ಒಂದೇ ಕಾಲಿನಲ್ಲಿ ನೆಗೆಯುತ್ತಾ ಶಾಲೆಗೆ ಬರುವ ಪುಟಾಣಿ: ನೆರವಿಗೆ ಮುಂದಾದ ಸೋನು ಸೂದ್

  • ಕಾಲು ಕಳೆದರೂ ಆತ್ಮಬಲ ಕುಗ್ಗಿಲ್ಲ
  • ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡ ಪುಟಾಣಿ
  • ಬಿಹಾರದ ಜಮುಯಿಯ 10 ವರ್ಷದ ಪುಟ್ಟ ಬಾಲಕಿಯ ಸಾಹಸಗಾಥೆ
10 year old handicaped girl from jamui coming to schol by walk through single leg akb

ಪಾಟ್ನಾ: ಬಿಹಾರದ (Bihar) ಜಮುಯಿಯ (Jamui) 10 ವರ್ಷದ ಪುಟ್ಟ ಬಾಲಕಿಯೊಬ್ಬಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಆಕೆಯ ಸಾಧನೆ ಏನು ಗೊತ್ತೆ. ಆಕೆ ಅಪಘಾತವೊಂದರಲ್ಲಿ ಒಂದು ಕಾಲನ್ನು ಕಳೆದುಕೊಂಡಿದ್ದಾಳೆ. ಆದಾಗ್ಯೂ ಆಕೆಯ  ಶಿಕ್ಷಣದ ಮೇಲಿನ ಆಸಕ್ತಿ ಏನು ಕಡಿಮೆ ಆಗಿಲ್ಲ. ಕಲಿಯುವ ಹಠಕ್ಕೆ ಬಿದ್ದಿರುವ ಈ ಬಾಲಕಿ ಕಾಲು ಒಂದೇ ಇದ್ದರೇನಂತೆ ಅದೇ ಒಂದು ಕಾಲಿನಲ್ಲಿ ನೆಗೆಯುತ್ತಾ ಶಾಲೆಗೆ ಬರುತ್ತಿದ್ದಾಳೆ. 


ಬಿಹಾರದ ಜಮುಯಿಯ ಈ ಬಾಲಕಿಯ ಹೆಸರು ಸೀಮಾ. ಎರಡು ವರ್ಷಗಳ ಹಿಂದೆ ಅಪಘಾತಕ್ಕೀಡಾದಾಗ ಕಾಲು ಕಳೆದುಕೊಂಡ ಈ ಸೀಮಾಳ ಆತ್ಮವಿಶ್ವಾಸಕ್ಕೆ ಸೀಮೆಯೇ ಇಲ್ಲ. ತನ್ನ ವೈಖಲ್ಯತೆಯನ್ನು ಮೀರಿರುವ ಸೀಮಾ ಪ್ರತಿದಿನವೂ ಒಂದು ಕಿಲೋ ಮೀಟರ್ ದೂರದಲ್ಲಿರುವ ಶಾಲೆಯನ್ನು ಯಾರ ಸಹಾಯವಿಲ್ಲದೇ ತಲುಪುತ್ತಾಳೆ. ಅವಳು ಒಂದೇ ಕಾಲಿನಲ್ಲಿ ನೆಗೆಯುತ್ತಾ ಶಾಲೆಗೆ ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಸೀಮಾ ತನ್ನ ಶಾಲಾ ಸಮವಸ್ತ್ರದೊಂದಿಗೆ ಬೆನ್ನಿಗೆ ಪುಸ್ತಕ ತುಂಬಿದ ಬ್ಯಾಗ್‌ ಹಾಕಿ ಬರಿಗಾಲಲ್ಲಿ ಜಿಗಿಯುತ್ತಾ ಸಾಗುವುದು ಕಂಡು ಬಂದಿದೆ. 

 

ಮಹಾದಲಿತ ಸಮುದಾಯದಿಂದ (Mahadalit community) ಬಂದಿರುವ ಖೀರನ್ ಮಾಂಝಿ (Kheeran Manjhi) ಅವರ ಪುತ್ರಿ ಸೀಮಾ ನಕ್ಸಲ್ ಪೀಡಿತ ಫತೇಪುರ್ (Fatehpur village) ಗ್ರಾಮದ ನಿವಾಸಿ. ಆಕೆಯ ತಂದೆ ಹೊರ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಜಮುಯಿಯಲ್ಲಿ (Jamui) ಇಟ್ಟಿಗೆ ಗೂಡು ಕೆಲಸ ಮಾಡುತ್ತಾರೆ. ಎಲ್ಲರಂತೆ, 10 ವರ್ಷದ ಸೀಮಾ ಕೂಡ ತನ್ನದೇ ಆದ ಕನಸುಗಳನ್ನು ಹೊಂದಿದ್ದಾಳೆ. ಆಕೆ ವ್ಯಾಸಂಗವನ್ನು ಮುಗಿಸಿದ ನಂತರ ಶಿಕ್ಷಕಿಯಾಗಬೇಕು ಮತ್ತು ಗ್ರಾಮದ ಇತರ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಬೇಕು ಎನ್ನುವ ಕನಸು ಸೀಮಾಳದ್ದು.

