Pariksha Pe Charcha 2022: ಫೆಬ್ರವರಿಯಲ್ಲಿ ನಡೆಯಲಿದೆ 5ನೇ ಆವೃತ್ತಿಯ ಪರೀಕ್ಷಾ ಪೆ ಚರ್ಚಾ!

ಶಾಲಾ ಮಕ್ಕಳೊಂದಿಗೆ ನರೇಂದ್ರ ಮೋದಿ ಸಂವಾದ
ಪರೀಕ್ಷಾ ಪೆ ಚರ್ಚಾ  ಕಾರ್ಯಕ್ರಮಕ್ಕೆ ನೋಂದಣಿ ಆರಂಭ
ವರ್ಚವಲ್ ಆಗಿ ನಡೆಯಲಿದೆ 5ನೇ ಆವೃತ್ತಿಯ ಪಿಪಿಸಿ

5th edition of Pariksha Pe Charcha will be held through virtual mode in February san

ನವದೆಹಲಿ (ಜ. 19): ಬೋರ್ಡ್ ಎಕ್ಸಾಮ್ ಗಳನ್ನು ಬರೆಯಲು ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ನಡೆಸಿಕೊಡಲಿರುವ ವಾರ್ಷಿಕ ಕಾರ್ಯಕ್ರಮ ಪರೀಕ್ಷಾ ಪೆ ಚರ್ಚಾ (ಪಿಪಿಸಿ) (Pariksha Pe Charcha 2022) ಈ ಬಾರಿ ಫೆಬ್ರವರಿಯಲ್ಲಿ ನಡೆಯಲಿದೆ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ (PMO) ತಿಳಿಸಿದೆ. ಈ ಬಾರಿ ಸಂಪೂರ್ಣವಾಗಿ ವರ್ಚುವಲ್ ಆಗಿ ನಡೆಯಲಿದ್ದು, ನೋಂದಣಿ ಕಾರ್ಯವೂ ಆರಂಭವಾಗಿದೆ. ಪಿಪಿಸಿ 2022 (PPC 2022) ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ನೋಂದಾಯಿಸಲು ಹೆಸರನ್ನು ನೀಡುವಂತೆ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿನಿಗಳನ್ನು ಪ್ರಧಾನಿ ಮೋದಿ (Prime Minister Narendra Modi) ಒತ್ತಾಯಿಸಿದ್ದಾರೆ.  ಈ ಕಾರ್ಯಕ್ರಮವು ಭಾರತದ ಕ್ರಿಯಾತ್ಮಕ ಯುವಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಶಿಕ್ಷಣದ ಜಗತ್ತಿನಲ್ಲಿ ಉದಯೋನ್ಮುಖ ಪ್ರವೃತ್ತಿಯನ್ನು ಕಂಡುಹಿಡಿಯಲು ಅವಕಾಶವನ್ನು ಒದಗಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಸಂವಾದದ ಸಮಯದಲ್ಲಿ, ಪ್ರಧಾನ ಮಂತ್ರಿಗಳು ರಾಷ್ಟ್ರದಾದ್ಯಂತದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾರೆ ಮತ್ತು ಪರೀಕ್ಷೆಯ ಒತ್ತಡ ಮತ್ತು ಸಂಬಂಧಿತ ವಿಷಯಗಳ ಕುರಿತು ಅವರ ಪ್ರಶ್ನೆಗಳನ್ನು ಪರಿಹರಿಸುತ್ತಾರೆ. 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳ ಜೊತೆಗೆ, ಪಾಲಕರು ಸಹ ಪರೀಕ್ಷಾ ಪೆ ಚರ್ಚಾದಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. 2022ರ ಪಿಪಿಸಿಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರು  ಜನವರಿ 20 ರವರೆಗೆ mygov.in ನಲ್ಲಿ ನೋಂದಾಯಿಸಿಕೊಳ್ಳಬಹುದು.

ಪರೀಕ್ಷಾ ಪೆ ಚರ್ಚಾ 2022: ಭಾಗವಹಿಸುವಿಕೆಯ ವಿವರಗಳು: 9 ರಿಂದ 12ನೇತರಗತಿಯ ಎಲ್ಲಾ ವಿದ್ಯಾರ್ಥಿಗಳು ಇದರಲ್ಲಿ ಮುಕ್ತವಾಗಿ ಪಾಲ್ಗೊಳ್ಳಬಹುದಾಗಿದೆ. ಡಿಸೆಂಬರ್ 28 ರಿಂದ ಪರೀಕ್ಷಾ ಪಡೆ ಚರ್ಚಾ 2022ರ ಆನ್ ಲೈನ್ ನೋಂದಣಿ ಆರಂಭವಾಗಿದ್ದು ಜನವರಿ 20 ರಂದು ಮುಕ್ತಾಯಗೊಳ್ಳಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು, ನೀವು ಮೊದಲು ಮೈ ಗವ್ (MyGov) ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಭಾರತದ ಹೊರಗಿನ ಭಾಗವಹಿಸುವವರು ತಮ್ಮ ಇಮೇಲ್ ಐಡಿಗೆ ಕಳುಹಿಸಿದ ಒಟಿಪಿ ( OTP) ಬಳಸಿಕೊಂಡು ನೋಂದಾಯಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಅವರಿಗೆ ನಿಯೋಜಿಸಲಾದ ವಿಷಯಗಳಲ್ಲಿ ಒಂದರಲ್ಲಿ ಮಾತ್ರ ಭಾಗವಹಿಸಬಹುದು.  ಕೋವಿಡ್-19 ಸಮಯದಲ್ಲಿ ಪರೀಕ್ಷೆಯ ಒತ್ತಡ ನಿರ್ವಹಣೆಯ ತಂತ್ರಗಳು, ಆಜಾದಿ ಕಾ ಅಮೃತ್ ಮಹೋತ್ಸವ ಸ್ವಾವಲಂಬಿ ಭಾರತಕ್ಕಾಗಿ ಸ್ವಾವಲಂಬಿ ಶಾಲೆ; ಸ್ವಚ್ಛ ಭಾರತ, ಹಸಿರು ಭಾರತ; ತರಗತಿಗಳಲ್ಲಿ ಡಿಜಿಟಲ್ ಸಹಯೋಗ, ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯ ರೀತಿಯ ಸೃಜನಶೀಲ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಬರೆಯಬೇಕಿರುತ್ತದೆ.

