ನಾನು ಸಂತೋಷ್‌ಜೀ ಮಾನಸಪುತ್ರನಲ್ಲ ಶೆಟ್ಟರ್‌ ಪರಮಶಿಷ್ಯ :ಟಾಂಗ್‌ ಕೊಟ್ಟ ಟೆಂಗಿನಕಾಯಿ

ಇದು ಗುರು-ಶಿಷ್ಯರ ನಡುವೆ ನಡೆಯುತ್ತಿರುವ ಚುನಾವಣೆ ಎಂದು ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಜಗದೀಶ್‌ ಶೆಟ್ಟರ್‌ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

BJP candidate Mahesh Tenginakayi give tong to former cm jagadeesh shettar

ಹುಬ್ಬಳ್ಳಿ: 'ನಾನು ಬಿ.ಎಲ್‌.ಸಂತೋಷ್‌ಜೀ ಅವರ ಮಾನಸಪುತ್ರನಲ್ಲ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರ ಪರಮ ಶಿಷ್ಯ’ ಎಂದು ಹೇಳುವ ಮೂಲಕ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್‌ ಟೆಂಗಿನಕಾಯಿ ಅವರು ಶೆಟ್ಟರ್‌ಗೆ ತಿರುಗೇಟು ನೀಡಿದ್ದಾರೆ.

‘ಮಹೇಶ್‌ ಟೆಂಗಿನಕಾಯಿಯವರು ಬಿ.ಎಲ್‌.ಸಂತೋಷ್‌ ಅವರ ಮಾನಸ ಪುತ್ರ. ಹಾಗಾಗಿ ನನಗೆ ಟಿಕೆಟ್‌ ತಪ್ಪಿಸಿದರು’ ಎಂದು ಜಗದೀಶ್‌ ಶೆಟ್ಟರ್‌ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಶೆಟ್ಟರ್‌ ಅವರು ಇವತ್ತು ನನಗೆ ಉಪನಾಮಕರಣ ಮಾಡಿದ್ದಾರೆ. ನನಗೆ 30 ವರ್ಷದಿಂದ ಶೆಟ್ಟರ್‌ ಶಿಷ್ಯ ಮಹೇಶ್‌ ಟೆಂಗಿನಕಾಯಿ ಎಂದೇ ಹೆಸರಿದೆ. ಇವತ್ತು ಗುರು-ಶಿಷ್ಯರ ನಡುವೆಯೇ ಚುನಾವಣೆ ನಡೆಯುತ್ತಿದೆ. ಗುರುಗಳು ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಚಿಕ್ಕ ಬಾಲಕನಿಗೆ ಹೇಳಿದಂತೆ ನಿನಗೆ ಟಿಕೆಟ್‌ ಇಲ್ಲ ಹೋಗು ಎಂದು ಅಗೌರವದಿಂದ ಹೊರ ದಬ್ಬಿದರು: ಶೆಟ್ಟರ್‌

ಪಕ್ಷದಲ್ಲಿ ವ್ಯಕ್ತಿ ನಿಷ್ಠೆ ಇಲ್ಲ, ನಮ್ಮಲ್ಲಿ ಮೊದಲ ಆದ್ಯತೆ ಪಕ್ಷ ನಿಷ್ಠೆಗೆ. ಇಲ್ಲಿ ಏಕವ್ಯಕ್ತಿ ನಿರ್ಣಯ ಇಲ್ಲ. ಸಂತೋಷ್‌ ಒಬ್ಬರಿಂದಲೇ ಎಲ್ಲ ನಿರ್ಧಾರಗಳೂ ಆಗುವುದಿಲ್ಲ. ಟಿಕೆಟ್‌ ತೀರ್ಮಾನವಾಗಿರುವುದು ಸಂಸದೀಯ ಮಂಡಳಿಯಲ್ಲಿ. ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡುವ ದೃಷ್ಟಿಯಿಂದ ನನಗೆ ಟಿಕೆಟ್‌ ನೀಡಿದ್ದಾರೆ. ಬಿ.ಎಲ್‌. ಸಂತೋಷ್‌ ಅವರು ಸಂಘಟನೆಗಾಗಿ ಶ್ರಮಿಸುತ್ತಿದ್ದಾರೆ. ಅವರು ಎಂದೂ ಅಧಿಕಾರದ ಬೆನ್ನ ಹಿಂದೆ ಹೋದವರಲ್ಲ ಎಂದು ಹೇಳಿದ್ದಾರೆ.

