ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾ ಬಸಪ್ಪಗೆ 10 ಲಕ್ಷ..!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಈ ಇಬ್ಬರೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಿದರೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸದಾಶಿವನಗರದ ನಿವಾಸಕ್ಕೆ ಆಹ್ವಾನಿಸಿ ಗೌರವಿಸಿದರು. ಜೊತೆಗೆ ವಿದ್ಯಾರ್ಥಿಗಳ ಪೋಷಕರನ್ನೂ ಅಭಿನಂದಿಸಲಾಯಿತು.
ಬೆಂಗಳೂರು(ಮೇ.15): ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮುಧೋಳ ತಾಲೂಕಿನ ಮಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಹಾಗೂ ತೃತೀಯ ಟಾಪರ್‌ಗಳಲ್ಲಿ ಒಬ್ಬರಾದ ಮಂಡ್ಯ ತಾಲೂಕಿನ ತುಂಬಿಗರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ನವನೀತ್ ಕೆ.ಸಿ. ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ಪ್ರತ್ಯೇಕವಾಗಿ ಸನ್ಮಾನಿಸಿ ಪ್ರತ್ಯೇಕ ಆರ್ಥಿಕ ನೆರವು ಘೋಷಿಸಿದರು.
ಮುಖ್ಯಮಂತ್ರಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಈ ಇಬ್ಬರೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಿದರೆ ಉಪ ಮುಖ್ಯಮಂತ್ರಿ ಅವರು ತಮ್ಮ ಸದಾಶಿವ ನಗರದ ನಿವಾಸಕ್ಕೆ ಆಹ್ವಾನಿಸಿ ಗೌರವಿಸಿದರು. ಜೊತೆಗೆ ವಿದ್ಯಾರ್ಥಿಗಳ ಪೋಷಕರನ್ನೂ ಅಭಿನಂದಿಸಲಾಯಿತು.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ರಾಜ್ಯದ ಫಲಿತಾಂಶ ಶೇ.73ಕ್ಕೆ ಕುಸಿತ: ಬಾಗಲಕೋಟೆ ಅಂಕಿತಾ ಟಾಪರ್
(625 ಅಂಕ) ಅಂಕಿತಾಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಬ್ಬರೂ ವೈಯಕ್ತಿಕ ವಾಗಿ ತಲಾ 5 ಲಕ್ಷ ರು., ತೃತೀಯ ಟಾಪರ್ (623 ಅಂಕ) ನವನೀತ್ ಗೆ ಮುಖ್ಯಮಂತ್ರಿ ಅವರು 3 ಲಕ್ಷರು. ಮತ್ತು ಉಪ ಮುಖ್ಯಮಂತ್ರಿ ಅವರು 2 ಲಕ್ಷ ರು. ನೆರವನ್ನು ಘೋಷಿಸಿ ಮುಂದಿನ ವಿದ್ಯಾ ಭ್ಯಾಸ ಯಶಸ್ವಿಯಾಗಿ ಸಾಗಲಿ ಎಂದು ಶುಭ ಹಾರೈಸಿದರು.
625ಕ್ಕೆ ಒಂದು ಅಂಕ ಕಡಿಮೆಯಾಗಿದ್ದಕ್ಕೆ ಮರುಮೌಲ್ಯಮಾಪನ ಮೊರೆ ಹೋದ ಮೇಧಾ ಶೆಟ್ಟಿ!
ಜೊತೆಗೆ ಅಂಕಿತಾ ಓದಿದ ಶಾಲೆಯ ನೀಡಲಾಯಿತು ಎಂದರು. ಅಭಿವೃದ್ಧಿಗೆ ಒಂದು ಕೋಟಿರು.ಹಾಗೂ ನವನೀತ್ ವ್ಯಾಸಂಗ ಮಾಡಿದ ಶಾಲೆಯ ಅಭಿವೃದ್ಧಿಗೆ 50 ಲಕ್ಷ ರು. ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯ ಮಂತ್ರಿ ಅವರು ಇದೇ ವೇಳೆ ಪ್ರಕಟಿಸಿ ದರು. ಬಳಿಕ ಮಾತನಾಡಿದ ಸಿಎಂ, ಮೊರಾರ್ಜಿ ದೇಸಾಯಿ ವಸತಿ ಶಾಲೆ ನನ್ನ ಕಲ್ಪನೆ. 1994 ರಲ್ಲಿ ಉಪ ಮುಖ್ಯಮಂತ್ರಿ ಆಗಿದ್ದಾಗ ಈ ಶಾಲೆಗಳಿಗೆ ಚಾಲನೆ
2ನೇ ಟಾಪರ್‌ಗೂ ಸನ್ಮಾನಕ್ಕೆ ಆಗ್ರಹ:
ಸರ್ಕಾರಿ ಶಾಲೆಯಲ್ಲಿ ಓದಿದ ಪ್ರಥಮ ಮತ್ತು ತೃತೀಯ ಟಾಪರ್‌ಗಳನ್ನು ಸಿಎಂ. ಡಿಸಿಎಂ ಸನ್ಮಾನಿಸಿರುವುದು ಸ್ವಾಗತಾರ್ಹ. ಅದೇ ರೀತಿ ಎರಡನೇ ಟಾಪರ್ ಆಗಿರುವ ದರ್ಶನ್ ಸುಬ್ರಾಯ ಭಟ್ ಕೂಡ ಶಿರಸಿಯ ಸರ್ಕಾರಿ ಮಾರಿಕಾಂಬ ಪಿಯು ಕಾಲೇಜಿನ ವಿದ್ಯಾರ್ಥಿ. ಅವರನ್ನೂ ಸನ್ಮಾನಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.