ಮನಸ್ಸಿದ್ದರೆ ಮಾರ್ಗ : ಎರಡು ಕೈಗಳಿಲ್ಲದಿದ್ದರು ಸ್ಟ್ರೀಟ್‌ ಫುಡ್‌ ತಯಾರಿಸುವ ದಿವ್ಯಾಂಗ

  • ಎರಡೂ ಕೈಗಳಿಲ್ಲದಿದ್ದರೂ ಆಹಾರ ತಯಾರಿಸುವ ದಿವ್ಯಾಂಗ
  • ದಿವ್ಯಾಂಗ ಯುವಕನ ವಿಡಿಯೋ ವೈರಲ್‌
  • ಮನಸ್ಸಿದ್ದರೆ ಮಾರ್ಗ ಎಂಬುದನ್ನು ತೋರಿಸಿದ ಯುವಕ
Nothing is impossible  this differently abled man cooking on his cart without two hand akb

ಸಾಧಿಸುವ ಧೃಡ ಸಂಕಲ್ಪವೊಂದಿದ್ದಾರೆ ಯಾವುದು ಅಸಾಧ್ಯವಲ್ಲ. ಈ ಮಾತಿಗೆ ಈಗಾಗಲೇ ನಾವು ಹಲವು ನಿದರ್ಶನಗಳನ್ನು ನೋಡಿದ್ದೇವೆ. ಹಾಗೆಯೇ ಪ್ರತಿಯೊಬ್ಬರಿಗೂ ಸ್ಪೂರ್ತಿ ತುಂಬುವ ದಿವ್ಯಾಂಗ ಯುವಕನೋರ್ವನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿದೆ. ಸಾಧಿಸುವ ಮನಸ್ಸಿದ್ದರೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಈ ಯುವಕ ತೋರಿಸಿ ಕೊಟ್ಟಿದ್ದಾನೆ.ತಮ್ಮ ಅಂಗವೈಕಲ್ಯವನ್ನು ಮೀರಿ ನಿಂತ ಈ ಯುವಕ ಬೀದಿ ಬದಿಯಲ್ಲಿ ಫಾಸ್ಟ್‌ಪುಡ್‌ ಆಹಾರವನ್ನು ತಯಾರಿಸುವ ಗಾಡಿಯೊಂದನ್ನು ನಡೆಸುತ್ತಿದ್ದಾನೆ.

@DigitalRahulM ಎಂಬ ಟ್ವಿಟ್ಟರ್ ಖಾತೆಯಿಂದ  ಟ್ವಿಟ್ಟರ್ ಬಳಕೆದಾರ ರಾಹುಲ್ ಮಿಶ್ರಾ ಅವರು ಪೋಸ್ಟ್ ಮಾಡಿರುವ ಈ ವಿಡಿಯೋದಲ್ಲಿ ಎರಡು ಕೈಗಳಿಲ್ಲದ ದಿವ್ಯಾಂಗ ಯುವಕ ಬೀದಿ ಬದಿಯ ತಳ್ಳುಗಾಡಿಯೊಂದರಲ್ಲಿ ನೂಡಲ್ಸ್ ಅನ್ನು ಮಾಡುತ್ತಿರುವುದನ್ನು ಕಾಣಬಹುದು. 30 ಸೆಕೆಂಡುಗಳ ವೀಡಿಯೊವನ್ನು ಒಂದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಜೊತೆ ಈ ವಿಡಿಯೋಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅನೇಕರು ಈ ವಿಡಿಯೋವನ್ನು ರಿಟ್ವಿಟ್‌ ಮಾಡಿದ್ದಾರೆ.

