Traffic Violation ಇನ್ಸ್‌ಸ್ಟಾಗ್ರಾಂಗಾಗಿ ಬೈಕ್ ಮೇಲೆ ಸಿನಿಮಾ ಹಾಡು ಶೂಟಿಂಗ್, ಬುಲೆಟ್ ರೈಡರ್‍ಗೆ 14,000 ರೂ ದಂಡ!
- ಬಾಲಿವುಡ್ ಹಾಡಿಗೆ ವಿಡಿಯೋ ಶೂಟಿಂಗ್, ಹೀರೋ ರೀತಿ ಆ್ಯಕ್ಟಿಂಗ್
- ಬೈಕ್ ಮೇಲೆ ಹಾಡಿಗೆ ಡ್ಯಾನ್ಸ್, ವಿಡಿಯೋ ವೈರಲ್
- ಬುಲೆಟ್ ರೈಡರ್ ಪತ್ತೆ ಹಚ್ಚಿ 14,000 ರೂಪಾಯಿ ದಂಡ ಹಾಕಿದ ಪೊಲೀಸ್
ಉತ್ತರ ಪ್ರದೇಶ(ಡಿ.13): ಸಾಮಾಜಿಕ ಜಾಲತಾಣದಲ್ಲಿ(Social Media) ವಿಡಿಯೋ ಪೋಸ್ಟ್ ಮಾಡಿ ಹೆಚ್ಚು ಲೈಕ್ಸ್ ಪಡೆಯಲು ಹೋಗಿ ಎಡವಟ್ಟು ಮಾಡಿಕೊಂಡ ಅದೆಷ್ಟೋ ಉದಾಹರಣಗಳಿವೆ. ಲೈಕ್ಸ್‌ಗಾಗಿ ಮಾಡಿ ಎಲ್ಲರಿಂದ ಮಂಗಳಾರತಿ ಮಾಡಿಸಿಕೊಂಡ ಘಟನೆಗಳು ನಡೆದಿದೆ. ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ವಿಡಿಯೋ ನೋಡಿದರೆ ಯಾವುದೇ ಬಾಲಿವುಡ್(Bollywood Song) ಹೀರೋಗೂ ಕಡಿಮೆ ಇಲ್ಲ. ಬೈಕ್ ಮೇಲೆ ಹಾಡು ಗುನುಗುತ್ತಾ ಡ್ಯಾನ್ಸ್(Dnace) ಮಾಡುತ್ತಿರುವ ಈ ವಿಡಿಯೋ ಮಾಡಿದ ಸೋಶಿಯಲ್ ಮೀಡಿಯಾ ಸ್ಟಾರ್ 14,000 ರೂಪಾಯಿ ದಂಡ ಕಟ್ಟಿದ್ದಾನೆ.
ಕಾನ್ಪುರದ(kanpur, Uttar Pradesh) ಯುವಕ ಖಲೀದ್ ಅಹಮ್ಮದ್ ತನ್ನ ರಾಯಲ್ ಎನ್‌ಫೀಲ್ಡ್ 350 ಬುಲೆಟ್(Royal Enfield 350) ಮೂಲಕ ಸಾಮಾಜಿಕ ಜಾಲತಾಣದ ವಿಡಿಯೋಗಾಗಿ ಸ್ಟಂಟ್ ಮಾಡಿದ್ದಾನೆ. ಮೈನಿ ಜೂಟ್ ನಹಿ ಬೋಲ್ತಾ ಚಿತ್ರದ ಎಕ್ ಲಡ್ಕಿ ಚಾಯಿಯೇ ಎವರ್ ಗ್ರೀನ್ ಹಾಡನ್ನು ಲಿಪ್‌ಸಿಂಕ್ ಮಾಡಿದ್ದಾನೆ. ಹೀರೋ ರೀತಿಯಲ್ಲೇ ಬೈಕ್ ಮೇಲೆ ಸವಾರಿ ಮಾಡುತ್ತಾ, ಹಾಡು ಗುನುಗಿದ್ದಾನೆ. ಜೊತೆಗೆ ತನ್ನ ನಟನೆ ಮೂಲಕವೂ ಗಮನಸೆಳೆದಿದ್ದಾರೆ. ಈ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲೆಂದೇ ಈ ವಿಡಿಯೋ ಮಾಡಲಾಗಿದೆ.
Traffic violation:ನಿಯಮ ಉಲ್ಲಂಘಿಸಿದ ಓವೈಸಿಗೆ 200 ರೂ ಫೈನ್, ದಂಡ ಹಾಕಿದ ಅಧಿಕಾರಿಗೆ 5,000 ರೂ ಬಹುಮಾನ!
ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಖಲೀದ್ ಅಹಮ್ಮದ್ ಪೋಸ್ಟ್ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ. ಹಲವರು ಈತನ ನಟನೆ, ಹಾಡಿನ ಲಿಪ್‌ಸಿಂಕ್, ಬೈಕ್‌ನಲ್ಲಿ ಹೀರೋ ರೀತಿಯ ಮ್ಯಾನರಿಸಂ ಎಲ್ಲವನ್ನೂ ಮೆಚ್ಚಿಕೊಂಡಿದ್ದಾರೆ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾನ್ಪುರ ಪೊಲೀಸರಿಗೂ ಸಿಕ್ಕಿದೆ. ತಕ್ಷಣ ಮಾಹಿತಿ ಕಲೆ ಹಾಕಿದ ಪೊಲೀಸರು ಟ್ರಾಫಿಕ್ ನಿಯಮ(Traffic Violation) ಉಲ್ಲಂಘಿಸಿದ ಖಲೀದ್ ಅಹಮ್ಮದ್‌ಗೆ 14,000 ರೂಪಾಯಿ ದಂಡ ಹಾಕಿದ್ದಾರೆ.
ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್, ಅಪಯಾಕಾರಿ ರೈಡ್, ಹೆಲ್ಮೆಟ್ ಇಲ್ಲದೆ ಪ್ರಯಾಣ ಸೇರಿದಂತೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಖಲೀದ್ ಅಹಮ್ಮದ್‌ಗೆ ದುಬಾರಿ ದಂಡ ಹಾಕಿದ್ದಾರೆ. ಇದರ ಜೊತೆಗೆ ಇದೇ ವಿಡಿಯೋವನ್ನು ಉತ್ತರ ಪ್ರದೇಶ ಪೊಲೀಸರು ಜಾಗೃತಿಗಾಗಿ ಬಳಸಿದ್ದಾರೆ.
ದುಬಾರಿ ಫೈನ್ ಕಟ್ಟಗಲಾಗದೇ ಪೊಲೀಸರ ಬಳಿ ಸ್ಕೂಟರ್ ಬಿಟ್ಟು ಹೋದ ಸವಾರ!
ಇದೇ ವಿಡಿಯೋದಲ್ಲಿ ಖಲೀದ್ ಅಹಮ್ಮದ್ ಟ್ರಾಫಿಕ್ ನಿಯಮ ಉಲ್ಲಂಘನೆ ಕುರಿತು ಮಾತನಾಡಿದ್ದಾರೆ. ತನಗೆ ಈ ರೀತಿಯೋ ವಿಡಿಯೋ ಮಾಡುವುದು ಟ್ರಾಫಿಕ್ ನಿಯಮ ಉಲ್ಲಂಘನೆ ಎಂದು ತಿಳಿದಿರಲಿಲ್ಲ. ಮಾಧ್ಯಮಗಳಲ್ಲಿ 9,000 ರೂಪಾಯಿ ಎಂದು ಉಲ್ಲೇಖಿಸಿದ್ದಾರೆ. ಆದರೆ 9,000 ರೂಪಾಯಿ ಅಲ್ಲ, 14,000 ರೂಪಾಯಿ ದಂಡ ಕಟ್ಟಿದ್ದೇನೆ ಎಂದು ಖಲೀದ್ ಅಹಮ್ಮದ್ ಹೇಳಿದ್ದಾನೆ. ಕೊನೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಒಂದೇ ವಾಕ್ಯದಲ್ಲಿ ಅರ್ಥಪೂರ್ಣ ಎಚ್ಚರಿಕೆ ನೀಡಿದ್ದಾರೆ. ನೀವು ವ್ಹೀಲ್ ಮೇಲಿರುವಾಗ ರೀಲ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 121, ಸೆಕ್ಷನ್ 194D ಹಾಗೂ ಸೆಕ್ಷನ್ 9 ನಿಯಮವನ್ನು ಖಲೀದ್ ಅಹಮ್ಮದ್ ಉಲ್ಲಂಘಿಸಿದ್ದಾನೆ. ಹಲವರು ಇಷ್ಟೊಂದು ದುಬಾರಿ ದಂಡವೇಕೆ ಎಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಶ್ನೆಯನ್ನು ಕೇಳಲಾಗುತ್ತಿದೆ. ಇದಕ್ಕೆ ಮತ್ತೊಂದು ಕಾರಣವೂ ಇದೆ. 2021ರ ಎಪ್ರಿಲ್ ತಿಂಗಳಲ್ಲಿ ಇದೇ ರೀತಿ ಬೈಕ್ ಮೇಲೆ ವಿಡಿಯೋ ಮಾಡಿ ನಿಯಮ ಉಲ್ಲಂಘಿಸಿದ ಖಲೀದ್‌ಗೆ ಪೊಲೀಸರು ಎಚ್ಚರಿಕೆ ಜೊತೆಗೆ ದಂಡ ಹಾಕಿದ್ದರು. ಇದೀಗ ಎರಡನೇ ಬಾರಿಗೆ ನಿಯಮ ಉಲ್ಲಂಘಿಸಿಲಾಗಿದೆ. ಹೀಗಾಗಿ ದುಬಾರಿ ದಂಡ ವಿಧಿಸಲಾಗಿದೆ. ಹಳೇ ದಂಡವನ್ನು ಖಲೀದ್ ಅಹಮ್ಮದ್ ಪಾವತಿಲ್ಲ. ಹೀಗಾಗಿ ಎಲ್ಲವೂ ಸೇರಿದಾಗ 14,000 ರೂಪಾಯಿ ಆಗಿದೆ. ಮತ್ತೆ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡದ ಜೊತೆಗೆ ಖಲೀದ್ ಡ್ರೈವಿಂಗ್ ಲೈಸೆನ್ಸ್ ರದ್ದಾಗಲಿದೆ ಎಂದು ಟ್ರಾಫಿಕ್ ಪೊಲೀಸ್ ಇನ್ಸ್‌ಪೆಕ್ಟರ್ ವಿನೋದ್ ಯಾದವ್ ಹೇಳಿದ್ದಾರೆ.