ಶೆಟ್ಟರ್‌ ಆರೋಪಕ್ಕೆ ಸಿಎಂ, ಬಿಎಸ್‌ವೈ ಕಿಡಿ

ಸಂತೋಷ್‌ ಅವರು ಕಾರಣ ಎಂಬ ಶೆಟ್ಟರ್‌ ಆರೋಪ ಸರಿಯಲ್ಲ. ನಾವೆಲ್ಲ ರಾಜ್ಯಮಟ್ಟದಿಂದ ಜಗದೀಶ್‌ ಶೆಟ್ಟರ್‌ ಹೆಸರು ಕಳಿಸಿದ್ದೆವು. ಮೇಲ್ಮಟ್ಟದಲ್ಲಿ ಒಂದು ಮಿತಿಯಲ್ಲಿ ಮಾಡಿದ್ದಾರೆ: ಮುಖ್ಯಮಂತ್ರಿ ಬೊಮ್ಮಾಯಿ 

CM Basavaraj Bommai and BS Yediyurappa React to Jagadish Shettar Stament grg

ಬೆಂಗಳೂರು/ಬಾಗಲಕೋಟೆ(ಏ.19): ತಮಗೆ ಟಿಕೆಟ್‌ ತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಕಾರಣ ಎಂಬ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಆರೋಪವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಲವಾಗಿ ಅಲ್ಲಗಳೆದಿದ್ದಾರೆ. ಸಂತೋಷ್‌ ಅವರು ಕಾರಣ ಎಂಬ ಶೆಟ್ಟರ್‌ ಆರೋಪ ಸರಿಯಲ್ಲ. ನಾವೆಲ್ಲ ರಾಜ್ಯಮಟ್ಟದಿಂದ ಜಗದೀಶ್‌ ಶೆಟ್ಟರ್‌ ಹೆಸರು ಕಳಿಸಿದ್ದೆವು. ಮೇಲ್ಮಟ್ಟದಲ್ಲಿ ಒಂದು ಮಿತಿಯಲ್ಲಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಅನಗತ್ಯವಾಗಿ ಸಂತೋಷ್‌ ಅವರ ಮೇಲೆ ಆರೋಪ ಮಾಡುವುದು ಶೆಟ್ಟರ್‌ ಅವರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಸಿಎಂ ತಿರುಗೇಟು:

ಮಂಗಳವಾರ ಮುಧೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ‘ಬಿಜೆಪಿ ಯಾರ ಕಪಿ ಮುಷ್ಟಿಯಲ್ಲೂ ಇಲ್ಲ. ಅದೊಂದು ವ್ಯವಸ್ಥಿತ ಪಕ್ಷ. ಯಾರಿಗೆ ಯಾರೂ ಟಿಕೆಟ್‌ ತಪ್ಪಿಸಿಲ್ಲ’ ಎಂದರು.

ಕಾಂಗ್ರೆಸ್‌ ಸೇರ್ತಿದ್ದಂತೆ ಜಗದೀಶ್‌ ಶೆಟ್ಟರ್‌ಗೆ ದೊಡ್ಡ ಜವಾಬ್ದಾರಿ, ಲಿಂಗಾಯತ ಮತಬೇಟೆಗೆ ಮೆಗಾ ಪ್ಲಾನ್‌!

‘ಶೆಟ್ಟರ್‌ ಬಿಜೆಪಿ ತೊರೆದಿದ್ದರಿಂದ ಲಿಂಗಾಯತ ಮತಗಳಿಗೆ ಪೆಟ್ಟು ಬೀಳುತ್ತಾ?’ ಎಂಬ ಪ್ರಶ್ನೆಗೆ, ‘ಯಾವುದೇ ತೊಂದರೆ ಇಲ್ಲ. ಕರ್ನಾಟಕ ರಾಜಕಾರಣದಲ್ಲಿ ಲಿಂಗಾಯತರು ಜಾಗೃತರಾಗಿದ್ದಾರೆ. ಯಾವಾಗ ಯಾವ ನಿರ್ಣಯ ತೆಗೆದುಕೊಂಡಿದ್ದಾರೋ ಸರಿಯಾಗಿಯೇ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷ ಚುನಾವಣೆ ಬಂದ ಮೇಲೆ ಲಿಂಗಾಯತರಿಗೆ ಬಹಳ ಪ್ರೀತಿ ತೋರಿಸುತ್ತಿದೆ’ ಎಂದು ವ್ಯಂಗ್ಯವಾಡಿದರು.

ಯಾರೂ ಕಾರಣರಲ್ಲ- ಬಿಎಸ್‌ವೈ:

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಶೆಟ್ಟರ್‌ ಆರೋಪದಲ್ಲಿ ಸತ್ಯಾಂಶ ಇಲ್ಲ. ಅವರಿಗೆ ಟಿಕೆಟ್‌ ತಪ್ಪಲು ಯಾರೂ ಕಾರಣರಲ್ಲ. ಪಕ್ಷದ ನಿರ್ಧಾರ ಎಂದರು.

‘ಶೆಟ್ಟರ್‌ ಅಥವಾ ಬೇರೆ ಯಾರೋ ಪಕ್ಷ ಬಿಟ್ಟರೆ ಪಕ್ಷಕ್ಕೆ ತೊಂದರೆ ಆಗುವುದಿಲ್ಲ. ಅವರ ಜತೆ ಬಿಜೆಪಿಯ ಯಾವುದೇ ಮುಖಂಡರು ಅಥವಾ ಕಾರ್ಯಕರ್ತರು ಹೋಗಿಲ್ಲ. ಅವರು ಈ ರೀತಿಯ ತೀರ್ಮಾನ ತೆಗೆದುಕೊಳ್ಳಬಾರದಿತ್ತು. ಅವರನ್ನು ಮನವೊಲಿಸುವ ಎಲ್ಲ ಪ್ರಯತ್ನ ಮಾಡಲಾಯಿತು. ನಾವೆಲ್ಲರೂ ಇಷ್ಟೊಂದು ಮನವಿ ಮಾಡಿದರೂ ಅವರು ಒಪ್ಪಲಿಲ್ಲ. ಇನ್ನು ಅವರ ದಾರಿ ಅವರಿಗೆ. ನಮ್ಮ ದಾರಿ ನಮಗೆ’ ಎಂದು ಖಡಕ್ಕಾಗಿ ಹೇಳಿದರು. ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಹುಬ್ಬಳ್ಳಿಗೆ ಭೇಟಿ ನೀಡಿದ್ದಾರೆ. 2-3 ದಿನಗಳ ಬಳಿಕ ನಾನು ಕೂಡ ಹುಬ್ಬಳ್ಳಿಗೆ ಭೇಟಿ ನೀಡುತ್ತೇನೆ’ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios