Asianet Suvarna News Asianet Suvarna News

ಹೊಸ ಮಹೀಂದ್ರಾ ಯುವೋ ಟೆಕ್ + ಟ್ರಾಕ್ಟರ್‌ಗಳು ಬಿಡುಗಡೆ

ದೇಶದ ಪ್ರಮುಖ ವಾಹನ ಉತ್ಪಾದನೆಯ ಕಂಪನಿಗಳಲ್ಲಿ ಒಂದಾಗಿರುವ ಮಹಿಂದ್ರಾ ಕಂಪನಿಯು ಹೊಸ ತಲೆಮಾರಿನ ಯುವೋ ಟೆಕ್ ಪ್ಲಸ್ (Yuvo Tech+) ವ್ಯಾಪ್ತಿಯ ಟ್ರಾಕ್ಟರ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಂಪನಿಯು ಒಟ್ಟು ಮೂರು ಮಾಡೆಲ್‌ಗಳನ್ನು ಲಾಂಚ್ ಮಾಡಿದೆ. ಈ ಟ್ರಾಕ್ಟರ್‌ಗಳು ಸುಧಾರಿತ ತಂತ್ರಜ್ಞಾನದೊಂದಿಗೆ ಗಮನ ಸೆಳೆಯುತ್ತಿವೆ.

Mahindra launched Yuvo Tech+ range of tractors
Author
Bengaluru, First Published Oct 18, 2021, 3:31 PM IST

ಟ್ರಾಕ್ಟರ್ ಸೇರಿದಂತೆ ಕೃಷಿ ಸಂಬಂಧಿ ವಾಹನಗಳು, ಕೃಷಿ ಸಲಕರಣಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಮತ್ತು ಮಹೀಂದ್ರಾ (Mahindra and Mahindra) ಕಂಪನಿಯು ಹೊಸ ಟ್ರಾಕ್ಟರ್‌ (Tractor)ಗಳನ್ನು ಪರಿಚಯಿಸಲು ಮುಂದಾಗಿದೆ. ಈ ಬಗ್ಗೆ ಕಂಪನಿಯ ಮುಖ್ಯಸ್ಥ ಆನಂದ ಮಹೀಂದ್ರಾ (Aanand Mahindra) ಅವರು ಟ್ವೀಟ್ ಮಾಡಿ ಗಮನ ಸೆಳೆದಿದ್ದರು.

ಮಹೀಂದ್ರಾ ಕಂಪನಿಯು ಯುವೋ ಟೆಕ್ ಪ್ಲಸ್ (Yuvo Tech+) ವ್ಯಾಪ್ತಿಯ ಟ್ರಾಕ್ಟರ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಒಟ್ಟು ಮೂರು ಮಾಡೆಲ್‌ಗಳನ್ನು ಕಂಪನಿಯು ಬಿಡುಗಡೆ ಮಾಡಿದೆ. ಅವು; ಯುವೋ ಟೆಕ್ ಪ್ಲಸ್ 275 (Yuvo Tech+ 275), ಯುವೋ ಟೆಕ್ ಪ್ಲಸ್ 405 (Yuvo Tech+ 405), ಮತ್ತು ಯುವೋ ಟೆಕ್ ಪ್ಲಸ್ 415 (Yuvo Tech+ 415) ಮಾದರಿ ಟ್ರಾಕ್ಟರ್‌ಗಳಾಗಿವೆ.

