ನವದೆಹಲಿ[ಮೇ.06]: ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು10 ನೇ ತರಗತಿ ಫಲಿತಾಂಶ ಪ್ರಕಟಿಸಿದೆ. ವಿದ್ಯಾರ್ಥಿಗಳು cbse.nic.in ಹಾಗೂ cbseresults.nic.in ನಲ್ಲಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ಫಲಿತಾಂಶ ಪಡೆಯಲು ನಿಮ್ಮ ದಾಖಲಾತಿ ಸಂಖ್ಯೆ ಹಾಗೂ ಶಾಲೆಯ ಕೋಡ್ ಸಂಖ್ಯೆ ಅಗತ್ಯ. 

ಲಭ್ಯವಾದ ಮಾಹಿತಿ ಅನ್ವಯ 13 ವಿದ್ಯಾರ್ಥಿಗಳು ಶೇ 99.8ರಷ್ಟು ಅಂದರೆ 500ರಲ್ಲಿ 499 ಅಂಕ ಗಳಿಸಿ ದೇಶದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಶೇ. 91.1ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಫೆಬ್ರವರಿ 21ರಿಂದ ಮಾರ್ಚ್ 29ರವರೆಗೆ 10 ನೇ ತರಗತಿ ಪರೀಕ್ಷೆಗಳು ನಡೆದಿದ್ದವು. ಈ ಬಾರಿ ಒಟ್ಟು 18,27,472 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 

ತುಮಕೂರಿನ ಯಶಸ್ ರಾಜ್ಯಕ್ಕೇ ಪ್ರಥಮ

ತುಮಕೂರಿನ ವಿದ್ಯಾವರ್ಧಕ ಶಾಲೆಯ ವಿದ್ಯಾರ್ಥಿ ಯಶಸ್ ಡಿ 500ಕ್ಕೆ 498 ಅಂಕ ಗಳಿಸುವ ಮೂಲಕ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ. 497 ಅಂಕ ಪಡೆದಿರುವ ಧಾರವಾಡ, ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿನಿ ಗಿರಿಜಾ ಎಂ ಹೆಗಡೆ ದ್ವಿತೀಯ ಸ್ಥಾನದಲ್ಲಿದ್ದಾರೆ.

Online ನಲ್ಲಿ ಪರಿಶೀಲನೆ ಹೇಗೆ?

ಎಲ್ಲಕ್ಕಿಂತ ಮೊದಲು CBSE ಅಧಿಕೃತ ವೆಬ್ಸೈಟ್ cbseresults.nic.in ಗೆ ಭೇಟಿ ನೀಡಿ. ಬಳಿಕ ಅಲ್ಲಿ ನೀಡಲಾಗಿರುವ Result ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ನಿಮ್ಮ ದಾಖಲಾತಿ ಸಂಖ್ಯೆ ನಮೂದಿಸಿ. ಅಷ್ಟರಲ್ಲಿ ಸ್ಕ್ರೀನ್ ಮೇಲೆ ನಿಮ್ಮ ಫಲಿತಾಂಶ ಪ್ರಕಟವಾಗುತ್ತದೆ. ಫಲಿತಾಂಶವನ್ನು ಪ್ರಿಂಟ್ ಮಾಡುವ ಆಯ್ಕೆಯೂ ಇದೆ.

ಯಾವೆಲ್ಲಾ ವೆಬ್ ಸೈಟ್ ಗಳಲ್ಲಿ ಫಲಿತಾಂಶ ಲಭ್ಯ?

cbse.nic.in / cbseresults.nic.in examresults.in / indiaresults.comresults.gov.in