ಶೇ.25ರಷ್ಟು 14-18 ವಯಸ್ಸಿನ ಗ್ರಾಮೀಣ ಮಕ್ಕಳಿಗೆ 2ನೇ ತರಗತಿ ಪಾಠ ಕೂಡಾ ಸರಿಯಾಗಿ ಓದೋಕೆ ಬರೋಲ್ಲ: ವರದಿ
ಗ್ರಾಮೀಣ ಭಾಗದ ಶಿಕ್ಷಣಕ್ಕೆ ಸಂಬಂಧಿಸಿದ ಕಳವಳಕಾರಿ ವರದಿಯೊಂದು ಹೊರೆಗೆ ಬಿದ್ದಿದೆ. ಅದರಂತೆ, ಶೇ.25ರಷ್ಟು 14-18 ವಯಸ್ಸಿನ ಗ್ರಾಮೀಣ ಮಕ್ಕಳಿಗೆ 2ನೇ ತರಗತಿ ಪಾಠ ಕೂಡಾ ಸರಿಯಾಗಿ ಓದೋಕೆ ಬರೋಲ್ಲವಂತೆ. ಅದಕ್ಕೂ ನಾಲಿಗೆ ತಡಬಡಾಯಿಸುತ್ತದೆ ಎಂದು ವರದಿ ಹೇಳಿದೆ.
ಹೊಸದಿಲ್ಲಿ: 14-18 ವರ್ಷ ವಯಸ್ಸಿನವರಲ್ಲಿ ಕಾಲು ಭಾಗದಷ್ಟು ಗ್ರಾಮೀಣ ಮಕ್ಕಳಿಗೆ ಗ್ರೇಡ್ 2 ಹಂತದ ಪಠ್ಯವನ್ನು ಕೂಡಾ ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ನಿರರ್ಗಳವಾಗಿ ಓದಲು ಸಾಧ್ಯವಿಲ್ಲ. ಇನ್ನು ಶೇ. 42.7% ರಷ್ಟು ಮಕ್ಕಳಿಗೆ ಇಂಗ್ಲಿಷ್‌ನಲ್ಲಿ ವಾಕ್ಯಗಳನ್ನು ಓದಲು ಸಾಧ್ಯವಿಲ್ಲ ಎಂಬ ಕಳವಳಕಾರಿ ವರದಿ ಹೊರ ಬಿದ್ದಿದೆ.
ಇತ್ತೀಚಿನ ವಾರ್ಷಿಕ ಶಿಕ್ಷಣ ಸಮೀಕ್ಷೆ ವರದಿ( ASER) ಬುಧವಾರ ಬಿಡುಗಡೆಯಾಗಿದೆ. ಪ್ರಥಮ್ ಫೌಂಡೇಶನ್ ನೇತೃತ್ವದ 'ಬೇಸಿಕ್ಸ್ ಬಿಯಾಂಡ್' ಎಂಬ ಶೀರ್ಷಿಕೆಯ ASER 2023 ವರದಿಯು, 28 ಜಿಲ್ಲೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ದಾಖಲಾದ 14 ರಿಂದ 18 ವರ್ಷದ 34,745 ಗ್ರಾಮೀಣ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಿದೆ.
ವಿದ್ಯಾರ್ಥಿನಿಯರು (76%) ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಗ್ರೇಡ್ 2ನೇ ಹಂತದ ಪಠ್ಯವನ್ನು ಓದುವಲ್ಲಿ ವಿದ್ಯಾರ್ಥಿಗಳಿಗಿಂತ (70.9%) ಉತ್ತಮವಾಗಿದ್ದಾರೆ. ಅಂತೆಯೇ ಹುಡುಗರು ಅಂಕಗಣಿತದಲ್ಲಿ ಮತ್ತು ಇಂಗ್ಲಿಷ್ ಪಠ್ಯವನ್ನು ಓದುವಲ್ಲಿ ಹುಡುಗಿಯರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ವರದಿ ಕಂಡುಕೊಂಡಿದೆ.
'ಗ್ಲೋಬಲ್ ಫೈರ್‌ಪವರ್' ಸಮೀಕ್ಷೆ: ವಿಶ್ವದಲ್ಲೇ ಭಾರತ ನಂ.4 ಬಲಿಷ್ಠ ಸೇ ...
