6-12ನೇ ಕ್ಲಾಸ್‌ ವಾರದಲ್ಲಿ 5 ದಿನ : 100% ಹಾಜರಿ ಓಕೆ

  •  1%ಕ್ಕಿಂತ ಹೆಚ್ಚಿರುವೆಡೆ ತರಗತಿಗಳಲ್ಲಿ ದಿನ ಬಿಟ್ಟು ದಿನ ಪಾಠ
  •  ಆ.23ರಿಂದ 9ರಿಂದ 12ನೇ ತರಗತಿ ರಾಜ್ಯದಲ್ಲಿ ಆರಂಭ
  •  ಸೆ.6ರಿಂದ 6ರಿಂದ 8ನೇ ತರಗತಿಗೆ ಮಕ್ಕಳ ಹಾಜರು ಶುರು
5 Days Class for 6th to 12 class Students in karnataka snr

 ಬೆಂಗಳೂರು (ಸೆ.25):  ರಾಜ್ಯದಲ್ಲಿ ಶೇ.1ಕ್ಕಿಂತ ಕಡಿಮೆ ಪಾಸಿಟಿವಿಟಿ (Positivity) ದರ ಹೊಂದಿರುವ ಜಿಲ್ಲೆಗಳಲ್ಲಿ 6ನೇ ತರಗತಿಯಿಂದ 12ನೇ ತರಗತಿವರೆಗಿನ ಶಾಲಾ-ಕಾಲೇಜುಗಳನ್ನು (School - Colleges) ಶೇ.100ರಷ್ಟುಸಾಮರ್ಥ್ಯದೊಂದಿಗೆ ನಡೆಸಲು ರಾಜ್ಯ ಸರ್ಕಾರ (karnataka govt) ಅವಕಾಶ ನೀಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ, ಶೇ.1ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಹೊಂದಿರುವ ಜಿಲ್ಲೆಗಳಲ್ಲಿ ಶೇ.100ರಷ್ಟುಸಾಮರ್ಥ್ಯದೊಂದಿಗೆ ತರಗತಿಗಳನ್ನು ವಾರದ ಐದು ದಿನ ತೆರೆಯಲು ಅನುಮತಿ ನೀಡಲು ತೀರ್ಮಾನಿಸಲಾಯಿತು. ಜತೆಗೆ, ವಾರಾಂತ್ಯವಾದ ಶನಿವಾರ ಹಾಗೂ ಭಾನುವಾರ ಶಾಲೆ ಸ್ಯಾನಿಟೈಸ್‌ ಮಾಡಲು ಶಾಲಾ ಆಡಳಿತ ಮಂಡಳಿಗಳಿಗೆ ಸೂಚಿಸಲು ನಿರ್ಧರಿಸಲಾಯಿತು.

ಕರ್ನಾಟಕದಲ್ಲಿ ತಗ್ಗಿದ ಕೊರೋನಾ: ಮಾರ್ಗಸೂಚಿ ನಿಯಮಗಳಲ್ಲಿ ಬದಲಾವಣೆ

ಸೆ.24ರಂದು ಪ್ರಕಟಿಸಿರುವ ಮಾರ್ಗಸೂಚಿಯು ಸೆ.27ರಿಂದ ಅ.11ರವರೆಗೆ ಅನ್ವಯವಾಗಲಿದೆ. ಇದರಂತೆ ಶೇ.1ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಹೊಂದಿರುವ ಜಿಲ್ಲೆಗಳಲ್ಲಿ ಹಿಂದಿನ ನಿಯಮವೇ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ. ಹೀಗಾಗಿ ಶೇ.1ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಹೊಂದಿರುವ ಜಿಲ್ಲೆಗಳಲ್ಲಿ 6ರಿಂದ 8ನೇ ತರಗತಿ ವಿದ್ಯಾರ್ಥಿಗಳನ್ನು (Students) ಎರಡು ತಂಡಗಳನ್ನಾಗಿ ವಿಂಗಡಿಸಿ ಶೇ.50ರಷ್ಟುಸಾಮರ್ಥ್ಯದೊಂದಿಗೆ ದಿನ ಬಿಟ್ಟು ದಿನ ಶಾಲೆಗೆ ಹಾಜರಾಗುವಂತೆ ಸೂಚಿಸಲಾಗುವುದು. ಶೇ.2ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಹೊಂದಿರುವ ಜಿಲ್ಲೆಗಳಲ್ಲಿ ಭೌತಿಕ ತರಗತಿಗಳು ನಡೆಯುವಂತಿಲ್ಲ.

ಕರ್ನಾಟಕಕ್ಕೆ ಅಕ್ಟೋಬರ್‌ ತಿಂಗಳೇ ಡೇಂಜರ್‌: ಬೇಕಾಬಿಟ್ಟಿ ತಿರುಗಾಡೋ ಹಾಗಿಲ್ಲ

ಮೊದಲು ಆಗಸ್ಟ್‌ 23ರಿಂದ 9, 10, 11 ಹಾಗೂ 12ನೇ ತರಗತಿಗಳನ್ನು ಶುರು ಮಾಡಲಾಗಿತ್ತು. ಆದರೆ, ಮಕ್ಕಳಲ್ಲಿ ಹೆಚ್ಚಿನ ಸೋಂಕು ಕಾಣಿಸಿಕೊಂಡಿಲ್ಲ. ಹೀಗಾಗಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಸೆ.6ರಿಂದ 6ನೇ ತರಗತಿಯಿಂದ 8ನೇ ತರಗತಿವರೆಗಿನ ಮಕ್ಕಳಿಗೂ ಅರ್ಧ ಸಾಮರ್ಥ್ಯದೊಂದಿಗೆ ಶಾಲೆ ಆರಂಭಿಸಲಾಗಿತ್ತು. ಇದೀಗ ಈ ನಿರ್ಬಂಧವನ್ನೂ ಸಡಿಲಗೊಳಿಸಲಾಗಿದೆ.

- ಪಾಸಿಟಿವಿಟಿ 1%ಕ್ಕಿಂತ ಕಡಿಮೆ ಇರುವೆಡೆ ನಾಡಿದ್ದಿಂದ ಜಾರಿ

- 1%ಕ್ಕಿಂತ ಹೆಚ್ಚಿರುವೆಡೆ ತರಗತಿಗಳಲ್ಲಿ ದಿನ ಬಿಟ್ಟು ದಿನ ಪಾಠ

 - ಆ.23ರಿಂದ 9ರಿಂದ 12ನೇ ತರಗತಿ ರಾಜ್ಯದಲ್ಲಿ ಆರಂಭ

- ಸೆ.6ರಿಂದ 6ರಿಂದ 8ನೇ ತರಗತಿಗೆ ಮಕ್ಕಳ ಹಾಜರು ಶುರು

- ಆದಾಗ್ಯೂ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆ ಇಲ್ಲ

- ಹೀಗಾಗಿ ಕೋವಿಡ್‌ ನಿರ್ಬಂಧ ಸಡಿಲಗೊಳಿಸಿದ ಸರ್ಕಾರ

- ಪಾಸಿಟಿವಿಟಿ 2%ಕ್ಕಿಂತ ಅಧಿಕ ಇರುವಡೆ ಭೌತಿಕ ತರಗತಿ ಇಲ್ಲ

Latest Videos
Follow Us:
Download App:
  • android
  • ios