Yamaha FZS FI ವಿಂಟೇಜ್ ಎಡಿಷನ್ ಬಿಡುಗಡೆ; ನವೆಂಬರ್‌ನಲ್ಲಿ ಭರ್ಜರಿ ಮಾರಾಟ!
ಯಮಾಹ ಇಂಡಿಯಾ ಮೋಟಾರ್ ಕಂಪನಿ ತನ್ನ ಎಫ್‌ಜೆಡ್ಎಸ್ ಎಫ್ಐ ಸರಣಿಯ ವಿಂಟೇಜ್ ಎಡಿಷನ್ ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಇದರ ಬೆಲೆ 1,09,700(ಎಕ್ಸ್ ಶೋರೂಮ್) ರೂಪಾಯಿ. ಆಗಿದೆ. ಈಗಾಗಲೇ ಈ ಸರಣಿಯ ಬೈಕ್‌ಗಳು ಭಾರತೀಯ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿವೆ.
ಭಾರತೀಯ ದ್ವಿಚಕ್ರ ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನವನ್ನು ಹೊಂದಿರುವ ಯಮಾಹ ಕಂಪನಿ ಎಫ್‌ಜೆಡ್ ಸರಣಿಯ ಬೈಕ್ ಬಿಡುಗಡೆ ಮಾಡಿದೆ. ಈ ಬೈಕ್ ಅನ್ನು ಭಾರತೀಯ ಗ್ರಾಹಕರು ತುಂಬ ಆದರಿಂದಲೇ ಸ್ವಾಗತಿಸಿದ್ದರು. ಅದರ ಪರಿಣಾಮವೇ ಇದೀಗ ಕಂಪನಿ ತನ್ನ ಎಫ್‌ಜೆಡ್ ಸರಣಿಯಲ್ಲಿ ವಿಂಟೇಜ್ ಎಡಿಷನ್ ಬೈಕ್ ಅನ್ನು ಪರಿಚಯಿಸಿದೆ. ಏತನ್ಮಧ್ಯೆ, 2020ರ ನವೆಂಬರ್ ತಿಂಗಳಲ್ಲಿ ಕಂಪನಿ ತನ್ನ ಒಟ್ಟು ದ್ವಿಚಕ್ರವಾಹನಗಳ ಮಾರಾಟದಲ್ಲಿ ಶೇ.35.02ರಷ್ಟು ಹೆಚ್ಚಳವನ್ನು ಕಂಡಿದ್ದು, ಒಟ್ಟು 53,208 ಯುನಿಟ್‌ಗಳನ್ನು ಮಾರಾಟ ಮಾಡಿದೆ.
ಭಾರತದಲ್ಲಿ KTM250 ಬೈಕ್ ಬಿಡುಗಡೆ, ಬೆಲೆ 2.48 ಲಕ್ಷ ರೂಪಾಯಿ
ವಿಂಟೇಜ್ ಎಡಿಷನ್ ಎಫ್‌ಜೆಡ್ಎಸ್-ಎಫ್ಐ ಬೈಕ್ ವಿಂಟೇಜ್ ಗ್ರಾಫಿಕ್ಸ್ ಮತ್ತು ಲೆದರ್ ಫಿನಿಷ್ ಸಿಂಗಲ್ ಪೀಸ್ ಎರಡು ಹಂತದಲ್ಲಿ ಸೀಟ್‌ಗಳನ್ನು ಹೊಂದಿರಲಿದೆ. ಇಷ್ಟು ಮಾತ್ರವಲ್ಲದೇ ಈ ವಿಂಟೇಜ್ ಎಡಿಷನ್ ಬೈಕ್ ಬ್ಲೂಟೂಥ್ ಕನೆಕ್ಟಿವಿಟಿಯನ್ನು ಹೊಂದಿದ್ದು, ಯುಮಾಹ ಮೋಟರ್‌ಸೈಕಲ್ ಕನೆಕ್ಟ್ ಎಕ್ಸ್ ಆಪ್ ಅನ್ನು ಅನೇಕ ಉದ್ದೇಶಕ್ಕೆ ಬಳಸಬಹುದಾಗಿದೆ.
ಎಫ್‌ಜೆಎಸ್-ಎಫ್ಐ ಎಬಿಎಸ್ ವಿಂಟೇಜ್ ಎಡಿಷನ್ ಬೈಕ್ ಬೆಲೆ 1,09,700(ಎಕ್ಸ್ ಶೋರೂಮ್) ರೂಪಾಯಿ. ಡಿಸೆಂಬರ್ ಮೊದಲ ವಾರದಿಂದಲೇ ಈ ಸ್ಪೆಷಲ್ ಎಡಿಷನ್ ಬೈಕ್ ಯಮಾಹ ಕಂಪನಿಯ ಎಲ್ಲ ಅಧಿಕೃತ ಡೀಲರ್‌ಗಳಲ್ಲಿ ಲಭ್ಯವಾಗಲಿದೆ.
ಯಮಾಹಾ ಭರ್ಜರಿ ಮಾರಾಟ
ಪ್ರಸಕ್ತ ಹಬ್ಬದ ಸೀಸನ್‌ನಲ್ಲಿ ಅಂದರೆ, ನವೆಂಬರ್ ತಿಂಗಳಲ್ಲಿ ಯಮಾಹ ಮೋಟಾರ್ ಇಂಡಿಯಾ ಒಟ್ಟು 53,208 ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿ, ಶೇ.35.02ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಈ ಕಂಪನಿ ಒಟ್ಟು 39,406 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು. ಹಾಗಾಗಿ, ಕಳೆದ ವರ್ಷಕ್ಕೆ ಹೋಲಿಸಿದರೆ, ಯಮಾಹ ಈ ವರ್ಷ ಭರ್ಜರಿ ಮಾರಾಟ ಕಂಡಿದೆ.