ಫೋನ್ ಮನರಂಜನೆಗೆ ಹೆಚ್ಚು ಬಳಕೆ
ಸಮೀಕ್ಷೆಯು ವಿದ್ಯಾರ್ಥಿಗಳ ಡಿಜಿಟಲ್ ಜಾಗೃತಿಯನ್ನು ಸಹ ಮ್ಯಾಪ್ ಮಾಡಿದೆ. 90% ರಷ್ಟು ಯುವಕರು ಮನೆಯಲ್ಲಿ ಸ್ಮಾರ್ಟ್‌ಫೋನ್ ಹೊಂದಿದ್ದಾರೆ ಮತ್ತು ಅದನ್ನು ಹೇಗೆ ಬಳಸಬೇಕೆಂದು ತಿಳಿದಿರುತ್ತಾರೆ. ಈ ವಿಷಯದಲ್ಲಿ ಹುಡುಗರು ವಿದ್ಯಾರ್ಥಿನಿಯರಿಗಿಂತ ಮುಂದಿದ್ದಾರೆ. ಮೂರನೇ ಎರಡರಷ್ಟು ವಿದ್ಯಾರ್ಥಿಗಳು ಶಿಕ್ಷಣ ಸಂಬಂಧ ವಿಡಿಯೋ ವೀಕ್ಷಿಸಲು ಬಳಸಿದ್ದರೂ, ಶೇ.80ರಷ್ಟು ವಿದ್ಯಾರ್ಥಿಗಳು ಚಲನಚಿತ್ರ ಮತ್ತಿತ್ಯಾದಿ ಮನರಂಜನಾ ವಿಷಯಗಳಿಗಾಗಿ ಸ್ಮಾರ್ಟ್ ಫೋನ್ ಬಳಸಿದ್ದಾರೆ.
ಐಎಎನ್ಎಸ್ ಸುದ್ದಿ ಸಂಸ್ಥೆಗೆ ಇನ್ನು ಗೌತಮ್ ಅದಾನಿ ಮಾಲೀಕ: ಶೇ.76ರಷ ...
ವರದಿಯ ಪ್ರಕಾರ, 14-18 ವರ್ಷ ವಯಸ್ಸಿನವರಲ್ಲಿ ಒಟ್ಟಾರೆ 86.8% ರಷ್ಟು ವಿದ್ಯಾರ್ಥಿಗಳು ಶಾಲೆ ಅಥವಾ ಕಾಲೇಜುಗಳಲ್ಲಿ ದಾಖಲಾಗಿದ್ದಾರೆ. ಆದರೆ ದಾಖಲಾತಿ ಶೇಕಡಾವಾರು ವಯಸ್ಸಿನೊಂದಿಗೆ ಇಳಿಕೆ ಕಂಡಿದೆ. ಉದಾಹರಣೆಗೆ, ಪ್ರಸ್ತುತ ಶಾಲೆ ಅಥವಾ ಕಾಲೇಜಿಗೆ ದಾಖಲಾಗದ ಯುವಕರ ಪ್ರಮಾಣವು 14 ವರ್ಷ ವಯಸ್ಸಿನ 3.9% ರಿಂದ, 16 ವರ್ಷ ವಯಸ್ಸಿನ 10.9% ಮತ್ತು 18 ವರ್ಷ ವಯಸ್ಸಿನವರಲ್ಲಿ 32.6% ಕ್ಕೆ ಏರುತ್ತದೆ ಎಂದು ವರದಿಯು ಹೈಲೈಟ್ ಮಾಡಿದೆ.
ಜೀವನೋಪಾಯದ ಕಾರಣದಿಂದ ಬಹಳಷ್ಟು ಮಕ್ಕಳ ಪ್ರೌಢ ಶಿಕ್ಷಣ ಮತ್ತು ನಂತರದ ಹಂತಗಳು ಅಲ್ಲಿಯೇ ನಿಲ್ಲುತ್ತವೆ. ಅದಾಗ್ಯೂ ಈ ವಯಸ್ಸಿನ ವಿದ್ಯಾರ್ಥಿಗಳು ಶಾಲೆ ಮುಂದುವರೆಸಿದಾಗಲೂ ಅವರ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಕೌಶಲ್ಯಗಳಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ ಎಂದು ವರದಿಯು ಹೈಲೈಟ್ ಮಾಡಿದೆ.