ಭಾರತೀಯ ಕಾರು ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಮಾರುತಿ ಸುಜುಕಿ ನವೆಂಬರ್ ತಿಂಗಳಲ್ಲೂ ಅತ್ಯುತ್ತಮ ರೀತಿಯಲ್ಲೇ ಕಾರುಗಳನ್ನು ಮಾರಾಟ ಮಾಡಿದೆ. ಆದರೆ, ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಶೇ.16ರಷ್ಟು ಕುಸಿತವಾಗಿದೆ ಎಂದು ಹೇಳಲಾಗುತ್ತಿದೆ. 

ದೇಶದ ಅಗ್ರಗಣ್ಯ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ, 2020ರ ನವೆಂಬರ್ ತಿಂಗಳಲ್ಲಿ ಕಾರು ಮಾರಾಟದ ಅಂಕಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದ್ದು, ಒಟ್ಟು 1,53,223 ವಾಹನಗಳನ್ನು ಮಾರಾಟ ಮಾಡಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಮಾರುತಿ ಸುಜುಕಿ ಕಂಪನಿ 150,630 ವಾಹನಗಳನ್ನು ಮಾರಾಟ ಮಾಡಿತ್ತು. ಅಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಕಂಪನಿ ಶೇ.1.7ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2020ರ ಅಕ್ಟೋಬರ್‌ ತಿಂಗಳಿಗಳಲ್ಲಿ ಕಂಪನಿ ಒಟ್ಟು 1,82,448 ವಾಹನಗಳನ್ನು ಮಾಡಿತ್ತು. ಹಾಗಾಗಿ, ನವೆಂಬರ್‌ ತಿಂಗಳ ಮಾರಾಟಕ್ಕೆ ಹೋಲಿಸಿದಾಗ ಶೇ.16ರಷ್ಟು ಕುಸಿತವನ್ನು ಕಾಣಬಹುದು. ಅಕ್ಟೋಬರ್ ಹಬ್ಬದ ಸೀಸನ್ ಆಗಿದ್ದರಿಂದ ಸಹಜವಾಗಿಯೇ ವಾಹನ ಮಾರಾಟದ ಸಂಖ್ಯೆ ಹೆಚ್ಚಾಗಿರುತ್ತದೆ. ಹಬ್ಬ ಮುಗಿಯುತ್ತಿದ್ದಂತೆ ಮಾರಾಟದಲ್ಲಿ ಕುಸಿತ ಕಂಡಿದೆ.

ಸೇಫ್ಟಿ ಕ್ರ್ಯಾಶ್ ಟೆಸ್ಟಿಂಗ್: ಮಹೀಂದ್ರಾ ಥಾರ್‌ಗೆ ಎಷ್ಟು ಸ್ಟಾರ್‌ ಗೊತ್ತಾ?

ಇದೇ ವೇಳೆ, ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 135,775 ಪ್ರಯಾಣಿಕರ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣದಲ್ಲಿ ಶೇ.2.4 ಕುಸಿತವಾಗಿದೆ. ಕಳೆದ ವರ್ಷ ಕಂಪನಿ ಇದೇ ಅವಧಿಯಲ್ಲಿ 1,39,133 ವಾಹನಗಳನ್ನು ಮಾರಾಟ ಮಾಡಿತ್ತು. 2020ರ ಅಕ್ಟೋಬರ್‌ ತಿಂಗಳಿಗೆ ಹೋಲಿಸಿದರೆ ನವೆಂಬರ್ ತಿಂಗಳಲ್ಲಿ ಕಾರು ಮಾರಾಟದ ಪ್ರಮಾಣದಲ್ಲಿ ಶೇ.17ರಷ್ಟು ಕುಸಿತವಾಗಿದ್ದು, ಒಟ್ಟು 1,63,656 ವಾಹನಗಳನ್ನು ಮಾರಾಟ ಮಾಡಲಾಗಿದೆ. ಈ ಲೆಕ್ಕಾಚಾರದಲ್ಲಿ, ಟೋಯೊಟಾ(ಟೋಯೊಟಾ ಅರ್ಬನ್ ಕ್ರೂಸರ್) ಸೇರಿಸಿಲ್ಲ, 5,263 ವಾಹನಗಳು ಮಾರಾಟವಾಗಿವೆ. 

ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ, ಭಾರತಕ್ಕೆ ಯಾವಾಗ ಪ್ರವೇಶ?

