ನವದೆಹಲಿ(ನ.20):  ಕೊರೋನಾ ವಾರಿಯರ್ಸ್ ಅದೆಷ್ಟೇ ಧನ್ಯವಾದ ಹೇಳಿದರೂ ಸಾಕಾಗಲ್ಲ. ಕಾರಣ ಅವರ ನಿಸ್ವಾರ್ಥ ಸೇವೆಯಿಂದ ಕೋಟ್ಯಾಂತರ ಭಾರತೀಯರು ಸುರಕ್ಷಿತವಾಗಿದ್ದಾರೆ. ಇದೀಗ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದೆ. ಕೊರೋನಾ ವಾರಿಯರ್ಸ್ ಮಕ್ಕಳಿಗೆ 5 MBBS ಸೀಟು ಮೀಸಲಿಟ್ಟಿದೆ.

ಕೊರೋನಾ ಕೊಲ್ಲಲು ಕೊನೆಗೂ ಹೊಸ ಅಸ್ತ್ರ ಸಿಕ್ಕು,  30 ಸೆಕೆಂಡ್ ಸಾಕು!.

ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ, ಕೊರೋನಾ ಸೇವೆಯಲ್ಲಿ ಸಾವನ್ನಪ್ಪಿದವರ ಮಕ್ಕಳಿಗೆ 5 ಎಂಬಿಬಿಎಸ್ ಸೀಟುಗಳನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. 

 

ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ ನಡೆಸಿದ ನೀಟ್ 2020 ರ್ಯಾಂಕ್ ಆಧಾರದಲ್ಲಿ ಮೆಡಿಕಲ್ ಕೌನ್ಸಿಲ್ ಕಮಿಟಿ ಸೀಟು ಹಂಚಿಕೆ ಮಾಡಲಿದೆ. ಈ ಕುರಿತು ವಿಸ್ತೃತ ವಿವರವನ್ನು ಮೆಡಿಕಲ್ ಕೌನ್ಸಲಿ ನೀಡಲಿದೆ ಎಂದು ಹರ್ಷವರ್ಧನ್ ಹೇಳಿದ್ದಾರೆ. 

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ದೇಶದಲ್ಲಿನ ಆರೋಗ್ಯ ಸ್ಥಿತಿಯನ್ನು ತಹಬದಿಗೆ ತರಲು ಕೊರೋನಾ ವಾರಿಯರ್ಸ್ ಅವಿರತ ಶ್ರಮ ಪಟ್ಟಿದ್ದಾರೆ. ಹೀಗಾಗಿ ಅವರ ಸೇವೆಗೆ ಗೌರವ ನೀಡುವ ಸಲುವಾಗಿ 5 ಸೀಟುಗಳನ್ನು ಮೀಸಲಿಡಲಾಗಿದೆ ಎಂದು ಹರ್ಷವರ್ಧನ್ ಹೇಳಿದ್ದಾರೆ.