ಲೈಂಗಿಕ ದೌರ್ಜನ್ಯ ತಡೆಯುವ ಕುರಿತು ಶಾಲೆಯೊಂದರಲ್ಲಿ ನಡೆದ ತರಬೇತಿಯ ವಿಡಿಯೋವನ್ನು ತಿರುಚಿ, ಸಾಮಾಜಿಕ ಜಾಲತಾಣಗಳಲ್ಲಿ ದುರುದ್ದೇಶಪೂರ್ವಕವಾಗಿ ಹಂಚಲಾಗುತ್ತಿದೆ. ಬಾಲಕಿಯರ ರಕ್ಷಣಾ ತಂತ್ರಗಳನ್ನು ತಪ್ಪಾಗಿ ಅರ್ಥೈಸಿ, ಶಾಲೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ನೆಟ್ಟಿಗರು ಇಂತಹ ತಿರುಚಿದ ವಿಡಿಯೋಗಳನ್ನು ವರದಿ ಮಾಡುವಂತೆ ಸಲಹೆ ನೀಡಿದ್ದಾರೆ.
ಇಲ್ಲಿ ಒಂದಿಷ್ಟು ಶಾಲಾ ಬಾಲಕಿಯರು ಮಲಗಿಕೊಂಡಿದ್ದಾರೆ. ಮತ್ತೊಂದಿಷ್ಟು ಬಾಲಕಿಯರು ಅವರ ಮೇಲೆ ಬೀಳುತ್ತಾರೆ. ಎಲ್ಲರೂ ಇಲ್ಲಿ ಶಾಲೆಯ ಸಮವಸ್ತ್ರ ಧರಿಸಿದ್ದಾರೆ. ಅಂದರೆ ಇದು ಶಾಲೆಯ ಒಳಗೇ ನಡೆಯುತ್ತಿರುವುದು ಎನ್ನುವುದು ಖಚಿತ. ಆ ನಿಂತುಕೊಂಡ ಬಾಲಕಿಯರು ಮಲಗಿರುವ ಬಾಲಕಿಯರ ಮೇಲೆ ಬಿದ್ದು ಅವರನ್ನು ಚುಂಬಿಸುತ್ತಿದ್ದಾರೆ. ಅಲ್ಲಿಗೆ ವಿಡಿಯೋ ಕಟ್ ಆಗಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸುತ್ತಿದೆ. ನಿಮ್ಮ ವಾಟ್ಸ್ಆ್ಯಪ್ಗೂ ಈ ವಿಡಿಯೋ ಬಂದಿರಬಹುದು. ಇದೇನಿದು ನಡೀತಿದೆ ಶಾಲೆಯಲ್ಲಿ ಎನ್ನುವ ಕ್ಯಾಪ್ಷನ್ ಜೊತೆ ಈ ವಿಡಿಯೋ ವೈರಲ್ ಆಗಿದೆ. ಐಶು ಎನ್ನುವ ಐಡಿಯಿಂದ ಇನ್ಸ್ಟಾಗ್ರಾಮ್ನಲ್ಲಿಯೂ ಈ ವಿಡಿಯೋ ಹರಿದಾಡುತ್ತಿದೆ.
ಈ ವೈರಲ್ ವಿಡಿಯೋ ಅಷ್ಟೇ ನೋಡಿದರೆ ಬಾಲಕಿಯರು ರೊಮಾನ್ಸ್ ಮಾಡುತ್ತಿದ್ದಾರೆ ಎನ್ನಿಸುವುದು ಉಂಟು. ಇದನ್ನಷ್ಟೇ ನೋಡಿ ಶಾಲೆಯ ವಿರುದ್ಧ ಕಮೆಂಟ್ಗಳಲ್ಲಿ ಹಲವರು ಕಿಡಿ ಕಾರುತ್ತಿದ್ದಾರೆ. ಇದರಲ್ಲಿ ಕೆಲವು ಬಾಲಕಿಯರ ಮುಖ ಕೂಡ ಕಾಣುವ ಕಾರಣದಿಂದ ಇದು ಶಾಕಿಂಗ್ ಎನ್ನಿಸುವುದೂ ಉಂಟು. ಆದರೆ ನೆನಪಿರಲಿ. ಇದು ತಂತ್ರಜ್ಞಾನದ ಯುಗ. ಹಾಗಂತ ಈ ವಿಡಿಯೋ ಏನೂ ನಕಲಿಯಲ್ಲ, ಅಸಲಿಯದ್ದೇ. ಆದರೆ ಕೆಟ್ಟ, ಹೀನ ಮನಸ್ಥಿತಿಯ ಜನರು ಲೈಕ್ಸ್, ಕಮೆಂಟ್ಸ್, ಶೇರ್ಗಾಗಿ ಈ ವಿಡಿಯೋದ ಇಷ್ಟೇ ಭಾಗವನ್ನು ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ. ಇಲ್ಲಿರುವ ಹೆಣ್ಣುಮಕ್ಕಳ ಹಾಗೂ ಶಾಲೆಯ ಮರ್ಯಾದೆಯನ್ನು ತೆಗೆಯುವ ಕಾರ್ಯದಲ್ಲಿ ತೊಡಗಿದ್ದಾರೆ.
