Porn Video in Traffic ಟ್ರಾಫಿಕ್ ನಡುವೆ ಚಾಲಕನಿಂದ ಪೋರ್ನ್ ವೀಕ್ಷಣೆ, ಹಿಂಬದಿ ಬೈಕ್ ಸವಾರ ಹರಿಬಿಟ್ಟ ವಿಡಿಯೋ ವೈರಲ್!

  • ಟ್ರಾಫಿಕ್ ಒದ್ದಾಟ ಕಳೆಯಲು ಚಾಲಕನ ಚಾಲಾಕಿ ಐಡಿಯಾ
  • ಟ್ರಾಫಿಕ್ ನಡುವೆ ಕಾಲ ಕಳೆಯಲು ಅಶ್ಲೀಲ ವಿಡಿಯೋ ವೀಕ್ಷಣೆ
  • ಜಗಜ್ಜಾಹೀರಾಯ್ತು ಚಾಲಕನ ಪೋರ್ನ್ ವಿಡಿಯೋ ನೋಟ
Tesla driver caught watching porn video in middle of Traffic London video viral on Social Media ckm

ಲಂಡನ್(ಜ.20): ಸ್ಥಳದ ಅರಿವೇ ಇಲ್ಲದೆ ಪೋರ್ನ್ ವಿಡಿಯೋ ನೋಡಿ ಕೆಟ್ಟ ಹಲವು ಘಟನೆಗಳು ನಮ್ಮ ಕಣ್ಣಮುಂದಿದೆ. ಅದರಲ್ಲೂ ಕರ್ನಾಟಕದಲ್ಲಿ ರಾಜಕೀಯ ನಾಯಕರ ಪೋರ್ನ್ ವಿಡಿಯೋ(Porn Video) ಪ್ರಸಂಗಗಳು ಈಗಲೂ ಪ್ರಸ್ತಾಪವಾಗುತ್ತಲೇ ಇದೆ. ಈ ಸಾಲಿಗೆ ಸಾರ್ವಜನಿಕ ಸ್ಥಳದಲ್ಲಿ ಪೋರ್ನ್ ವಿಡಿಯೋ ನೋಡಿ ಇದೀಗ ಭಾರಿ ಮುಖಭಂಗಕ್ಕೆ ಒಳಗಾಗಿರುವ ಚಾಲಕನ ಘಟನೆ ಸೇರಿಕೊಂಡಿದೆ. ಟ್ರಾಫಿಕ್ ಕಿರಿಕಿರಿ ನಡುವೆ ಸಿಲುಕಿದ ಚಾಲಕ(Traffic Jam) ಕಾರಿನ ಇನ್ಫೋಟೈನ್ಮೆಂಟ್ ಸಿಸ್ಟಮ್‌ನಲ್ಲಿ ಫೋರ್ನ್ ವಿಡಿಯೋ ನೋಡಿದ ಘಟನೆ ವೈರಲ್ ಆಗಿದೆ.

ಈ ಘಟನೆ ನಡೆದಿರುವುದು ಲಂಡನ್‌ನಲ್ಲಿ(London). ಬೆಳಗ್ಗೆ ಕೆಂಟ್‌ನ ಸ್ವಾನ್ಸ್‌ಕಾಂಬ್ ಟ್ರಾಫಿಕ್ ರಸ್ತೆಯಲ್ಲಿ ವಾಹನಗಳು ಸಾಲು ಗಟ್ಟಿ ನಿಂತಿತ್ತು. ವಾಹನ ದಟ್ಟಣೆ ಹೆಚ್ಚಾಗಿದ್ದ ಕಾರಣ ಸದ್ಯಕ್ಕೆ ಸಿಗ್ನಲ್ ಗ್ರೀನ್ ಆಗುವ ಯಾವುದೇ ಲಕ್ಷಣಗಳು ಇರಲಿಲ್ಲ. ಬಹುತೇಕರು ತಮ್ಮ ವಾಹನಗಳನ್ನು ಆಫ್ ಮಾಡಿದ್ದರು. ಹಾರ್ನ್ ಶಬ್ದಗಳು ವಿಪರೀತ ಕೇಳಿಬರುತ್ತಿತ್ತು. ಈ ಟ್ರಾಫಿಕ್ ನಡುವೆ ಕಾಲ ಕಳೆಯುವುದೇ ಅತೀ ದೊಡ್ಡ ಸವಾಲು. ಆದರೆ ಟೆಸ್ಲಾ ಕಾರು ಚಾಲಕ(Tesla Car Drirver) ಮಾತ್ರ ಕಿಕ್ಕಿರದ ಟ್ರಾಫಿಕ, ವಾಹನ ದಟ್ಟಣೆಯನ್ನು ಅಸ್ವಾದಿಸುತ್ತಿದ್ದ. ಇದಕ್ಕೆ ಕಾರಣ ತನ್ನ ಕಾರಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್‌ನಲ್ಲಿ ಬಿಂದಾಸ್ ಆಗಿ ಪೋರ್ನ್ ವಿಡಿಯೋ ಹಾಕಿ ಮಜಾ ತೆಗೆದುಕೊಳ್ಳುತ್ತಿದ್ದ.

