ಜಗತ್ತಿನ ಅತ್ಯಂತ ಶಕ್ತಿಶಾಲಿ ಸೇನಾಪಡೆಗಳನ್ನು ಹೊಂದಿರುವ ದೇಶದಲ್ಲಿ ಭಾರತ 4ನೇ ಸ್ಥಾನವನ್ನು ಪಡೆದುಕೊಂಡಿದೆ. ಅಮೆರಿಕದ ಸೇನೆ ಮೊದಲ ಸ್ಥಾನದಲ್ಲಿದ್ದು, ರಷ್ಯಾ ಮತ್ತು ಚೀನಾ ದೇಶಗಳ ಸೇನೆ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡಿವೆ.
ನವದೆಹಲಿ: ಜಗತ್ತಿನ ಅತ್ಯಂತ ಶಕ್ತಿಶಾಲಿ ಸೇನಾಪಡೆಗಳನ್ನು ಹೊಂದಿರುವ ದೇಶದಲ್ಲಿ ಭಾರತ 4ನೇ ಸ್ಥಾನವನ್ನು ಪಡೆದುಕೊಂಡಿದೆ. ಅಮೆರಿಕದ ಸೇನೆ ಮೊದಲ ಸ್ಥಾನದಲ್ಲಿದ್ದು, ರಷ್ಯಾ ಮತ್ತು ಚೀನಾ ದೇಶಗಳ ಸೇನೆ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡಿವೆ.
ಜಗತ್ತಿನ ರಕ್ಷಣಾ ವ್ಯವಸ್ಥೆಯ ಮಾಹಿತಿ ಕಲೆ ಹಾಕುವ ಗ್ಲೋಬಲ್ ಫೈರ್‌ಪವರ್ ಈ ಸಮೀಕ್ಷೆಯನ್ನು ನಡೆಸಿದ್ದು, 2024ರ ಜಾಗತಿಕ ರಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸೇನಾಪಡೆಗಳ ಸಂಖ್ಯೆ, ಶಸ್ತ್ರಾಸ್ತ್ರಗಳು, ಆರ್ಥಿಕ ದೃಢತೆ, ಭೌಗೋಳಿಕ ಸ್ಥಾನ ಮತ್ತು ಲಭ್ಯವಿರುವ ಸಂಪನ್ಮೂಲಗಳು ಸೇರಿದಂತೆ 60ಕ್ಕೂ ಹೆಚ್ಚು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ವರದಿ ತಯಾರಿಸಲಾಗಿದೆ. ಅಲ್ಲದೇ ಕಳೆದ 1 ವರ್ಷದಲ್ಲಿ ಈ ದೇಶಗಳ ರಾಂಕಿಂಗ್ ಬದಲಾಗಿರುವ ಬಗ್ಗೆಯೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸೇನಾ ನರ್ಸಿಂಗ್ ಹುದ್ದೆ ಸ್ತ್ರೀಯರಿಗೆ ಮೀಸಲು ಅಸಾಂವಿಧಾನಿಕ, ಪುರುಷರಿಗೂ ಚಾನ್ಸ್ ಕೊಡಿ: ಕೋರ್ಟ್
145 ದೇಶಗಳಲ್ಲಿ ಅಮೆರಿಕ, ರಷ್ಯಾ, ಚೀನಾ, ಭಾರತ, ದಕ್ಷಿಣ ಕೊರಿಯಾ, ಬ್ರಿಟನ್, ಜಪಾನ್, ಟರ್ಕಿ, ಪಾಕಿಸ್ತಾನ್ ಮತ್ತು ಇಟಲಿ ದೇಶಗಳು ಮೊದಲ 10 ಸ್ಥಾನದಲ್ಲಿದ್ದರೆ, ಭೂತಾನ್, ಮಾಲ್ಲೋವಾ, ಸುರಿನಾಮ್ ಅತಿ ದುರ್ಬಲ ಸೇನೆಗಳಾಗಿವೆ.
