* ಕರ್ನಾಟಕದಲ್ಲಿ ತಗ್ಗಿದ ಕೊರೋನಾ ಸೋಂಕು* ಮಾರ್ಗಸೂಚಿಯಲ್ಲಿ ಕೊಂಚ ಬದಲಾವಣೆ* ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ತೀರ್ಮಾನ

ಬೆಂಗಳೂರು, (ಸೆ.24): ರಾಜ್ಯದಲ್ಲಿ ಕೊರೋನಾ (Corona) ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಮಾರ್ಗಸೂಚಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಧ್ಯಕ್ಷತೆಯಲ್ಲಿ ಇಂದು (ಸೆ.24) ನಡೆದ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆಸಿದ್ದು, ಚಿತ್ರಮಂದಿರ, ದೇವಸ್ಥಾನ, ಶಾಲೆ (School), ಪಬ್‌ಗೆ ಸಂಬಂಧಿಸಿದಂತೆಕೆಲ ತೀರ್ಮಾನಗಳನ್ನ ತೆಗೆದುಕೊಳ್ಳಲಾಗಿದೆ. 

ಕರ್ನಾಟಕಕ್ಕೆ ಅಕ್ಟೋಬರ್‌ ತಿಂಗಳೇ ಡೇಂಜರ್‌: ಬೇಕಾಬಿಟ್ಟಿ ತಿರುಗಾಡೋ ಹಾಗಿಲ್ಲ

ರಾಜ್ಯದಲ್ಲಿ ಪ್ರಸ್ತುತ ಕೋವಿಡ್ ಪ್ರಮಾಣ ಸರಾಸರಿ 0.66 ಇರುವುದರಿಂದ ಕೆಲವೊಂದಕ್ಕೆ ರಿಲೀಫ್ ನೀಡಲಿ ರಾಜ್ಯ ಸರ್ಕಾರ ನಿರ್ಧರಿಸಿದೆ.

*ಪಾಸಿಟಿವಿಟಿ ದರ ಶೇಕಡ 1 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶೇಕಡ 100 ರಷ್ಟು ಪ್ರೇಕ್ಷಕರೊಂದಿಗೆ ಸಿನಿಮಾ ಥಿಯೇಟರ್ ಓಪನ್ ಮಾಡಲು ಅವಕಾಶ ನೀಡಲಾಗಿದೆ.

* ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳಿಗೆ ಚಿತ್ತಮಂದಿರ ಹಾಗೂ ಪಬ್ ಗಳಿಗೆ ನಿರ್ಬಂಧ.

*ದೇವಾಲಯಗಳಲ್ಲಿ ವಿಶೇಷ ಪೂಜೆ, ಸೇವಾ ಕಾರ್ಯ ಕೈಗೊಳ್ಳುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ತೀರ್ಮಾನಿಸಲಿದ್ದಾರೆ. 

* ಸೋಮವಾರದಿಂದ ಶುಕ್ರವಾರದವರೆಗೆ 6-12 ನೇ ತರಗತಿಗಳಿಗೆ 100% ಹಾಜರಾತಿಗೆ ಅನುಮತಿ ನೀಡಲಾಗಿದೆ. ಆದ್ರೆ, 1- 5 ನೇ ತರಗತಿ ಶಾಲೆಗಳು ಸದ್ಯಕ್ಕೆ ಪ್ರಾರಂಭಿಸುವುದು ಬೇಡ ಎನ್ನುವ ನಿರ್ಧಾರ ಕೈಗೊಳ್ಳಲಾಗಿದೆ.

* ಶಾಲಾ, ಕಾಲೇಜ್ ಗಳಲ್ಲಿ ಶೇಕಡ 100 ರಷ್ಟು ಹಾಜರಾತಿಯೊಂದಿಗೆ 6 -12 ನೇ ತರಗತಿ ನಡೆಸಲಾಗುವುದು.

* ಯಾದಗಿರಿ, ಮೈಸೂರು, ರಾಯಚೂರು, ಕಲಬುರಗಿಯಲ್ಲಿ ಲಸಿಕೆ ಚುರುಕು ಮಾಡಲು ಕ್ರಮಕೈಗೊಳ್ಳಲು ಈ 4 ಜಿಲ್ಲೆಗಳಿಗೆ ಸಚಿವರಾದ ಸುಧಾಕರ್, ಅಶೋಕ್ ಭೇಟಿ ಮಾಡಿ, ಲಸಿಕೆ ಬಗ್ಗೆ ಅಭಿಯಾನ ಮಾಡಲಿದ್ದಾರೆ.

* ನೈಟ್ ಕರ್ಫ್ಯೂ ಪ್ರತಿದಿನ ರಾತ್ರಿ 9 ಗಂಟೆ ಬದಲು 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯ ವರೆಗೆ ಜಾರಿಯಲ್ಲಿರಲಿದೆ

* ಅಕ್ಟೋಬರ್ 3 ರಿಂದ ಪಬ್ ತೆರೆಯಬಹುದಾಗಿದ್ದು, ಸಿಬ್ಬಂದಿಗೆ ಲಸಿಕೆ ಪಡೆಯುವುದು ಕಡ್ಡಾಯವಾಗಿದೆ( ಪಾಸಿಟಿವ್ ದರ 2 ಕ್ಕಿಂತ ಹೆಚ್ಚಾದರೆ ಚಿತ್ರಮಂದಿರವಾಗ್ಲಿ ಪಬ್ ಆಗ್ಲಿ ಎರಡು ಬಂದ್)