿದ್ದರು.