Chopper Bike ವಿಶ್ವದ ಅತೀ ದೊಡ್ಡ ಚಾಪರ್ ಬೈಕ್ ದಾಖಲೆ, ಬೆಂಗಳೂರಿಗನ ಜೊತೆ ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ಸಂದರ್ಶನ!

  • ವಿಶ್ವದ ಅತೀ ದೊಡ್ಡ ಚಾಪರ್ ಬೈಕ್ ನಿರ್ಮಿಸಿ ಹೊಸ ದಾಖಲೆ
  • ಬೆಂಗಳೂರಿಗನಿಂದ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಸಾಧನೆ
  • ಚಾಪರ್ ಬೈಕ್ ರೂವಾರಿ ಜೊತೆ ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ಸಂದರ್ಶನ
     
Interview With Benaluru Dr Zakir Khan Maker Of Worlds Largest Chopper Biker ckm

ಬೆಂಗಳೂರು(ಫೆ.04): ವಿಶ್ವದ ಅತೀ ದೊಡ್ಡ ಚಾಪರ್ ಬೈಕ್(chopper motorcycle) ಇತ್ತೀಚೆಗೆ ಭಾರಿ ಸದ್ದು ಮಾಡಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ಈ ಚಾಪರ್ ಬೈಕ್(Bike) ಸಂಚಲನ ಮೂಡಿಸಿದೆ. ಈ ಚಾಪರ್ ಬೈಕ್ ನಿರ್ಮಾಣಗೊಂಡಿರುವುದು ನಮ್ಮ ಬೆಂಗಳೂರಿನಲ್ಲಿ(Bengaluru). ಅಮೆರಿಕದಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿಸಿರುವ ಡಾ. ಝಾಕಿರ್ ಹುಸೈನ್ ಈ ಚಾಪರ್ ಬೈಕ್ ಹಿಂದಿನ ರೂವಾರಿ. ವಿಶ್ವದ ಅತೀ ಚಿಕ್ಕ ಜಿಪ್ಸಿ ನಿರ್ಮಿಸಿ ದಾಖಲೆ ಬರೆದಿರುವ ಝಾಕಿರ್ ಇದೀಗ ವಿಶ್ವದ ಅತೀ ದೊಡ್ಡ ಚಾಪರ್ ಬೈಕ್ ನಿರ್ಮಿಸಿ ಹೊಸ ದಾಖಲೆ ಬರೆದಿದ್ದಾರೆ. ಈ ಚಾಪರ್ ಬೈಕ್ ವಿಶೇಷತೆ, ಪ್ರಶಸ್ತಿ, ದಾಖಲೆ ಸೇರಿದಂತೆ ಹಲವು ವಿಚಾರಗಳ ಕುರಿತು ಝಾಕಿರ್ ಹುಸೈನ್ ಜೊತೆ ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ಸಂದರ್ಶನ ನಡೆಸಿದೆ. ಸಂದರ್ಶನದ ಆಯ್ದೆ ಭಾಗ ಇಲ್ಲಿದೆ.

ಪ್ರಶ್ನೆ:ದೊಡ್ಡ ಚಾಪರ್ ಬೈಕ್ ತಯಾರಿಸುವ ಆಲೋಚನೆ ನಿಮಗೆ ಹೇಗೆ ಬಂತು? 
ಉತ್ತರ:ನನಗೆ ಚಿಕ್ಕ ವಯಸ್ಸಿನಿಂದಲೂ ಕಾರ್ ಮತ್ತು ಬೈಕ್ ಗಳ ಬಗ್ಗೆ ಆಸಕ್ತಿ, ನಾನು ಉದ್ದಿಮೆಯಲ್ಲಿ ವಿವಿಧ ವಿಶ್ವ ದಾಖಲೆಗಳನ್ನು ನೋಡಿದಾಗ ನನ್ನ ಸ್ಫೂರ್ತಿ ಮತ್ತಷ್ಟು ಹೆಚ್ಚಾಯಿತು. ಬಾಲ್ಯದಿಂದ, ನಾನು ಮೋಟಾರ್ ಜಗತ್ತಿನಲ್ಲಿ ಏನಾದರೂ ವಿಶೇಷವಾದುದನ್ನು ಸಾಧಿಸಬೇಕು ಎಂದು ಬಯಸುತ್ತಿದ್ದೆ ಹಾಗೂ ಆ ಗುರಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದೆ, ನಾನು ವಿಶ್ವದ ಅತಿದೊಡ್ಡ ಚಾಪರ್ ಬೈಕ್ ನೋಡಿದ ನಂತರ ಈ ಪ್ರಯತ್ನ ನನಗೆ ಅನೇಕ ವಿಶ್ವ ದಾಖಲೆಯ ಶೀರ್ಷಿಕೆ ನೀಡಲು ಪ್ರಯತ್ನಿಸುವಂತೆ ಮಾಡಿತು.

7.41 ಮೀಟರ್‌ ಎತ್ತರದ ಸೈಕಲ್‌ ನಿರ್ಮಿಸಿ ರೈಡಿಂಗ್‌... ವಿಡಿಯೋ ನೋಡಿ

ಪ್ರಶ್ನೆ:ಚಾಪರ್ ಬೈಕ್ ನ ವಿಶೇಷತೆ ಏನು? (ಬೈಕ್ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ, ಇದಕ್ಕೆ ಯಾವುದೇ ಪ್ರಶಸ್ತಿಗಳು ದೊರೆತಿದೆಯೇ, ಇದು ಹೇಗೆ ಪ್ರಸಿದ್ಧವಾಯಿತು).
ಉತ್ತರ:ಈ ಮೋಟಾರ್ ಸೈಕಲ್ ನ ಪ್ರಮುಖ ಅಂಶವೆಂದರೆ ಇದರ ಎರಡು ಎಕ್ಸಾಸ್ಟ್ ಗಳನ್ನು ಮುಂಭಾಗಕ್ಕೆ ಬರುವಂತೆ ಜೋಡಿಸಲಾಗಿದೆ. ಚಾಪರ್ ಬೈಕ್ ಗಳು ಅವುಗಳ ಉದ್ದನೆಯ ಫೋರ್ಕ್ ಗೆ ಪ್ರಸಿದ್ಧವಾಗಿದ್ದು, ಇದು ವಿಶಿಷ್ಟ ದೃಢತೆ ನೀಡುತ್ತದೆ ಹಾಗೂ ಬೈಕ್ ಗೆ ಇಂತಹುದೇ ನೋಟ ನೀಡಲು, ನಾನು ಮುಂಭಾಗದಲ್ಲಿ ಆರು ಅಡಿ ಉದ್ದದ ಫೋರ್ಕ್ ಜೋಡಿಸಿದೆ. ನಾನು ವಿಶ್ವದ ಅತಿದೊಡ್ಡ ಚಾಪರ್ ಬೈಕ್ ವಿನ್ಯಾಸಗೊಳಿಸಿದ್ದು, ಇದಕ್ಕಾಗಿ ಸುಮಾರು ಹದಿಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದೇನೆ. ನಾನು ಭಾರತೀಯ ಹಾಗೂ ಕನ್ನಡಿಗನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ ಮತ್ತು ನನ್ನ ದೇಶ ಹೆಮ್ಮೆ ಪಡುವಂತೆ ಈ ಪ್ರಯತ್ನಗಳನ್ನು ಮಾಡಿದ್ದೇನೆ.

ನಾನು ಮೊದಲು ಚಾಪರ್ ಬೈಕ್ ವಿನ್ಯಾಸಗೊಳಿಸಿದಾಗ, ನನಗೆ ಇದು ಇಂತಹ ಜನಪ್ರಿಯತೆ ಪಡೆಯುತ್ತದೆಂದು ತಿಳಿದಿರಲಿಲ್ಲ, ಆದರೆ ಸರಿಯಾದ ಪ್ರೇಕ್ಷಕರಿಗೆ ನನ್ನ ಬೈಕ್ ಪ್ರದರ್ಶಿಸಲು ಅವಕಾಶ ನೀಡಿದ್ದಕ್ಕಾಗಿ ನಾನು ಮೋಜ್ ಗೆ ಧನ್ಯವಾದ ಹೇಳಲು ಬಯಸುತ್ತೇನೆ.  ಇದು ನನಗೆ ಸಮುದಾಯವನ್ನು ನಿರ್ಮಿಸಲು ಹಾಗೂ ಹೆಚ್ಚಿನ ಪ್ರಶಂಸೆ ಪಡೆಯಲು ನೆರವಾಗಿದೆ.

