ಮಾರುತಿಯಿಂದ ಬಲೆನೋ ಆಧರಿತ SUV: ಇದು ಪಂಚ್‌ನ ಪ್ರತಿಸ್ಪರ್ಧಿ
ಮಾರುತಿ ಸುಜುಕಿ (Maruti Suzuki) ಕಂಪನಿಯು ಬಲೆನೋ (Baleno) ವಿನ್ಯಾಸದ ಆಧರಿತ ಸಬ್ ಕಾಂಪಾಕ್ಟ್ ಎಸ್‌ಯುವಿ ಅಭಿವೃದ್ಧಿಪಡಿಸುತ್ತಿದ್ದು, ಇದು ಟಾಟಾ ಕಂಪನಿಯ ಪಂಚ್(PUNCH)ಗೆ ತೀವ್ರ ಸ್ಪರ್ಧೆಯೊಡ್ಡುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಈ ಕಂಪನಿಯು ವೈಟಿಬಿ ಎಂಬ ಕೋಡ್ ನೇಮ್ ಹೆಸರಿನಲ್ಲಿ ಈ SUVಯನ್ನು ಉತ್ಪಾದಿಸುತ್ತಿದೆ.
ಎರಡ್ಮೂರು ತಿಂಗಳಿಂದ ಟಾಟಾ ಮೋಟಾರ್ಸ್ (Tata Motors)ನ ಹೊಸ ಮೈಕ್ರೋ ಎಸ್‌ಯುವಿ ಪಂಚ್ (PUNCH)ನದ್ದೇ ಹವಾ. ಅಕ್ಟೋಬರ್ 18ರಂದು ಅಧಿಕೃತವಾಗಿ ಬಿಡುಗಡೆಯಾಗಿರುವ ಈ ಪಂಚ್‌ಗೆ ಜನ ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ. ಹಾಗಾಗಿಯೇ, ಟಾಟಾ ಕಂಪನಿಯು ಇದುವರೆಗಿನ ವಾಹನಗಳ ಪೈಕಿ ಪಂಚ್‌ಗೆ ಅತಿ ಹೆಚ್ಚು ಬುಕ್ಕಿಂಗ್ ಸಿಕ್ಕಿದೆ. ಆದರೆ, ಪಂಚ್‌ಗೆ ಪಂಚ್ ನೀಡಲು ಮಾರುತಿ ಸುಜುಕಿ (Maruti Suzuki) ಕೂಡ ಪ್ಲ್ಯಾನ್ ಮಾಡಿಕೊಂಡಿರುವಂತಿದೆ!
ಕೆಲವು ಮಾಧ್ಯಮಗಳ ವರದಿ ಪ್ರಕಾರ ಈ ಸುದ್ದಿ ನಿಜ. ದೇಶದ ಬಹುದೊಡ್ಡ ವಾಹನ ಉತ್ಪಾದಕ ಕಂಪನಿಯಾಗಿರುವ ಮಾರುತಿ ಸುಜುಕಿ ಕಂಪನಿಯು, ಟಾಟಾ ಪಂಚ್‌ಗೆ ಪೈಪೋಟಿ ನೀಡಬಲ್ಲ ಮೈಕ್ರೋ ಎಸ್‌ಯುವಿಯನ್ನು ಬಲೆನೋ (Baleno) ಆಧರಿತವಾಗಿ ರೂಪಿಸಲಿದೆ ಎನ್ನಲಾಗಿದೆ.
ಎಂಟ್ರಿ ಕೊಟ್ಟ ಪಂಚ್, ಈ ಕಾರಿಗೆ ಅತಿ ಹೆಚ್ಚು ಬುಕ್ಕಿಂಗ್!
ತೀವ್ರ ಸ್ಪರ್ಧೆಯ ನಡುವೆಯೂ ಸಣ್ಣ ಕಾರುಗಳ ಸೆಗ್ಮೆಂಟ್‌ನಲ್ಲಿ ಮಾರುತಿ ಸುಜುಕಿ ಜಬರ್ದಸ್ತ್ ಮಾರುಕಟ್ಟೆಯ ಪಾಲನ್ನು ಹೊಂದಿದೆ. ಆದರೆ, ಈ ಹಬ್ಬದ ಸೀಸನ್ ಅಥವಾ ಈ ವರ್ಷ ಅಂಥ ಹೊಸ ಕಾರ್‌ಗಳಾಗಲೀ, ಹೆಚ್ಚಿನ ಅಪ್‌ಡೇಟ್ ಕಾರುಗಳನ್ನಾಗಲಿ ಮಾರುತಿ (Maruti) ಬಿಡುಗಡೆ ಮಾಡಿಲ್ಲ. ಹೊಸ ತಲೆಮಾರಿನ ಸೆಲೆರಿಯೂ (Celerio) ಬಿಡುಗಡೆಯ ಬಗ್ಗೆಯೂ ಯಾವುದೇ ಖಚಿತವಾದ ಮಾಹಿತಿ ಇಲ್ಲ. ಎಂಟ್ರಿ ಲೇವಲ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಪಂಚ್ (PUNCH) ಹೆಚ್ಚಿನ ಪಾಲು ಪಡೆಯುವ ಸಾಧ್ಯತೆ ಇದೆ. ಹಾಗಾಗಿ, ಕಂಪನಿಯು ಬಹುಶಃ ಈ ಸೆಗ್ಮೆಂಟ್‌ನಲ್ಲಿ ಬಲೆನೋ (Baleno) ಆಧರಿತ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುತ್ತಿದೆ ಎನ್ನಲಾಗಿದೆ.
ಮಾಧ್ಯಮಗಳ ವರದಿಯ ಪ್ರಕಾರ, ಮಾರುತಿ ಸುಜುಕಿ ಕಂಪನಿಯು ವಿಟಾರಾ ಬ್ರೆಜಾ (Vitara Brezza) ಗಿಂತ ಕಡಿಮೆ ಹಂತದ ಮತ್ತು ಎಸ್ ಪ್ರೆಸ್ಸೋ (S-Presso) ಗಿಂತ ಮೇಲ್ಮಟ್ಟದ ಎಸ್‌ಯುವಿಯನ್ನು ಹೊರತರುವ ಸಂಬಂಧ ಮಾರುತಿ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಈ ಮಾಹಿತಿಯನ್ನು ನೋಡಿದರೆ, ಖಂಡಿತವಾಗಿಯೂ ಈ ಎಸ್‌ಯುವಿ ನಾಲ್ಕು ಮೀಟರ್ ವಾಹನವೇ ಆಗಿರುತ್ತದೆ. ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ಈ ವಾಹನಕ್ಕೆ ವೈಟಿಬಿ (YTB) ಎಂಬ ಕೋಡ್ ನೇಮ್ ಇಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮಾರುತಿಯ ಆಫ್‌ರೋಡ್ ಎಸ್‌ಯುವಿ Jimny ಬಿಡುಗಡೆಗೆ ಸಜ್ಜಾಗಿದೆಯಾ?
ವೈಟಿಬಿ ಕೋಡ್‌ನೇಮ್ ಹೊಂದಿರುವ ಈ ಎಸ್‌ಯುವಿ ವಿನ್ಯಾಸವು ಹೆಚ್ಚು ಕಡಿಮೆ ಬಲೆನೋ ರೀತಿಯಲ್ಲೇ ಇರಲಿದೆ. ಹಾಗೆಯೇ ಈ ವಾಹನವನ್ನು ಹಾರ್ಟೆಕ್ಟ್ (Heartect) ಪ್ಲಾಟ್‌ಫಾರ್ಮ್‌ನಲ್ಲಿ ಉತ್ಪಾದನೆಯಾಗಲಿದೆ. ಹಾಗಾಗಿ, ಖಂಡಿತವಾಗಿಯೂ ಕಾರ್ ಬಿಲ್ಡ್ ಕ್ವಾಲಿಟಿ ಚೆನ್ನಾಗಿಯೇ ಇರುತ್ತದೆ ಎಂದು ಭಾವಿಸಬಹುದಾಗಿದೆ. ಈಗಾಗಲೇ ಜನಪ್ರಿಯ ಗಳಿಸಿರುವ ಎಸ್ ಪ್ರೆಸ್ಸೋ (S-Presso), ಇಗ್ನಿಸ್ (Ingnis), ಎರ್ಟಿಗಾ (Ertiga) ಮತ್ತು ಎಕ್ಸ್‌ಎಲ್ 6 (XL6) ಹಾಗೂ ಇತರ ವಾಹನಗಳು ಇದೇ ಹಾರ್ಟ್‌ಟೆಕ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿವೆ.
ಇನ್ನು ಎಂಜಿನ್ ಬಗ್ಗೆ ಹೇಳುವುದಾದರೆ, ಈ ಹೊಸ ಎಸ್‌ಯುವಿಯಲ್ಲಿ ವಿಟಾರಾ ಬ್ರೆಜಾದಲ್ಲಿ ಬಳಕೆಯಾಗಿರುವ 1.2 ಎಂಜಿನ್ ಅನ್ನೇ ಕಂಪನಿಯು ಬಳಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಕಂಪನಿಯು ಈವರೆಗೂ ಈ ಹೊಸ ಎಸ್‌ಯುವಿ ಉತ್ಪಾದನೆಯ ಬಗ್ಗೆ ಯಾವುದೇ ಮಾಹಿತಿಯನ್ನು ಖಚಿತಪಡಿಸಿಲ್ಲ. ಜೊತೆಗೆ, ಈ ಎಸ್‌ಯುವಿ ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ ಎನ್ನಲಾಗುತ್ತಿದೆ.
ಮುಂದಿನ ತಿಂಗಳು ಬಿಡುಗಡೆಯಾಗುತ್ತಾ ಮಾರುತಿಯ ಹೊಸ ತಲೆಮಾರಿನ ಸೆಲೆರಿಯೋ?
ಟಾಟಾ ಪಂಚ್ ಬಿಡುಗಡೆಯೊಂದಿಗೆ ಮೈಕ್ರೋ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಸಿಕ್ಕಾಪಟ್ಟೆ ಸ್ಪರ್ಧೆ ಏರ್ಪಟ್ಟಿದೆ. ಈಗಾಗಲೇ ನಿಸ್ಸಾನ್ ಮ್ಯಾಗ್ನೈಟ್ (Nissan Magnite), ರೆನೋ ಕೈಗರ್ (Renault Kiger) ಹಾಗೂ ತುಸು ಹೆಚ್ಚು ಪ್ರೀಮಿಯಂ ಎನಿಸಿಕೊಂಡಿರುವ ಕಿಯಾ ಸೋನೆಟ್ (Kia Sonet), ಮಹಿಂದ್ರಾ ಎಕ್ಸ್‌ಯುವಿ300 (Mahindra XUV300), ಹುಂಡೈ ವೆನ್ಯೂ (Hyundai Venue), ಟಾಟಾ ನೆಕ್ಸಾನ್ ಸೇರಿದಂತೆ ಸಾಕಷ್ಟು ಆಯ್ಕೆಯಗಳಿವೆ.