30,000 ಮೌಲ್ಯದ ಸ್ಕೂಟರ್‌ಗೆ 3.2 ಲಕ್ಷ ರೂ ಟ್ರಾಫಿಕ್ ದಂಡ, ವಿನಾಯಿತಿ ಕೇಳಿದ ಬೆಂಗಳೂರಿಗನಿಗೆ ವಾರ್ನಿಂಗ್!
ಸಿಗ್ನಲ್ ಜಂಪ್, ರಾಂಗ್ ಸೈಡ್, ಸ್ಪೀಡ್, ಹೆಲ್ಮೆಟ್, ತ್ರಿಬಲ್ ರೈಡ್ ಸೇರಿದಂತೆ ಬಹುತೇಕ ಎಲ್ಲಾ ಟ್ರಾಫಿಕ್ ನಿಮಯ ಉಲ್ಲಂಘಿಸಿದ ಬೆಂಗಳೂರಿಗನಿಗೆ ಪೊಲೀಸರು ಬರೋಬ್ಬರಿ 3.2 ಲಕ್ಷ ರೂಪಾಯಿ ದಂಡ ಹಾಕಿದ್ದಾರೆ. ನನ್ನ ಸ್ಕೂಟರ್‌ಗೆ ಮಾರುಕಟ್ಟೆಯಲ್ಲಿ 30 ಸಾವಿರ ರೂ ಬೆಲೆ,, ಇಷ್ಟೊಂದು ಮೊತ್ತ ಹೇಗೆ ಪಾವತಿಸಲಿ ಎಂದ ಮಾಲೀಕನಿಗೆ ಪೊಲೀಸರಿಗೆ 2 ಆಯ್ಕೆ ನೀಡಿದ್ದಾರೆ.
ಬೆಂಗಳೂರು(ಫೆ.13) ಪೊಲೀಸರು ನೋಡಿಲ್ಲ, ಟ್ರಾಫಿಕ್ ಕ್ಯಾಮೆರಾ ಇಲ್ಲ ಎಂದು ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಮುಂದೆ ಅತೀ ದೊಡ್ಡ ಆಘಾತ ಎದುರಾಗುವುದು ಖಚಿತ. ಕಾರಣ ನಿಮ್ಮ ಪ್ರತಿಯೊಂದು ಟ್ರಾಫಿಕ್ ನಿಯಮ ಉಲ್ಲಂಘನೆ ದಾಖಲಾಗಿರುತ್ತದೆ. ಒಂದೊಂದೆ ಡಿಜಿಟಲ್ ಚಲನ್ ಇಶ್ಯೂ ಆಗಿರುತ್ತದೆ. ಹೀಗೆ ಪ್ರತಿ ದಿನ ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಾ ಸಾಗುತ್ತಿದ್ದ ಸ್ಕೂಟರ್ ಸವರಾನಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಶಾಕ್ ನೀಡಿದ್ದಾರೆ. ಸಿಗ್ನಲ್ ಜಂಪ್, ಹೆಲ್ಮೆಟ್, ಒನ್ ವೇ ಸೇರಿದಂತೆ ಬಹುತೇಕ ಎಲ್ಲಾ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಬೆಂಗಳೂರು ಸ್ಕೂಟರ್ ಮಾಲೀಕನಿಗೆ ಪೊಲೀಸರು ಬರೋಬ್ಬರಿ 3.2 ಲಕ್ಷ ರೂಪಾಯಿ ದಂಡ ಪಾವತಿಸಲು ಚಲನ್ ನೀಡಿದ್ದಾರೆ. ಎಲ್ಲಾ ಬಾಕಿ ಒಟ್ಟು ಸೇರಿ 3.2 ಲಕ್ಷ ರೂಪಾಯಿ ಪಾವತಿಸುವಂತೆ ಸೂಚಿಸಿದ್ದಾರೆ. ಸದ್ಯ ಈ ಸ್ಕೂಟರ್‌ಗೆ ಮಾರುಕಟ್ಟೆಯಲ್ಲಿ ಗರಿಷ್ಠ 30 ಸಾವಿರ ರೂಪಾಯಿ ಮೌಲ್ಯ. ಹೀಗಿರುವಾಗ ನಾನು ದುಬಾರಿ ದಂಡ ಹೇಗೆ ಪಾವತಿಸಲಿ. ಸ್ಕೂಟರ್ ವಶಕ್ಕೆ ಪಡೆದರೂ ಪರವಾಗಿಲ್ಲ, ದಂಡ ಪಾವತಿ ನನ್ನಿಂದ ಸಾಧ್ಯವಿಲ್ಲ ಎಂದಿದ್ದಾನೆ. ಆದರೆ ಬೆಂಗಳೂರು ಪೊಲೀಸರು ಖಡಕ್ ವಾರ್ನಿಂಗ್ ನೀಡಿ 2 ಆಯ್ಕೆ ನೀಡಿದ್ದಾರೆ.