Electric Bike ಊಹೆಗೂ ಮೀರಿದ ಆಕರ್ಷಕ ಆರ್ಕ್ ವೆಕ್ಟರ್ ಎಲೆಕ್ಟ್ರಿಕ್ ಬೈಕ್ ಡೆಲಿವರಿ ಆರಂಭ, ಬೆಲೆ 91 ಲಕ್ಷ ರೂ!

ಪ್ರಶ್ನೆ:ಚಾಪರ್ ಬೈಕ್ ನ ಇಂಜಿನ್, ವೈಶಿಷ್ಟ್ಯತೆಗಳು ಮತ್ತು ವಿಶೇಷತೆಗಳು ಏನು?
ಉತ್ತರ:13 ಅಡಿ ಉದ್ದದ ಬೈಕ್ ಕಸ್ಟಮೈಸ್ ಮಾಡಿದ 220 ಸಿಸಿ ಅವೇಂಜರ್ ಇಂಜಿನ್ ಹೊಂದಿದೆ. ಮುಂಭಾಗದ ಶಾಕ್ ಅಬ್ಸಾರ್ಬರ್ ಆರು ಅಡಿ ಉದ್ದವಿದ್ದು, ಇದು ಬೈಕ್ ನ ಕ್ರೂಸರ್ ಅಂಶವನ್ನು ಹೆಚ್ಚಿಸುತ್ತದೆ. ಗೂಸ್ ಬಂಪಿಂಗ್ ಸ್ಕಲ್ ಆಕಾರದ ಹೆಡ್ ಲ್ಯಾಂಪ್ ಗುಡುಗಿನಂತಹ ಶಬ್ದ ಹೊಂದಿದ್ದು, ಇದು ಬೈಕ್ ನ ಮತ್ತೊಂದು ಪ್ರಮುಖ ಅಂಶವಾಗಿದೆ. ಇಂಧನ ಟ್ಯಾಂಕ್ 50 ಲೀಟರ್ ಸಾಮರ್ಥ್ಯ ಹೊಂದಿದ್ದು, ಇದು ಲೀಟರ್ ಗೆ 7 ಕಿಮೀ ಮೈಲೇಜ್ ನೀಡುತ್ತದೆ. ರಾಯಲ್ ಎನ್ಫೀಲ್ಡ್ 500 ಸಿಸಿ ಬೈಕ್ ನ ಹಿಂಭಾಗದ ಚಕ್ರಕ್ಕೆ ಸಮನಾದ ಆಯಾಮವಿರುವ ಮುಂಭಾಗದ ಚಕ್ರವನ್ನು ಹೊಂದಿದೆ. ಹಿಂಭಾಗದ ಚಕ್ರ ಭಿನ್ನ ಪರಿಕಲ್ಪನೆ ಹೊಂದಿದ್ದು, ನಾನು ನನ್ನ ವಿಶೇಷತೆ ನೀಡಲು ಡ್ರಮ್ ವಿನ್ಯಾಸಗೊಳಿಸಿದ್ದೇನೆ. ಬೈಕ್ ನ ಪ್ರಮುಖ ಆಕರ್ಷಣೆ ಎಂದರೆ ಇದರ ಎರಡು ಎಕ್ಸಾಸ್ಟ್ ಗಳು, ಇದನ್ನು ಇಂಧನ ಟ್ಯಾಂಕ್ ನ ಪಕ್ಕದಲ್ಲಿಡಲಾಗಿದೆ. ನಾನು ರೈಡರ್ ಕ್ರೂಸಿಂಗ್ ಮಾಡುವಾಗ ತಿರುಗುವಂತೆ ಮೌತ್ ನಲ್ಲಿ ಹೆಚ್ಚುವರಿ ಪೀಸ್ ಜೋಡಿಸಿದ್ದೇನೆ.

Electric Bike 273KM ವೇಗ, 235 ಕಿ.ಮೀ ಮೈಲೇಜ್, ಮಾರುಕಟ್ಟೆಗೆ ಅತ್ಯಂತ ಆಕರ್ಷಕ ಬೈಕ್ ಅನಾವರಣ!

