Asianet Suvarna News Asianet Suvarna News

ಟಾಟಾ ಪವರ್‌ನಿಂದ ದೇಶಾದ್ಯಂತ 1000 EV ಚಾರ್ಚಿಂಗ್ ಕೇಂದ್ರಗಳು

ದೇಶದಲ್ಲಿ ಈಗ ಎಲೆಕ್ಟ್ರಿಕ್ ವಾಹನ(Electric Vehicals)ಗಳ ಬಳಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಅಗತ್ಯವಿರುವ ಮೂಲಸೌಕರ್ಯಗಳ ಸ್ಥಾಪನಗೆ ಒತ್ತಡವಿದೆ. ಈ ಹಿನ್ನೆಲೆಯಲ್ಲಿ ಟಾಟಾ ಪವರ್ (Tata Power) ಕಂಪನಿಯು ದೇಶಾದ್ಯಂತ 1000 ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿದೆ. ಇದರಿಂದ ಗ್ರಾಹಕರಿಗೆ ಭಾರೀ ಅನುಕೂಲವಾಗಲಿದೆ. ಇದಕ್ಕಾಗಿ ಟಾಟಾ ಪವರ್ ಹಲವು ಕಂಪನಿಗಳೊಂದಿಗೆ ಒಪ್ಪಂದ ಕೂಡ ಮಾಡಿಕೊಂಡಿದೆ.

Tata Power has started  1000 EV charging station across the country
Author
Bengaluru, First Published Oct 27, 2021, 2:58 PM IST

ದೇಶದ ಬಹುದೊಡ್ಡ ಕಂಪನಿಯಾಗಿರುವ ಟಾಟಾದ ಅಂಗ ಸಂಸ್ಥೆ, ಟಾಟಾ ಪವರ್ (TATA Power) ಸದ್ಯ ರಾಷ್ಟ್ರವ್ಯಾಪಿ 1000 ಎಲೆಕ್ಟ್ರಿಕ್ ವೆಹಿಕಲ್ (EV) ಚಾರ್ಜಿಂಗ್ ಸ್ಟೇಷನ್‌ಗಳ ಜಾಲವನ್ನು ನಿರ್ವಹಿಸುತ್ತಿದೆ. ಆ ಮೂಲಕ ಎಲೆಕ್ಟ್ರಿಕ್ ವಾಹನಗಳಿಗೆ (Electric Vehicles) ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುತ್ತಿದೆ. ಇದರಿಂದ ಇವಿ ವಾಹನಗಳ ಮಾಲೀಕರಿಗೆ ತುಂಬ ನೆರವಾಗಲಿದೆ.

ಎಂಟ್ರಿ ಕೊಟ್ಟ ಪಂಚ್, ಈ ಕಾರಿಗೆ ಅತಿ ಹೆಚ್ಚು ಬುಕ್ಕಿಂಗ್! 

ಕಚೇರಿಗಳು, ಮಾಲ್‌(Mall)ಗಳು, ಹೋಟೆಲ್‌ (Hotel)ಗಳು, ರಿಟೇಲ್ ಔಟ್‌ಲೆಟ್‌ (Retail Outlet)ಗಳು ಮತ್ತು ಸಾರ್ವಜನಿಕ ಪ್ರವೇಶ ಸ್ಥಳಗಳಲ್ಲಿ  ಸ್ಥಾಪನೆಯಾಗಿರುವ ಈ EV ಚಾರ್ಜಿಂಗ್ ಸ್ಟೇಷನ್‌ಗಳು (Charging Stations) ಟಾಟಾ ಪವರ್ ಗ್ರಾಹಕರಿಗೆ ಸೃಜನಾತ್ಮಕ ಮತ್ತು ಸುಗುಮ ಇವಿ ಚಾರ್ಜಿಂಗ್ ಅನುಭವಗಳನ್ನು ನೀಡಲಿದೆ. ಇದರಿಂದ ಗ್ರಾಹಕರಿಗೆ ಯಾವುದೇ ತಡೆ ಇಲ್ಲದೇ ಸೇವೆ ದೊರೆಯಲಿದೆ. ಇದಲ್ಲದೆ, EV ಕಾರು ಮಾಲೀಕರಿಗೆ EV ಚಾರ್ಜಿಂಗ್ ಅನ್ನು ಇನ್ನಷ್ಟು ಸುಗುಮಗೊಳಿಸುವುದಕ್ಕಾಗಿ  ಸುಮಾರು 10,000 ಗೃಹಬಳಕೆಯ EV ಚಾರ್ಜಿಂಗ್ ಔಟ್‌ಲೆಟ್‌ಗಳಿರಲಿವೆ. ಟಾಟಾ ಪವರ್ ಇಝಡ್ ಚಾರ್ಜರ್ಸ್, ಸಾರ್ವಜನಿಕ ಚಾರ್ಜರ್‌ಗಳು, ಕ್ಯಾಪ್ಟಿವ್ ಚಾರ್ಜರ್‌ಗಳು, ಬಸ್/ಫ್ಲೀಟ್ ಚಾರ್ಜರ್‌ಗಳು ಮತ್ತು ಹೋಮ್ ಚಾರ್ಜರ್‌ಗಳನ್ನು ನೀವು ಈ ವ್ಯವಸ್ಥೆಯಲ್ಲಿ ಕಾಣಬಹುದಾಗಿದೆ. 

ಟಾಟಾ ಪವರ್ ಇವಿ (Tata Power) ಚಾರ್ಜಿಂಗ್ ಪಾಯಿಂಟ್‌ಗಳು ಪ್ರಸ್ತುತ ನಾನಾ ರಾಜ್ಯಗಳ 180 ನಗರಗಳಲ್ಲಿ ಮತ್ತು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು, ವಿವಿಧ ವ್ಯಾಪಾರ ಮಾದರಿಗಳು ಮತ್ತು ಮಾರುಕಟ್ಟೆಗಳ ಬಳಿ ಲಭ್ಯವಿವೆ. ಮುಂಬೈನಲ್ಲಿ ಮೊದಲ ಚಾರ್ಜರ್‌ಗಳನ್ನು ಸ್ಥಾಪಿಸುವುದರೊಂದಿಗೆ ಟಾಟಾ ವಪರ್ ಇವಿ ಚಾರ್ಜಿಂಗ್ ಕೆಲಸ ಆರಂಭವಾಗಿದ್ದು, ಇದೀಗ ದೇಶಾದ್ಯಂತ ತನ್ನ ಕಾರ್ಯವನ್ನು ವಿಸ್ತರಿಸುತ್ತಿದೆ. ಕಂಪನಿಯು 10,000 ಚಾರ್ಜಿಂಗ್ ಸ್ಟೇಷನ್‌ಗಳ ಜಾಲವನ್ನು ನಿರ್ಮಿಸಲು ಉದ್ದೇಶಿಸಿದೆ ಮತ್ತು ಈ ಮೂಲಕ ರಸ್ತೆಮಾರ್ಗ ವಿಭಾಗಗಳನ್ನು ದೇಶಾದ್ಯಂತ ಇ-ಹೈವೇಗಳಾಗಿ ಪರಿವರ್ತಿಸಲಿದೆ.

ಥಾರ್ ಪೂರ್ತಿ ಬಚ್ಚನ್ ಸಿನಿಮಾಗಳ ಡೈಲಾಗ್, ಡ್ಯಾಶ್‌ಬೋರ್ಡ್ ಮೇಲೆ ಅಮಿತಾಭ್ ಆಟೋಗ್ರಾಫ್ 

EV ಚಾರ್ಜಿಂಗ್ ಮೂಲಸೌಕರ್ಯವನ್ನು ಒದಗಿಸಲು ಟಾಟಾ ಪವರ್ ಮೂಲ ಸಲಕರಣೆ ತಯಾರಕ (OEMs)ರೊಂದಿಗೆ ಕೆಲಸ ಮಾಡುತ್ತದೆ.  ಮತ್ತು ದೇಶದ ಇನ್ನೂ ಅನೇಕ ನಗರಗಳಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸುವ ಯೋಜನೆಯನ್ನು ಹಾಕಿಕೊಂಡಿದೆ. ಇದು ತನ್ನ ಗ್ರಾಹಕರು ಮತ್ತು ವಿತರಕರಿಗೆ EV ಚಾರ್ಜಿಂಗ್ ಮೂಲಸೌಕರ್ಯವನ್ನು ಒದಗಿಸಲು ಟಾಟಾ ಮೋಟಾರ್ಸ್ ಲಿಮಿಟೆಡ್, MG ಮೋಟಾರ್ಸ್ ಇಂಡಿಯಾ ಲಿಮಿಟೆಡ್, ಜಾಗ್ವಾರ್ ಲ್ಯಾಂಡ್ ರೋವರ್, TVS ಮತ್ತು ಇತರ ಕಂಪನಿಗಳೊಂದಿಗೆ ಸಹಯೋಗ ಹೊಂದಿದೆ. ಹಲವಾರು ರಾಜ್ಯ ಸಾರಿಗೆ ಸೌಲಭ್ಯಗಳೊಂದಿಗೆ ಸಹಭಾಗಿತ್ವವು ಇ-ಬಸ್ ಚಾರ್ಜಿಂಗ್ ಅನ್ನು ಸಾಧ್ಯವಾಗಿಸಲಿದೆ. ಆ ಮೂಲಕ  ಇದು ಹಸಿರು ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚಿಸಲು ಸಹಾಯ ಮಾಡಲಿದೆ.

