ಕೋರ್ಸ್ ಸಣ್ಣದು, ಭವಿಷ್ಯದ ಹಾದಿ ದೊಡ್ಡದು!
ಕೆಲವು ವರ್ಷಗಳ ಹಿಂದೆ ವಿದ್ಯಾರ್ಥಿಗಳಿಗೆ ಕರಿಯರ್ ಆಯ್ಕೆಗಳೇ ಕಡಿಮೆ ಇದ್ದವು. ಡಾಕ್ಟರ್, ಎಂಜಿನಿಯರ್, ಸಿಎ, ಬ್ಯಾಂಕರ್ ಇತ್ಯಾದಿ. ಇಷ್ಟವಿದ್ದರೂ, ಇಲ್ಲದಿದ್ದರೂ ಇವುಗಳಲ್ಲೇ ಒಂದನ್ನು ತಮ್ಮ ಕರಿಯರ್ ಆಯ್ಕೆಯಾಗಿ ಪರಿಗಣಿಸಬೇಕಿತ್ತು. ಆದ್ರೆ ಈಗಿನ ಸ್ಥಿತಿಯೇ ಬೇರೆ. ಸಾಲು ಸಾಲು ಕರಿಯರ್ ಆಯ್ಕೆಗಳಿವೆ ನಮ್ಮ ಮುಂದೆ...
ಇಂದಿನ ವಿದ್ಯಾರ್ಥಿಗಳು ಯಾವ ರೀತಿ ಕನಸು ಕಾಣುತ್ತಾರೋ ಅದೇ ರೀತಿ ಕರಿಯರ್ ಆಯ್ಕೆಗಳಿವೆ. ತಮಗಿಷ್ಟವಾದ ಕ್ಷೇತ್ರವನ್ನು ಅವರು ಸುಲಭವಾಗಿ ಆಯ್ಕೆ ಮಾಡಬಹುದು. ಇದರಿಂದ ಬೆಸ್ಟ್ ಕರಿಯರ್ ತಮ್ಮದಾಗಿಸಿಕೊಳ್ಳಬಹುದು. ವಿವಿಧ ಕ್ಷೇತ್ರಗಳಲ್ಲಿ ವಿವಿಧ ರೀತಿಯ ಕೋರ್ಸ್‌ಗಳಿವೆ. ಇದರಿಂದ ತಮ್ಮ ಹವ್ಯಾಸ, ತಮಗಿಷ್ಟವಾದ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಬಹುದು. ಈ ಕೋರ್ಸ್‌ಗಳು ಸಣ್ಣದಿರಬಹುದು, ಆದರೆ ಇದರಿಂದ ಉಜ್ವಲ ಭವಿಷ್ಯ ರೂಪಿತವಾಗುವುದು ಗ್ಯಾರಂಟಿ.
ದಿಢೀರ್ ಅಂತ ಕೆಲಸದಿಂದ ತೆಗದೆರೆ ಮಾಡೋದೇನು?
ವಾಯ್ಸ್ ಮಾಡ್ಯುಲೇಷನ್
ಈ ಕೋರ್ಸ್ ಧ್ವನಿಗೆ ಸಂಬಂಧಿಸಿದ್ದು. ನಿಮ್ಮ ಧ್ವನಿಗೆ ಟ್ರೇನಿಂಗ್ ನೀಡಲಾಗುತ್ತದೆ. ಇದರಿಂದ ಧ್ವನಿ ನಿಖರವಾಗುತ್ತದೆ. ಈ ಕೋರ್ಸಿನಲ್ಲಿ ಧ್ವನಿಯನ್ನು ಯಾವ ಜಾಗದಲ್ಲಿ, ಯಾವೆಲ್ಲಾ ರೀತಿಯಲ್ಲಿ ಉಪಯೋಗಿಸಬಹುದು ಅನ್ನೋದನ್ನು ಹೇಳಿಕೊಡುತ್ತಾರೆ. ಈ ಕೋರ್ಸ್ ಮಾಡಿದರೆ ರೇಡಿಯೋ ಜಾಕಿ, ನ್ಯೂಸ್ ರೀಡರ್, ಸೀರಿಯಲ್ ಅಥವಾ ಫಿಲಂನಲ್ಲಿ ಡಬ್ಬಿಂಗ್, ಜಾಹಿರಾತುಗಳಿಗೆ ಡಬ್ಬಿಂಗ್, ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಿಸಬಹುದು.
