Belagavi: ವರ್ಷಕ್ಕೆ 4 ಸಾವಿರ ಯುವಜನರಿಗೆ ಕೌಶಲ್ಯ ತರಬೇತಿ ನೀಡುವ ಗುರಿ: ಸಚಿವ ಅಶ್ವತ್ಥ್
ವರ್ಷಕ್ಕೆ 4,000 ಯುವಜನರಿಗೆ ತರಬೇತಿ ನೀಡುವ ಉದ್ದೇಶದ 'ಕರ್ನಾಟಕ ಜರ್ಮನ್ ಬಹುಕೌಶಲ್ಯ ತರಬೇತಿ ಕೇಂದ್ರ' (ಕೆಜಿಟಿಟಿಐ) ಕಟ್ಟಡ ನಿರ್ಮಾಣಕ್ಕೆ ಬುಧವಾರ ಶಂಕುಸ್ಥಾಪನೆ ನೆರವೇರಿತು.
ಬೆಳಗಾವಿ (ಡಿ.28): ವರ್ಷಕ್ಕೆ 4,000 ಯುವಜನರಿಗೆ ತರಬೇತಿ ನೀಡುವ ಉದ್ದೇಶದ 'ಕರ್ನಾಟಕ ಜರ್ಮನ್ ಬಹುಕೌಶಲ್ಯ ತರಬೇತಿ ಕೇಂದ್ರ' (ಕೆಜಿಟಿಟಿಐ) ಕಟ್ಟಡ ನಿರ್ಮಾಣಕ್ಕೆ ಬುಧವಾರ ಶಂಕುಸ್ಥಾಪನೆ ನೆರವೇರಿತು. ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಶಂಕುಸ್ಥಾಪನೆ ನೆರವೇರಿಸಿ, 15.5 ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯಮಭಾಗದಲ್ಲಿ ಈ ಕೇಂದ್ರ ನಿರ್ಮಾಣವಾಗಲಿದೆ ಎಂದು ತಿಳಿಸಿದರು. ಈ ಕೇಂದ್ರದಲ್ಲಿ 30ಕ್ಕೂ ಹೆಚ್ಚು ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ತರಬೇತಿ ಕೊಡಲಾಗುವುದು.
ಪ್ರವರ್ಧಮಾನಕ್ಕೆ ಬರುತ್ತಿರುವ ಎಲೆಕ್ಟ್ರಿಕ್ ವೆಹಿಕಲ್ಸ್, ವಾಹನ ತಾಂತ್ರಿಕತೆ ಎಂತಹ ಪ್ರಸ್ತುತಕ್ಕೆ ಸಲ್ಲುವ ಕೋರ್ಸ್‌ಗಳನ್ನು ಇದು ಒಳಗೊಂಡಿದೆ ಎಂದು ನಾರಾಯಣ್ ವಿವರಿಸಿದರು. ತಯಾರಿಕಾ ಕ್ಷೇತ್ರವು ಇಂದು ಊಹೆಗೂ ನಿಲುಕುದಷ್ಟು ಮುಂದುವರೆದಿದೆ. ಅದಕ್ಕೆ ಅನುಗುಣವಾಗಿ ಈ ಕೇಂದ್ರದಲ್ಲಿ ಆತ್ಯಾಧುನಿಕ ರೀತಿಯಲ್ಲಿ ತರಬೇತಿ ನೀಡಲಾಗುವುದು ಎಂದು ಸಚಿವರು ಹೇಳಿದರು ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಕರ್ನಾಟಕವು ಇಡೀ ಪ್ರಪಂಚದಲ್ಲೇ ಭರವಸೆಯ ತಾಣವಾಗಿದೆ. ಆದರೆ, ಇದರ ಲಾಭವು ನಮಗೆ ಸಿಗಬೇಕೆಂದರೆ ನಮ್ಮ ಯುವಕರು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು.
ಡಿಗ್ರಿ, ಪೀಜಿ: ಕನ್ನಡ, ಇಂಗ್ಲಿಷ್ ಬೆರೆಸಿ ಪರೀಕ್ಷೆ ಬರೆಯಲು ಅಸ್ತು!
ಇದನ್ನು ಗಮನದಲ್ಲಿರಿಸಿಕೊಂಡು ಇಂತಹ ಕೇಂದ್ರಗಳನ್ನು ಸರ್ಕಾರವು ಆದ್ಯತೆಯ ಮೇರೆಗೆ ಸ್ಥಾಪಿಸುತ್ತಿದೆ ಎಂದರು. ನಮ್ಮ ದೇಶಕ್ಕೆ ಕೈಗಾರಿಕಾ ಕ್ರಾಂತಿ 1.0, 2.0 ಮತ್ತು 3.0ಯ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಈಗ ಕೈಗಾರಿಕಾ ಕ್ರಾಂತಿ 4.0ರ ಅವಕಾಶಗಳನ್ನು ನಾವು ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು ಎಂದು ಒತ್ತಿ ಹೇಳಿದರು. ಕರ್ನಾಟಕವು ಅವಕಾಶಗಳ ತಾಣವಾಗಿದೆ. ಮುಂಚೆ, ಮುಂಬೈ ದೇಶದ ಹಣಕಾಸು ರಾಜಧಾನಿಯಾಗಿತ್ತು. ಆದರೆ ಈಗ ಬೆಂಗಳೂರಿನಲ್ಲಿರುವ ಎರಡೇ ಎರಡು ಆನ್ಲೈನ್ ಕಂಪನಿಗಳು ದೇಶದ ಶೇಕಡ 50ರಷ್ಟು ಷೇರು ವಹಿವಾಟನ್ನು ನಿರ್ವಹಿಸುತ್ತಿವೆ.
ಮುಂಬೈಯಲ್ಲಿ ಮರಾಠಿ ಭಾಷಿಗರು ಎಷ್ಟಿದ್ದಾರೆ?: ಸಚಿವ ಅಶ್ವತ್ಥನಾರಾಯಣ ಪ್ರಶ್ನೆ
ಇನ್ನು ಐದು ವರ್ಷಗಳಲ್ಲಿ ರಾಜ್ಯದ ಫಿನ್ ಟೆಕ್ ಕಂಪನಿಗಳು ಆರ್ಥಿಕ ಚಟುವಟಿಕೆಗಳನ್ನು ನಿರ್ವಹಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದೇ ರೀತಿಯಾಗಿ, ಶಿಕ್ಷಣ ತಂತ್ರಜ್ಞಾನ ಮೆಡಿಟೆಕ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯವು ಅಗ್ರಪಂತಿಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲಲಿದೆ ಎಂದು ವಿವರಿಸಿದರು. ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮತ್ತಿತರರು ಇದ್ದರು. ಕೆಜಿಎಂಎಸ್ ಡಿಸಿ ಜಂಟಿ ಕಾರ್ಯದರ್ಶಿ ಬಿ.ಎಸ್ ರಘುಪತಿ ಸ್ವಾಗತಿಸಿದರು. ಕೆಜಿಟಿಟಿಐ ಬೆಳಗಾವಿ ನಿರ್ದೇಶಕ ಚಿದಾನಂದ ಬಾಕೆ ಇದ್ದರು.