ಮಾರುತಿಯ ಆಫ್‌ರೋಡ್ ಎಸ್‌ಯುವಿ Jimny ಬಿಡುಗಡೆಗೆ ಸಜ್ಜಾಗಿದೆಯಾ?

ಮಾರುತಿ (Maruti Suzuki) ಕಂಪನಿಯ ಬಹು ನಿರೀಕ್ಷೆಯ ಆಫ್‌ರೋಡ್ ಎಸ್‌ಯುವಿ ಜಿಮ್ನಿ(Jimny) ಮತ್ತೆ ಸುದ್ದಿಯಲ್ಲಿದೆ. ಕಂಪನಿಯು ಜಿಮ್ನಿಗೆ ಸಂಬಂಧಿಸಿದ ಟೀಸರ್‌ವೊಂದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಷೇರ್ ಮಾಡಿದ್ದು, ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಈ ಜಿಮ್ನಿ ಮುಂಬರುವ ವರ್ಷದಲ್ಲಿ ಮಾರುಕಟ್ಟೆಗೆ ಲಾಂಚ್ ಆಗಬಹುದು ಎನ್ನಲಾಗುತ್ತಿದೆ.

Maruti Suzuki SUV Jimny ready to launch how this car

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಆಫ್‌ರೋಡ್ ಎಸ್‌ಯುವಿ (off-road SUV) ಗಳ ಪೈಕಿ ಮಹೀಂದ್ರಾ ಕಂಪನಿಯ ಥಾರ್ (Thar) ಹಾಗೂ ಫೋರ್ಸ್ ಕಂಪನಿಯ ಗೂರ್ಖಾ (Gurkha) ಎಸ್‌ಯುವಿ ಸದ್ಯ ಗಮನ ಸೆಳೆಯುತ್ತಿವೆ. ಆದರೆ, ಈ ಎರಡೂ  ಎಸ್‌ಯುವಿಗಳಿಗೆ ಠಕ್ಕರ್ ನೀಡಲು ಮಾರುತಿ ಸುಜುಕಿ (Maruti Suzuki) ಸಿದ್ಧವಾಗಿದೆ. ತನ್ನ ಐಕಾನಿಕ್ ಜಿಮ್ನಿ (Jimny) ಆಫ್‌ರೋಡ್ ಎಸ್‌ಯುವಿ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಂತಿದೆ.

ಮಾರುತಿ ಸುಜುಕಿಯ (Maruti Suzuki) ಆಫ್‌ರೋಡ್ ಎಸ್‌ಯುವಿ  ಜಿಮ್ನಿ ಲಾಂಚ್ ಬಗ್ಗೆ ಬಹಳ ದಿನಗಳಿಂದಲೂ ಸುದ್ದಿ ಇದೆ. ಹಾಗೆಯೇ ಗ್ರಾಹಕರಲ್ಲೂ ಈ ಬಗ್ಗೆ ಕುತೂಹಲವಿದೆ. ವಿಶೇಷ ಎಂದರೆ, ಹಬ್ಬದ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾ (Social Media) ಗಳಲ್ಲಿ ಕಂಪನಿಯು ಜಿಮ್ನಿ ಬಗ್ಗೆ ಮತ್ತೊಂದು ಟೀಸರ್ (Teaser) ಹಾಕುವ ಮೂಲಕ  ಜನರ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಹಾಗೆಯೇ, ಸದ್ಯದಲ್ಲೇ ಕಂಪನಿಯು ಈ ಆಫ್‌ರೋಡ್ ಎಸ್‌ಯುವಿಯನ್ನು ಲಾಂಚ್ ಮಾಡಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ. 

