ಓಬಿಸಿ ಹಾಸ್ಟೆಲ್‌ಗಳಲ್ಲಿ ರಾಷ್ಟ್ರಪ್ರೇಮದ ಪಾಠ: ಕೋಟಾ ಶ್ರೀನಿವಾಸ ಪೂಜಾರಿ

ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳ ಎಲ್ಲ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನು ರಾಷ್ಟ್ರಭಕ್ತಿಯ ಪಾಠ ಬೋಧನೆಯಾಗಲಿದೆ. ಹಾಸ್ಟೆಲ್‌ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮವನ್ನು ಉದ್ದೀಪನಗೊಳಿಸುವ ಇಂಥದ್ದೊಂದು ಕಾರ್ಯಕ್ರಮಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂದಾಗಿದೆ.

A lesson in patriotism in OBC hostels says kota mangaluru rav

ಆತ್ಮಭೂಷಣ್‌

 ಮಂಗಳೂರು (ನ.30) : ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳ ಎಲ್ಲ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನು ರಾಷ್ಟ್ರಭಕ್ತಿಯ ಪಾಠ ಬೋಧನೆಯಾಗಲಿದೆ. ಹಾಸ್ಟೆಲ್‌ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮವನ್ನು ಉದ್ದೀಪನಗೊಳಿಸುವ ಇಂಥದ್ದೊಂದು ಕಾರ್ಯಕ್ರಮಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂದಾಗಿದೆ.

ಹಾದಿ ತಪ್ಪುವ ಯುವ ಜನಾಂಗವನ್ನು ಜಾಗೃತಗೊಳಿಸುವ ದಿಶೆಯಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಸಾಧ್ಯವಾದಷ್ಟುರಾಷ್ಟ್ರಭಕ್ತಿ ಮತ್ತು ರಾಷ್ಟ್ರಶಕ್ತಿ ಪಸರಿಸುವುದು ಇದರ ಉದ್ದೇಶ. ಇದಕ್ಕಾಗಿ ರಾಜ್ಯ ಸರ್ಕಾರದ ಎಲ್ಲ ವಸತಿ ಶಾಲೆಯಗಳಲ್ಲಿ ರಾಷ್ಟ್ರಪ್ರೇಮ ಕುರಿತ ಬೋಧನಾ ಅವಧಿ ಆರಂಭಗೊಳ್ಳಲಿದೆ.

ಬಿಜೆಪಿಗರ ಢೋಂಗಿತನದ ರಾಷ್ಟ್ರಭಕ್ತಿ ಬೇಡ: ಸಿದ್ದರಾಮಯ್ಯ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಶಾಲಾ ಕಾಲೇಜುಗಳಲ್ಲಿ ರಾಷ್ಟ್ರೀಯತೆ ಬೋಧಿಸಿದರೆ, ರಾಜ್ಯದ ಹಾಸ್ಟೆಲ್‌ಗಳಲ್ಲಿ ಇದು ಪ್ರತ್ಯೇಕ ಕಾಯ ರ್‍ಕ್ರಮವಾಗಿ ರೂಪುಗೊಳ್ಳಲಿದೆ.

ರಾಷ್ಟ್ರ ಪ್ರೇಮಿಗಳ ಬೋಧನೆ: ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಲಿದ್ದಾರೆ. ಹಾಸ್ಟೆಲ್‌ ವಿದ್ಯಾರ್ಥಿ ಗಳಿಗೆ ರಾಷ್ಟ್ರ ಪ್ರೇಮ ಬೋಧಿಸುವವರು ಇಂಥವರೇ ಆಗಬೇಕೆಂದೇನೂ ಇಲ್ಲ. ರಾಷ್ಟ್ರಪರ ಚಿಂತನೆಯುಳ್ಳ ಯಾರು ಬೇಕಾದರೂ ಮಾತನಾಡಬಹುದು. ಆದರೆ ವಿಚಾರ ಮಾತ್ರ ರಾಷ್ಟ್ರ ಪ್ರೇಮ ಆಗಿರಬೇಕು. ಇದನ್ನು ಹೊರತುಪಡಿಸಿ ಬೇರೆ ಯಾವ ವಿಚಾರಕ್ಕೂ ಅವಕಾಶ ಇಲ್ಲ. ಇಂದಿನ ಮಕ್ಕಳು ಮುಂದೆ ರಾಷ್ಟ್ರ ಪ್ರೇಮಿಗಳಾಗಿ ಭಾರತಕ್ಕೆ ಕೊಡುಗೆ ನೀಡಬೇಕು ಎಂಬುದೇ ಈ ಕಾರ್ಯಕ್ರಮದ ತಿರುಳಾಗಿದೆ.

