64 ವರ್ಷ ವಯಸ್ಸು. ಸ್ಟೇಟ್ ಬ್ಯಾಂಕ್ ಮ್ಯಾನೇಜರ್ ಆಗಿ ನಿವೃತ್ತಿ. ಇನ್ನೇನು ಬೇಕು ಹೇಳಿ ವಿಶ್ರಾಂತಿ ಜೀವನಕ್ಕೆ. ಆದರೆ ಇಲ್ಲೊಬ್ಬರು ನಿವೃತ್ತಿಯಾಗಿ ಸುಮ್ಮನೆ ಕೂರಲಿಲ್ಲ. ಬದಲಾಗಿ ತಮ್ಮ ಕನಸು ಸಾಕಾರಗೊಳಿಸಲು NEET ಪರೀಕ್ಷೆ ಪಾಸ್ ಮಾಡಿಸಿ, ಇದೀಗ ಇಳಿ ವಯಸ್ಸಿನಲ್ಲಿ MBBSಗೆ ಅಡ್ಮೀಷನ್ ಪಡೆದು ವೈದ್ಯರಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಈ ಸಾಹಸಗಾಥೆ ಇಲ್ಲಿದೆ.
ಸಂಬಾಲ್‌ಪುರ್(ಡಿ.25): ವಯಸ್ಸು ಕೇವಲ ನಂಬರ್ ಅಷ್ಟೆ. ಇದು ಹಲವು ಬಾರಿ, ಹಲವು ಕ್ಷೇತ್ರದಲ್ಲಿ ಸಾಬೀತಾಗಿದೆ. ಹುಟ್ಟಿನಿಂದ ಸಾಯುವವರೆಗೂ ಕಲಿಕೆ ನಿರಂತರ. ಇದೀಗ ಸ್ಟೇಟ್ ಬ್ಯಾಂಕ್ ಮ್ಯಾನೇಜರ್ ಆಗಿ ನಿವೃತ್ತಿಯಾದ 64 ವರ್ಷದ ಜಯಕಿಶೋರ್ ಪ್ರಧಾನ್ ಅವರ ಸಾಹಸಗಾಥೆ ಎಲ್ಲರಿಗೂ ಸ್ಪೂರ್ತಿಯಾಗಿದೆ.
ಜಯಕಿಶೋರ್ ಪ್ರಧಾನ್ ಒಡಿಶಾದ ಬಾರ್ಗಾ ಜಿಲ್ಲೆಯ ಅತ್ತಿಬಿರಾದಲ್ಲಿ ಸ್ಟೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದರು. ಸ್ಟೇಟ್ ಬ್ಯಾಂಕ್ ಅಸ್ಟಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಜಯಕಿಶೋರ್ 2016ರಲ್ಲಿ ನಿವೃತ್ತಿಯಾದರು. ಬ್ಯಾಂಕ್ ಉದ್ಯೋಗಿದ್ದರೂ ಇವರ ಮನಸ್ಸು ಬಡವರು, ವಿಶೇಷ ಚೇತನರ ಸುಶ್ರೂಷೆಗಾಗಿ ತುಡಿಯುತ್ತಿತ್ತು. ಹೀಗಾಗಿ ನಿವೃತ್ತಿಯಾದ ಬೆನ್ನಲ್ಲೇ ತಮ್ಮ ಕನಸು ಸಾಕಾರ ಮಾಡಲು ಅವಿರತ ಪ್ರಯತ್ನಕ್ಕೆ ಮುಂದಾದರು.
ಬಡ ವಿದ್ಯಾರ್ಥಿ ವೈದ್ಯನಾಗುವ ಕನಸಿಗೆ ನೀರೆರದ ಸುವರ್ಣ ನ್ಯೂಸ್: ಹರಿದು ಬಂದ ನೆರವಿನ ಮಹಾಪೂರ
ಬಡವರು ಹಾಗೂ ವಿಶೇಷ ಚೇತನರ ಆರೈಕೆ ಮಾಡಲು, ಅವರಿಗೆ ಸೂಕ್ತ ಚಿಕಿತ್ಸೆ, ಕಡಿಮೆ ವೆಚ್ಚದಲ್ಲಿ ಅವರ ಆರೋಗ್ಯ ಸುಧಾರಿಸುವುದು ಜಯಕಿಶೋರ್ ಬಯಕೆಯಾಗಿತ್ತು. ಇದಕ್ಕಾಗಿ ಬ್ಯಾಂಕ್ ಉದ್ಯೋಗಕ್ಕೆ ರಾಜೀನಾಮೆ ನೀಡಿ, ವೈದ್ಯರಾಗಲು ಹಲವು ಭಾರಿ ಯೋಚಿಸಿದ್ದರು. ಒಮ್ಮೆ ರಾಜೀನಾಮೆಗೆ ಮುಂದಾಗಿದ್ದರು. ಆದರೆ ನಾಲ್ವರು ತಮ್ಮಂದಿರು, ತಮ್ಮ ಪತ್ನಿ, ಮಕ್ಕಳು ಹಾಗು ಕುಟುಂಬದ ಜವಾಬ್ದಾರಿಯಿಂದ ಹಿಂದೆ ಸರಿದರು.
