Asianet Suvarna News Asianet Suvarna News

ಥಾರ್ ಪೂರ್ತಿ ಬಚ್ಚನ್ ಸಿನಿಮಾಗಳ ಡೈಲಾಗ್, ಡ್ಯಾಶ್‌ಬೋರ್ಡ್ ಮೇಲೆ ಅಮಿತಾಭ್ ಆಟೋಗ್ರಾಫ್

ಬಾಲಿವುಡ್ ದಂತಕತೆ ಅಮಿತಾಭ್ ಬಚ್ಚನ್ (Amitabh Bachchan) ಅವರ ಅಭಿಮಾನಿಯೊಬ್ಬರು ತಮ್ಮ ಅಭಿಮಾನವನ್ನು ವಿಶಿಷ್ಟವಾಗಿ ಪ್ರದರ್ಶಿಸಿದ್ದಾರೆ. ಅಭಿಮಾನಿಯು ತನ್ನ ಹೊಸ ಥಾರ್ (Thar) ಎಸ್‌ಯುವಿ  ಮೇಲೆ ಬಚ್ಚನ್ ಅವರ ಸಿನಿಮಾದ ಪ್ರಸಿದ್ಧ ಸಂಭಾಷಣೆಗಳನ್ನು ಬರೆಸಿದ್ದಾರೆ. ಇದು ಅಮಿತಾಭ್ ಹಾಗೂ ಆನಂದ್ ಮಹೀಂದ್ರಾ (Anand Mahindra) ಅವರನ್ನು ಸೆಳೆದಿದೆ.

A fan painted Amitabh Bachchan films famous dialogues on his brand new Thar
Author
Bengaluru, First Published Oct 24, 2021, 3:48 PM IST
  • Facebook
  • Twitter
  • Whatsapp

ಅದೇ  ಬಾಲಿವುಡ್ (Bollywood) ಇರಲಿ, ಸ್ಯಾಂಡಲ್‌ವುಡ್ (Sandalwood) ಇರಲಿ. ಅಥವಾ ಇನ್ನಾವುದೇ ಸಿನಿಮಾರಂಗವೇ ಇರಲಿ. ಅಲ್ಲಿರುವ ಸೂಪರ್‌ಸ್ಟಾರ್‌(Super Stars)ಗಳಿಗೆ ಅಭಿಮಾನಿ(Fan)ಗಳ ಸಂಖ್ಯೆಗೇನೂ ಭರವಿರುವುದಿಲ್ಲ. ಈ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಮೇಲಿಟ್ಟಿರುವ ಅಭಿಮಾನವನ್ನು ನಾನಾ ರೀತಿಯಲ್ಲಿ  ಪ್ರದರ್ಶಿಸುತ್ತಾರೆ.

ಕೆಲವು ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಟಿಯ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ನಟನನ್ನು ನೋಡಲು ನೂರಾರು ಕಿ.ಮೀ. ನಡೆದುಕೊಂಡೇ ಬರುತ್ತಾರೆ. ಮತ್ತೆ ಕೆಲವರು ತಮ್ಮ ಮಕ್ಕಳಿಗೆ ನಟ, ನಟಿಯರ ಹೆಸರನ್ನು ಇಡುತ್ತಾರೆ... ಹೀಗೆ ನಾನಾ ರೀತಿಯಲ್ಲಿ ತಮ್ಮ ಅಭಿಮಾನವನ್ನು ಪ್ರದರ್ಶಿಸುತ್ತಾರೆ. ಜೊತೆಗೆ, ಜೊತೆಗೆ ಹೊಸ ಮಾರ್ಗಗಳನ್ನು ಇದಕ್ಕಾಗಿ ಶೋಧಿಸುತ್ತಲೇ ಇರುತ್ತಾರೆ.

ಮಾರುತಿಯಿಂದ ಬಲೆನೋ ಆಧರಿತ SUV: ಇದು ಪಂಚ್‌ನ ಪ್ರತಿಸ್ಪರ್ಧಿ 

ಅಮಿತಾಭ್ ಬಚ್ಚನ್ (Amitabh Bachchan) ಅವರು ಭಾರತದ ಬಹುದೊಡ್ಡ ನಟ. ಬಾಲಿವುಡ್‌ನ ಈ ನಟನಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಈ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗಾಗಿ ನಾನ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಹಾಗೆಯೇ, ಇಲ್ಲೊಬ್ಬ ಅಭಿಮಾನಿ ಅಮಿತಾಭ್ ಮೇಲಿನ ಅಭಿಮಾನವನ್ನು ತುಂಬ ವಿನೂತನವಾಗಿ ಪ್ರದರ್ಶಿಸಿದ್ದಾರೆ.

ಅಮಿತಾಭ್ ಬಚ್ಚನ್ ಅವರು ತಮ್ಮ ಇನ್ಸಾಟಾಗ್ರಾಮ್‌(Instagram)ನಲ್ಲಿ ತಮ್ಮ ಅಭಿಮಾನಿಯೊಬ್ಬನ ಬಗ್ಗೆ ಇಮೇಜ್ ಷೇರ್ ಮಾಡಿಕೊಂಡಿದ್ದಾರೆ. ಅಮಿತಾಭ್ ಅವರ ಈ ಅಭಿಮಾನಿ ತಮ್ಮ ನೂತನ ಬ್ರ್ಯಾಂಡ್ ನ್ಯೂ ಮಹೀಂದ್ರಾ ಥಾರ್ (Thar) ಎಸ್‌ಯುವಿ ಪೂರ್ತಿ, ಬಚ್ಚನ್ ಅವರ ಪ್ರಖ್ಯಾತ ಸಿನಿಮಾಗಳ ಸಂಭಾಷಣೆಗಳನ್ನು ಬರೆಸಿದ್ದಾರೆ!

 

 

 

ಇನ್ನೂ ಆಶ್ಚರ್ಯ ಎಂದರೆ, ಈ ವಿನೂತನ ವಿನ್ಯಾಸದ ಮಹೀಂದ್ರಾದ ಡ್ಯಾಸ್‌ಬೋರ್ಡ್ ಮೇಲೆ ಅಮಿತಾಭ್ ಬಚ್ಚನ್ ಅವರು ಆಟೋಗ್ರಾಫ್ (Autograph) ಹಾಕೋವರೆಗೂ ಆ ವಾಹನವನ್ನು ಚಲಾಯಿಸಲಾರೆ ಎಂದು ಅಭಿಮಾನಿ ಹೇಳಿಕೊಂಡಿದ್ದರು. ಥಾರ್ (Thar) ಎಸ್‌ಯುವಿ ಮೇಲೆ ಸಂಭಾಷಣೆಗಳನ್ನು ಬರೆಸಿದ್ದು ಮಾತ್ರವಲ್ಲದೇ ಈ ಅಭಿಮಾನಿ ತಮ್ಮ ಟಿ ಶರ್ಟ್ ಮೇಲೂ ಬಚ್ಚನ್ ಅವರು ಫೇಮಸ್ ಡಾಯಲಾಗ್‌ಗಳನ್ನು ಬರೆಸಿಕೊಂಡಿದ್ದಾರೆ. 

ಮುಂದಿನ ತಿಂಗಳು ಬಿಡುಗಡೆಯಾಗುತ್ತಾ ಮಾರುತಿಯ ಹೊಸ ತಲೆಮಾರಿನ ಸೆಲೆರಿಯೋ? 

