ವರ್ಷಾಂತ್ಯದ ಆಫರ್: ಕ್ವಿಡ್, ಟ್ರೈಬರ್, ಡಸ್ಟರ್ ಖರೀದಿಸಿದ್ರೆ 70,000 ರೂ.ವರೆಗೂ ಲಾಭ!
ರೆನೋ ತನ್ನ ಪ್ರಖ್ಯಾತ ಡಸ್ಟರ್, ಟ್ರೈಬರ್ ಮತ್ತು ಕ್ವಿಡ್ ಕಾರುಗಳ ಮೇಲೆ ವಿಶೇಷ ವರ್ಷಾಂತ್ಯದ ಆಫರ್‌ಗಳನ್ನು ಘೋಷಿಸಿದ್ದು, ಗ್ರಾಹಕರು 70 ಸಾವಿರ ರೂಪಾಯಿವರೆಗೂ ಲಾಭ ಪಡೆದುಕೊಳ್ಳಬಹುದು. ಇಷ್ಟು ಮಾತ್ರವಲ್ಲದೇ ಸರಪಂಚರು, ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ರೈತರು ಖರೀದಿಸಿದರೆ ಹೆಚ್ಚುವರಿ ರಿಯಾಯ್ತಿ ಕೂಡ ದೊರೆಯಲಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಕ್ವಿಡ್ ಹ್ಯಾಚ್‌ಬ್ಯಾಕ್, ಎಂಪಿವಿ ಸಬ್‌ಕಾಂಪಾಕ್ಟ್ ಟ್ರೈಬರ್ ಮತ್ತು ಕಾಂಪಾಕ್ಟ್ ಎಸ್‌ಯುವಿ ಡಸ್ಟರ್ ಕಾರುಗಳ ಮೇಲೆ ರೆನೋ ಕಂಪನಿ ವರ್ಷಾಂತ್ಯದ ವಿಶೇಷ ಆಫರ್‌ಗಳನ್ನು ಘೋಷಿಸಿದ್ದು, ನೀವು 70,000 ರೂ.ಗಳವರೆಗೂ ಉಳಿತಾಯ ಮಾಡಬಹುದು.
ಈ ಮೂರು ಮಾಡೆಲ್‌ಗಳ ಹೆಚ್ಚುವರಿ ಕಾರ್ಪೋರೆಟ್ ರಿಯಾಯ್ತಿ, ಗ್ರಾಮೀಣ ಗ್ರಾಹಕರಿಗೆ ವಿಶೇಷ ಆಫರ್ ಸೇರಿದಂತೆ ವಿಶೇಷ ಆಫರ್‌ಗಳನ್ನು ರೆನೋ ನೀಡಲು ಮುಂದಾಗಿದೆ. ಈ ವರ್ಷಾಂತ್ಯದ ಆಫರ್ ಡಿಸೆಂಬರ್ 1ರಿಂದ 31ರವರೆಗೆ ಮಾತ್ರ ಇರಲಿದೆ.
ಬರುತ್ತಿದೆ ಸೋಲಾರ್ ಎಲೆಕ್ಟ್ರಿಕ್ ಕಾರು , ಚಾರ್ಜಿಂಗ್ ಇಲ್ಲದೆ ಪ್ರತಿ ದಿನ 1,600 ಕಿ.ಮಿ ಮೈಲೇಜ್...
ರೆನೋ ಕ್ವಿಡ್ ಖರೀದಿಸಿದರೆ ನಿಮಗೆ 45 ಸಾವಿರ ರೂಪಾಯಿವರೆಗೂ ಉಳಿತಾಯವಾಗಲಿದೆ. ಇದರಲ್ಲಿ 29 ಸಾವಿರ ನಗದು ರಿಯಾಯ್ತಿ, ಎಕ್ಸೆಂಜ್ ಬೆನೆಫಿಟ್ 15000 ರೂ., ಲಾಯಲ್ಟಿ ಬೋನಸ್ 1000 ರೂ. ಆಫರ್ ಸಿಗಲಿದೆ. ಈ ಆಫರ್‌ಗಳು ಕ್ವಿಡ್‌ನ ಆಯ್ದ ಕೆಲವು ಮಾಡೆಲ್‌ಗಳ ಮೇಲೆ ದೊರೆಯಲಿವೆ. ಜೊತೆಗೆ 9 ಸಾವಿರ ಕಾರ್ಪೊರೇಟ್ ರಿಯಾಯ್ತಿ ಕೂಡ ದೊರೆಯಲಿದೆ. ರೈತರು, ಸರಪಂಚರು, ಗ್ರಾಪಂ ಸದಸ್ಯರಿಗೆ ವಿಶೇಷ 5000 ರೂ. ರಿಯಾಯ್ತಿ ಸಿಗಲಿದೆ. ಇಷ್ಟು ಮಾತ್ರವಲ್ಲದೇ, 12 ತಿಂಗಳವರೆಗೆ 1.3 ಲಕ್ಷ ಸಾಲವನ್ನು ಶೂನ್ಯ ಬಡ್ಡಿಗೆ ಪಡೆದುಕೊಳ್ಳಬಹುದು.
ಟ್ರಬೈರ್ ಖರೀದಿಸುವಿರಿ ಎಂದಾದರೆ ನೀವು 500000 ರೂ.ವರೆಗೂ ಉಳಿತಾಯ ಮಾಡಬಹುದು. 20000 ರೂ. ನಗದು ರಿಯಾಯ್ತಿ, ಎಕ್ಸೆಂಜ್ ಬೆನೆಫಿಟ್ 20,000 ಮತ್ತು ಲಾಯಲ್ಟಿ ಬೆನೆಫಿಟ್ ಕೂಡ 10000 ರೂ.ವರೆಗೆ ದೊರೆತರೆ, 9,000 ರೂ.ವರೆಗೆ ಕಾರ್ಪೊರೇಟ್ ರಿಯಾಯ್ತಿ ಕೂಡ ಲಭ್ಯವಾಗಲಿದೆ. ಕ್ವಿಡ್ ರೀತಿಯಲ್ಲೇ ಟ್ರೈಬರ್ ಖರೀದಿಗೆ ರೈತರು, ಸರಪಂಚರು, ಗ್ರಾಮ ಪಂಚಾಯ್ತಿ ಸದಸ್ಯರು ಮುಂದಾದರೆ ಅವರಿಗೆ ಹೆಚ್ಚುವರಿಯಾಗಿ 5000 ರಿಯಾಯ್ತಿ ದೊರೆಯಲಿದೆ. ಜೊತೆಗೆ 12 ತಿಂಗಳವರೆಗೆ 2.31 ಲಕ್ಷ ರೂ.ಶೂನ್ಯ ಬಡ್ಡಿ ಲಾಭವನ್ನು ಪಡೆದುಕೊಳ್ಳಬಹುದು.
Yamaha FZS FI ವಿಂಟೇಜ್ ಎಡಿಷನ್ ಬಿಡುಗಡೆ; ನವೆಂಬರ್‌ನಲ್ಲಿ ಭರ್ಜರಿ ಮಾರಾಟ!
ರೆನೋ ಡಸ್ಟರ್ ಖರೀದಿ ಮೇಲೆ ವರ್ಷಾಂತ್ಯದ ಆಫರ್‌ಗಳನ್ನು ಘೋಷಿಸಲಾಗಿದೆ. 1.5 ಲೀ.(ಪೆಟ್ರೋಲ್) ಎಂಜಿನ್ ಡಸ್ಟರ್ ಖರೀದಿಸಿದರೆ 50 ಸಾವಿರ ರೂಪಾಯಿವರೆಗೆ ಲಾಭವಾಗಲಿದೆ. ಹೇಗೆ ಎಂದರೆ, ಎಕ್ಸೆಂಜ್ ಬೋನಸ್ 30 ಸಾವಿರ, 20 ಸಾವಿರ ರೂ.ವರೆಗೆ ಲಾಯಲ್ಟಿ ಬೆನೆಫಿಟ್ ದೊರೆಯಲಿದೆ. ಆರ್‌ಎಕ್ಸ್‌ಇ ಮಾಡೆಲ್ ಮೇಲೆ ಈ ಲಾಯಲ್ಟಿ ಬೋನಸ್ ದೊರೆಯಲಿದೆ. ಇನ್ನು 1.3 ಲೀ ಟರ್ಬೋ ಎಂಜಿನ್(ಪೆಟ್ರೋಲ್) ಖರೀದಿಸುವಿರಾದರೆ ಒಟ್ಟಾರೆ ನಿಮಗೆ 70 ಸಾವಿರ ರೂ.ವರೆಗೂ ಲಾಭವಾಗಬಹುದು. ಈ 70 ಸಾವಿರದಲ್ಲಿ 30 ಸಾವಿರವರೆಗೆ ಎಕ್ಸೆಂಜ್ ಬೆನೆಫಿಟ್, 20 ಸಾವಿರ ರೂ.ವರೆಗೆ ಲಾಯಲ್ಟಿ ಬೆನೆಫಿಟ್ ಮತ್ತು 20 ಸಾವಿರ ರೂ.ವರೆಗೆ ನಗದು ಬೆನೆಫಿಟ್ ಕೂಡ ದೊರೆಯಲಿದೆ. ಆದರೆ, ಎಲ್ಲ ಲಾಭಗಳು ಕೆಲವು ಆಯ್ದ ವೆರಿಯೆಂಟ್‌ಗಳ ಮೇಲೆ ಮಾತ್ರ ದೊರೆಯಲಿವೆ ಎಂಬುದನ್ನು ಮಾತ್ರ ಮರೆಯಬೇಡಿ.
ನವೆಂಬರ್ ತಿಂಗಳಲ್ಲಿ ಮಾರುತಿ ಮಾರಿದ ಕಾರುಗಳೆಷ್ಟು ಗೊತ್ತಾ?
ಇಷ್ಟು ಮಾತ್ರವಲ್ಲದೇ ರೆನೋ ಕಂಪನಿ, ಡಸ್ಟರ್ 1.3 ಮೇಲೆ ಮೂರು ವರ್ಷಗಳ(50 ಸಾವಿರ ಕಿ.ಮೀ. ಅಥವಾ ಈ ಎರಡರಲ್ಲಿ ಯಾವುದು ಮೊದಲಾಗುತ್ತದೆ ಅದು) ಈಸೀ ಕೇರ್ ಪ್ಯಾಕೇಜ್ ಅನ್ನು ಘೋಷಿಸಿದೆ. ರೈತರು, ಸರಪಂಚರು, ಗ್ರಾಮ ಪಂಚಾಯ್ತಿ ಸದಸ್ಯರು ಡಸ್ಟರ್ 1.3 ಖರೀದಿಸಿದರೆ ಅವರಿಗೆ ಹೆಚ್ಚುವರಿಯಾಗಿ 15 ಸಾವಿರ ರೂಪಾಯಿವರೆಗೂ ಲಾಭವಾಗಲಿದೆ.