ಮುಂಬರುವ ಜಿಮ್ನಿ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆ ಮಾಡಲಾಗಿರುವ ಟೀಸರ್‌ನಲ್ಲಿ, "ದಿಸ್ ಇಸ್ ಜಸ್ಟ್ ಇನ್! ಕಾಡು ಸಾಹಸಮಯವಾಗಿರುವ ಈ ಸವಾರಿ ವಿಭಿನ್ನ ಭೂಪ್ರದೇಶಗಳ ಮೂಲಕ ಸಾಗುತ್ತಿದೆ! ಒಂದು ಪ್ರಶ್ನೆ ಏನೆಂದರೆ, ಇದು ಯಾವ ಕಾರು?" ಎಂದು ಬರೆಯಲಾಗಿದೆ. ಆ ಮೂಲಕ ಕಂಪನಿಯು ಬಹುನ ನಿರೀಕ್ಷೆಯ ಆಫ್‌ರೋಡ್ ಎಸ್‌ಯುವಿ ಜಿಮ್ನಿ ಲಾಂಚ್ ಬಗ್ಗೆ ಸುಳಿವು ಬಿಟ್ಟುಕೊಟ್ಟಿದೆ.

ಟಾಟಾ ಪಂಚ್ ಕಾರಿಗೆ ಗರಿಷ್ಠ ಸುರಕ್ಷತೆ ಕಿರೀಟ, ಗ್ಲೋಬಲ್ NCAPನಿಂದ 5 ಸ್ಟಾರ್ ರೇಟಿಂಗ್!

ಈ ಟೀಸರ್‌ನಲ್ಲಿ ಆಫ್‌ರೋಡ್-ಡೆಸರ್ಟ್ (off-road/desert)ನಲ್ಲಿ ಟೈರ್ ಮಾರ್ಕ್‌ಗಳಿರುವುದನ್ನು ತೋರಿಸಲಾಗಿದೆ. ಈ ಟೀಸರ್‌ನಲ್ಲಿ ಬಿಟ್ಟುಕೊಡಲಾಗಿರುವ ಸುಳಿವುಗಳ ಪ್ರಕಾರ, ಮಾರುತಿ ಕಂಪನಿಯ ಮುಂಬರುವ ಬಹುನಿರೀಕ್ಷೆಯ ಆಫ್‌ರೋಡ್ ಎಸ್‌ಯುವಿ ಜಿಮ್ನಿಗೆ ಸಂಬಂಧಿಸಿದ್ದಾಗಿದೆ ಎಂಬುದು. 
 

Maruti Suzuki SUV Jimny ready to launch how this car

ಮಾರುತಿ ಸುಜುಕಿ ಕಂಪನಿಯು ಹರಿಯಾಣದ ತನ್ನ ಮಣೆಸರ್ ಪ್ಲಾಂಟ್‌ನಲ್ಲಿ 3 ಡೋರ್ (3 Door) ವರ್ಷನ್ ಎಸ್‌ಯುವಿಯನ್ನು ಉತ್ಪಾದಿಸುತ್ತಿದೆ ಮತ್ತು ಅವುಗಳನ್ನು ಜಗತ್ತಿನ ಇತರ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿದೆ. ಅದೇ ರೀತಿ, ಸದ್ಯ ಅಭಿವೃದ್ಧಿ ಹಂತದಲ್ಲಿರುವ 5 ಡೋರ್ (Five Door) ಜಿಮ್ನಿಯನ್ನು ಇದೇ ಘಟಕದಲ್ಲಿ ನಿರ್ಮಾಣ ಮಾಡುವ ಸಾಧ್ಯತೆಯೂ ಇದೆ. 
 

ಭಾರತೀಯ ಆಫ್‌ರೋಡ್‌ ಸೆಗ್ಮೆಂಟ್‌ನಲ್ಲಿ ಮಹಿಂದ್ರಾ ಕಂಪನಿಯ ಥಾರ್ (Thar) ಹಾಗೂ ಫೋರ್ಸ್ ಗೂರ್ಖಾ (Force Gurkha) ಎಸ್‌ಯುವಿಗಳು ಬಿಡುಗಡೆಯಾಗಿ, ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗುತ್ತಿವೆ. ಥಾರ್ ಕಳೆದ ವರ್ಷ  ಬಿಡುಗಡೆಯಾದರೆ, ಫೋರ್ಸ್ ಗೂರ್ಖಾ ಈ ಹಬ್ಬಕ್ಕೆ ಬಿಡುಗಡೆ ಕಂಡು ಸದ್ದು ಮಾಡುತ್ತಿದೆ. 

