ಕೋವಿಡ್‌ ವೇಳೆ 30% ಮಕ್ಕಳು ಕಲಿಕೆಗೆ ಗುಡ್‌ಬೈ..!

* ಆನ್‌ಲೈನ್‌ ತರಗತಿ ಬಿಟ್ಟು ದುಡಿಮೆಗೆ ದೂಡಲ್ಪಟ್ಟ ಮಕ್ಕಳು
* ಶೇ.70 ಮಕ್ಕಳಿಂದ ಮಾತ್ರ ಒಂದಿಲ್ಲೊಂದು ರೀತಿ ಕಲಿಕೆ
* ಶಿಕ್ಷಣ ಸಂಶೋಧನೆ, ತರಬೇತಿ ಇಲಾಖೆ ಅಧ್ಯಯನ
 

30 Per cent of Kids Goodbye to Learning During Covid in Karnataka grg

ಬೆಂಗಳೂರು(ಆ.07): ಕೋವಿಡ್‌ ಸಮಯದಲ್ಲಿ ಶಾಲೆಗಳು ಆರಂಭವಾಗದಿದ್ದರೂ ಶೇ.70ರಷ್ಟು ಮಕ್ಕಳು ಒಂದಲ್ಲೊಂದು ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿದ್ದರೆ, ಶೇ.30ರಷ್ಟು ಮಕ್ಕಳು ಸಂಪಾದನೆಯಲ್ಲಿ ತೊಡಗಿದ್ದರು ಎಂಬ ಆತಂಕದ ಮಾಹಿತಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸಮೀಕ್ಷೆಯಲ್ಲಿ ಕಂಡುಬಂದಿದೆ.

ರಾಜ್ಯದ 32 ಜಿಲ್ಲೆಗಳ ಒಟ್ಟು 3,672 ಶಾಲಾ ವಿದ್ಯಾರ್ಥಿಗಳನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಿ ಡಿಎಸ್‌ಇಆರ್‌ಟಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗವಾಗಿದೆ. ಸಮೀಕ್ಷೆಯಲ್ಲಿ ಶೇ.70ರಷ್ಟು ವಿದ್ಯಾರ್ಥಿಗಳು ಮೊಬೈಲ್‌, ಟಿವಿ, ಲ್ಯಾಪ್‌ಟಾಪ್‌ ಮತ್ತಿತರ ತಾಂತ್ರಿಕ ಉಪಕರಣಗಳನ್ನು ಬಳಸಿ ಒಂದಲ್ಲೊಂದು ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಪೈಕಿ ಶೇ 45ರಷ್ಟು ಮಕ್ಕಳು ಪಾಠದ ಜತೆಗೆ ಮೊಬೈಲ್‌ನಲ್ಲಿ ಆಟ ಆಡಿದ್ದಾರೆ. ಶೇ.50ರಷ್ಟು ಮಕ್ಕಳು ಇತರ ಕಾರ್ಯಕ್ರಮಗಳನ್ನೂ ವೀಕ್ಷಿಸಿದ್ದಾರೆ. ಉಳಿದ ಶೇ.30ರಷ್ಟು ಮಕ್ಕಳು ಕಲಿಕೆ ಬಿಟ್ಟು ಪೋಷಕರಿಗೆ ನೆರವಾಗಲು ಸಂಪಾದನೆಯಲ್ಲಿ ತೊಡಗಿದ್ದರು ಎಂಬುದು ಸಮೀಕ್ಷೆಯಲ್ಲಿ ಕಂಡುಬಂದಿದೆ ಎಂದು ಡಿಎಸ್‌ಇಆರ್‌ಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SSLC ಫಲಿತಾಂಶ ಸಿದ್ಧ: ಪ್ರಕಟಿಸಲು ಶಿಕ್ಷಣ ಸಚಿವರೇ ಇಲ್ಲ..!

ಕೋವಿಡ್‌ ಅವಧಿಯಲ್ಲಿ ಸರ್ಕಾರಿ ಶಾಲಾ ಮಕ್ಕಳು ಕಲಿಕೆ, ಕೌಶಲ ಗಳಿಕೆ, ಆಟೋಟ, ಸುತ್ತಾಟ, ಮಾತುಕತೆಗಳಲ್ಲಿ ಅತ್ಯಂತ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳು ಸ್ವ ಕಲಿಕೆಗೆ ಹೆಚ್ಚು ಆದ್ಯತೆ ಕೊಟ್ಟಿದ್ದರೆ, ಖಾಸಗಿ ಶಾಲೆಗಳ ಮಕ್ಕಳು ಹೆಚ್ಚಾಗಿ ಮೊಬೈಲ್‌ ಅಥವಾ ಇತರ ಮಾರ್ಗಗಳ ಮೂಲಕ ಶಿಕ್ಷಕರು ಮತ್ತು ಹಿರಿಯರನ್ನು ಆಶ್ರಯಿಸಿರುವುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
 

Latest Videos
Follow Us:
Download App:
  • android
  • ios