ಪ್ರಶ್ನೆ:ನೀವು ಚಾಪರ್ ಬೈಕ್ ತಯಾರಿಸುವಾಗ ಎದುರಿಸಿದ ಸವಾಲುಗಳೇನು?
ಉತ್ತರ:ನಾನು ದೂರದೃಷ್ಟಿಯ ಆಲೋಚನೆಯೊಂದಿಗೆ ಇದನ್ನು ಆರಂಭಿಸಿದೆ, ನಾನು ಬೈಕ್ ನಿರ್ಮಿಸುವ ಪ್ರಕ್ರಿಯೆಯಲ್ಲಿರುವಾಗ, ಜನ ಇದು ಸಾಧ್ಯವಿಲ್ಲವೆಂದು ಆಡಿಕೊಂಡರು, ಇದು ಉಪಯೋಗವಿಲ್ಲ, ಇದು ರಸ್ತೆಯಲ್ಲಿ ಓಡುವುದಿಲ್ಲ ಎಂದೆಲ್ಲಾ ಹೇಳಿದರು. ಆದರೆ ನಾನು ನಿರಾಶೆಯಾಗಲಿಲ್ಲ, ಜೊತೆಗೆ ನಿರುತ್ಸಾಹದಿಂದ ಬಿಟ್ಟುಕೊಡಲಿಲ್ಲ, ನಿಜ ಹೇಳಬೇಕೆಂದರೆ, ಈ ಮಾತುಗಳು ಮತ್ತು ಸವಾಲುಗಳು ನನಗೆ ಕೇವಲ 45 ದಿನಗಳಲ್ಲಿ ಬೈಕ್ ತಯಾರಿಸಲು ನೆರವಾಗುವಂತೆ ಪ್ರೋತ್ಸಾಹಿಸಿತು. ಪ್ರತಿಯೊಬ್ಬರಿಗೂ ನಾನು ಇಂತಹ ಯಾವುದೋ ಅಸ್ತಿತ್ವದಲ್ಲಿದೆ ಎಂದು ನಂಬುವಂತಹ ನನ್ನ ದೃಷ್ಟಿಕೋನವನ್ನು ರುಜುವಾತುಪಡಿಸಿದೆ.

ಬೈಕ್ ಮೂಲಕ ಪ್ರಸಿದ್ಧಿ ಪಡೆಯಲು ಮತ್ತು ಜನರ ಗಮನ ಸೆಳೆಯಲು ನೆರವಾಗಿದ್ದಕ್ಕಾಗಿ ಮತ್ತೊಮ್ಮೆ ಮೋಜ್ ಗೆ ಧನ್ಯವಾದ ತಿಳಿಸಲು ಬಯಸುತ್ತೇನೆ, ಇದರಿಂದಾಗಿ ದೇಶಾದ್ಯಂತ ಜನ ನನ್ನ ಆಲೋಚನೆಯ ಬಗ್ಗೆ ಮಾತನಾಡುತ್ತಿದ್ದಾರೆ. ನನ್ನ ನೋಡಿ ಆಡಿಕೊಂಡ ಜನರೂ ಬೈಕ್ ಪೂರ್ಣಗೊಂಡ ನಂತರ ನನ್ನನ್ನು ಹೊಗಳುತ್ತಿದ್ದಾರೆ.

ಪ್ರಶ್ನೆ:ಭಾರತ ಎಲೆಕ್ಟ್ರಿಕ್ ವಾಹನಗಳ ವಲಯದಲ್ಲಿ ಮುನ್ನಡೆಯುತ್ತಿದೆ. ನೀವು ಎಲೆಕ್ಟ್ರಿಕ್ ಬೈಕ್ ತಯಾರಿಸುವ ಬಗ್ಗೆ ಯೋಚಿಸಿದ್ದೀರಾ?
ಉತ್ತರ:ಒಪ್ಪುತ್ತೇನೆ, ಭಾರತ ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಮುಂದಿದ್ದು, ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಜನಪ್ರಿಯತೆ ಹೆಚ್ಚಾಗಲಿದೆ. ನಾನು ಭವಿಷ್ಯದಲ್ಲಿ ವಿಶಿಷ್ಟವಾದ ಎಲೆಕ್ಟ್ರಿಕ್ ಚಾಪರ್ ಬೈಕ್ ತಯಾರಿಸಲು ಪ್ರಯತ್ನಿಸುತ್ತೇನೆ.