ಈ ವಿಶೇಷ ಅಭಿಮಾನಿಯ ಪ್ರದರ್ಶನದ ಬಗ್ಗೆ ಅಮಿತಾಭ್ ಬಚ್ಚನ್ (Amitabh Bachchan) ಅವರು, “ಈ ಅಭಿಮಾನಿ ತಮ್ಮ ಥಾರ್  (Thar) ಎಸ್‌ಯುವಿ ಪೂರ್ತಿ ಡೈಲಾಗ್ ಬರೆಸಿದ್ದಾರೆ ಹಾಗೂ ಟಿಶರ್ಟ್ ಮೇಲೆ ಸಿನಿಮಾ ಹೆಸರು ಬರೆಸಿದ್ದಾರೆ. ನೀವು ಥಾರ್ ಡೋರ್ ಓಪನ್ ಮಾಡಿದರೆ, ಸೌಂಡ್ ಸಿಸ್ಟಮ್ ನನ್ನ ಚಿತ್ರದ ಸಂಭಾಷಣೆಗಳನ್ನು ಪ್ಲೇ ಮಾಡುತ್ತದೆ. ಇದು ಅದ್ಭುತ. ಆತ ಥಾರ್ ತೆಗೆದುಕೊಂಡಿದ್ದಾನೆ. ಆದರೆ, ನನ್ನ ಆಟೋಗ್ರಾಫ್ ಇಲ್ಲದೇ ಅದನ್ನು ಡ್ರೈವ್ ಮಾಡಿಲ್ಲ. ಹಾಗಾಗಿ, ನಾನು ಆಟೋಗ್ರಾಫ್ ಹಾಕಿದ್ದೇನೆ’’ ಎಂದು ಬರೆದುಕೊಂಡಿದ್ದಾರೆ.

ಅಮಿತಾಭ್ ಬಚ್ಚನ್ ಅವರ ಈ ಕಟ್ಟಾ ಅಭಿಮಾನಿಯ ಕೆಲಸವು ಮಹೀಂದ್ರಾ (Mahindra) ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ (Anand Mahindra) ಅವರನ್ನು ಸೆಳೆದಿದೆ. ಅವರು ಟ್ವಿಟರ್‌ (Twitter)ನ ತಮ್ಮ ಖಾತೆಯಲ್ಲಿ, ಈ ಫ್ಯಾನ್ ಮೊಮೆಂಟ್, ಅಮಿತಾಭ್ ಬಚ್ಚನ್ ಅವರ ಫೇಮಸ್ ಡೈಲಾಗ್  ನೆನಪಿಸುವಂತೆ ಮಾಡಿದೆ: ಆಜ್ ಮೇರೆ ಪಾಸ್ ಗಾಡಿ ಹೈ, ಬಾಂಗ್ಲಾ ಹೈ, ಪೈಸಾ ಹೈ, ತುಮ್ಹಾರೆ ಪಾಸ್ ಕ್ಯಾ ಹೈ? (ಈಗ ನನ್ನ ಹತ್ತಿರ ಗಾಡಿ ಇದೆ, ಬಂಗ್ಲೆ ಇದೆ, ಹಣ ಇದೆ. ನಿನ್ನ ಹತ್ತಿರ ಏನಿದೆ?) ಅನುರಾಗ್: ಮೇರೆ ಪಾಸ್ ಥಾರ್ ಪರ್ ಬಿಗ್ ಬಿ ಕಾ ಆಟೋಗ್ರಾಫ್ ಹೈ (ನನ್ನ ಬಳಿ ಥಾರ್ ಮೇಲೆ ಬಿಗ್ ಬಿ ಅವರ ಆಟೋಗ್ರಾಫ್ ಇದೆ) ಎಂದು ಬರೆದುಕೊಂಡಿದ್ದಾರೆ. 

2020ರ ಅಕ್ಟೋಬರ್ 2ರಂದು ಬಿಡುಗಡೆಯಾದ ಆಫ್‌ರೋಡ್ ಎಸ್‌ಯುವಿ ಥಾರ್, ಭಾರೀ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಮಹೀಂದ್ರ ಥಾರ್ 2020 ವಾಹನ ಬೆಲೆ 9.80 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್, ಕನ್ವರ್ಟಬಲ್ ಟಾಪ್ , ಇನ್ಫೋಟೈನ್ಮೆಂಟ್ ಫೀಚರ್ಸ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ.

2024ರ ಮೊದಲಾರ್ಧದಲ್ಲಿ ಶಿಯೋಮಿಯಿಂದ ಕಾರ್ ಉತ್ಪಾದನೆ! 

Follow Us:
Download App:
  • android
  • ios