ಪ್ರತಿ ಬೋಧನಾ ಅವಧಿ 45 ನಿಮಿಷದ್ದಾಗಿದ್ದು, 35 ನಿಮಿಷ ಭಾಷಣ ಹಾಗೂ 10 ನಿಮಿಷ ಪ್ರಶ್ನೋತ್ತರಕ್ಕೆ ಅವಕಾಶ ಇದೆ. ರಾಷ್ಟ್ರ ಪ್ರೇಮದ ಬಗ್ಗೆ ಮಾತನಾಡಲು ಆಗಮಿಸುವ ಸಂಪನ್ಮೂಲ ವ್ಯಕ್ತಿಗಳಿಗೆ ಪ್ರಯಾಣ ವೆಚ್ಚವನ್ನು ಮಾತ್ರ ಭರಿಸಲಾಗುತ್ತದೆ.

ಸೇನಾ ಪೂರ್ವ ತರಬೇತಿ ಕೇಂದ್ರದಲ್ಲೂ ಶುರು: ರಾಜ್ಯ ಸರ್ಕಾರ ಸ್ಥಾಪಿಸಿದ ಸೇನಾ ಪೂರ್ವ ತರಬೇತಿ ಕೇಂದ್ರಗಳಲ್ಲಿ ರಾಷ್ಟ್ರಪ್ರೇಮ ಬೋಧಿಸುವ ಬೋಧನಾ ಅವಧಿ ಈಗಾಗಲೇ ಶುರುವಾಗಿದೆ. ರಾಜ್ಯದಲ್ಲಿ ಪ್ರಸಕ್ತ ಮಂಗಳೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೇನಾ ಪೂರ್ವ ತರಬೇತಿ ಕೇಂದ್ರ ಕಾರ್ಯಾಚರಿಸುತ್ತಿದೆ. ಈ ಕೇಂದ್ರಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳು ಸೇನಾಪೂರ್ವ ತರಬೇತಿ ಪಡೆಯುತ್ತಿದ್ದಾರೆ. ನಾಲ್ಕು ತಿಂಗಳ ಈ ತರಬೇತಿ ಅವಧಿಯಲ್ಲಿ ಪ್ರತಿ 15 ದಿನಕ್ಕೊಮ್ಮೆ ರಾಷ್ಟ್ರಪ್ರೇಮದ ಬಗ್ಗೆ ಭಾಷಣ ಇರುತ್ತದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೇತೃತ್ವದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ (ಕ್ರೈಸ್‌) ಅಡಿಯಲ್ಲಿ 830 ವಸತಿ ಶಾಲೆ, ಸಮಾಜ ಕಲ್ಯಾಣ ಇಲಾಖೆಯ 1,500 ಹಾಸ್ಟೆಲ್‌ ಹಾಗೂ ಹಿಂದುಳಿದ ವರ್ಗ ಇಲಾಖೆಯ 2,400 ಹಾಸ್ಟೆಲ್‌ಗಳು ಇದ್ದು, ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದಾರೆ. ಹಾಸ್ಟೆಲ್‌ನಲ್ಲಿ ಪಠ್ಯ, ಪಠ್ಯೇತರ ಅಭ್ಯಾಸ ವೇಳೆಯಲ್ಲಿ ರಾಷ್ಟ್ರ ಪ್ರೇಮದ ಪಾಠವೂ ಶುರುವಾಗಲಿದೆ.

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ನೇರ ಹಣ ಪಾವತಿ: ಆಸ್ಪತ್ರೆಯಿಂದಲೇ ಸಭೆ ನಡೆಸಿದ ಕೋಟಾ ಶ್ರೀನಿವಾಸ ಪೂಜಾರಿ

ಹಾಸ್ಟೆಲ್‌ ವಿದ್ಯಾರ್ಥಿಗಳಲ್ಲೂ ರಾಷ್ಟ್ರಭಕ್ತಿ ಮೇಳೈಸಬೇಕು, ಅವರು ರಾಷ್ಟ್ರಕ್ಕಾಗಿ ಬದುಕಬೇಕು, ರಾಷ್ಟ್ರ ಕಟ್ಟುವ ಕಾಯಕದಲ್ಲಿ ನಿರತರಾಗಬೇಕು ಎಂಬ ಆಶಯದಿಂದ ರಾಷ್ಟ್ರ ಪ್ರೇಮದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಭಾಷಣ, ಸಂವಾದ ಏರ್ಪಡಿಸಲಾಗುತ್ತದೆ. ಇದು ಇತರರಿಗೂ ಮಾದರಿಯಾಗಬೇಕು. ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಉತ್ತಮ ಭವಿ ಷ್ಯ ರೂಪಿಸಲು ನೆರವಾಗಬಲ್ಲದು.

- ಕೋಟ ಶ್ರೀನಿವಾಸ ಪೂಜಾರಿ, ಸಚಿವರು, ಹಿಂ.ವ.ಕಲ್ಯಾಣ ಇಲಾಖೆ

Latest Videos
Follow Us:
Download App:
  • android
  • ios