ಮನಸ್ಸಿದ್ದರೆ ಮಾರ್ಗ : ಎರಡು ಕೈಗಳಿಲ್ಲದಿದ್ದರು ಸ್ಟ್ರೀಟ್‌ ಫುಡ್‌ ತಯಾರಿಸುವ ದಿವ್ಯಾಂಗ
 

ದಿವ್ಯಾಂಗ ಮಕ್ಕಳ ಹಿತಾಸಕ್ತಿಗೆ ಹಲವು ಯೋಜನೆಗಳಿವೆ ಎಂದು ಹೇಳಿಕೊಂಡ ಸರ್ಕಾರದ ಪ್ರತಿನಿಧಿಗಳು ಗಡಿಗ್ರಾಮಗಳಿಗೂ ಬರಲಾರಂಭಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕೂಡ ಸೀಮಾ ಅವರ ಮನೆಗೆ ತಲುಪಿ ಅವರಿಗೆ ತ್ರಿಚಕ್ರ ವಾಹನವನ್ನು ನೀಡಿ ಕೃತಕ ಅಂಗ ಅಳವಡಿಸುವ ಭರವಸೆ ನೀಡಿದ್ದಾರೆ. ಅಲ್ಲದೇ ಅಧಿಕಾರಿಯೂ ಆಕೆಗೆ ಪಕ್ಕಾ ಮನೆ ಕೊಡಿಸುವ ಭರವಸೆಯನ್ನೂ ನೀಡಿದ್ದಾರೆ.

ಎರಡು ವರ್ಷಗಳ ಹಿಂದೆ ಟ್ರಾಕ್ಟರ್ ಡಿಕ್ಕಿ ಹೊಡೆದು ಸೀಮಾ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದಳು. ಇತರ ಐವರು ಒಡಹುಟ್ಟಿದವರನ್ನು ಹೊಂದಿರುವ ಸೀಮಾ, ತನ್ನ ಜೀವನವು ಕತ್ತಲೆಯಲ್ಲಿ ಮುಳುಗಿ ಹೋಗುವುದೋ ಎಂಬ ಚಿಂತೆಯಲ್ಲಿದ್ದಳು ಆದರೆ ಇತರ ಮಕ್ಕಳು ಶಾಲೆಗೆ ಹೋಗುವುದನ್ನು ನೋಡಿದ ನಂತರ ಅದು ತನ್ನ ನೈತಿಕತೆಯನ್ನು ಹೆಚ್ಚಿಸಿದೆ ಎಂದು ಹೇಳಿದರು. ಆರಂಭದಲ್ಲಿ ಒಂದು ಕಾಲಿನಲ್ಲಿ ಶಾಲೆಗೆ ಒಂದು ಕಿಮೀ ದೂರವನ್ನು ಕ್ರಮಿಸುವುದು ಅತ್ಯಂತ ಸವಾಲಿನ ಮತ್ತು ನೋವಿನಿಂದ ಕೂಡಿತ್ತು ಆದರೆ ಕಾಲಾನಂತರದಲ್ಲಿ ಅದುವೇ ಅಭ್ಯಾಸವಾಯಿತು ಎಂದು ಹೇಳುತ್ತಾಳೆ ಸೀಮಾ.

ದಿವ್ಯಾಂಗ ಮಗುವಿಗೆ ಪ್ರವೇಶ ನಿರಾಕರಿಸಿದ ಇಂಡಿಗೋ ಏರ್‌ಲೈನ್ಸ್
 

ಸೀಮಾ ಶಾಲೆಯ ಶಿಕ್ಷಕ ಶಿವಕುಮಾರ್ ಭಗತ್ (Shivkumar Bhagat) ಮಾತನಾಡಿ, ಸೀಮಾ ಧೃತಿಗೆಟ್ಟಿದ್ದನ್ನು ನಾನೆಂದೂ ನೋಡಿಲ್ಲ. ಅವಳ ಆತ್ಮವು ಸಾಮಾನ್ಯ ಮಕ್ಕಳಂತೆಯೇ ಇದೆ ಎಂದು ಶಿಕ್ಷಕರು ಹೇಳಿದರು. ಸೀಮಾಳ ಕಥೆಯು ಅನೇಕರಿಗೆ ಸ್ಫೂರ್ತಿ ನೀಡಿದೆ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಮೂಲಕ ಖ್ಯಾತಿ ಗಳಿಸಿರುವ ಬಾಲಿವುಡ್ ನಟ ಸೋನು ಸೂದ್ (Sonu Sood) ಅವರು ಕೂಡ ಈ ವೀಡಿಯೊವನ್ನು ನೋಡಿದ್ದಾರೆ ಮತ್ತು ಸೀಮಾ ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿರುವ ಸೋನು ಸೂದ್ ಸೀಮಾ ಶೀಘ್ರದಲ್ಲೇ ತನ್ನ ಎರಡೂ ಕಾಲುಗಳನ್ನು ಹಾಕಿಕೊಂಡು ಶಾಲೆಗೆ ಹೋಗುತ್ತಾಳೆ ಎಂದು ಭರವಸೆ ನೀಡಿದ್ದಾರೆ. ಆಕೆಗೆ ಕೃತಕ ಕಾಲು ಹಾಕಿಸಲು ಸಹಾಯ ಮಾಡುವುದಾಗಿ ಸೂಚಿಸಿ ಟಿಕೆಟ್ ಕಳುಹಿಸುತ್ತಿರುವುದಾಗಿ ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios