ತಿಪಟೂರು ರಸ್ತೆ ಅಗಲೀಕರಣಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್, 32.50 ಕೋಟಿ ರೂ ವೆಚ್ಚದಲ್ಲಿ 4 ಲೇನ್!
ಕೇಂದ್ರ ಸರ್ಕಾರ ಇದೀಗ ಕರ್ನಾಟಕದ ಮತ್ತೊಂದು ಹೆದ್ದಾರಿ ಅಭಿವೃದ್ಧಿಗೆ ಅನುಮೋದನೆ ನೀಡಿದೆ. ಈ ಬಾರಿ ತಿಪಟೂರಿನ NH 206 ರಸ್ತೆ ಅಗಲೀಕರಣಕ್ಕೆ ಸಚಿವ ನಿತಿನ್ ಗಡ್ಕರಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ನವದೆಹಲಿ(ನ.02): ಭಾರತದ ಹೆದ್ದಾರಿ ರಸ್ತೆಗಳು ತ್ವರಿತಗತಿಯಲ್ಲಿ ಅಭಿವೃದ್ಧಿಯಾಗುತ್ತಿದೆ. ಅತ್ಯಾಧುನಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದ ರಸ್ತೆಗಳನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡುತ್ತಿದೆ. ಕೇಂದ್ರದ ಅನುದಾನದಲ್ಲಿ ಈಗಾಗಲೇ ಕರ್ನಾಟಕದಲ್ಲಿ ಹಾದು ಹೋಗುತ್ತಿರುವ ಹಲವು ಹೆದ್ದಾರಿಗಳು ಅಭಿವೃದ್ಧಿಯಾಗುತ್ತಿದೆ. ಇದರಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಕಾಮಾಗಾರಿ ಬಹುತೇಕ ಪೂರ್ಣಗೊಂಡಿದೆ. ಬೆಂಗಳೂರು ಮಂಗಳೂರು ರಸ್ತೆ ಕಾಮಾಗಾರಿ ಯೋಜನೆ ಸಿದ್ದಗೊಂಡಿದೆ. ಇದರ ಜೊತೆ ಹಲವು ರಸ್ತೆ ಕಾಮಾಗಾರಿಗಳು ನಡೆಯುತ್ತಿದೆ. ಇದೀಗ ಕೇಂದ್ರ ಸರ್ಕಾರ ತಿಪಟೂರಿನ ಎನ್ ಎಚ್ 206 ರಸ್ತೆ ಅಗಲೀಕರಣಕ್ಕೆ ಅನುಮೋದನೆ ನೀಡಿದೆ. ಈ ಸಂತಸವನ್ನು ಸ್ವತಃ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಂಚಿಕೊಂಡಿದ್ದಾರೆ.
ತಿಪಟೂರಿನ ಕೋಡಿ ಸರ್ಕಲ್ ನಿಂದ ಹುಚ್ಚಗೊಂಡನಹಳ್ಳಿ ಬೈ ಪಾಸ್ ತನಕ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ. ಸದ್ಯ 2 ಲೇನ್ ರಸ್ತೆ ಇದಾಗಿದೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಹೆಚ್ಚಿನ ವಾಹನಗಳು ಓಡಾಡುತ್ತಿರುವುದರಿಂದ ರಸ್ತೆಯೂ ಹಾಳಾಗಿದೆ. ಇದೀಗ ಇದೇ ರಸ್ತೆಯನ್ನು 2 ಲೇನ್‌ನಿಂದ 4 ಲೇನ್ ರಸ್ತೆಯಾಗಿ ಅಗಲೀಕರಣ ಮಾಡಲು ಕೇಂದ್ರ ಮುಂದಾಗಿದೆ. ಈ ರಸ್ತೆ ಅಗಲೀಕರಣ ಕಾರ್ಯ 32.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಯಾದಗಿರಿ: ಸೂರತ್ ಚೆನ್ನೈ ಎಕ್ಸಪ್ರೆಸ್ ವೇ, ನೊಂದ ರೈತನ ಪತ್ರಕ್ಕೆ ಸಿಎಂ ಸ್ಪಂದನೆ
ಪುಣೆ - ಬೆಂಗಳೂರು ಎಕ್ಸ್‌ಪ್ರೆಸ್ ರಸ್ತೆ: ಇಂದು ಸಭೆ
ಕೊಪ್ಪಳ ಮಾರ್ಗವಾಗಿ ಹಾದು ಹೋಗುವ ಪುಣೆ- ಬೆಂಗಳೂರು ಎಕ್ಸ್‌ಪ್ರೆಸ್ ಹೈವೆ ರಸ್ತೆ ನಿರ್ಮಾಣದ ಕುರಿತು ಈಗಾಗಲೇ ಕೇಂದ್ರ ಸರ್ಕಾರ ಡಿಪಿಆರ್ ತಯಾರಿಸಿದ್ದು, ಈ ಹಿನ್ನೆಲೆ ಜಿಲ್ಲಾ ವ್ಯಾಪ್ತಿಯಲ್ಲಿನ ಹೈವೆಯ ಕುರಿತು ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆ ನಡೆಸಲಾಗಿದೆ. ಈ ಕುರಿತು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಅವರು ಪ್ರಕಟಣೆ ನೀಡಿದ್ದು, ಭಾರತಮಾಲಾ ಯೋಜನೆ ಅಡಿಯಲ್ಲಿ ಎಕ್ಸ್‌ಪ್ರೆಸ್ ಹೈವೆ ನಿರ್ಮಾಣ ಮಾಡಲಾಗುತ್ತಿದ್ದು, ಈಗಾಗಲೇ ಗುರುತಿಸಿರುವ ಮಾರ್ಗದ ಅಲೈನ್‌ಮೆಂಟ್ ಕುರಿತು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಲಾಗಿದೆ.
ಈ ಮೂಲಕ ಬಹು ವರ್ಷಗಳಿಂದ ಇದ್ದ ಬೇಡಿಕೆಯೊಂದು ಈಡೇರುವ ಕಾಲ ಸನ್ನಿಹಿತವಾಗಿದೆ. ತಾಲೂಕಿನ ವ್ಯಾಪ್ತಿಯಲ್ಲಿನ ಹಿರೇಸಿಂದೋಗಿ, ಕಾತರಕಿ, ಗುಡ್ಲಾನೂರು ಮಾರ್ಗವಾಗಿ ತೆರಳುವ ಈ ರಸ್ತೆ ತುಂಗಭದ್ರಾ ನದಿಯಲ್ಲಿ ಸುಮಾರು ಮೂರು ಕಿಮೀ ಸೇತುವೆ ನಿರ್ಮಾಣವಾಗಲಿದೆ ಎನ್ನುವುದು ವಿಶೇಷ.
ಮಂಡ್ಯ: ಕೆ.ಕೋಡಿಹಳ್ಳಿ ಬಳಿ ಸೇತುವೆ ನಿರ್ಮಾಣಕ್ಕೆ ಕೇಂದ್ರ ಅಸ್ತು, ಪ್ರತಾಪ್ ಸಿಂಹ
ಗದಗ-ಹೊನ್ನಾಳಿ ಹೆದ್ದಾರಿ ಕಾಮಗಾರಿಗೆ ವೇಗ
ಕುಂಟುತ್ತಾ ಸಾಗಿದ್ದ ಗದಗ-ಹೊನ್ನಾಳಿ (ಬಾಗಲಕೋಟೆ-ಬಿಳಿಗಿರಿರಂಗನ ಬೆಟ್ಟರಾಜ್ಯ ಹೆದ್ದಾರಿ 57ರ ವ್ಯಾಪ್ತಿಯ) ರಾಜ್ಯ ಹೆದ್ದಾರಿ 26ರ ಕಾಮಗಾರಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ವೇಗ ಪಡೆದುಕೊಂಡಿದ್ದು ತಾಲೂಕಿನ ಜನರಲ್ಲಿ ಹರ್ಷ ಉಂಟು ಮಾಡಿದೆ. ಬಾಗಲಕೋಟೆ-ಬಿಳಿರಂಗನಬೆಟ್ಟರಾಜ್ಯ ಹೆದ್ದಾರಿ 57ರ ಕಾಮಗಾರಿಯಲ್ಲಿ 663 ಕಿ.ಮೀ. ರಸ್ತೆಯಾಗಬೇಕಾಗಿದೆ. ಇದು ರಾಜ್ಯದಲ್ಲಿಯೇ ಅತಿ ಉದ್ದವಾದ ರಾಜ್ಯ ಹೆದ್ದಾರಿಯಾಗಿದೆ. ಆ ಪೈಕಿ ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿ 26ರ ಅಡಿ 138 ಕಿ.ಮೀ. ರಸ್ತೆ ನಿರ್ಮಿಸುವ ಜವಾಬ್ದಾರಿಯಿದೆ.