ಎಂಟ್ರಿ ಕೊಟ್ಟ ಪಂಚ್, ಈ ಕಾರಿಗೆ ಅತಿ ಹೆಚ್ಚು ಬುಕ್ಕಿಂಗ್!

ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ ಟಾಟಾ ಮೋಟರ್ಸ್ (Tata Motors) ಕಂಪನಿಯ ಮೈಕ್ರೋ ಎಸ್‌ಯುವಿ ಪಂಚ್ (PUNCH) ಮಾರುಕಟ್ಟೆಗೆ ಲಗ್ಗೆ ಹಾಕಿದೆ. ಈ ಕಾರಿನ ಬೆಲೆ 5.49 ಲಕ್ಷ ರೂಪಾಯಿಂದ ಆರಂಭವಾಗುತ್ತದೆ. ಈಗಾಗಲೇ ಅತಿ ಹೆಚ್ಚು ಪ್ರಿ-ಬುಕ್ಕಿಂಗ್ ಪಡೆದುಕೊಂಡಿರುವ ಪಂಚ್, ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಗರಿಷ್ಠ 5 ಸ್ಟಾರ್ ಪಡೆದುಕೊಂಡಿದ್ದು, ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

Tata Motors Punch Micro SUV launched

ಕಳೆದ ಕೆಲವು ದಿನಗಳಿಂದ ಭಾರೀ ಸುದ್ದಿಯಲ್ಲಿರುವ ಟಾಟಾ ಮೋಟಾರ್ಸ್‌ (Tata Motors)ಪಂಚ್ (PUNCH) ಅಧಿಕೃತವಾಗಿ ಮಾರಕಟ್ಟೆಗೆ ಎಂಟ್ರಿ ಕೊಟ್ಟಿದೆ. ಮೈಕ್ರೋ ಎಸ್‌ಯುವಿ (Micro SUV) ಆಗಿರುವ  ಪಂಚ್, ಈ ಸೆಗ್ಮೆಂಟ್‌ನಲ್ಲಿ ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ಕಾರ್ ಎನಿಸಿಕೊಂಡಿದೆ. ಈಗಾಗಲೇ ಪಂಚ್ ಬಗ್ಗೆ ಸಾಕಷ್ಟು ಮಾಹಿತಿಗಳು ಹರಿದಾಡುತ್ತಿದ್ದವು. ಅಂದ ಹಾಗೆ, ಟಾಟಾ ಮೋಟರ್ಸ್‌ನ ಈ ಪಂಚ್ ಮೈಕ್ರೋ ಎಸ್‌ಯುವಿ ಕಾರ್ ಬೆಲೆ 5.49 ಲಕ್ಷ ರೂ.ನಿಂದ ಆರಂಭವಾಗಿ 9.09 ಲಕ್ಷ ರೂಪಾಯಿವರೆಗೂ ಇದೆ. ಈ ಬೆಲೆ ಎಕ್ಸ್‌ಶೋರೂಂ ಬೆಲೆಯಾಗಿದ್ದು, ಬೇರೆ ಬೇರೆ ರಾಜ್ಯಗಳಲ್ಲಿ ಆನ್‌ರೋಡ್ ಬೆಲೆ (On road Price) ವ್ಯತ್ಯಾಸವಾಗಲಿದೆ.

ಟಾಟಾ ಕಂಪನಿಯು ಇತರೆ ಯಾವುದೇ ಕಾರಿಗಿಂತ ಅತಿ ಹೆಚ್ಚಿನ ಪ್ರಮಾಣದಲ್ಲಿ ಪಂಚ್‌ ಬುಕ್ಕಿಂಗ್ ಪಡೆದುಕೊಂಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಕ್ಟೋಬರ್ 4ರಿಂದಲೇ ಕಂಪನಿ ಪಂಚ್‌ಗೆ ಪ್ರಿ ಬುಕ್ಕಿಂಗ್ ಆರಂಭಿಸಿತ್ತು. ಈಗ ಕಾರ್ ಲಾಂಚ್ ಆಗಿರುವುದರಿಂದ ಬುಕ್ಕಿಂಗ್ ಪ್ರಮಾಣ ಇನ್ನೂ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.

MG ಮೋಟಾರ್ ಆಸ್ಟರ್ SUV ಕಾರು ಬಿಡುಗಡೆ,ಬೆಲೆ ಕೇವಲ ರೂ 9.78 ಲಕ್ಷ ರೂ!

ಮೈಕ್ರೋ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಮಾರುತಿ ಸುಜುಕಿ ಇಗ್ನಿಸ್ (Ignis), ರೆನೋ ಕೈಗರ್ (Kiger), ನಿಸ್ಸಾನ್ ಮ್ಯಾಗ್ನೈಟ್ (Magnite) ಹಾಗೂ ಮುಂಬರಲಿರುವ ಹುಂಡೈನ ಕ್ಯಾಸ್ಪರ್‌ (Casper), ಸಿಟ್ರೋನ್ ಸಿ3 (Citroen C3)ಗೆ ತೀವ್ರ ಪೈಪೋಟಿ ನೀಡಲಿದೆ. ಪಂಚ್ ಗ್ರಾಹಕರಿಗೆ ಏಳು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಏಳು ಟ್ರಿಮ್‌ಗಳಲ್ಲಿ ಸಿಂಗಲ್-ಎಂಜಿನ್ ಆಯ್ಕೆಯೊಂದಿಗೆ ಮ್ಯಾನುಯಲ್ ಮತ್ತು ‌ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಪಂಚ್ ಮಾರಾಟವಾಗಲಿದೆ. 

