ನವದೆಹಲಿ(ಜು.07): ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯವಾದ ಬೆನ್ನಲ್ಲೇ, ಅಂತಿಮ ವರ್ಷದ ಪದವಿ ಪರೀಕ್ಷೆಗಳಿಗೆ ಕೇಂದ್ರ ಗೃಹ ಸಚಿವಾಲಯ ಸೋಮವಾರ ಹಸಿರು ನಿಶಾನೆ ತೋರಿದೆ. ಇದರ ಬೆನ್ನಲ್ಲೇ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್‌ ಅಂತ್ಯದೊಳಗೆ ಪರೀಕ್ಷೆ ಮುಗಿಸಲು ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದೆ.

‘ಪರೀಕ್ಷೆಗೆ ಸಂಬಂಧಿಸಿದ ಯುಜಿಸಿ ಮಾರ್ಗಸೂಚಿ ಹಾಗೂ ಶೈಕ್ಷಣಿಕ ವೇಳಾಪಟ್ಟಿಗೆ ಅನುಗುಣವಾಗಿ ಅಂತಿಮ ವರ್ಷದ ಪರೀಕ್ಷೆಗಳನ್ನು ಕಡ್ಡಾಯವಾಗಿ ನಡೆಸಬೇಕು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೂಚಿಸುವ ಸುರಕ್ಷಾ ಕ್ರಮಗಳೊಂದಿಗೆ ಪರೀಕ್ಷೆ ಆಯೋಜಿಸಬೇಕು ಎಂದು ಗೃಹ ಸಚಿವಾಲಯವು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿತ್ತು. ಇದರ ಬೆನ್ನಲ್ಲೇ ಸೆಪ್ಟೆಂಬರ್‌ ಅಂತ್ಯದೊಳಗೆ ಪರೀಕ್ಷೆ ಮುಗಿಸಿ ಎಂದು ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಿದೆ.

ಡಿಗ್ರಿ, ಪಿ.ಜಿ. ಅಂತಿಮ ವರ್ಷದ ಪರೀಕ್ಷೆ ರದ್ದು? ಅಕ್ಟೋಬರ್‌ವರೆಗೂ ಕಾಲೇಜಿಲ್ಲ?

ಮಾರ್ಗಸೂಚಿಯಲ್ಲಿ ಏನಿದೆ?

- ಪೆನ್‌ ಮತ್ತು ಕಾಗದ ಅಥವಾ ಆನ್‌ಲೈನ್‌ ಅಥವಾ ಆನ್‌ಲೈನ್‌/ಆಫ್‌ಲೈನ್‌ ಎಂಬ ಮೂರು ವಿಧಾನಗಳ ಪೈಕಿ ಯಾವುದು ಸಾಧ್ಯವೋ ಅದರಂತೆ ಪರೀಕ್ಷೆ ನಡೆಸಬಹುದು

- ಒಂದು ವೇಳೆ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗೆ ಸಾಧ್ಯವಾಗದಿದ್ದರೆ, ವಿಶೇಷ ಪರೀಕ್ಷೆ ಎಂಬ ಅವಕಾಶವನ್ನು ಅಂತಹ ವಿದ್ಯಾರ್ಥಿಗೆ ನೀಡಬೇಕು

- 2019-20ನೇ ಶೈಕ್ಷಣಿಕ ಸಾಲಿಗೆ ಮಾತ್ರ ಈ ಮಾರ್ಗಸೂಚಿಗಳು ಅನ್ವಯ

- ಸೆಮಿಸ್ಟರ್‌/ವಾರ್ಷಿಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ 2020ರ ಏ.29ರಂದು ಹೊರಡಿಸಿರುವ ಮಾರ್ಗಸೂಚಿಯಲ್ಲಿ ಬದಲಾವಣೆಗಳು ಇಲ್ಲ

ಅನರ್ಹರಿಗೆ ಗೌರವ ಡಾಕ್ಟರೇಟ್‌: ಯುಜಿಸಿಗೆ ಹೈ ಕೋರ್ಟ್ ನೋಟಿಸ್‌

ಕೊರೋನಾ ವೈರಸ್‌ ಲಾಕ್‌ಡೌನ್‌ ಮಾಚ್‌ರ್‍ನಲ್ಲಿ ಜಾರಿಗೆ ಬಂದಾಗಿನಿಂದ ದೇಶಾದ್ಯಂತ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅಮಾನತಿನಲ್ಲಿಡಲಾಗಿದೆ. ಕೇಂದ್ರ ಸರ್ಕಾರ ಜೂ.1ರಿಂದ ಅನ್‌ಲಾಕ್‌-1, ಜು.1ರಿಂದ ಅನ್‌ಲಾಕ್‌-2 ಘೋಷಣೆ ಮಾಡಿದ್ದರೂ ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಹಾಗೂ ಇನ್ನಿತರೆ ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಅನುಮತಿ ದೊರೆತಿಲ್ಲ.