ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಇನ್ನು ಸುಲಭವಲ್ಲ, ಟ್ರಾಫಿಕ್ ರಸ್ತೆಯಲ್ಲೂ ಮಾಡಬೇಕು ಡ್ರೈವ್!
ಡ್ರೈವಿಂಗ್ ಸ್ಕೂಲ್ ಮುಖಾಂತರ ಸುಲಭವಾಗಿ ಲೈಸೆನ್ಸ್ ಪಡೆಯುವ ಕಾಲ ಬದಲಾಗಿದೆ. ಇದೀಗ ಹಲವು ಹಂತದ ಪರೀಕ್ಷೆಗಳ ಬಳಿಕವೇ ಡಿಆಲ್ ಸಿಗಲಿದೆ. ಹಾಗಾದರೆ ಹೊಸ ನಿಯಮವೇನು? ಈ ಪರಿಷ್ಕೃತ ನಿಯಮ ಎಲ್ಲಿ ಜಾರಿಗೆ ಬರುತ್ತಿದೆ?
ತಿರುವನಂತಪುರಂ(ಫೆ.23) ಭಾರತದ ಬಹುತೇಕ ರಾಜ್ಯಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಕಠಿಣ ಸವಾಲಿನ ಕೆಲಸವಲ್ಲ. ಡ್ರೈವಿಂಗ್ ಸ್ಕೂಲ್ ಮುಖಾಂತರ ಹಲವರು ಸುಲಭವಾಗಿ ಲೈಸೆನ್ಸ್ ಪಡೆದಿದ್ದಾರೆ. ಕಾರು ಡ್ರೈವಿಂಗ್ ಗೊತ್ತಿಲ್ಲದಿದ್ದರೂ ಹಲವರ ಬಳಿ ಅಧಿಕೃತ ಲೈಸೆನ್ಸ್ ಇರುವ ಉದಾಹರಣೆಗಳಿವೆ. ಇದೀಗ ಭಾರತದಲ್ಲೂ ವಿದೇಶಗಳಲ್ಲಿರುವಂತೆ ಲೈಸೆನ್ಸ್ ಪದ್ಧತಿ ಜಾರಿಗು ಬರುತ್ತಿದೆ. ಇದೀಗ ಕೇರಳ ಮೋಟಾರು ವಿಭಾಗ ಅತ್ಯಂತ ಕಠಿಣ ನಿಯಮದ ಡ್ರೈವಿಂಗ್ ಲೈಸೆನ್ಸ್ ಪದ್ಧತಿಯನ್ನು ಜಾರಿ ಮಾಡಿದೆ. ವಾಹನ ಟೆಸ್ಟ್ ಡ್ರೈವಿಂಗ್ ಕೇವಲ ಟ್ರಾಕ್‌ನಲ್ಲಿ ಮಾಡಿದರೆ ಸಾಲದು, ಟ್ರಾಫಿಕ್ ರಸ್ತೆಯಲ್ಲೂ ಮಾಡಬೇಕು. ಇದರ ಜೊತೆಗೆ ಹಲವು ಹಂತದ ಪರೀಕ್ಷೆಗಳಲ್ಲಿ ಪಾಸ್ ಆದರೆ ಮಾತ್ರ ಲೈಸೆನ್ಸ್ ಸಿಗಲಿದೆ.
ಕೇರಳದಲ್ಲಿ ಮೋಟಾರು ವಿಭಾಗ ಲೈಸೆನ್ಸ್ ಪಡೆಯುವ ಪದ್ಧತಿಯನ್ನು ಪರಿಷ್ಕರಿಸಿದೆ. ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇದೀಗ ಸಾಹಸವನ್ನೇ ಮಾಡಬೇಕು. ಈ ಮೂಲಕ ರಸ್ತೆ ನಿಯಮ ಪಾಲನೆಗೆ ಹೆಚ್ಚಿನ ಒತ್ತು ನೀಡಲು, ವಾಹನ ಡ್ರೈವಿಂಗ್ ಗೊತ್ತಿಲ್ಲದೆ ಅಗುತ್ತಿರುವ ಅನಾಹುತಗಳನ್ನು ತಪ್ಪಿಸಲು ಕೇರಳ ಸಾರಿಗೆ ವಿಭಾಗ ಹೊಸ ಪರಿಷ್ಕೃತ ಪದ್ಧತಿಯನ್ನು ಜಾರಿಗೊಳಿಸಿದೆ. ನೂತನ ನಿಯಮ ಕೇರಳದಲ್ಲಿ ಮೇ.01ರಿಂದ ಜಾರಿಗೆ ಬರುತ್ತಿದೆ.
30,000 ಮೌಲ್ಯದ ಸ್ಕೂಟರ್‌ಗೆ 3.2 ಲಕ್ಷ ರೂ ಟ್ರಾಫಿಕ್ ದಂಡ, ವಿನಾಯಿತಿ ಕೇಳಿದ ಬೆಂಗಳೂರಿಗನಿಗೆ ವಾರ್ನಿಂಗ್!