Pariksha Pe Charcha 2022: ಮೋದಿ ಜತೆ ಮಾತನಾಡ ಬಯಸುವ ವಿದ್ಯಾರ್ಥಿಗಳಿಗೆ ಡಿ.28 ರಿಂದ ನೋಂದಣಿ
2021 ರಲ್ಲಿ, ಈ ಕಾರ್ಯಕ್ರಮದ ಸ್ವರೂಪವನ್ನು ಆನ್‌ಲೈನ್ ಮೋಡ್‌ನಲ್ಲಿ ಇರಿಸಲು ಪ್ರಸ್ತಾಪಿಸಲಾಗಿದೆ. ಆಯ್ಕೆಯಾದ ವಿಜೇತರ ಪ್ರಶ್ನೆಗಳನ್ನು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುವುದು ಎಂದು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಎಲ್ಲಾ ವಿದ್ಯಾರ್ಥಿಗಳು ತಮ್ಮ ಎಂಟ್ರಿಗಳನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ ಡೌನ್‌ಲೋಡ್ ಮಾಡಬಹುದಾದ ಭಾಗವಹಿಸುವಿಕೆಯ ಡಿಜಿಟಲ್ ಪ್ರಮಾಣಪತ್ರವನ್ನು ಪಡೆದುಕೊಳ್ಳಲಿದ್ದಾರೆ.  ಮೈ ಗವ್ ನಲ್ಲಿ ಸ್ಪರ್ಧೆಗಳ ಮೂಲಕ ಆಯ್ಕೆಯಾದ ಸುಮಾರು 2,050 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಪಿಎಂ ಮೋದಿ ಬರೆದ 'ಎಕ್ಸಾಮ್ ವಾರಿಯರ್ಸ್' ಪುಸ್ತಕವನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಒಳಗೊಂಡಿರುವ ಪರೀಕ್ಷಾ ಪೇ ಚರ್ಚಾ ಕಿಟ್‌ನೊಂದಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. 

ಪರೀಕ್ಷಾ ಪೇ ಚರ್ಚಾ ; ಮಕ್ಕಳಿಗೆ ಮೇಷ್ಟ್ರಾದ ಮೋದಿ.., ಅದ್ಭುತ ಪಾಠ, ವಿಡಿಯೋ
ಕರ್ನಾಟಕದಿಂದ ಈಗಾಗಲೇ ಆಯ್ಕೆಯಾಗಿರುವ ವಿದ್ಯಾರ್ಥಿಗಳ ಲಿಸ್ಟ್
5th edition of Pariksha Pe Charcha will be held through virtual mode in February san

ಪರೀಕ್ಷಾ ಪೆ ಚರ್ಚಾ 2022 ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ:

- mygov.in ವೆಬ್ ಸೈಟ್ ಗೆ ತೆರಳಬೇಕು
- ಹೋಮ್ ಪೇಜ್ ನಲ್ಲಿ ಇರುವ What's New ವಿಭಾಗಕ್ಕೆ ತೆರಳಿ
-  ಪರೀಕ್ಷಾ ಪೆ ಚರ್ಚಾ 2022 ಎಂದಿರುವ ಚಿತ್ರದ ಮೇಲೆ ಕ್ಲಿಕ್ ಮಾಡಿ, register now ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಪರೀಕ್ಷಾ ಪಡೆ ಚರ್ಚಾಗಾಗಿ ನೋಂದಾಯಿಸಲು ವಿವರಗಳನ್ನು ಭರ್ತಿ ಮಾಡಿ ಮತ್ತು ಅದನ್ನು ಸಲ್ಲಿಸಿ

ಹೆಚ್ಚಿನ ವಿವರಗಳಿಗೆ https://innovateindia.mygov.in/ppc-2022/ ಲಿಂಕ್ ಕ್ಲಿಕ್ ಮಾಡಿ.

Latest Videos
Follow Us:
Download App:
  • android
  • ios