ಅನೇಕ ಜನರು ಈ ದಿವ್ಯಾಂಗ ವ್ಯಕ್ತಿಯ ಪರಿಶ್ರಮವನ್ನು ನೋಡಿ ಬೆರಗಾಗಿದ್ದಾರೆ. ಅಲ್ಲದೇ ಟ್ಟಿಟ್ಟರ್‌ (twitter) ಪೋಸ್ಟ್‌ ಮಾಡಿದ ರಾಹುಲ್‌ ಮಿಶ್ರಾ ಅವರಿಗೆ ಈ ದಿವ್ಯಾಂಗ ವ್ಯಕ್ತಿ ಇರುವ ಸ್ಥಳವನ್ನು ತಿಳಿಸುವಂತೆ ಕೇಳಿಕೊಂಡರು, ಈ ಮೂಲಕ ಅವರು ಈ ದಿವ್ಯಾಂಗ ಯುವಕನಿಂದ ಆಹಾರ ಖರೀದಿಸುವ ಮೂಲಕ ಆತನ ಉದ್ಯಮವನ್ನು ಬೆಂಬಲಿಸಬಹುದು. ಎಂಬ ಉದ್ದೇಶದಿಂದ 'ನೀವು ದಿವ್ಯಾಂಗ ಯುವಕ ಇರುವ ಸ್ಥಳವನ್ನು ನೀಡಿ, ಇದರಿಂದ  ಸುತ್ತಮುತ್ತಲಿನ ಜನರು ಆತನಿದ್ದಲ್ಲಿ ಹೋಗಿ ಆತನಿಂದ ಆಹಾರ ಪಡೆದು ಉದ್ಯಮವನ್ನು ಬೆಂಬಲಿಸಬಹುದು ಎಂದು ಅವರು ಬರೆದಿದ್ದಾರೆ. ಈ ಯುವಕ ಧೃಡ ಸಂಕಲ್ಪ ಹೊಂದಿದ್ದು, ಎಲ್ಲರಿಗಿಂತ ಹೆಚ್ಚು ಗೌರವಕ್ಕೆ ಅರ್ಹರು. ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಜೀವನ ನಡೆಸುವ ಈ ವ್ಯಕ್ತಿಯನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ದಿವ್ಯಾಂಗ ಮುಸ್ಲಿಂ ಸಹಪಾಠಿಗೆ ನೆರವಾಗುವ ಹಿಂದೂ ಸ್ನೇಹಿತೆಯರು

2020 ರಲ್ಲಿ ಯಾರ ಸಹಾಯವೂ ಪಡೆಯದೇ ಕಾಲಿನ ಬೆರಳುಗಳ ಮೂಲಕವೇ ಪರೀಕ್ಷೆ ಬರೆದ ವಿದ್ಯಾರ್ಥಿಯ ಫೋಟೋವೊಂದು ವೈರಲ್‌ ಆಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ‌ ತಾಲ್ಲೂಕಿನ ಎಸ್.ವಿ.ಎಸ್ ಪ್ರೌಢ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೇ ಕಾಲಿನ ಬೆರಳುಗಳ ಮೂಲಕವೇ  ದಿವ್ಯಾಂಗ ವಿದ್ಯಾರ್ಥಿ ಕೌಶಿಕ್ ಪರೀಕ್ಷೆ ಬರೆದಿದ್ದರು. ಇದಕ್ಕೆ ಆಗಿನ ಶಿಕ್ಷಣ ಸಚಿವರಾಗಿದ್ದ ಸುರೇಶ್‌ಕುಮಾರ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ವಿದ್ಯಾರ್ಥಿಗೆ ನನ್ನ ಹೃದಯಪೂರ್ವ ಮೆಚ್ಚುಗೆ. ಇಂತಹ ವ್ಯಕ್ತಿಗಳು ಬದುಕಿನ‌ ಸಾರ್ಥಕ‌ ಅರ್ಥ ಕಲ್ಪಿಸುತ್ತಾರೆ. ಸಮಾಜದ ಎಲ್ಲ ಮಾನವೀಯ ನಿಲುವುಗಳನ್ನು ಸಮರ್ಥಿಸುತ್ತಾರೆ ಎಂದು ಬರೆದುಕೊಂಡಿದ್ದರು. 

ನಾವು ಯಾರಿಗೂ ಕಡಿಮೆ ಇಲ್ಲ: ವಿಶೇಷಚೇತನರ ಭರತನಾಟ್ಯಕ್ಕೆ ಬೆರಗಾದ ಜನ
 

Latest Videos
Follow Us:
Download App:
  • android
  • ios