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಹೆಚ್ಚುತ್ತಿದೆ. ಹಾಗಾಗಿ ಕಂಪನಿಯು ಈಗ ಈಗ ಎಲೆಕ್ಟ್ರಿಕ್ 3-ವೀಲರ್ ಮತ್ತು 2-ವೀಲರ್ ಚಾರ್ಜಿಂಗ್ ಕ್ಷೇತ್ರಗಳಿಗೆ ತನ್ನ ಕಾರ್ಯವನ್ನು ವಿಸ್ತರಿಸಿಕೊಳ್ಳಲಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ವಿಶ್ವದ ಅತಿದೊಡ್ಡ ತಯಾರಕರಲ್ಲಿ ಒಂದಾಗಿರುವ ಟಾಟಾ ಪವರ್ ಮತ್ತು ಟಿವಿಎಸ್ ಮೋಟಾರ್ ಕಂಪನಿಯು ಈ ತಿಂಗಳ ಆರಂಭದಲ್ಲಿ ಭಾರತದಾದ್ಯಂತ ಇವಿಸಿಐನ ವ್ಯಾಪಕ ನಿಯೋಜನೆಯನ್ನು ಮುನ್ನಡೆಸಲು ಮತ್ತು ಟಿವಿಎಸ್ ಮೋಟಾರ್ ಸೌಲಭ್ಯಗಳಲ್ಲಿ ಸೌರಶಕ್ತಿ ತಂತ್ರಜ್ಞಾನವನ್ನು ಸ್ಥಾಪಿಸಲು ಕಾರ್ಯತಂತ್ರದ ಒಪ್ಪಂದಕ್ಕೆ ಸಹಿ ಹಾಕಿದೆ.

ಟಾಟಾ ಪವರ್ ಇವಿ ಚಾರ್ಜಿಂಗ್ ಗ್ರಾಹಕರಿಗೆ ಅತ್ಯಾಧುನಿಕ ಸಾಫ್ಟ್ವೇರ್ ಪ್ಲಾಟ್ಫಾರ್ಮ್ ಅನ್ನು ಸಹ ರಚಿಸಿದೆ. ನ್ನ ಗ್ರಾಹಕರಿಗೆ ತ್ವರಿತ ಮತ್ತು ನೇರ ಚಾರ್ಜಿಂಗ್ ಅನುಭವವನ್ನು ಒದಗಿಸಲು ಮೊಬೈಲ್ ಆಧಾರಿತ ಅಪ್ಲಿಕೇಶನ್ (ಟಾಟಾ ಪವರ್ ಇಜೆಡ್ಚಾರ್ಜ್) ಅನ್ನು ತಯಾರಿಸಿದೆ. EV ಚಾರ್ಜಿಂಗ್ ಸ್ಟೇಷನ್ಗಳನ್ನು ಅನ್ವೇಷಿಸಲು, EV ಗಳನ್ನು ಚಾರ್ಜ್ ಮಾಡಲು ಮತ್ತು ಆನ್ಲೈನ್ ಬಿಲ್ ಪಾವತಿಗಳನ್ನು ಮಾಡಲು ಸಹಾಯ ಮಾಡುವಲ್ಲಿ ಈ ಅಪ್ಲಿಕೇಶನ್ ವಿಶಿಷ್ಟವಾಗಿದೆ.

ಮಾರುತಿಯಿಂದ ಬಲೆನೋ ಆಧರಿತ SUV: ಇದು ಪಂಚ್‌ನ ಪ್ರತಿಸ್ಪರ್ಧಿ 

Follow Us:
Download App:
  • android
  • ios