ಲಾ ಸ್ಕೂಲ್‌ನಲ್ಲಿ ಶೇ.25 ಮೀಸಲು ಕಡ್ಡಾಯ: ಸಚಿವ ಅಶ್ವತ್ಥ್ ನಾರಾಯಣ
- ಲಾ ಸ್ಕೂಲ್‌ನಲ್ಲಿ ಶೇ.25 ಮೀಸಲು ಕಡ್ಡಾಯ: ಅಶ್ವತ್ಥ ನಾರಾಯಣ
- ವಿದ್ಯಾರ್ಥಿಗಳ ಪ್ರವೇಶದಲ್ಲಿ ಸ್ಥಳೀಯ ಮೀಸಲು ನಿಯಮ ಪಾಲಿಸಿ
- ರಾಷ್ಟ್ರೀಯ ಕಾನೂನು ವಿವಿಗೆ ಅಶ್ವತ್ಥ ಪತ್ರ
ಬೆಂಗಳೂರು (ಜ.7) : ಬೆಂಗಳೂರು ವಿವಿಯ ಕ್ಯಾಂಪಸ್‌ನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ನಿಯಮಾನುಸಾರ ಕರ್ನಾಟಕದ ವಿದ್ಯಾರ್ಥಿಗಳಿಗೆ ಸ್ಥಳೀಯ ಮೀಸಲಾತಿಯಡಿ ಶೇ.25ರಷ್ಟುಸೀಟುಗಳನ್ನು ಕಡ್ಡಾಯವಾಗಿ ನೀಡುವಂತೆ ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್.ಅಶ್ವತ್ಥ ನಾರಾಯಣ ಅವರು ಕೂಡ ವಿವಿಯ ಕುಲಪತಿ ಅವರಿಗೆ ಪತ್ರ ಬರೆದಿದ್ದಾರೆ.
ಇತರೆ ರಾಜ್ಯಗಳ ರಾಷ್ಟ್ರೀಯ ಕಾನೂನು ವಿವಿ(National Law University)ಗಳಲ್ಲಿರುವಂತೆ ರಾಜ್ಯದ ಎನ್‌ಎಲ್‌ಎಸ್‌ಐಯು((NLASIU)ನಲ್ಲಿ ಸ್ಥಳೀಯ ಮೀಸಲಾತಿ(Reservation) ನಿಯಮ ಜಾರಿಗೊಳಿಸಿ ಎರಡು ವರ್ಷ ಕಳೆದರೂ ಅದನ್ನು ಪಾಲಿಸದೆ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ(JC Madhuswamy) ಇತ್ತೀಚೆಗಷ್ಟೆವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಸಚಿವ ಅಶ್ವತ್ಥ ನಾರಾಯಣ(Dr CN Ashwath Narayana) ಕೂಡ ಪತ್ರ ಬರೆದಿದ್ದು, ನ್ಯಾಷನಲ… ಲಾ ಸ್ಕೂಲ… ಯೂನಿವರ್ಸಿಟಿಯಲ್ಲಿ ಕಳೆದ ಎರಡು ವರ್ಷಗಳಿಂದ ಶೇ.25ರ ಸ್ಥಳೀಯ ಮೀಸಲಾತಿ ಕೊಡುತ್ತಿಲ್ಲ. ಬದಲಿಗೆ ಅಖಿಲ ಭಾರತ ಕೋಟಾದಡಿ ಮೆರಿಟ್ ಮೇಲೆ ಆಯ್ಕೆಯಾದ ರಾಜ್ಯದ ವಿದ್ಯಾರ್ಥಿಗಳನ್ನೇ ಈ ಮೀಸಲಾತಿ ವ್ಯಾಪ್ತಿಗೆ ತರುತ್ತಿರುವುದು ಸರ್ಕಾರದ ನಿಯಮಗಳ ಉಲ್ಲಂಘನೆಯಾಗಿದೆ. ಇದು ಸಹಜ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಹೈದರಾಬಾದ್, ಕೋಲ್ಕತ್ತಾ, ತಿರುಚಿನಾಪಳ್ಳಿ, ವಿಶಾಖಪಟ್ಟಣ, ರಾಯ… ಪುರ ಮುಂತಾದ ಕಡೆಗಳಲ್ಲಿ ಇರುವ ಕಾನೂನು ವಿವಿಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳ ಮೀಸಲಾತಿಯನ್ನು ಅನುಸರಿಸಲಾಗುತ್ತಿದೆ. ಇದರಂತೆ ಇಲ್ಲಿನ ನ್ಯಾಷನಲ್ ಲಾ ಸ್ಕೂಲ್ ಕೂಡ 2020ರಲ್ಲಿ ಜಾರಿಗೆ ತಂದಿರುವ ತಿದ್ದುಪಡಿ ನಿಯಮಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕು ಎಂದು ಸಚಿವರು ಪತ್ರದಲ್ಲಿ ನಿರ್ದೇಶಿಸಿದ್ದಾರೆ.
Belagavi: ವರ್ಷಕ್ಕೆ 4 ಸಾವಿರ ಯುವಜನರಿಗೆ ಕೌಶಲ್ಯ ತರಬೇತಿ ನೀಡುವ ಗುರಿ: ಸಚಿವ ಅಶ್ವತ್ಥ್