Asianet Suvarna News Asianet Suvarna News

ತನಿಖೆ ಬಳಿಕ ರಾಷ್ಟ್ರಗಳ ರ‍್ಯಾಂಕಿಂಗ್ ಪರಿಷ್ಕರಿಸಿದ ವಿಶ್ವ ಬ್ಯಾಂಕ್; ಚೀನಾಗೆ ಮುಖಭಂಗ!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾ ಮತ್ತೊಮ್ಮೆ ಮುಖಂಭಗಕ್ಕೆ ಒಳಗಾಗಿದೆ. ಸುಗಮ ವ್ಯವಹಾರಕ್ಕಾಗಿ ಬ್ಯಾಂಕ್ ರ‍್ಯಾಂಕಿಂಗ್‌ನಲ್ಲಿ ತನಗೆ ಬೇಕಾದ ರೀತಿ ತಿದ್ದುಪಡಿ ಮಾಡಿದ್ದ ಚೀನಾಗೆ ಹಿನ್ನಡೆಯಾಗಿದೆ. ತನಿಖೆ ಬಳಿಕ ವಿಶ್ವಬ್ಯಾಂಕ್ ಇದೀಗ ಪರಿಷ್ಕೃತ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ.
 

World Bank corrected two recent reports ranking nations by ease of doing business ckm
Author
Bengaluru, First Published Dec 18, 2020, 7:33 PM IST

ವಾಶಿಂಗ್ಟನ್(ಡಿ.18): ಚೀನಾ ಸೇರಿದಂತೆ ಮೂರು ರಾಷ್ಟ್ರಗಲು ತಮಗೆ ಬೇಕಾದ ರೀತಿ ಹಾಗೂ ತಮ್ಮ ವಾಣಿಜ್ಯ ವ್ಯವಹಾರ ಸುಗಮಗೊಳಿಸಲು ಬ್ಯಾಂಕ್ ರ‍್ಯಾಂಕಿಂಗ್‌ನಲ್ಲಿ ತಿದ್ದುಪಡಿ ಮಾಡಿತ್ತು. ಆದರೆ ವಿಶ್ವಬ್ಯಾಂಕ್ ತನಿಖೆಯಲ್ಲಿ ಇದು ಬಯಲಾಗಿದೆ. ಆಡಳಿತ ಮಂಡಳಿಯ ಒತ್ತಡಿಂದ ರ‍್ಯಾಂಕಿಂಗ್‌ ಹಾಗೂ ಸ್ಕೋರ್‌ನಲ್ಲಿ ಬದಲಾವಣೆ ಮಾಡಿ ಪ್ರಕಟಿಸಲಾಗಿದೆ ಅನ್ನೋದು ಬಯಲಾಗಿದೆ.

2021ರಲ್ಲಿ 15 ಕೋಟಿ ಜನರಿಗೆ ಕಡು ಬಡತನ: ಬೆಚ್ಚಿ ಬೀಳಿಸಿದೆ ವರದಿ!.

2017ರಲ್ಲಿ ಬಿಡುಗಡೆಯಾದ 2018ರ ವಾರ್ಷಿಕ ವರದಿಯಲ್ಲಿ ಚೀನಾ 78ನೇ ಸ್ಥಾನದಲ್ಲಿರುವುದಾಗಿ ಪ್ರಕಟಿಸಲಾಗಿದೆ. ಆದರೆ ತನಿಖೆ ಬಳಿಕ ಚೀನಾ 7 ಸ್ಥಾನ ತಳ್ಳಲ್ಪಟ್ಟು 85ನೇ ಸ್ಥಾನದಲ್ಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. 2020ರ ವರದಿಯಲ್ಲಿ ಸೌದಿ ಅರೇಬಿಯಾ ಸುಧಾರಣೆ ಕಾಣುವ ಅರ್ಥವ್ಯವಸ್ಥೆ ಅಲ್ಲ ಎಂದು ಉಲ್ಲೇಖಿಸಿದೆ. ಇನ್ನು ಸುಧಾರಣೆ ಕಾಣುತ್ತಿರುವ ಟಾಪ್ 10 ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಝರ್‌ಬೈಜಾನ್ ಅಗ್ರಸ್ಥಾನದಲ್ಲಿದೆ ಎಂದು ವರದಿಯಲ್ಲಿ ಹೇಳಿದೆ.

ಕೊರೋನಾ ಹೋರಾಟ: ಭಾರತಕ್ಕೆ ವಿಶ್ವಬ್ಯಾಂಕ್‌ 7600 ಕೋಟಿ ರೂ. ನೆರವು!...

2020ರ ವರದಿಯಲ್ಲಿ ಯುನೈಟೆಡ್ ಅರಬ್ ಎಮಿರೈಟ್ಸ್ ಬ್ಯಾಂಕಿಂಗ್ ಸ್ಕೋರ್ ಕಡಿಮೆಯಾದರೂ ರ‍್ಯಾಂಕಿಂಗ್ 16ನೇ ಸ್ಥಾನದಲ್ಲಿದೆ. ಆದರೆ ಇತರರ ರಾಷ್ಟ್ರಗಳಲ್ಲಿ ನಿರ್ದಿಷ್ಟ ಅಕ್ರಮಗಳು ಪತ್ತೆಯಾಗಿಲ್ಲ ಎಂದು ವಿಶ್ವಬ್ಯಾಂಕ್ ತನಿಖೆಯಲ್ಲಿ ಬಯಲಾಗಿದೆ.

ತಮಗೆ ಬೇಕಾದ ರೀತಿ ಬ್ಯಾಂಕ್ ರ‍್ಯಾಂಕಿಂಗ್ ಪರಿಷ್ಕರಿಸಿದ ಕಾರಣ ತೆರಿಗೆ ಮತ್ತು ಕ್ರೆಡಿಟ್ ಮೆಟ್ರಿಕ್ ಮೇಲೆ ಪರಿಣಾಮ ಬೀರಿತ್ತು. ಅರ್ಥಶಾಸ್ತ್ರ ಅಭಿವೃದ್ಧಿ ವಿಭಾಗ ಇದನ್ನು ಗಮನಿಸಿ ಅಗಸ್ಟ್ 27 ರಂದು ವರದಿಯನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಿತು. 2018 ಹಾಗೂ 2020ರ ವರದಿ ತಯಾರಿಕೆ ವೇಳೆ ಸಿಬ್ಬಂದಿಗಳಿಗೆ ಒತ್ತಡ ತಂದು ತಿದ್ದುಪಡಿ ಮಾಡಲಾಗಿದೆ. ಇದು ತನಿಖೆಯಲ್ಲಿ ಬಹಿರಂಗವಾಗಿದೆ. 

Follow Us:
Download App:
  • android
  • ios