ಮಾನಸಪುತ್ರನಿಗೆ ಟಿಕೆಟ್‌ ನೀಡಲು ನನಗೆ ಅವಮಾನ ಮಾಡಿದರು:

ಬಿಜೆಪಿಯಲ್ಲಿ ನನಗೆ ಟಿಕೆಟ್‌ ಕೈತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರೇ ನೇರ ಕಾರಣ. ಸಂತೋಷ್‌ ಅವರು ತಮ್ಮ ಮಾನಸಪುತ್ರ ಮಹೇಶ ಟೆಂಗಿನಕಾಯಿಗೆ ಟಿಕೆಟ್‌ ನೀಡುವ ಸಲುವಾಗಿ ನನಗೆ ಟಿಕೆಟ್‌ ತಪ್ಪುವಂತೆ ಮಾಡಿದರು. ನನ್ನಂತ ಪಕ್ಷದ ಹಿರಿಯ ನಾಯಕನಿಗೆ ಅವಮಾನ ಮಾಡಿದರು’ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಗಂಭೀರ ಆರೋಪ ಮಾಡಿದ್ದಾರೆ.

ಅಷ್ಟೇಅಲ್ಲದೇ ಜಗದೀಶ್‌ ಶೆಟ್ಟರ್‌ ತಾವು ಪಕ್ಷದಿಂದ ಹೊರಬರಲು ಕಾರಣರಾದ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಿದರು. ಪಕ್ಷದೊಳಗೆ ತಮ್ಮ ವಿರುದ್ಧ ನಡೆಯುತ್ತಿದ್ದ ಬೆಳವಣಿಗೆಗಳನ್ನು ಬಿಚ್ಚಿಟ್ಟರು. ಸಂತೋಷ್‌ ವಿರುದ್ಧ ನೇರ ವಾಗ್ಧಾಳಿ ನಡೆಸಿದರು. ಅಲ್ಲದೆ, ‘ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟಿಕೆಟ್‌ ವಿಷಯವಾಗಿ ನನ್ನ ಪರ ಗಟ್ಟಿನಿಲುವು ತಾಳಲಿಲ್ಲ. ಯಡಿಯೂರಪ್ಪನವರು ನನಗೆ ನೈತಿಕ ಬೆಂಬಲ ಕೊಡುತ್ತಾ ಬಂದಿದ್ದರು, ಕಡೆಗೆ ಅವರೂ ಕೂಡ ನನ್ನ ವಿರುದ್ಧವೇ ಮಾತನಾಡಿದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲಾ ಕ್ಷೇತ್ರದಲ್ಲೂ ಸಂತೋಷ್‌ ಹಸ್ತಕ್ಷೇಪವಿದೆ: 

ಸಂತೋಷ್‌ ಅವರನ್ನು ಕೇರಳ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿ ಉಸ್ತುವಾರಿ ಮಾಡಿದರೂ ಪಕ್ಷಕ್ಕೆ ಒಳ್ಳೆಯದಾಗಲಿಲ್ಲ. ಇವರು ಪ್ರಚಾರ ನಡೆಸಿದ, ಉಸ್ತುವಾರಿ ವಹಿಸಿಕೊಂಡ ಕಡೆಗಳಲ್ಲಿ ಪಕ್ಷ ಸೋತಿದೆ. ಇಷ್ಟೆಲ್ಲ ವೈಫಲ್ಯಗಳಿದ್ದರೂ ಇವರಿಗೇ ಕರ್ನಾಟಕ ಚುನಾವಣೆಯ ಉಸ್ತುವಾರಿ ಕೊಟ್ಟಿದ್ದಾರೆ. ಹಿಂದಿನ ರಾಷ್ಟ್ರೀಯ ನಾಯಕರು ಪಕ್ಷದ ಸ್ಥಿತಿ ಅರಿಯಲು ಹಿರಿಯರೊಂದಿಗೆ ತಾಸುಗಟ್ಟಲೆ ಕುಳಿತು ಚರ್ಚಿಸುತ್ತಿದ್ದರು. ಈಗ ಅಂತಹ ಪರಿಸ್ಥಿತಿ ಇಲ್ಲ. ಎಲ್ಲ ಕ್ಷೇತ್ರಗಳಲ್ಲೂ ಸಂತೋಷ್‌ ಅವರ ಹಸ್ತಕ್ಷೇಪವಿದೆ ಎಂದು ಆರೋಪಿಸಿದರು.

ಶೆಟ್ಟರ್‌ ಆರೋಪಕ್ಕೆ ಸಿಎಂ, ಬಿಎಸ್‌ವೈ ಕಿಡಿ

ಸಿಎಂ, ಮಾಜಿ ಸಿಎಂ ತಿರುಗೇಟು:

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಆರೋಪವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಲವಾಗಿ ಅಲ್ಲಗಳೆದಿದ್ದಾರೆ.ಅವರು ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಬಿ.ಎಲ್‌. ಸಂತೋಷ್‌ ಅವರ ಮೇಲೆ ಆರೋಪ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಹ ಜಗದೀಶ್‌ ಶೆಟ್ಟರ್‌ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

Latest Videos
Follow Us:
Download App:
  • android
  • ios