ಅಲ್ಟೋ, ಎಸ್ ಪ್ರೆಸ್ಸೋ ಮಾರಾಟ 
ನವೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿಯ ಎಂಟ್ರಿ ಲೆವಲ್ ಕಾರುಗಳಾದ ಅಲ್ಟೋ ಮತ್ತು ಎಸ್ ಪ್ರೆಸ್ಸೋ ಗಣನೀಯವಾಗಿ ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟ ಪ್ರಮಾಣದಲ್ಲಿ ಶೇ.15ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 22,339 ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಅದೇ ವೇಳೆ, ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್, ಸಬ್ ಕಾಂಪ್ಯಾಕ್ಟ್ ಸೆಡಾನ್ ಸ್ಪೇಸ್ ಕಾರುಗಳಾದ ಅಂದರೆ, ವ್ಯಾಗಾನ್ಆರ್, ಸ್ವೀಫ್ಟ್, ಸೆಲೆರಿಯೋ,ಇಗ್ನಿಸ್, ಬಲೆನೋ, ಡಿಜೈರ್ ಮತ್ತು ಟೂರ್ ಎಸ್ ಮಾರಾಟದ ಪ್ರಮಾಣ 76,630 ಆಗಿದೆ.

ಆಸಕ್ತಿಕರ ವಿಷಯ ಎಂದರೆ, ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಸಿಯಾಜ್ ಮಾರಾಟದಲ್ಲಿ ಗಣನೀಯ ಏರಿಕೆಯಾಗಿದೆ. ನವೆಂಬರ್ ತಿಂಗಳಲ್ಲಿ ಕಂಪನಿ ಒಟ್ಟು 1,870 ಸಿಯಾಜ್ ಸೆಡಾನ್ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಕಾರು ಮಾರಾಟದಲ್ಲಿ ಶೇ.29ರಷ್ಟು ಏರಿಕೆಯಾಗಿದೆ.ಇನ್ನು ಜಿಪ್ಸಿ, ಎರ್ಟಿಗಾ, ವಿಟಾರಾ ಬ್ರೆಜ್ ಎಕ್ಸ್ಎಲ್6, ಎಸ್ ಕ್ರಾಸ್ ಶೇ.24ರಷ್ಟು ಹೆಚ್ಚಳವಾಗಿದ್ದು ಒಟ್ಟು 23,753 ಮಾರಾಟವಾಗಿವೆ. ಅದೇ ವೇಳೆ, ವ್ಯಾನ್ ವಿಭಾಗದಲ್ಲಿ ಒಮ್ನಿ, ಇಕೊ ವ್ಯಾನ್‌ಗಳು ಒಟ್ಟು ಶೇ.10ರಷ್ಟು ಏರಿಕೆಯನ್ನು ದಾಖಲಿಸಿದ್ದು, ಒಟ್ಟು 11,183 ವಾಹನಗಳು ಮಾರಾಟವಾಗಿವೆ.

ಲಘು ವಾಣಿಜ್ಯ ವಾಹನಗಳು(ಎಲ್‌ಸಿವಿ) ಮಾರಾಟದಲ್ಲಿ ಭಾರಿ ಏರಿಕೆಯಾಗಿರುವುದನ್ನು ಗುರುತಿಸಬಹುದು. ಈ ವಿಭಾಗದ ಕಾರು ಮಾರಾಟದಲ್ಲಿ 40ರಷ್ಟು ಏರಿಕೆಯಾಗಿದ್ದು ಒಟ್ಟು 3,181 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆ ವರ್ಷದ ಇದೇ ಅವಧಿಯಲ್ಲಿ ಕಂಪನಿ 2,267 ಕಾರುಗಳನ್ನು ಮಾರಾಟ ಮಾಡಿತ್ತು. ಹಾಗೆಯೇ, ಕಂಪನಿಯ ಕಾರು ರಫ್ತಿನಲ್ಲಿ ಹೆಚ್ಚಳವಾಗಿರುವುದನ್ನು ಗುರುತಿಸಬಹುದು. ಈ ವಿಭಾಗದಲ್ಲಿ ಕಂಪನಿ ಶೇ.30 ಹೆಚ್ಚಳವನ್ನು ದಾಖಲಿಸಿದೆ. 

ಭಾರತದಲ್ಲಿ KTM250 ಬೈಕ್ ಬಿಡುಗಡೆ, ಬೆಲೆ 2.48 ಲಕ್ಷ ರೂಪಾಯಿ