ಟಾಟಾ ಮೋಟರ್ಸ್‌ನ ಈ ಮೈಕ್ರೋ ಎಸ್‌ಯುವಿ ತನ್ನ ಗಟ್ಟಿಮುಟ್ಟಾದ ಬಾಡಿಗೂ ಹೆಚ್ಚು ಚರ್ಚಿತವಾಗಿದೆ. ಈ ಹಿನ್ನೆಲೆಯಲ್ಲಿ ಗ್ಲೋಬಲ್ ಎನ್‌ಸಿಎಪಿ (Global NCAP)ಯ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಪಂಚ್, 5 ಸ್ಟಾರ್ ಗಳಿಸಿದೆ. ಆ ಮೂಲಕ ಈ ಸೆಗ್ಮೆಂಟ್‌ನಲ್ಲಿ ಸುರಕ್ಷತೆ ಸಂಬಂಧಿಸಿದಂತೆ ತನ್ನ ಇತರ ಎಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿದೆ ಪಂಚ್. ಈ ಮೈಕ್ರೋ ಎಸ್‌ಯುವಿ ಟಾಟಾ ಕಂಪನಿಯ ಉತ್ಪನ್ನಗಳಲ್ಲಿ ಸಣ್ಣ ಎಸ್‌ಯುವಿಯಾಗಿದ್ದು, ನೆಕ್ಸಾನ್ (Nexon) ನಂತರದ ಸ್ಥಾನದಲ್ಲಿದೆ. 

ಮಾರುತಿಯ ಆಫ್‌ರೋಡ್ ಎಸ್‌ಯುವಿ Jimny ಬಿಡುಗಡೆಗೆ ಸಜ್ಜಾಗಿದೆಯಾ?    

ಪಂಚ್ ಮೈಕ್ರೋ ಎಸ್‌ಯುವಿ ಕಾರನ್ನು ಕಂಪನಿಯು ALFA-ARC (Agile Light Flexible Advanced Architecture) ಪ್ಲಾಟ್‌ಫಾರ್ಮಾನಲ್ಲಿ ನಿರ್ಮಿಸಲಾಗಿದೆ. ಜೊತೆಗೆ ಇಂಪ್ಯಾಕ್ಟ್ 2.0 ಡಿಸೈನ್ ಲ್ಯಾಂಗ್ವೆಜ್‌ನಡಿಯಲ್ಲಿ ಈ ಎಸ್‌ಯುವಿಯನ್ನು ವಿನ್ಯಾಸ ಮಾಡಲಾಗಿದೆ. ಪಂಚ್‌ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸವು ಅತ್ಯಾಕರ್ಷಕವೂ, ಅತ್ಯಾಧುನಿಕವೂ ಹಾಗೂ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ರೂಪಿಸಲಾಗಿದೆ. ಈಗಾಗಲೇ, ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿದೆ ಈ ಕಾರಿಗೆ.

"

ಪಂಚ್‌ನ ಫ್ರಂಟ್ ಗೇಟ್ಸ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಡಿಆರ್‌ಎಲ್ ಎಲ್ಇಡಿ ಮತ್ತು ಎಲ್‌ಇಡಿ ಟೇಲ್ ಲ್ಯಾಂಪ್‌ಗಳು ಒಟ್ಟು ಸೌಂದರ್ಯವನ್ನು ಹೆಚ್ಚಿಸಿವೆ. ಡೈಮಂಡ್ ಕಟ್ 16 ಅಲಾಯ್ ವ್ಹೀಲ್‌ಗಳಿವೆ. ಡ್ಯುಯೆಲ್ ಟೋನ್ ರೂಫ್ ರೇಲ್‌ಗಳನ್ನು ಕಾಣಬಹುದು. ಮುಂಭಾಗದಲ್ಲಿ ಟಾಟಾ ಹ್ಯೂಮಾನಿಟಿ ಲೈನ್ ಗ್ರಿಲ್ ನೋಡಬಹುದು. 187 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಇದೆ. ಪಂಚ್‌ಗೆ ಅಳವಡಿಸಲಾಗಿರುವ ಬಾಗಿಲು,ಚಕ್ರದ ಕಮಾನುಗಳು ಹಾಗೂ ಸಿಲ್ ಕ್ಲಾಡಿಂಗ್ ಒಟ್ಟು ಎಸ್‌ಯುವಿ ಲುಕ್ ತಂದು ಕೊಟ್ಟಿವೆ. 

ಹೊಸ ಮಹೀಂದ್ರಾ ಯುವೋ ಟೆಕ್ + ಟ್ರಾಕ್ಟರ್‌ಗಳು ಬಿಡುಗಡೆ

1.2 ಲೀಟರ್ ರೆವೋಟ್ರಾನ್  ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, 5 ಸ್ಪೀಡ್ ಮ್ಯಾನುಯೆಲ್  ಹಾಗೂ ಎಎಂಟಿ ಗಿಯರ್ ಬಾಕ್ಸ್‌ ಇದೆ. ಈ ಎಂಜಿನ್ ಗರಿಷ್ಠ 86 ಬಿಎಚ್‌ಪಿ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯು Dyna-Pro ತಂತ್ರಜ್ಞಾನವನ್ನು ಈ ಎಂಜಿನ್‌ಗಳಿಸಿದೆ. ಕಾರಿನ ಒಳಾಂಗಣದಲ್ಲಿ ನೀವು 7 ಇಂಚ್ ಟಿಎಫ್‌ಟಿ (TFT) ಇನ್ಸುಟ್ರುಮೆಂಟ್ ಪ್ಯಾನೆಲ್ ಕಾಣಬಹುದು.

Latest Videos
Follow Us:
Download App:
  • android
  • ios