'ಕೆಲಸ ಹೋಗ್ ಬಿಡ್ತು....' ಎಂದು ಹೇಳೋ ಪತಿ, 'ಸದ್ಯ ದೇವರು ಕಣ್ ಬಿಟ್ಟ...' ಎನ್ನುವ ಪತ್ನಿ. ಅಗರಬತ್ತಿ ಆ್ಯಡ್ ಏನೋ ಮನಸ್ಸಿಗೆ ಮುದ ಕೊಡುತ್ತೆ. ಕೆಲಸ ಕಳೆದುಕೊಂಡ ಪತಿಗೆ ಅಷ್ಟು ಮನೋಸ್ಥೈರ್ಯ ಹೆಚ್ಚಿಸುವ ಮಡದಿ ಇದ್ದರೆ ಜೀವನದಲ್ಲಿ ಇನ್ನೇನು ಬೇಕು ಹೇಳಿ? 

ಆದರೆ, ನಿಜ ಜೀವನದಲ್ಲಿ ಕೆಲಸ ಕಳೆದುಕೊಳ್ಳುವಂಥ ಪರಿಸ್ಥಿತಿ ಬಂದರೆ, ಮನಸ್ಸು ಎಂಥ ಕೆಟ್ಟ ನಿರ್ಧಾರವನ್ನು ಬೇಕಾದರೂ ತೆಗೆದುಕೊಳ್ಳಬಹುದು. ಆದರೆ, ತುಸು ನೆಮ್ಮದಿಯಿಂದ ಯೋಚಿಸಿದರೆ ಭವಿಷ್ಯದ ಹಾದಿ ಸ್ಪಷ್ಟವಾಗುತ್ತದೆ. ಜೀವನದಲ್ಲಿ ಕೆಲವೊಮ್ಮೆ ಅತ್ಯುತ್ತಮ ತಿರುವು ಪಡೆಯಲು ಕೆಲಸ ಕಳೆದು ಕೊಳ್ಳಬೇಕಾಗುತ್ತದೆ. ಮನಸ್ಸು ವಿಚಲಿತವಾಗದಂತೆ, ಇಂಥ ಸಂದರ್ಭವನ್ನು ಹೇಗೆ ಎದುರಿಸಬೇಕೆಂಬುದಕ್ಕೆ ಇಲ್ಲಿವೆ ಕೆಲವು ಟಿಪ್ಸ್....

ಅನಿಮೇಷನ್ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ಕಂಡುಕೊಳ್ಳಿ!

ನಿರಾಶರಾಗಬೇಡಿ

ದಿಢೀರ್ ಆಗಿ ಕೆಲಸ ಕಳೆದುಕೊಂಡರೆ ನಿರಾಶರಾಗಬೇಡಿ. ಈ ಸಮಸ್ಯೆಯಿಂದ ಹೇಗೆ ಹೊರ ಬರೋದು? ಕೆಲಸ ಹೇಗೆ ಪಡೆದುಕೊಳ್ಳೋದು ಎನ್ನುವುದನ್ನು ತಿಳಿದುಕೊಳ್ಳಿ. 

ನಿರುದ್ಯೋಗ ಭತ್ಯೆಗೆ ಅರ್ಜಿ ಹಾಕಿ

ಪ್ರೈವೆಟ್ ಕೆಲಸ ಇವತ್ತಿರುತ್ತೆ, ನಾಳೆ ಇರೋಲ್ಲ. ಆದುದರಿಂದ ಆ ಬಗ್ಗೆ ಟೆನ್ಶನ್ ಬೇಡ. ಸರ್ಕಾರ ನೀಡುವ ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಿ. ಇದರಿಂದ ಮತ್ತೊಂದು ಕೆಲಸ ಸಿಗುವವರೆಗೂ ಸಹಾಯವಾಗುತ್ತದೆ. 

ಪಾಸಾಗಬೇಕಂದ್ರೆ ಗಿಡ ನೆಡಿ: ಭೂ ರಮೆ ಹಸಿರಾಗಲು ಇನ್ನೇನು ಬೇಕೇಳಿ?