ಮೋಟಾರುಸೈಕಲ್‌ನಲ್ಲಿ ಪರೀಕ್ಷೆಗೆ 95ಸಿಸಿ ಮೇಲಿನ ಬೈಕ್‌ಗಳನ್ನು ಮಾತ್ರ ಬಳಸಬೇಕು. ಇನ್ನು ಡ್ರೈವಿಂಗ್ ಟೆಸ್ಟ್‌ಗೆ ಬಳಸುವ ವಾಹನಗಳು 15 ವರ್ಷಕ್ಕಿಂತ ಹಳೆಯ ವಾಹನ ಆಗಿರಬಾರದು. ಅದು ಡ್ರೈವಿಂಗ್ ಸ್ಕೂಲ್ ವಾಹನ ಆಗಿರಬುಹುದು ಅಥವಾ ಖಾಸಗಿ ವಾಹನವೇ ಆಗಿರಬಹುದು. ವಾಹನ 15 ವರ್ಷಕ್ಕಿಂತ ಹಳೆಯವಾಹನವಾಗಿರಬಾರದು.
ಲೈಟ್ ಮೋಟಾರ್ ವಾಹನ ವಿಭಾಗದಲ್ಲಿ ಆಟೋಮ್ಯಾಟಿಕ್ ಕಾರು, ಗೇರ್ ಇಲ್ಲದ ಟ್ರಾನ್ಸ್‌ಮಿಶನ್ ವಾಹನ, ಎಲೆಕ್ಟ್ರಿಕ್ ವಾಹನಗಳನ್ನು ಡ್ರೈವಿಂಗ್ ಟೆಸ್ಟ್ ವೇಳೆ ಬಳಸಲಾಗುತ್ತದೆ. ಈ ವಾಹನದಲ್ಲಿ ಡ್ರೈವಿಂಗ್ ಕಲಿತವರು ಗೇರ್ ವಾಹನ ಚಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ಡ್ರೈವಿಂಗ್ ಟೆಸ್ಟ್‌ನಲ್ಲಿ ಆಟೋಮ್ಯಾಟಿಕ್ ವಾಹನ, ಎಲೆಕ್ಟ್ರಿಕ್ ವಾಹನ ಬಳಸುವಂತಿಲ್ಲ.
ಇಲ್ಲೀವರೆಗೆ ಡ್ರೈವಿಂಗ್ ಟೆಸ್ಟ್ ನಿಗದಿತ ಟ್ರಾಕ್‌ನಲ್ಲಿ ಬಳಸಲಾಗುತ್ತದೆ. ಇನ್ನು ಮುಂದೆ ಟ್ರಾಕ್ ಜೊತೆಗೆ ಟ್ರಾಫಿಕ್ ರಸ್ತೆಯಲ್ಲೂ ಡ್ರೈವಿಂಗ್ ಟೆಸ್ಟ್ ನೀಡಬೇಕು. ಇದರ ಜೊತೆಗೆ ಆ್ಯಂಗುಲರ್ ಪಾರ್ಕಿಂಗ್, ಪಾರಲಲ್ ಪಾರ್ಕಿಂಗ್, ಜಿಗ್‌ಜಾಗ್ ಡ್ರೈವಿಂಗ್ ಟೆಸ್ಟ್ ಕೂಡ ಪಾಸ್ ಆಗಬೇಕು. ಮೋಟಾರು ವಾಹನ ಇನ್ಸ್‌ಪೆಕ್ಟರ್ ಪ್ರತಿ ದಿನ ಕನಿಷ್ಠ 30 ಫೈಲ್ ಪರಿಶಿಲಿಸಿ, ಟೆಸ್ಟ್ ನಡೆಸಬೇಕು. ಈ ಪೈಕಿ 20 ಹೊಸ ಅಪ್ಲಿಕೇಶನ್, 10 ಟೆಸ್ಟ್ ವಿಫಲಗೊಂಡವರು ಮರು ಅಪ್ಲಿಕೇಶನ್ ವಿಲೇವಾರಿ ಮಾಡಬೇಕು.
ಸಾರ್ವಜನಿಕರಿಗೆ ಹೊಸ ವರ್ಷದ ಶಾಕ್, ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತಷ್ಟು ದುಬಾರಿ!
ಡ್ರೈವಿಂಗ್ ಸ್ಕೂಲ್ ವಾಹನದಲ್ಲಿ ಡ್ಯಾಶ್ ಬೋರ್ಡ್ ಕ್ಯಾಮೆರಾ ಅಳವಡಿಸಬೇಕು. ಒರ್ವ ವ್ಯಕ್ತಿ ಡ್ರೈವಿಂಗ್ ಕಲಿಯುವಾಗ ಆತನ ವಿಡಿಯೋ ಈ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಬೇಕು. ಈ ವಿಡಿಯೋ ಡೇಟಾವನ್ನು ಮೋಟಾರು ವಾಹನ ಇನ್ಸ್‌ಪೆಕ್ಟರ್ ಅಗತ್ಯಬಿದ್ದರೆ ಪರಿಶೀಲನೆ ನಡೆಸಬಹುದು.