ಟಾಟಾ ಪಂಚ್ ಕಾರಿಗೆ ಗರಿಷ್ಠ ಸುರಕ್ಷತೆ ಕಿರೀಟ, ಗ್ಲೋಬಲ್ NCAPನಿಂದ 5 ಸ್ಟಾರ್ ರೇಟಿಂಗ್

ಮಹೀಂದ್ರಾ ಕಂಪನಿಯು ಈ ಟ್ರಾಕ್ಟರ್‌ಗಳು ಹೊಸ ತಲೆಮಾರಿನ ಯುವೋ ಟ್ರಾಕ್ಟರ್ ಪ್ಲಾಟ್‌ಫಾರ್ಮ್‌ನಲ್ಲಿ ಸಿದ್ಧವಾಗಿವೆ. ಮಹೀಂದ್ರಾ ಕಂಪನಿಯ ಹೊಸ mZIP 
ಮೂರು ಸಿಲೆಂಡರ್  ಎಂಜಿನ್ ಅನ್ನು ಈ ಯುವೋ ಟೆಕ್ ಪ್ಲಸ್ 415 ಟ್ರಾಕ್ಟರ್‌ನಲ್ಲಿ ಬಳಸಲಾಗಿದೆ. ಈ ಶಕ್ತಿಶಾಲಿ ಎಂಜಿನ್ ಹೊಸ ಮಾದರಿಯ ಟ್ರಾಕ್ಟರ್‌ಗಳಿಗೆ ಹೊಸ ಪವರ್ ನೀಡಿವೆ. ಹೊಸ ತಂತ್ರಜ್ಞಾನವು ಈ ಟ್ರಾಕ್ಟರ್‌ಗಳನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿವೆ.

ಈಗಷ್ಟೇ  ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ಮಹೀಂದ್ರಾ ಟೆಕ್ ಪ್ಲಸ್ ವ್ಯಾಪ್ತಿಯ ಟ್ರಾಕ್ಟರ್‌ಗಳು 15 ಸ್ಪೀಡ್ ಟ್ರಾನ್ಸಿಮಿಷನ್ ಮತ್ತು 3 ಸ್ಪೀಡ್ ರೇಂಜ್ ಆಯ್ಕೆಯೊಂದಿಗೆ ಬರುತ್ತವೆ ಮತ್ತು ಇವು ಮಣ್ಣಿನ ಪ್ರಕಾರ ಮತ್ತು ಕೃಷಿ ಅನ್ವಯಿಕಗಳ ಆಧರಿತವಾಗಿವೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ. ಈ ಹೊಸ ಯುವೋ ಟೆಕ್ ಪ್ಲಸ್ ವ್ಯಾಪ್ತಿಯ ಟ್ರಾಕ್ಟರ್‌ಗಳು 1700 ಕೆಜಿ ಲಿಫ್ಟ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು,  ಭಾರವಾದ ಕೆಲಸಗಳನ್ನು ಆರಾಮ ಆಗಿ ನಿಭಾಯಿಸಬಲ್ಲವು.

MG ಮೋಟಾರ್ ಆಸ್ಟರ್ SUV ಕಾರು ಬಿಡುಗಡೆ,ಬೆಲೆ ಕೇವಲ ರೂ 9.78 ಲಕ್ಷ ರೂ!

ಈ ಯುವೋ ಟೆಕ್ ಪ್ಲಸ್ ಬ್ರ್ಯಾಂಡ್ ಟೆಕ್ನಾಲಜಿಯಲ್ಲಿ ನಂ.1 ಎಂಬ ಭರಸವೆಯನ್ನು ಮೂಡಿಸುತ್ತವೆ. ಸ್ಪರ್ಧಾತ್ಮಕ ಬೆಲೆ ಹಾಗೂ 6 ವರ್ಷಗಳ ವಾರಂಟಿಯನ್ನು ಹೊಂದಿರುವ ಈ ಟ್ರಾಕ್ಟರ್‌ಗಳನ್ನು ಗ್ರಾಹಕರು ಚೆನ್ನಾಗಿಯೇ ಸ್ವೀಕರಿಸುತ್ತಾರೆಂಬ ನಂಬಿಕೆ ಹಾಗೂ ವಿಶ್ವಾಸವಿದೆ ಎಂದು ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯ ಫಾರ್ಮಾ ಇಕ್ವಿಪ್‌ಮೆಂಟ್ ಸೆಕ್ಟರ್‌ನ ಅಧ್ಯಕ್ಷ ಹೇಮಂತ್ ಸಿಕ್ಕಾ (Hemant Sikka) ಹೇಳಿದ್ದಾರೆ.