First Tesla Baby: ಆಟೋಪೈಲಟ್‌ನಲ್ಲಿ ಚಲಿಸುತ್ತಿದ್ದ ಟೆಸ್ಲಾ ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

ಟೆಸ್ಲಾ ಚಾಲಕನಿಗೆ ಟ್ರಾಫಿಕ್ ಸೇರಿದಂತೆ ಯಾವುದರ ಪರಿವೇ ಇರಲಿಲ್ಲ. ಕಾರಣ ಚಾಲಕನ ಸಂಪೂರ್ಣ ಗಮನ ಪೋರ್ನ್ ವಿಡಿಯೋದತ್ತ ನೆಟ್ಟಿತ್ತು. ಟೆಸ್ಲಾ ಚಾಲಕನ ಪೋರ್ನ್ ವಿಡಿಯೋ ನೋಟವನ್ನು ಕಾರಿನ ಹಿಂಭಾಗದಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಬೈಕ್ ಸವಾರ ಗಮಿನಿಸಿದ್ದಾನೆ.  ಚಾಲನಕ ಪೋರ್ನ್ ನೋಟದ ವಿಡಿಯೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾನೆ.

ಕೆಲವೇ ಕ್ಷಣಗಳಲ್ಲಿ ಚಾಲನಕ ಪೋರ್ನ್ ನೋಟ ವಿಡಿಯೋ ಲಂಡನ್ ಮಾಧ್ಯಮಗಳಲ್ಲಿ ವರದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಳಗ್ಗೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಯಾವುದೇ ಚಿಂತೆ ಚಾಲಕನಿಗಿಲ್ಲ. ಕಾರಣ ಚಾಲನಕ ನೋಟ ಅದಕ್ಕಿಂತ ಅದ್ಭುತವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಇದರ ಜೊತೆಗೆ ಈ ರೀತಿ ಪೋರ್ನ್ ವಿಡಿಯೋ ನೋಡಲು ಯುಕೆ ಮೋಟಾರ್ ಕಾಯ್ದೆಯಲ್ಲಿ ಅವಕಾಶವಿದೆಯಾ ಅನ್ನೋ ಕುರಿತು ಚರ್ಚೆಯಾಗುತ್ತಿದೆ.

2003ರಲ್ಲಿ ಕಾರಿನೊಳಗೆ ಚಾಲಕ ಮೊಬೈಲ್ ಬಳಕೆಯನ್ನು(Mobile Use) ಲಂಡನ್ ನಿಷೇಧಿಸಿದೆ. ಆದರೆ ಚಾಲಕನ ಕೈಗೆ ಕೆಸವಿಲ್ಲದ ಡಿವೈಸ್ ಬಳಸಬಹುದು ಎಂದು ಸೂಚಿಸಿದೆ. ಈ ರೀತಿಯಲ್ಲಿ ನೋಡಿದರೆ ಚಾಲನಕ ಟ್ರಾಫಿಕ್ ನಡುವೆ ಕಾರಿನ ಇನ್ಫೋಟೈನ್ಮೆಂಟ್ ಸಿಸ್ಟಮ್‌ನಲ್ಲಿ ಪೋರ್ನ್ ವಿಡಿಯೋ ನೋಡಿರುವುದು ನಿಯಮ ಉಲ್ಲಂಘನೆಯಲ್ಲ(Traffic Violation). ಆದರೆ ನೋಡಿರುವ ಸ್ಥಳ ಗಮನಿಸಲೇಬೇಕು.

Tesla Electric cars ಸುರಕ್ಷತಾ ಕಾರಣಕ್ಕಾಗಿ 4.75 ಲಕ್ಷ ಎಲೆಕ್ಟ್ರಿಕ್ ಕಾರುಗಳನ್ನು ಹಿಂಪಡೆದ ಟೆಸ್ಲಾ

ಇತ್ತೀಚೆಗೆ ಲಂಡನ್ ಮತ್ತಷ್ಟು ನಿರ್ಬಂಧ ಹೇರಿದೆ. ಡ್ರವಿಂಗ್ ವೇಳೆ ಕಾರಿನಲ್ಲಿರುವ ಇನ್ಫೋಟೈನ್ಮೆಂಟ್ ಸಿಸ್ಟಮ್ ಆಪರೇಟ್ ಮಾಡುವುದು, ಪ್ಲೇ ಲಿಸ್ಟ್ ಹಾಡುಗಳ ಹುಡುಕಾಟ ನಡೆಸುವುದು. ವಿಡಿಯೋ ಹಾಗೂ ಚಿತ್ರ ತೆಗೆಯುವುದು, ವಿಡಿಯೋ ಗೇಮ್ಸ್ ಆಡವುದು ಸೇರಿದಂತೆ ಹಲವು ಚಟುವಟಿಕೆಯನ್ನು ನಿಷೇಧಿಸಿದೆ.ಕಾರಿನ ಇನ್ಫೋಟೈನ್ಮೆಂಟ್ ಸಿಸ್ಟಮ್‌ನಲ್ಲಿ ನ್ಯಾವಿಗೇಶನ್ ಬಳಕೆ ಸೇರಿದಂತೆ ಕೆಲ ಚಟುವಟಿಕೆಗೆ ಅವಕಾಶವಿದೆ.

ಟೆಸ್ಲಾ ಕಾರಿನಲ್ಲಿ ಹಲವು ಸ್ವಾರಸ್ಯಕರ ಹಾಗೂ ಅಪರೂಪದ ಘಟನೆಗಳು ನಡೆದಿರುವುದು ವರದಿಯಾಗಿದೆ. ಕಳೆದ ವರ್ಷ ಟೆಸ್ಲಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮಗುವಿಗೆ ಜನ್ಮನೀಡಿದ ಘಟನೆ ನಡೆದಿತ್ತು. ಈ ರೀತಿಯ ಹಲವು ಘಟನೆಗಳು ಟೆಸ್ಲಾ ಕಾರಿನಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ.

Latest Videos
Follow Us:
Download App:
  • android
  • ios