ಸೇಫ್ಟಿ ಕ್ರ್ಯಾಶ್ ಟೆಸ್ಟಿಂಗ್: ಮಹೀಂದ್ರಾ ಥಾರ್‌ಗೆ ಎಷ್ಟು ಸ್ಟಾರ್ ಗೊತ್ತಾ?
125 ಸಿಸಿ ವಿಭಾಗದಲ್ಲಿ ಯಮಹಾ ಕಂಪನಿ ಪ್ರಸ್ತುತ ಸ್ಕೂಟರ್ ಶ್ರೇಣಿಯಲ್ಲಿ ಫ್ಯಾಸಿನೊ, ರೇ ಜೆಡ್ಆರ್ ಮತ್ತು ರೇ ಜೆಡ್ಆರ್ ಸ್ಟ್ರೀಟ್ ರ್ಯಾಲಿ ಸೇರಿವೆ. ಜೊತೆಗೆ 150 ಸಿಸಿ ವಿಭಾಗದಲ್ಲಿ ಆರ್15 ವರ್ಷನ್ 3.0 , ಎಂಟಿ-15, ಎಫ್‌ಜೆಡ್ ಎಫ್ಐ ಮತ್ತು ಎಫ್‌ಜೆಡ್ಎಸ್ ಎಫ್ಐ ವರ್ಷನ್ 3.0 ಬೈಕ್‌ಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇವೆ. ಇನ್ನು 250 ಸಿಸಿ ವಿಭಾಗದಲ್ಲಿ ಎಫ್‌ಜೆಡ್ 25 ಹಾಗೂ ಎಫ್‌ಜೆಡ್ಎಸ್ 25 ದ್ವಿಚಕ್ರವಾಹನಗಳು ಸದ್ದು ಮಾಡುತ್ತಿವೆ. ಯಮಹಾದ ಬಹುತೇಕ ಬೈಕ್‌ಗಳು ಯುವ ಜನತೆಯ ಹೆಚ್ಚಿನ ಒಲವು ಗಳಿಸಿವೆ.
ಸತತ 5 ತಿಂಗಳಿಂದ ಮಾರಾಟದಲ್ಲಿ ಏರಿಕೆ
ವರ್ಷದಿಂದ ವರ್ಷಕ್ಕೆ ಯಮಾಹ ಮಾರಾಟದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಕಂಡಿದೆ. ಕಳೆದ ಐದು ತಿಂಗಳಿಂದ ಸತತವಾಗಿ ಮಾರಾಟದಲ್ಲಿ ಏರಿಕೆಯನ್ನು ದಾಖಲಿಸಿದೆ. 2020 ಅಕ್ಟೋಬರ್ ತಿಂಗಳಲ್ಲಿ 60,176 ದ್ವಿಚಕ್ರವಾಹನಗಳು ಮಾರಾಟವಾಗಿ, ಶೇ.30.58 ಹೆಚ್ಚಳವಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 46,082 ದ್ವಿಚಕ್ರವಾಹನಗಳು ಮಾರಾಟವಾಗಿದ್ದವು. ಪ್ರಸಕ್ತ ಸಾಲಿನ ಸೆಪ್ಟೆಂಬರ್ ಕಂಪನಿ 63,052 ಯುನಿಟ್ ಮಾರಾಟ ಮಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.17.36 ಹೆಚ್ಚಳವನ್ನು ಕಂಡಿತ್ತು. ಅಂದರೆ, ಇದೇ ಅವಧಿಯಲ್ಲಿ ಕಳೆದ ವರ್ಷ ಕಂಪನಿ ಒಟ್ಟು 53727 ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿತ್ತು.
ನವೆಂಬರ್ ತಿಂಗಳಲ್ಲಿ ಮಾರುತಿ ಮಾರಿದ ಕಾರುಗಳೆಷ್ಟು ಗೊತ್ತಾ?
2020 ಆಗಸ್ಟ್‌ನಲ್ಲಿ ಒಟ್ಟು ಮಾರಾಟದಲ್ಲಿ ಶೇ.14.8ರಷ್ಟು ಏರಿಕೆಯಾಯಿತು. ಅಂದರೆ, ಆಗಸ್ಟ್ 2019ರಲ್ಲಿ ಕಂಪನಿ 52,706 ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿದ್ದರೆ ಪ್ರಸಕ್ತ ಆಗಸ್ಟ್‌ನಲ್ಲಿ 60,505 ಯುನಿಟ್ ಮಾರಾಟ ಮಾಡುವ ಮೂಲಕ ಗೆಲುವಿನ ನಗೆ ಬೀರಿತ್ತು. ಇನ್ನು ಕಳೆದ ವರ್ಷ ಜುಲೈನ್‌ನಲ್ಲಿ ಕಂಪನಿ 47,918ರ ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿದ್ದರೆ 2020ರ ಜುಲೈನಲ್ಲಿ 49,989 ಮಾರಾಟ ಮಾಡಲಾಗಿತ್ತು. ಅಂದರೆ ಶೇ.4.32 ಏರಿಕೆಯಾದದನ್ನು ನೀವು ಗಮನಿಸಬಹುದು. ಹೀಗೆ ಕಳದೆ ಐದು ತಿಂಗಳಿಂದ ಕಂಪನಿ ನಿರಂತರವಾಗಿ ತನ್ನ ಮಾರಾಟದಲ್ಲಿ ಏರಿಕೆಯನ್ನು ಕಾಪಾಡಿಕೊಂಡು ಬಂದಿರುವುದು ಶ್ಲಾಘನೀಯವಾಗಿದೆ.