ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ರಾಜ್ಯದ ಫಲಿತಾಂಶ ಶೇ.73ಕ್ಕೆ ಕುಸಿತ: ಬಾಗಲಕೋಟೆ ಅಂಕಿತಾ ಟಾಪರ್

ರಾಜ್ಯದಲ್ಲಿ 8,59,967 ಲಕ್ಷ ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ 2023-24 ನೇ ಸಾಲಿನ ಶೇಕಡಾವಾರು ಫಲಿತಾಂಶ 73.40ಕ್ಕೆ ಕುಸಿತವಾಗಿದೆ. ಬಾಗಲಕೋಟೆಯ ಅಂಕಿತಾ ರಾಜ್ಯಕ್ಕೆ ಟಾಪರ್. 625ಕ್ಕೆ 625 ಅಂಕ ಪಡೆದುಕೊಂಡಿದ್ದಾಳೆ.  

Karnataka SSLC Result 2024 KSEAB Announced 10th class results link at karresults nic in sat

ಬೆಂಗಳೂರು (ಮೇ.09): ರಾಜ್ಯದಲ್ಲಿ 8,59,967 ಲಕ್ಷ ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ 2023-24 ನೇ ಸಾಲಿನ ಶೇಕಡಾವಾರು ಫಲಿತಾಂಶ 73.40ಕ್ಕೆ ಕುಸಿತವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.10 ಪರ್ಸೆಂಟ್ ಕುಸಿತವಾಗಿದೆ. ಬಾಗಲಕೋಟೆಯ ಅಂಕಿತಾ ರಾಜ್ಯಕ್ಕೆ ಟಾಪರ್. 625ಕ್ಕೆ 625 ಅಂಕ ಪಡೆದುಕೊಂಡಿದ್ದಾಳೆ.  

ಪ್ರಸ್ತುತ 2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಕರ್ನಾಟಕ ಫಲಿತಾಂಶಗಳ ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ರಾಜ್ಯಾದ್ಯಂತ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ ವತಿಯಿಂದ ಮಾರ್ಚ್ 25 ಮತ್ತು ಏಪ್ರಿಲ್ 6ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈಗ ಫಲಿತಾಂಶ ಹೊರ ಬಿದ್ದಿದೆ. ಈ ಪೈಕಿ ಬಾಗಲಕೋಟೆಯ ಅಂಕಿತಾ ರಾಜ್ಯಕ್ಕೆ ಟಾಪರ್. 625ಕ್ಕೆ 625 ಅಂಕ ಪಡೆದುಕೊಂಡಿದ್ದಾಳೆ.  

ಅತಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳ ವಿವಿರ 
1)ಅಂಕಿತಾ ಬಸಪ್ಪ ಕೊನ್ನೂರು  (625/625)  (ರಾಜ್ಯಕ್ಕೆ ಫ್ರಥಮ)
ದ್ವೀತಿಯ ಸ್ಥಾನ 7 ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿದೆ:
1) ಮೇದಾ ಪಿ ಶೆಟ್ಟಿ ( ಬೆಂಗಳೂರು) 624/625
2) ಹರ್ಷಿತಾ ಡಿಎಂ (ಮಧುಗಿರಿ)
3)ಚಿನ್ಮಯ್ (ದಕ್ಷಿಣ ಕನ್ನಡ)
4)ಸಿದ್ದಾಂತ್ (ಚಿಕ್ಕೊಡಿ )
5)ದರ್ಶನ್ (ಶಿರಸಿ)
6) ಚಿನ್ಮಯ್ (ಶಿರಸಿ)
7)ಶ್ರೀರಾಮ್ (ಶಿರಸಿ)

ಬಾಗಲಕೋಟೆ ಮೊರಾರ್ಜಿ ಶಾಲೆ ಅಂಕಿತಾ ಕೊನ್ನೂರು ಟಾಪರ್:Karnataka SSLC Result 2024 KSEAB Announced 10th class results link at karresults nic in sat

ಲಿಂಗವಾರು ಒಟ್ಟಾರೆ ಫಲಿತಾಂಶ: 
ಬಾಲಕರು: 2,87,416 (65.90%)
ಬಾಲಕಿಯರು; 3,43,788 (81.11%)
SSLC ಪರೀಕ್ಷೆಯಲ್ಲಿ ಬಾಲಕಿಯರ ಮೇಲುಗೈ ಸಾಧಿಸಿದ್ದಾರೆ. 

ರಾಜ್ಯದಲ್ಲಿ ಶೇಕಡಾವಾರು ಪ್ರಥಮ ಸ್ಥಾನ ಪಡೆದ ಜಿಲ್ಲೆ :
1) ಉಡುಪಿ - ಪ್ರಥಮ ಸ್ಥಾನ (94%)
2) ದಕ್ಷಿಣ ಕನ್ನಡ - ದ್ವೀತಿಯ ಸ್ಥಾನ(92.12%)
3) ಶಿವಮೊಗ್ಗ- ತೃತೀಯ ಸ್ಥಾಮ (88.67%)
35)  ಯಾದಗಿರಿ - ಕೊನೇ ಸ್ಥಾನ - (ಶೇ.50.59)

ಜಿಲ್ಲಾವಾರು ಫಲಿತಾಂಶದ ಪಟ್ಟಿ ಇಲ್ಲಿದೆ ನೋಡಿ..
Karnataka SSLC Result 2024 KSEAB Announced 10th class results link at karresults nic in sat

Latest Videos
Follow Us:
Download App:
  • android
  • ios