ಕ್ರಿಯೇಟಿವಿಟಿಯಲ್ಲಿ ವಿಶ್ವಾಸ ಇದ್ದರೆ ಮತ್ತು ಏನಾದರೂ ವಿಶಿಷ್ಟವಾದುದನ್ನು ಮಾಡಲು ಬಯಸಿದ್ದರೆ ಅನಿಮೇಷನ್ ಕ್ಷೇತ್ರದಲ್ಲಿ ಕರಿಯರ್ ರೂಪಿಸಿಕೊಳ್ಳಬಹುದು. ದೇಶ ವಿದೇಶದಲ್ಲಿ ಇಂದು ಬಹಳ ವೇಗದಲ್ಲಿ ಬೆಳೆಯುತ್ತಿರುವ ಕ್ಷೇತ್ರವೆಂದರೆ ಅನಿಮೇಷನ್. ಜಾಹಿರಾತು, ಫಿಲಂ, ಕಾರ್ಟೂನ್, ಸೀರಿಯಲ್ ಮೊದಲಾದ ಕ್ಷೇತ್ರದಲ್ಲಿ ನೀವು ಅದೃಷ್ಟ ಪರೀಕ್ಷೆ ಮಾಡಬಹುದು. ಈ ಕ್ಷೇತ್ರದಲ್ಲಿ ಕರಿಯರ್ ರೂಪಿಸಲು ಏನು ಮಾಡಬೇಕು ನೋಡೋಣ.. 

ಶೈಕ್ಷಣಿಕ ಅರ್ಹತೆ 

ಅನಿಮೇಷನ್‌ನಲ್ಲಿ ಕರಿಯರ್ ರೂಪಿಸಲು ಇಚ್ಛೆಯ ಜೊತೆಗೆ ಪಿಯುಸಿ ಪಾಸ್ ಆಗಿರಬೇಕು. ಜೊತೆಗೆ ಅನಿಮೇಷನ್ ಕೋರ್ಸ್ ಮಾಡಲೇಬೇಕು. 

ಪಾಸಾಗಬೇಕಂದ್ರೆ ಗಿಡ ನೆಡಿ: ಭೂ ರಮೆ ಹಸಿರಾಗಲು ಇನ್ನೇನು ಬೇಕೇಳಿ?

ಏನು ಕೋರ್ಸ್ ? 

ಈ ಕ್ಷೇತ್ರದಲ್ಲಿ ಆಸಕ್ತಿ ಇರುವವರು ಗ್ರಾಜುಯೇಟ್, ಪೋಸ್ಟ್ ಗ್ರಾಜುಯೇಟ್ ಮತ್ತು ಡಿಪ್ಲೋಮಾ ಕೋರ್ಸ್ ಮಾಡಬಹುದು. ಇದು ಮಾತ್ರವಲ್ಲ ಇತ್ತೀಚಿಗೆ ಹಲವು ಪ್ರೊಫೆಷನಲ್ ಕೋರ್ಸ್‌ಗಳೂ ಇವಿದೆ. ಕೆಲವೊಂದು ಕಂಪನಿಗಳು ಈ ಕೆಲಸಕ್ಕೆ ಪ್ರೊಫೆಷನಲ್  ಟ್ರೇನಿಂಗ್ ಕೂಡ ನೀಡುತ್ತವೆ. 

ಏನು ಬೇಕು?

ಒಬ್ಬ ಉತ್ತಮ ಅನಿಮೇಟರ್ ಆಗಬೇಕೆಂದರೆ ಹಾರ್ಡ್ ವರ್ಕ್, ವಿಶುಲೈಸಿಂಗ್ ಎಬಿಲಿಟಿ, ಇಮ್ಯಾಜಿನೇಷನ್, ಕ್ರಿಯೇಟಿವಿಟಿ, ಲಾಜಿಕಲ್ ಅಂಡರ್ ಸ್ಟ್ಯಾಂಡಿಂಗ್ ಜೊತೆಗೆ ಡೆಡ್ ಲೈನ್ ಒಳಗಡೆ ಕೆಲಸ ಮಾಡಿ ಮುಗಿಸುವ ಸಾಮರ್ಥ್ಯ ಇರಬೇಕು. 

ಯಾರು ಈ ಕೋರ್ಸ್ ಮಾಡಬಹುದು? 

ಏನಾದರೂ ಹೊಸತನದ ಬಗ್ಗೆ ಮತ್ತು ಕ್ರಿಯೇಟಿವಿಟಿ ಬಗ್ಗೆ ಮನಸ್ಸು ತುಡಿಯುತ್ತಿದ್ದರೆ, ಇದು ಬೆಸ್ಟ್ ಕೋರ್ಸ್. 

ಕೆಲಸದ ಸಂದರ್ಶನ: ಫೇಲ್ ಆಗೋದೆಲ್ಲಿ?

ವೇತನ 

ಆರಂಭದಲ್ಲಿ ಈ ಕ್ಷೇತ್ರದಲ್ಲಿ ತಿಂಗಳಿಗೆ ಹತ್ತು ಸಾವಿರದವರೆಗೂ ವೇತನ ಸಿಗುತ್ತದೆ. ಆದರೆ ನಂತರ ದಿನಕ್ಕೆ 20 ರಿಂದ 75 ಸಾವಿರ ರೂ.ವರೆಗೂ ಸಂಬಳ ಸಿಗುತ್ತದೆ. ಜೊತೆಗೆ ಫ್ರೀಲಾನ್ಸ್ ಆಗಿಯೂ ಕಾರ್ಯ ನಿರ್ವಹಿಸಬಹುದು. 

ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ, ರಾಜ್ಯದಲ್ಲಿ ಹಲವಾರು ಸಂಸ್ಥೆಗಳು ಅನಿಮೇಷನ್ ಕೋರ್ಸ್ ನೀಡುತ್ತಿವೆ. ಅವುಗಳಲ್ಲಿ ಯಾವ ಸಂಸ್ಥೆಯಲ್ಲೂ ಶಿಕ್ಷಣ ಪಡೆಯಬಹುದು.