ಬೆಂಗಳೂರಿನ ಸುಧಾಮನಗರ ನಿವಾಸಿ ವೆಂಕಟರಮಣ ನಿವಾಸಿ ತನ್ನ ಸ್ಕೂಟರ್ ಮೂಲಕ ಪ್ರತಿ ದಿನ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಾರೆ. 350ಕ್ಕೂ ಹೆಚ್ಚು ಟ್ರಾಫಿಕ್ ನಿಯಮ ಉಲ್ಲಂಘನೆ ದಾಖಲಾಗಿದೆ. ಪ್ರತಿ ನಿಯಮ ಉಲ್ಲಂಘನೆ ವೇಳೆ ಡಿಜಿಟಲ್ ಚಲನ್ ಇಶ್ಯೂ ಮಾಡಲಾಗಿತ್ತು. ದಂಡದ ಮೊತ್ತ ಹೆಚ್ಚಾಗುತ್ತಿದ್ದಂತೆ ಪೊಲೀಸರು ಸ್ಕೂಟರ್ ರಿಜಿಸ್ಟ್ರೇಶನ್ ವೇಳೆ ನೀಡಿದ್ದ ವಿಳಾಸ ಪತ್ತೆ ಹಚ್ಚಿ ಪೊಲೀಸರು ವೆಂಕಟರಣ ನಿವಾಸಕ್ಕೆ ತೆರಳಿ ಚಲನ್ ನೀಡಿದ್ದಾರೆ.
ಟ್ರಾಫಿಕ್ ಫೈನ್ ಬಾಕಿ ಇದರೆ ಮನೆಗೆ ಬರ್ತಾರೆ ಪೊಲೀಸರು: ಏನಿದು ಹೊಸ ರೂಲ್ಸ್?
ಪೊಲೀಸರ ಮುಂದೆ ವೆಂಕಟರಮಣ ಮನವಿ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಈ ಸ್ಕೂಟರ್ ಬೆಲೆ ಗರಿಷ್ಠ 30 ಸಾವಿರ ರೂಪಾಯಿ ಮೌಲ್ಯ. ಇದೀಗ ಇಷ್ಟೊಂದು ದುಬಾರಿ ಮೊತ್ತ ಹೇಗೆ ಪಾವತಿಸಲಿ ಎಂದು ಪೊಲೀಸರನ್ನೇ ಪ್ರಶ್ನಿಸಿದ್ದಾನೆ. ದಂಡ ಕಟ್ಟದ ಕಾರಣ ಸ್ಕೂಟರ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಂಡದ ವಿನಾಯಿತಿ ಕೇಳಿದ ವೆಂಕಟರಮಣಗೆ ಪೊಲೀಸರು 2 ಆಯ್ಕೆ ನೀಡಿದ್ದಾರೆ. ದಂಡದ ಮೊತ್ತ ದುಬಾರಿಯಾಗಿರುವ ಕಾರಣ ಕಂತುಗಳ ಮೂಲಕ ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಇನ್ನು ಎರಡನೇ ಆಯ್ಕೆ ಕಂತುಗಳ ಮೂಲಕವೂ ಪಾವತಿಸದಿದ್ದರೆ, ಎಫ್ಐಆರ್ ದಾಖಲಾಗಲಿದೆ ಎಂದು ಎಚ್ಚರಿಸಿದ್ದಾರೆ.
ದಂಡ ಕಟ್ಟಿಲ್ಲ, ಕಂತುಗಳ ಮೂಲಕವೂ ದಂಡ ಪಾವತಿಸಿಲ್ಲ. ಹೀಗಾಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇನ್ನು ವೆಂಕಟರಮಣ ಅವರ ಡ್ರೈವಿಂಗ್ ಲೈಸೆನ್ಸ್ ರದ್ದಾಗಿದೆ. ಇದೀಗ ವೆಂಕಟರಮಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಲೈಸೆನ್ಸ್ ರದ್ದಾಗಿದ್ದು, ಎಫ್ಐಆರ್ ಕೂಡ ದಾಖಲಾಗಿದೆ.
AI ಕ್ಯಾಮೆರಾ ಮೊರೆ ಹೋದ ಸಾರಿಗೆ ಇಲಾಖೆ: ಸವಾರರ ಪಿನ್ ಟು ಪಿನ್ ಮಾಹಿತಿ ಸೆರೆ ಹಿಡಿಯುವ ಕ್ಯಾಮೆರಾ