ಮಹೀಂದ್ರಾ ಕಂಪನಿಯು ಈ ಹೊಸ ಯುವೋ ಟೆಕ್ ಪ್ಲಸ್ ವ್ಯಾಪ್ತಿಯ ಟ್ರಾಕ್ಟರ್‌ಗಳನ್ನು ಮೊದಲಿಗೆ ಉತ್ತರ ಪ್ರದೇಶ (Uttar Pradesh), ಮಧ್ಯಪ್ರದೇಶ (Madhya Pradesh), ರಾಜಸ್ಥಾನ (Rajastan), ಛತ್ತೀಸ್‌ಗಢ (Chhattisgarh), ಬಿಹಾರ (Bihar), ಜಾರ್ಖಾಂಡ್ (Jharkhand), ಗುಜರಾತ್‌ (Gujarat)ಗಳಲ್ಲಿ ಬಿಡುಗಡೆಯಾಗಲಿದೆ. ಆ ನಂತರದ ತಿಂಗಳಲ್ಲಿ ಎಲ್ಲ ಮಾರುಕಟ್ಟೆಗಳಲ್ಲಿ ಈ ಟ್ರಾಕ್ಟರ್‌ಗಳು ಬಿಡುಗಡೆ ಕಾಣಲಿವೆ. 

ಇದಕ್ಕೂ ಮುಂಚೆ ಮಹೀಂದ್ರಾ ಕಂಪನಿಯು  35-50 ಬಿಎಚ್‌ಪಿ ವ್ಯಾಪ್ತಿಯ ಯುವೋ ಟ್ರಾಕ್ಟರ್‌ಗಳನ್ನು ಲಾಂಚ್ ಮಾಡಿತ್ತು. ಚೆನ್ನೈನಲ್ಲಿರುವ ಮಹೀದ್ರಾದ ರಿಸರ್ಚ್ ವ್ಯಾಲಿ (Mahindra’s Research Valley -MRV)ಯಲ್ಲಿ ಈ ಟ್ರಾಕ್ಟರ್‌ಗಳನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿತ್ತು.

ಮಾರುತಿಯ ಆಫ್‌ರೋಡ್ ಎಸ್‌ಯುವಿ Jimny ಬಿಡುಗಡೆಗೆ ಸಜ್ಜಾಗಿದೆಯಾ?

ಟ್ವೀಟ್ ಮಾಡಿದ್ದ ಆನಂದ್ ಮಹೀಂದ್ರಾ
ಯುವೋ ಟೆಕ್ ಪ್ಲಸ್ ಟ್ರಾಕ್ಟರ್ ಲಾಂಚ್ ಮುನ್ನ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ (Anand Mahindra) ಅವರು ಈ ಬಗ್ಗೆ ಟ್ವೀಟ್ ಮಾಡಿ ಗಮನ ಸೆಳೆದಿದ್ದರು. ಟ್ರಾಕ್ಟರ್ ವೈಶಿಷ್ಟ ಸಾರುವ ಮಾಹಿತಿ ಹಂಚಿಕೊಂಡಿದ್ದ ಅವರು, ವೆಲಕಮ್ ಟು ದಿ ಫ್ಯಾಮಿಲಿ ಯುವೊ ಟೆಕ್ ಪ್ಲಸ್! ಕಾರುಗಳು ಲಾಂಚ್ ಮಾಡಿದಾಗ ಎಲ್ಲ ಗಮನವನ್ನು ತಮ್ಮತ್ತ ಸೆಳೆಯುತ್ತವೆ. ಆದರೆ, ನೀವು.. ನಿಮ್ಮ ಅತ್ಯಾಧುನಿಕ ಮತ್ತು ಸೂಕ್ತ ತಂತ್ರಜ್ಞಾನವು ರಾಷ್ಟ್ರದ ಆಹಾರ  ಭದ್ರತೆಯನ್ನು ಕಾಪಾಡುವಲ್ಲಿ ಪ್ರಮುಖ ನಿರ್ಣಾಯಕರಾಗಿದ್ದೀರಿ... ಎಂದು ಟ್ವೀಟ್ ಮಾಡಿದ್ದರು.

 

 

Follow Us:
Download App:
  • android
  • ios