2016ರಲ್ಲಿ ಬ್ಯಾಂಕ್‌ನಿಂದ ನಿವೃತ್ತಿಯಾದ ಜಯಕಿಶೋರ್ ನೀಟ್ ಪರೀಕ್ಷೆಗೆ ತಯಾರಿ ಆರಂಭಿಸಿದರು. 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಜಯಕಿಶೋರ್ ಕನಸಿಕೆಗೆ ಸಹಾಕಾರಿಯಾಯಿತು. 25 ವರ್ಷಕ್ಕಿಂತ ಮೇಲ್ಪಟ್ಟವರು ನೀಟ್ ಪರೀಕ್ಷೆ ಬರೆಯಲು ಅರ್ಹರು ಎಂದು ಕೋರ್ಟ್ ಹೇಳಿತ್ತು. ಮೊದಲ ಪ್ರಯತ್ನದಲ್ಲೇ ಜಯಕಿಶೋರ್ ನೀಟ್ ಪರೀಕ್ಷೆ ಪಾಸ್ ಮಾಡಿದ್ದಾರೆ.
ಕೋವಿಡ್ ವಾರಿಯರ್ಸ್ ಮಕ್ಕಳಿಗೆ 5 MBBS ಸೀಟ್ ಮೀಸಲು; ಕೇಂದ್ರದ ಮಹತ್ವದ ನಿರ್ಧಾರ!.
ವೀರ್ ಸುರೇಂದ್ರ ಸಾಯಿ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಷನ್ ಪಡೆದಿದ್ದಾರೆ. ಈ ಮೂಲಕ ಜಯಕಿಶೋರ್ MBBS ಕೋರ್ಸ್‌ಗೆ ಅಡ್ಮಿಷನ್ ಪಡೆದ ಹಿರಿಯ ವ್ಯಕ್ತಿ ಅನ್ನೋ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಎಂಬಿಬಿಎಸ್ ಕೋರ್ಸ್ ಪಡೆಯಲು ಗರಿಷ್ಠ ವಯಸ್ಸು ನಿಗದಿ ಮಾಡಿಲ್ಲ. ಅಡ್ಮಿಷನ್ ಪಡೆದ ಜಯಕಿಶೋರ್ ಕ್ಲಾಸ್ ಅಟೆಂಡ್ ಮಾಡಲಿದ್ದಾರೆ. ಈ ಮೂಲಕ ಕೋಟ್ಯಾಂತರರಿಗೆ ಮಾದರಿಯಾಗಿದ್ದಾರೆ ಎಂದು ಮೆಡಿಕಲ್ ಕಾಲೇಜು ಪ್ರಿನ್ಸಿಪಾಲ್ ಬ್ರಜಮೋಹನ್ ಮಿಶ್ರಾ ಹೇಳಿದ್ದಾರೆ.
ತನಿಖೆ ಬಳಿಕ ರಾಷ್ಟ್ರಗಳ ರ‍್ಯಾಂಕಿಂಗ್ ಪರಿಷ್ಕರಿಸಿದ ವಿಶ್ವ ಬ್ಯಾಂಕ್; ಚೀನಾಗೆ ಮುಖಭಂಗ!.
1965, ನವೆಂಬರ್ 30 ರಂದು ಹುಟ್ಟಿದ ಜಯಕಿಶೋರ್ ಪ್ರಧಾನ್ ಓರ್ವ ಮಗ ಹಾಗೂ ಅವಳಿ ಮಕ್ಕಳ ತಂದೆಯಾಗಿದ್ದಾರೆ. ಅವಳಿ ಮಕ್ಕಳಲ್ಲಿ ಓರ್ವ ಮಗಳು ಡೆಂಟಲ್ ಸರ್ಜರಿ ವ್ಯಾಸಾಂಗ ಮಾಡುತ್ತಿದ್ದಾರೆ. ಮತ್ತೊರ್ವ ಮಗಳು ಡೆಂಟಲ್ ಸರ್ಜರಿ ಪದವಿ ಮುಗಿಸಿದ್ದರು. ಆದರೆ ದುರಾದೃಷ್ಟ ನವೆಂಬರ್ 20, 2020ರಂದು ಸಾವನ್ನಪಿದ್ದಾರೆ. ಮತ್ತೊರ್ವ ಮಗ 9ನೇ ತರಗತಿ ಓದುತ್ತಿದ್ದಾರೆ.
ನಮ್ಮ ಕುಟುಂಬ ಅತ್ಯಂತ ಕೆಟ್ಟ ಸಮಯ ಎದುರಿಸುತ್ತಿದೆ. ಮಗಳನ್ನು ಕಳೆದುಕೊಂಡ ನೋವು ತಡೆಯಲು ಸಾಧ್ಯವಿಲ್ಲ. ಈಗಲು ಕಾಡುತ್ತಿದೆ. ಆದರೆ ಬಡವರ ಆರೋಗ್ಯಕ್ಕಾಗಿ ನಾನು ವೈದ್ಯನಾಗಿ ಅವರ ಆರೈಕೆಯಲ್ಲಿ ತೊಡಗುತ್ತೇನೆ ಎಂದು ಜಯಕಿಶೋರ್ ಪ್ರಧಾನ್ ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 25, 2020, 7:48 PM IST