ಇಂಗ್ಲಿಷ್ ಕಮ್ಯುನಿಕೇಷನ್ ಸ್ಕಿಲ್
ಈ ಕೋರ್ಸ್ ಮೂಲಕ ನಿಮಗೆ ಇಂಗ್ಲಿಷಿನಲ್ಲಿ ಹೇಗೆ ಪರಿಣತಿ ಸಾಧಿಸಬಹುದು ಅನ್ನೋದನ್ನು ಹೇಳಿಕೊಡಲಾಗುತ್ತದೆ. ಯಾವ ರೀತಿ ಬರೆಯಬಹುದು, ಇಂಗ್ಲಿಷ್ ಯಾವ ರೀತಿ ಇಂಪ್ರೂವ್ ಮಾಡಲಾಗುತ್ತದೆ, ಬೇರೆ ಬೇರೆ ಜನರೊಂದಿಗೆ ಹೇಗೆ ಮಾತನಾಡಲಾಗುತ್ತದೆ ಅನ್ನೋದನ್ನು ಹೇಳಿ ಕೊಡುತ್ತಾರೆ. ಜೊತೆಗೆ ವ್ಯಾಕರಣ ಉತ್ತಮವಾಗಲು ಈ ಕೋರ್ಸ್ ಸಹಕಾರಿ. ಇದರಿಂದ ನೀವು ಬ್ಲಾಗ್ ರೈಟರ್, ರೈಟರ್, ಕಂಟೆಂಟ್ ರೈಟರ್, ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ಭವಿಷ್ಯ ರೂಪಿಸಬಹುದು.
ಅನಿಮೇಷನ್ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ಕಂಡುಕೊಳ್ಳಿ!
ಬೇಕಿಂಗ್ ಮತ್ತು ಕುಕ್ಕಿಂಗ್ ಕೋರ್ಸ್
ಇತ್ತೀಚಿಗೆ ಕುಕ್ಕಿಂಗ್ ಕುರಿತು ಮಹಿಳೆಯರ ಜೊತೆಗೆ ಪುರುಷರಿಗೂ ಆಸಕ್ತಿ ಹೆಚ್ಚುತ್ತಿದೆ. ಇದನ್ನು ಕರಿಯರ್ ಆಗಿಯೂ ರೂಪಿಸಿಕೊಂಡು ಬಂದಿದ್ದಾರೆ. ಬೇಕಿಂಗ್ ಮತ್ತು ಕನ್ಫೆಶನರಿಯಲಿ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಕೇಕ್, ಐಸಿಂಗ್ ಮೊದಲಾದವನ್ನು ಹೇಗೆ ಮಾಡುವುದು ತಿಳಿಸಿಕೊಡಲಾಗುತ್ತದೆ. ಈ ಕೋರ್ಸ್‌ಗಳು ಒಂದು ಅಥವಾ ಎರಡು ವರ್ಷದ್ದಾಗಿರುತ್ತವೆ. ಈ ಮೂಲಕ ನೀವು ವಿವಿಧ ರೀತಿಯ ತಿಂಡಿ ಮತ್ತು ಕ್ರಾಫ್ಟಿಂಗ್ ಬಗ್ಗೆ ಕಲಿಯಬಹುದು. ಮುಂದೆ ನಿಮ್ಮದೇ ಆದ ಬೇಕರಿ ನಡೆಸಬಹುದು.
ಫಾರಿನ್ ಲ್ಯಾಂಗ್ವೇಜ್
ಅಂದರೆ ವಿದೇಶಿ ಭಾಷೆಗಳಲ್ಲಿ ಪರಿಣತಿ ಪಡೆಯುವುದು. ಇಂದಿನ ಗ್ಲೋಬಲೈಸೇಷನ್ ನೋಡಿದರೆ ವಿದೇಶಿ ಭಾಷೆ ಕಲಿಯುವುದು ಉತ್ತಮ ಎಂದು ಅನಿಸುತ್ತದೆ. ಫ್ರೆಂಚ್, ಜಪಾನೀ, ಸ್ಪ್ಯಾನಿಷ್, ಜರ್ಮನ್ ಮೊದಲಾದ ಭಾಷೆಗಳ ಕೋರ್ಸ್ ಯೂನಿವರ್ಸಿಟಿಗಳಲ್ಲಿ ನೀಡುತ್ತಾರೆ. ಇದಲ್ಲದೆ ಬೇರೆ ಸಂಸ್ಥೆಗಳಿಂದಲೂ ಈ ಕೋರ್ಸ್ ಮಾಡಬಹುದು. ಆನ್ಲೈನ್ ಕೋರ್ಸ್‌ಗಳೂ ಲಭ್ಯವಿದೆ. ಇದರಿಂದ ನೀವು ಇಂಟೆರ್‌ಪ್ರೆಟರ್, ಅನುವಾದಕ, ಟೀಚರ್ ಅಥವಾ ಟೂರಿಸಂ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಬಹುದು.
ಕೆಲಸದ ಸಂದರ್ಶನ: ಫೇಲ್ ಆಗೋದೆಲ್ಲಿ?