ಹಿಂದೂ ಹೆಣ್ಣುಮಕ್ಕಳೇ ಈತನ ಟಾರ್ಗೆಟ್! ನಾಪತ್ತೆಯಾದ 11 ಬಾಲಕಿಯರು ಸಿಕ್ಕಿದ್ದು... ಮೈ ನಡುಗಿಸುವ ಕಥೆ ಕೇಳಿ..
ಅಷ್ಟಕ್ಕೂ ಈ ವಿಡಿಯೋದ ಹಿಂದೆ ಇರುವ ಒಳ್ಳೆಯ ವಿಚಾರವೇ ಬೇರೆ. ಯಾರಾದರೂ ಲೈಂಗಿಕ ಕಿರುಕುಳ ಕೊಡಲು ಬಂದಾಗ ಅಥವಾ ಅತ್ಯಾಚಾರ ಮಾಡಲು ಬಂದಾಗ ಅದರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವ ಬಗ್ಗೆ ಶಾಲಾ ಮಕ್ಕಳಿಗೆ ಕಲಿಸುತ್ತಿರುವ ಪಾಠ ಇದು. ಕಾಮುಕರು ಮೇಲಿನಿಂದ ಧುಮುಕಿ ಹೀನಕೃತ್ಯವನ್ನು ಮಾಡಲು ಬಂದರೆ, ಹೇಗೆ ತಪ್ಪಿಸಿಕೊಳ್ಳಬೇಕು. ಯಾವ ಭಾಗಕ್ಕೆ ಅವರಿಗೆ ಪೆಟ್ಟು ನೀಡಬೇಕು, ಹೇಗೆ ಅವರನ್ನು ಕೆಳಕ್ಕೆ ಬೀಳಿಸಬೇಕು ಎಂಬಿತ್ಯಾದಿಯಾಗಿ ಬಾಲಕಿಯರಿಗೆ ನೀಡುತ್ತಿರುವ ಶಿಕ್ಷಣದ ವಿಡಿಯೋ ಇದಾಗಿದೆ.
ಇದರ ಅಸಲಿಯತ್ತನ್ನು ಅರಿತ ಕೆಲವೇ ಕೆಲವು ನೆಟ್ಟಿಗರು ಇಂಥ ವಿಡಿಯೋ ಶೇರ್ ಮಾಡಿದ ಕೆಟ್ಟ ಮನಸ್ಥಿತಿಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಒಂದು ಒಳ್ಳೆಯ ಉದ್ದೇಶ ಇಟ್ಟುಕೊಂಡಿರುವ ಮಾಡಿರುವ ವಿಡಿಯೋವನ್ನು ಎಡಿಟ್ ಮಾಡಿ ತಮಗೆ ಬೇಕಾದ ಭಾಗವನ್ನು ಮಾತ್ರ ಶೇರ್ ಮಾಡಿ, ಅದಕ್ಕೆ ಶಾಲೆಯಲ್ಲಿ ಅಶ್ಲೀಲತೆಯನ್ನು ಕಲಿಸುತ್ತಿರುವಂತೆ ತೋರಿಸುತ್ತಿರುವವರ ವಿರುದ್ಧ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದರ ಅಸಲಿಯತ್ತು ತಿಳಿಯದೇ ಈ ವಿಡಿಯೋ ಶೇರ್ ಆಗುತ್ತಲೇ ಇದೆ. ತಮಗೆ ಬೇಕಾದ ರೀತಿಯಲ್ಲಿ ಅಸಭ್ಯ, ಅಶ್ಲೀಲ ಕಮೆಂಟ್, ಶೀರ್ಷಿಕೆಗಳನ್ನು ಹಾಕುವುದು ಮುಂದುವರೆದಿದೆ. ಇಂಥ ವಿಡಿಯೋ ಶೇರ್ ಮಾಡಿದರೆ, ಅದನ್ನು ರಿಪೋರ್ಟ್ (Report) ಮಾಡಿದರೆ ಬುದ್ಧಿ ಬರುತ್ತದೆ ಎಂಬುದು ನೆಟ್ಟಿಗರ ಅಭಿಮತ.
ಬೇಳೆ ಬೇಯಿಸುವಾಗ ಬರುವ ನೊರೆ ಎಷ್ಟು ಡೇಂಜರ್ ಎನ್ನುವುದು ಗೊತ್ತಾ? ಸೇವಿಸಿದ್ರೆ ಏನಾಗುತ್ತೆ ನೋಡಿ!