MG ಮೋಟಾರ್ ಆಸ್ಟರ್ SUV ಕಾರು ಬಿಡುಗಡೆ,ಬೆಲೆ ಕೇವಲ ರೂ 9.78 ಲಕ್ಷ ರೂ!

ಮಾರುತಿ ಕಂಪನಿಯು ಮುಂಬರುವ ಈ ಜಿಮ್ನಿ ಖಂಡಿತವಾಗಿಯೂ ಹೊಸ ಮಾದರಿಯ ಥಾರ್ ಹಾಗೂ ಫೋರ್ಸ್ ಗೂರ್ಖಾ ಎಸ್‌ಯುವಿಗಳಿಗೆ ಸಖತ್ ಪೈಪೋಟಿ ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಮಾರುತಿ ಸುಜುಕಿ ಜಿಮ್ನಿಯ ಹೊಸ ಇಂಡಿಯಾ-ಸ್ಪೆಕ್ 5-ಡೋರ್ ಎಲ್‌ಡಬ್ಲ್ಯೂಬಿ (LWB) ಆವೃತ್ತಿಯು 2022ರಲ್ಲಿ ದೇಶದಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ.

ಅಂತಾರಾಷ್ಟ್ರೀಯ ಮಟ್ಟದ ವಿಶೇಷತೆಗಳನ್ನು ಒಳಗೊಳ್ಳಲಿರುವ ಜಿಮ್ನಿ 1.4 ಲೀಟರ್ ಮೈಲ್ಡ್ ಹೈಬ್ರಿಡ್ ಟರ್ಬೊಚಾರ್ಜ್ಡ್ (mild-hybrid turbocharged) ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಹಾಗೆಯೇ,  ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಎಸ್‌ಯುವಿನಲ್ಲಿ 1.5-litre K15B ಪೆಟ್ರೋಲ್ ಎಂಜಿನ್ ಬಳಕೆಯಾಗಬಹುದು. ನೀವು ಇದೇ ಎಂಜಿನ್‌ ಅನ್ನು ವಿಟಾರಾ ಬ್ರೆಜಾ (Vitara Brezza), ಸಿಯಾಜ್ (Ciaz), ಎರ್ಟಿಗಾ (Ertiga) ಮತ್ತು ಎಕ್ಸ್‍ಎಲ್ 6 (XL6) ಕಾರುಗಳಲ್ಲಿ ಕಾಣಬಹುದಾಗಿದೆ.

ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಮಾರುತಿ ಸುಜುಕಿ ಕಂಪನಿಯ ಈ ಜಿಮ್ನಿ ಎಸ್‌ಯುವಿನಲ್ಲಿ ಬಳಕೆಯಾಗಲಿರುವ ಎಂಜಿನ್ 6000 rpmನಲ್ಲಿ ಗರಿಷ್ಠ 103 bhp ಪವರ್ ಉತ್ಪಾದಿಸಲಿದೆ. ಹಾಗೆಯೇ, 4400 rpmನಲ್ಲಿ ಗರಿಷ್ಠ 138 Nm ಟಾರ್ಕ್ ಉತ್ಪಾದಿಸಬಹುದು ಎಂದು ಹೇಳಲಾಗುತ್ತಿದೆ. 5 ಸ್ಪೀಡ್ ಗಿಯರ್ ಬಾಕ್ಸ್ ಹಾಗೂ 4 ಸ್ಪೀಡ್ ಆಟೋಮೆಟಿಕ್ ಎಂಜಿನ್‌ಗಳೊಂದಿಗೆ ಈ ಹೊಸ ಎಸ್‌ಯುವಿಯನ್ನು ಗ್ರಾಹಕರು ನಿರೀಕ್ಷಿಸಬಹುದಾಗಿದೆ.

ಅಂಪಿಯರ್ ಮ್ಯಾಗ್ನಸ್ ಇಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, ಬೆಲೆ ಎಷ್ಟು?

Latest Videos
Follow Us:
Download App:
  • android
  • ios