ಉದ್ಯೋಗ ಬೇಡಿಕೆಗೆ ಅನುಗುಣವಾಗಿ ಮಂಗಳೂರು ವಿವಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಐದು ನೂತನ ಶೈಕ್ಷಣಿಕ ವಿಭಾಗ ಆರಂಭಿಸಲಾಗುವುದು ಎಂದು ಕುಲಪತಿ ಪೊ›.ಪಿ.ಎಸ್‌. ಯಡಪಡಿತ್ತಾಯ ತಿಳಿಸಿದ್ದಾರೆ.

ಮಂಗಳೂರು (ಡಿ.16) : ಉದ್ಯೋಗ ಬೇಡಿಕೆಗೆ ಅನುಗುಣವಾಗಿ ಮಂಗಳೂರು ವಿವಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಐದು ನೂತನ ಶೈಕ್ಷಣಿಕ ವಿಭಾಗ ಆರಂಭಿಸಲಾಗುವುದು ಎಂದು ಕುಲಪತಿ ಪೊ›.ಪಿ.ಎಸ್‌. ಯಡಪಡಿತ್ತಾಯ ತಿಳಿಸಿದ್ದಾರೆ. ಮಂಗಳೂರು ವಿವಿಯಲ್ಲಿ ಈ ಶೈಕ್ಷಣಿಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ವಿಚಾರ ಪ್ರಕಟಿಸಿದರು. ಸಭೆಯಲ್ಲಿ ಈ ಘೋಷಣೆಗೆ ಅನುಮೋದನೆ ನೀಡಲಾಯಿತು.

ಸ್ನಾತಕೋತ್ತರ ಮೆಲಿಕ್ಯುಲರ್‌ ಬಯೋಲಜಿ, ಸ್ನಾತಕೋತ್ತರ ಫುಡ್‌ ಸೈನ್ಸ್‌ ಆ್ಯಂಡ್‌ ನ್ಯೂಟ್ರಿಷನ್‌ ಅಧ್ಯಯನ ಸಂಶೋಧನೆ, ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ಅಧ್ಯಯನ ಮತ್ತು ಸಂಶೋಧನೆ, ಸ್ನಾತಕೋತ್ತರ ಎಂಬಿಎ ಹೆಲ್ತ… ಸೇಫ್ಟಿಆ್ಯಂಡ್‌ ಎನ್ವರಾನ್ಮೆಂಟ್‌ ವಿಭಾಗ ಮತ್ತು ಹಂಪನಕಟ್ಟೆವಿವಿ ಕಾಲೇಜಿನಲ್ಲಿ ಸ್ನಾತಕೋತ್ತರ ಪ್ರಾಚೀನ ಇತಿಹಾಸ ಪುರಾತತ್ವ ಶಾಸ್ತ್ರ ವಿಭಾಗ 2023ನೇ ಸಾಲಿನಲ್ಲಿ ಆರಂಭಗೊಳ್ಳಲಿದೆ ಎಂದು ಕುಲಪತಿ ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡಿದ ಕೇರಳದ ಈ ಕಾರ್ಮಿಕ ಎಲ್ಲರಿಗೂ ಸ್ಫೂರ್ತಿ!

ಬೆಂಗಳೂರು, ಮೈಸೂರು ವಿವಿ, ಮಣಿಪಾಲ್‌ ಸ್ಕೂಲ್‌ ಆಫ್‌ ಲೈಫ್‌ ಸೈ®್ಸ…, ಕೇರಳದ ಕಣ್ಣೂರು ವಿವಿಗಳಲ್ಲಿ ಆರಂಭಗೊಂಡಿರುವ ಹೊಸ ಐದು ಶೈಕ್ಷಣಿಕ ವಿಭಾಗಗಳಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ನೆರವಾಗಲಿದೆ ಎಂದರು.

ವಿವಿ ಕ್ಯಾಂಪಸ್‌ನಲ್ಲಿ ಪಿಜಿ ಡಿಪ್ಲೊಮಾ ಇನ್‌ ಸೈಬರ್‌ ಸೆಕ್ಯುರಿಟಿ ಆ್ಯಂಡ್‌ ಎಥಿಕಲ್‌ ಹ್ಯಾಕಿಂಗ್‌ ಎಂಬ ಕೋರ್ಸ್‌ ರಾಜ್ಯಪಾಲರಿಂದ ಅನುಮೋದನೆಗೊಂಡಿದ್ದು, ಇದು ಕೂಡ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿದೆ ಎಂದು ಪ್ರೊ. ಯಡಪಡಿತ್ತಾಯ ತಿಳಿಸಿದರು.

KARTET: ಟಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ: ಆನ್‌ಲೈನ್‌ನಲ್ಲೇ ಅರ್ಹತಾ ಅಂಕಪಟ್ಟಿ ಲಭ್ಯ

ವಿವಿ ಅಧೀನದ ಸ್ವಾಯತ್ತ ಕಾಲೇಜುಗಳ ನಿರ್ವಹಣೆ ಅನುಶಾಸನ ತಿದ್ದುಪಡಿ, ಪರಿಸರ ಅಧ್ಯಯನದ ಪರಿಷ್ಕೃತ ಪಠ್ಯಕ್ರಮ ಹಾಗೂ ಈ ಕೋರ್ಸ್‌ ನ ಉಪನ್ಯಾಸಕರ ವಿದ್ಯಾರ್ಹತೆ ನಿಗದಿ, ಸ್ಪೋಟ್ಸ…ರ್‍ ಮತ್ತು ಯೋಗ ಮೌಲ್ಯಾಧಾರಿತ ಕೋರ್ಸ್‌ಗಳ ಪಠ್ಯಕ್ರಮ, ವಿವಿಯ ಉದ್ಯೋಗಿಗಳ ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ ನಿಯಮಗಳ ಪರಿನಿಯಮ ತಿದ್ದುಪಡಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಪಿಎಚ್‌ಡಿ ಕೋರ್ಸ್‌ ಪರಿಷ್ಕೃತ ಪಠ್ಯಕ್ರಮ ಅಳವಡಿಕೆಗೆ ಅನುಮೋದನೆ ನೀಡಲಾಯಿತು. ಕುಲಸಚಿವ ಡಾ. ಕಿಶೋರ್‌ ಕುಮಾರ್‌ ಸಿ.ಕೆ., ಪರೀಕ್ಷಾಂಗ ಕುಲಸಚಿವ ಪೊ›.ಪಿ.ಎಲ…. ಧರ್ಮ ಹಾಗೂ ಹಣಕಾಸು ಅಧಿಕಾರಿ ಪೊ›.ವೈ. ಸಂಗಪ್ಪ ಇದ್ದರು.