Asianet Suvarna News Asianet Suvarna News

ಮೇನಲ್ಲಿ SSLC ಫಲಿತಾಂಶ ಪ್ರಕಟ

ಒಂದೆಡೆ ಈಗಾಗಲೇ ಮತದಾನ ಮುಗಿದಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು,ಮೇ 23ರವರೆಗೆ ಫಲಿತಾಂಶಕ್ಕಾಗಿ ಕಾಯಬೇಕು. ಇನ್ನೊಂದೆಡೆ ಮಕ್ಕಳ ಭವಿಷ್ಯ ಬಹು ಮುಖ್ಯ ಹಂತವಾದ SSLC ಫಲಿತಾಂಸವೂ ಮೇನಲ್ಲಿಯೇ ಪ್ರಕಟವಾಗುವ ನಿರೀಕ್ಷೆ ಇದೆ.

KSEEB expected to release SSLC-2019 results in May
Author
Bengaluru, First Published Apr 24, 2019, 1:34 PM IST

ಬೆಂಗಳೂರು:  ಒಂದೆಡೆ ಮೇ 23 ಕ್ಕೆ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದರೆ, ಇನ್ನೊಂದೆಡೆ SSLC ಪರೀಕ್ಷೆ ಬರೆದ ವಿದ್ಯಾರ್ಥಿಗಳ ಹಣೆ ಬರಹವೂ ಆಗಲೇ ಪ್ರಕಟವಾಗಲಿದೆ. ವಿದ್ಯಾರ್ಥಿಗಳ ಭವಿಷ್ಯ ಹಾಗೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಭವಿಷ್ಯದೊಂದಿಗೆ ಮೇ ತಿಂಗಳ ಧಗೆ ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ.

ಚುನಾವಣಾ ಗೊಂದಲದಲ್ಲಿಯೇ, CET ಪರೀಕ್ಷೆಗೂ ಮುನ್ನವೇ ಪಿಯುಸಿ ಫಲಿತಾಂಶ ಪ್ರಕಟಿಸಿದ ಪಿಯು ಬೋರ್ಡ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತು. ಇದೀಗ SSLC ಫಲಿತಾಂಶ ಮೇನನಲ್ಲಿ ಪ್ರಕಟವಾಗಬಹುದೆಂದು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಹೇಳಿದೆ.

ಫಲಿತಾಂಶವನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ಪ್ರಕಟಿಸಲಾಗುವುದು. ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಈ ವೆಬ್‌ಸೈಟಿನಲ್ಲಿ ನೋಡಬಹುದು. ಮೇ 2ನೇ ವಾರದಲ್ಲಿ ಅಂದರೆ ಮೇ7 ರಿಂದ 12ರ ಮಧ್ಯೆ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ. ಆದರೆ, ನಿರ್ದಿಷ್ಟ ದಿನಾಂಕವಿನ್ನೂ ಘೋಷಣೆಯಾಗಿಲ್ಲ. 

ಡಿಸ್ಟಿಂಕ್ಷನ್ ಪಡೆದರೂ ಸೀಟು ಸಿಗೋಲ್ಲ

ಏಪ್ರಿಲ್ 30ರಂದು ಫಲಿತಾಂಶ ಪ್ರಕಟವಾಗಲಿದೆ ಎನ್ನು ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಮಂಡಳಿ ಖಚಿತಪಡಿಸಿಲ್ಲ. 2017ರಲ್ಲಿ ಶೇ.67.87 ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಉತ್ತೀರ್ಣವಾದರೆ, 2018ರಲ್ಲಿ ತುಸು ಹೆಚ್ಚು ಅಂದರೆ ಶೇ.71.93 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸಾಗಿದ್ದರು.
 

Follow Us:
Download App:
  • android
  • ios