ಆಗಲೇಬೇಕಾದ ಎಲ್ಲಾ ಕೆಲಸ ಮಾಡಿ 

ಕೆಲಸ ಹೋಯ್ತೆಂದು ತಲೆ ಮೇಲೆ ಕೈ ಹೊತ್ತು ಕೂರಬೇಡಿ. ಬದಲಾಗಿ ಮತ್ತೆ ಆಫೀಸಿಗೆ ಹೋಗಿ. ಅಲ್ಲಿ ಎಚ್‌ಆರ್ ಬಳಿ ಮಾತನಾಡಿ. ಏನೆಲ್ಲಾ ಫಾರ್ಮಾಲಿಟೀಸ್ ಇದೆಯೋ ಅವನ್ನು ಪೂರೈಸಿ. ಪಿಎಫ್, ಮೆಡಿಕ್ಲೇಮ್ಸ್, ಲೀವ್ ಎನ್‌ಕ್ಯಾಶ್‌ಮೆಂಟ್ ಎಲ್ಲವನ್ನೂ ಪಡೆದುಕೊಳ್ಳಿ. ಈ ಹಣ ನಿಮ್ಮ ಸಹಾಯಕ್ಕೆ ಬರುತ್ತದೆ. 

ರಿಲ್ಯಾಕ್ಸ್ ಆಗಿ

ಈ ಸಮಯದಲ್ಲಿ ಮೊದಲಿಗೆ ನಿಮ್ಮ ಆಸೆಯನ್ನೆಲ್ಲಾ ಪೂರೈಸಿ. ಅಂದರೆ ಡಾನ್ಸ್ ಕ್ಲಾಸ್ ಹೋಗೋದು, ಸ್ವಿಮ್ಮಿಂಗ್ ಮೊದಲಾದ ಕ್ಲಾಸಿಗೆ ಸೇರಿಕೊಳ್ಳಿ. ಒಂದು ವೆಕೇಷನ್ ಕೂಡ ಹೋಗಿ ಬನ್ನಿ. ಇದರಿಂದ ಮನಸ್ಸಿಗೂ ನೆಮ್ಮದಿ ಸಿಗುತ್ತದೆ. ನಂತರ ಬೇಕಿದ್ದರೆ ಮತ್ತೊಂದು ಕೆಲಸ ಹುಡುಕಿ. 

ಜನರೊಂದಿಗೆ ಸಂಪರ್ಕದಲ್ಲಿರಿ 

ನೌಕರಿ ಹೋದಾಗ ಸುಮ್ಮನೆ ಕುಳಿತುಕೊಳ್ಳುವ ಬದಲು ನಿಮಗೆ ತಿಳಿದಿರುವ ಬೇರೆ ಬೇರೆ ಕಂಪನಿಯ ವ್ಯಕ್ತಿಗಳನ್ನು ಸಂಪರ್ಕಿಸಿ. ಮತ್ತೊಂದು ಕೆಲಸ ಪಡೆದುಕೊಳ್ಳಲು ಇದು ಹೆಲ್ಪ್ ಆಗುತ್ತೆ. 

ಮಾನಸಿಕವಾಗಿ ಸ್ಟ್ರಾಂಗ್ ಆಗಿ 

ಇದು ಮುಖ್ಯವಾಗಿ ನೀವು ಮಾಡಲೇಬೇಕಾದ್ದು. ಹೆಚ್ಚಿನ ಜನ ಕೆಲಸ ಇಲ್ಲ ಎಂದು ತಲೆಬಿಸಿ ಮಾಡಿಕೊಂಡು ಕೂರುತ್ತಾರೆ. ನೀವು ಹಾಗೆ ಮಾಡದೆ ಮಾನಸಿಕವಾಗಿ ಸದೃಢರಾಗಿ, ಇದರಿಂದ ಕೆಲಸ ಹುಡುಕುವ ಹುಮ್ಮಸ್ಸು ಕೂಡ ಹೆಚ್ಚುತ್ತದೆ. 

ಕೆಲಸದ ಸಂದರ್ಶನ: ಫೇಲ್ ಆಗೋದೆಲ್ಲಿ?

ದಿನದ ಖರ್ಚಿನಲ್ಲಿ ಖಡಿತ 

ಕೆಲಸ ಹೋಯ್ತು ಎಂದಾ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ಅದಕ್ಕೆ ಖರ್ಚು ಕಡಿಮೆ ಮಾಡಿಕೊಳ್ಳಿ. ಬೇಡದ ವಸ್ತುಗಳನ್ನು ಖರೀದಿಸಬೇಡಿ.