ಧಾರವಾಡ[ಮೇ.10]: CBSE 10ನೇ ತರಗತಿ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಒಟ್ಟು 91.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, 13 ಮಂದಿ ದೇಶದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ತುಮಕೂರಿನ ಯಶಸ್. ಡಿ ಕರ್ನಾಟಕದ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

ಇವೆಲ್ಲದರ ನಡುವೆ ಈ ಬಾರಿ ಅತಿ ಹೆಚ್ಚು ಕುತೂಹಲ ಮೂಡಿಸಿದ್ದು, ದಿವಂಗತ ಸಚಿವ ಸಿ.ಎಸ್.ಶಿವಳ್ಳಿ ಪುತ್ರಿ ರೂಪಾರವರ ಫಲಿತಾಂಶ. ತಂದೆ ಸಾವಿನ ದುಃಖದ ನಡುವೆಯೇ ಪರೀಕ್ಷೆ ಬರೆದಿದ್ದ ಈ ಬಾಲಕಿಯ ದಿಟ್ಟತನಕ್ಕೆ ಇಡೀ ರಾಜ್ಯವೇ ಭೇಷ್ ಎಂದಿತ್ತು.

ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಸಚಿವ ಸಿ.ಎಸ್.ಶಿವಳ್ಳಿ ಪುತ್ರಿ

ಹೌದು ಶಾಸಕ ಸಿ.ಎಸ್. ಶಿವಳ್ಳಿ ಪುತ್ರಿ ರೂಪಾ ಶೇ 76ರಷ್ಟು ಅಂಕ ಪಡೆದು ಪ್ರಥಮ, ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ತಂದೆಯ ಪ್ರಾರ್ಥೀವ ಶರೀರ ಮನೆಯಲ್ಲಿದ್ದು, ತಂದೆಯನ್ನು ಕಳೆದುಕೊಂಡ ನೋವಿನಲ್ಲಿದ್ದ ರೂಪಾ ತನ್ನ ತಂದೆಯ ಆಸೆಯಂತೆ ಪರೀಕ್ಷೆಯನ್ನೆದುರಿಸಿದ್ದಳು. ಅಂದು ಈ ರೂಪಾ ದಿಟ್ಟತನಕ್ಕೆ ಇಡೀ ರಾಜ್ಯವೇ ತಲೆದೂಗಿತ್ತು.

ಕಷ್ಟದಲ್ಲೂ ಶಿಕ್ಷಣ ನಿರ್ಲಕ್ಷಿಸಬೇಡ ಎಂದ ಅಪ್ಪ: ತಂದೆ ಸಾವಿನ ದುಃಖದಲ್ಲೇ ಪರೀಕ್ಷೆ ಬರೆದ ಶಿವಳ್ಳಿ ಪುತ್ರಿ 

ತುಮಕೂರಿನ ಯಶಸ್ ರಾಜ್ಯಕ್ಕೇ ಪ್ರಥಮ

ತುಮಕೂರಿನ ವಿದ್ಯಾವರ್ಧಕ ಶಾಲೆಯ ವಿದ್ಯಾರ್ಥಿ ಯಶಸ್ ಡಿ 500ಕ್ಕೆ 498 ಅಂಕ ಗಳಿಸುವ ಮೂಲಕ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ. 497 ಅಂಕ ಪಡೆದಿರುವ ಧಾರವಾಡ, ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿನಿ ಗಿರಿಜಾ ಎಂ ಹೆಗಡೆ ದ್ವಿತೀಯ ಸ್ಥಾನದಲ್ಲಿದ್ದಾರೆ.

CBSE 10th Results: 13 ಮಂದಿಗೆ ಪ್ರಥಮ ಸ್ಥಾನ, ಇತಿಹಾಸ ನಿರ್ಮಾಣ