ಪ್ರಶ್ನೆ:ಆಟೋಮೊಬೈಲ್ ಉದ್ದಿಮೆಯಲ್ಲಿ ತೀವ್ರ ಆಸಕ್ತಿಯುಳ್ಳ ವ್ಯಕ್ತಿಯಾಗಿ, ದಯವಿಟ್ಟು ಆಟೋಮೊಬೈಲ್ಸ್ ನೊಂದಿಗೆ ನಿಮ್ಮ ಯಶಸ್ಸಿನ ಕೆಲವು ಕಥೆಗಳನ್ನು ಹಂಚಿಕೊಳ್ಳುತ್ತೀರಾ.
ಉತ್ತರ:ಆಟೋಮೊಬೈಲ್ಸ್ ಭವಿಷ್ಯ ಹಾಗೂ ಹೊಸ ತಂತ್ರಜ್ಞಾನಗಳೊಂದಿಗೆ ಬರುತ್ತಿದ್ದು, ಯುವಜನತೆ ಎಲೆಕ್ಟ್ರಿಕ್ ಅಥವಾ ಇಂಧನ ಚಾಲಿತ ಯಾವುದೇ ಇರಲಿ, ವಿವಿಧ ರೀತಿಯ ವಾಹನಗಳ ಬಗ್ಗೆ ಹೆಚ್ಚು ಆಸಕ್ತರಾಗಿದ್ದಾರೆ.  ನಾನೂ ಸಹ ಬಾಲ್ಯದಿಂದ ಕಾರ್ ಮತ್ತು ಬೈಕ್ ಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದೆ ಮತ್ತು ಈ ಉದ್ದಿಮೆಯಲ್ಲಿ ಏನಾದರೂ ವಿಶಿಷ್ಟವಾಗಿ ತಯಾರಿಸಬೇಕೆಂದು ಬಯಸಿದ್ದೆ. ನಾನು ವಿಶ್ವದ ಅತಿದೊಡ್ಡ ಚಾಪರ್ ಬೈಕ್ ತಯಾರಿಸಲು ಯೋಚಿಸಿದ್ದೆ, ಹಾಗೂ ಕೇವಲ 45 ದಿನಗಳಲ್ಲಿ ಅದನ್ನು ವಿನ್ಯಾಸಗೊಳಿಸಿದೆ. ನಾನು ಮೋಜ್ ನ ಶಾರ್ಟ್ ವೀಡಿಯೋ ಪ್ಲಾಟ್ ಫಾರ್ಮ್ ಬೆಂಬಲದ ಮೂಲಕ ನನ್ನ ಬೈಕ್ ಜನಪ್ರಿಯಗೊಳಿಸಿದೆ. ಪ್ಲಾಟ್ ಫಾರ್ಮ್ ನನ್ನ ಕನಸುಗಳನ್ನು ಸಾಧಿಸಲು ಅತ್ಯಂತ ಬೆಂಬಲ ನೀಡಿದೆ. 

ಪ್ರಶ್ನೆ: ಮೋಟಾರ್ ವಾಹನ ಕಾಯ್ದೆಗಳು ಬದಲಾಗುತ್ತಿರುವುದರಿಂದ, ಬೈಕ್ ಮತ್ತು ವಾಹನ ಮಾರ್ಪಾಡು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ನೀವು ಅದರಿಂದಾಗಿ ಯಾವ ಸಮಸ್ಯೆಗಳನ್ನು ಎದುರಿಸಿದ್ದೀರಿ? 
ಉತ್ತರ:ಇಲ್ಲಿಯವರೆಗೆ, ಇದಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಸಮಸ್ಯೆ ಎದುರಿಸಿಲ್ಲ, ಆದರೆ ಮೋಟಾರ್ ವಾಹನ ಕಾಯ್ದೆಗೆ ಬದ್ಧನಾಗಿ ಕೆಲಸ ಮಾಡಲು ಪೂರ್ಣವಾಗಿ ಒಪ್ಪಿದ್ದೇನೆ.
 

Latest Videos
Follow Us:
Download App:
  • android
  • ios