ಉಳ್ಳಾಲ (ಫೆ.4): ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸೂಚನೆಯಂತೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಕಾಶ್ಮೀರಿ ಪಂಡಿತರೂ ಸೇರಿದಂತೆ ಕಾಶ್ಮೀರ ವಲಸಿಗರಿಗೆ, ಹಿಂದೂ ಕಾಶ್ಮೀರ ನಿವಾಸಿಗಳಿಗೆ ಮೀಸಲಾತಿ ನೀಡಲು ನಿರ್ಣಯ ಕೈಗೊಳ್ಳಲಾಗಿದೆ. ವಿಶ್ವವಿದ್ಯಾಲಯದ ಪ್ರತಿ ಸ್ನಾತಕೋತ್ತರ ವಿಭಾಗದಲ್ಲಿ ‘ಔಟ್‌ಸೈಟ್‌ ಕೋಟಾ’ದಡಿ ಒಂದು ಸೀಟ್‌ ಅನ್ನು ಮೀಸಲಿಡುವ ಬಗ್ಗೆ ಸೋಮವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

ಈ ಬಗ್ಗೆ ಸಭೆಯಲ್ಲಿ ಮಾತನಾಡಿದ ವಿವಿ ಕುಲಪತಿ ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ, ಕೇಂದ್ರ ಸರ್ಕಾರ ಇತ್ತೀಚೆಗೆ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕಾಶ್ಮೀರಿ ಪಂಡಿತರಿಗೆ ಮೀಸಲಾತಿ ಕಲ್ಪಿಸುವ ಮಹತ್ವದ ತೀರ್ಮಾನ ಕೈಗೊಂಡಿದ್ದು, ಇದೀಗ ಜಾರಿಯ ಹಂತದಲ್ಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇದು ಅನ್ವಯಿಸಲಿದೆ ಎಂದು ತಿಳಿಸಿದರು.

ಎಂಎಚ್‌ಆರ್‌ಡಿಯಿಂದ ಈಗಾಗಲೇ ನಿರ್ದೇಶನ ತಲುಪಿದೆ. ಅದರಂತೆ ಒಂದು ಕೋರ್ಸ್‌ಗೆ ಒಂದಕ್ಕಿಂತ ಹೆಚ್ಚು ಮಂದಿ ಪ್ರವೇಶ ಅಪೇಕ್ಷಿಸಿದರೆ ಮೆರಿಟ್‌ ಆಧಾರದಲ್ಲಿ ಪ್ರವೇಶ ನೀಡಲಾಗುವುದು. ಯಾರೂ ಪ್ರವೇಶ ಬಯಸದಿದ್ದರೆ ಆ ಸೀಟನ್ನು ಇತರರಿಗೆ ಕೊಡಲು ನಿಯಮಗಳಲ್ಲಿ ಅವಕಾಶ ಇಲ್ಲ ಎಂದರು.

ಸಭೆಯಲ್ಲಿ ಕುಲಸಚಿವ (ಆಡಳಿತ) ಎ.ಎಂ.ಖಾನ್‌, ಕುಲಸಚಿವ (ಪರೀಕ್ಷಾಂಗ ) ವಿ. ರವೀಂದ್ರ ಆಚಾರ್ಯ, ಹಣಕಾಸು ಅಧಿಕಾರಿ ಶ್ರೀಪತಿ ಕಲ್ಲೂರಾಯ ಮತ್ತಿತರರಿದ್ದರು.

ಕಾಶ್ಮೀರಿ ಪಂಡಿತರ ಭೇಟಿ ಮಾಡಿದ ಮೋದಿ

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸೂಚನೆಯಂತೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಕಾಶ್ಮೀರಿ ಪಂಡಿತರೂ ಸೇರಿದಂತೆ ಕಾಶ್ಮೀರ ವಲಸಿಗರಿಗೆ, ಹಿಂದೂ ಕಾಶ್ಮೀರ ನಿವಾಸಿಗಳಿಗೆ ಮೀಸಲಾತಿ ನೀಡಲು ನಿರ್ಣಯ ಕೈಗೊಳ್ಳಲಾಗಿದೆ. ವಿಶ್ವವಿದ್ಯಾಲಯದ ಪ್ರತಿ ಸ್ನಾತಕೋತ್ತರ ವಿಭಾಗದಲ್ಲಿ ‘ಔಟ್‌ಸೈಟ್‌ ಕೋಟಾ’ದಡಿ ಒಂದು ಸೀಟ್‌ ಅನ್ನು ಮೀಸಲಿಡುವ ಬಗ್ಗೆ ಸೋಮವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

ಈ ಬಗ್ಗೆ ಸಭೆಯಲ್ಲಿ ಮಾತನಾಡಿದ ವಿವಿ ಕುಲಪತಿ ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ, ಕೇಂದ್ರ ಸರ್ಕಾರ ಇತ್ತೀಚೆಗೆ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕಾಶ್ಮೀರಿ ಪಂಡಿತರಿಗೆ ಮೀಸಲಾತಿ ಕಲ್ಪಿಸುವ ಮಹತ್ವದ ತೀರ್ಮಾನ ಕೈಗೊಂಡಿದ್ದು, ಇದೀಗ ಜಾರಿಯ ಹಂತದಲ್ಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇದು ಅನ್ವಯಿಸಲಿದೆ ಎಂದು ತಿಳಿಸಿದರು.

ಎಂಎಚ್‌ಆರ್‌ಡಿಯಿಂದ ಈಗಾಗಲೇ ನಿರ್ದೇಶನ ತಲುಪಿದೆ. ಅದರಂತೆ ಒಂದು ಕೋರ್ಸ್‌ಗೆ ಒಂದಕ್ಕಿಂತ ಹೆಚ್ಚು ಮಂದಿ ಪ್ರವೇಶ ಅಪೇಕ್ಷಿಸಿದರೆ ಮೆರಿಟ್‌ ಆಧಾರದಲ್ಲಿ ಪ್ರವೇಶ ನೀಡಲಾಗುವುದು. ಯಾರೂ ಪ್ರವೇಶ ಬಯಸದಿದ್ದರೆ ಆ ಸೀಟನ್ನು ಇತರರಿಗೆ ಕೊಡಲು ನಿಯಮಗಳಲ್ಲಿ ಅವಕಾಶ ಇಲ್ಲ ಎಂದರು.

SDPI ಉಗ್ರ ಸಂಘಟನೆ: ಕೇರಳ ಸಿಎಂ ಖುದ್ದು ಹೇಳಿಕೆ