Asianet Suvarna News Asianet Suvarna News

Electric Bike 273KM ವೇಗ, 235 ಕಿ.ಮೀ ಮೈಲೇಜ್, ಮಾರುಕಟ್ಟೆಗೆ ಅತ್ಯಂತ ಆಕರ್ಷಕ ಬೈಕ್ ಅನಾವರಣ!

  • ಸ್ಪೋರ್ಟ್ಸ್ ಬೈಕ್ ಮೀರಿಸಬಲ್ಲ ಅತ್ಯಂತ ಆಕರ್ಷಕ ಬೈಕ್ HyperFighter
  • ಒಂದು ಬಾರಿ ಚಾರ್ಜ್ ಮಾಡಿದರೆ 235 ಕಿಲೋಮೀಟರ್ ಮೈಲೇಜ್
  • ಈ ಬೈಕ್‌ನ ಟಾಪ್ ಸ್ಪೀಡ್ 273 ಕಿ.ಮೀ. ಅತ್ಯಂತ ಶಕ್ತಿಶಾಲಿ ಎಲೆಕ್ಟ್ರಿಕ್ ಬೈಕ್
Canadian HyperFighter Colossus electric sports bike unveils 273 kmph top speed 235 kms mileage range ckm
Author
Bengaluru, First Published Jan 7, 2022, 1:47 PM IST

ಕೆನಡಾ(ಜ.07):  ಎಲೆಕ್ಟ್ರಿಕ್ ವಾಹನದಲ್ಲಿ(Electric Vehicle) ಪ್ರತಿದಿನ ಆವಿಷ್ಕಾರಗಳು ಸಂಶೋಧನೆಗಳು ನಡೆಯುತ್ತಿದೆ. ಹೀಗಾಗಿ ಹೆಚ್ಚು ಮೈಲೇಜ್, ಗರಿಷ್ಠ ವೇಗ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್ ಇದೀಗ ಲಭ್ಯವಾಗುತ್ತಿದೆ. ಇದೀಗ ಸ್ಪೋರ್ಟ್ಸ್ ಬೈಕ್‌ಗಳನ್ನೇ(Sports Bike) ಮೀರಿಸಬಲ್ಲ ಎಲೆಕ್ಟ್ರಿಕ್ ಬೈಕ್ ಅನಾವರಣಗೊಂಡಿದೆ. ಇದರ ಹೆಸರು ಹೈಪರ್ ಫೈಟರ್ ಕೊಲೊಸಸ್(HyperFighter Colossus) ಸ್ಪೋರ್ಟ್ಸ್ ಬೈಕ್. ಇದರ ಟಾಪ್ ಸ್ಪೀಡ್ 273 ಕಿಲೋಮೀಟರ್ ಪ್ರತಿ ಗಂಟೆಗೆ. ಇನ್ನು ಒಂದು ಬಾರಿ ಚಾರ್ಜ್ ಮಾಡಿದರೆ 235 ಕಿ.ಮೀ ಮೈಲೇಜ್ ನೀಡಲಿದೆ. ಈ ಬೈಕ್ ಕೆನಾಡದ(Canada) ಸ್ಟಾರ್ಟ್ಆಪ್ ಕಂಪನಿ ಡ್ಯಾಮೊನ್ ಮೋಟಾರ್ಸ್ ಅನಾವರಣ ಮಾಡಿದೆ.

HyperFighter ಎಲೆಕ್ಟ್ರಿಕ್ ಬೈಕ್ ಕೇವಲ ಮೈಲೇಜ್(Mileage) ಹಾಗೂ ಟಾಪ್ ಸ್ಪೀಡ್‌ನಿಂದ ಮಾತ್ರ ಗಮನಸೆಳೆದಿಲ್ಲ. ಅತ್ಯಂತ ಆಕರ್ಷಕವಾಗಿರುವ ಈ ಬೈಕ್ ವಿನ್ಯಾಸದಲ್ಲೂ ಇದೀಗ ಎಲ್ಲರ ಗಮನಸೆಳೆದಿದೆ. ಹೊಚ್ಚ ಹೊಸ ಎಲೆಕ್ಟ್ರಿಕ್ ಬೈಕ್ ಸದ್ಯ ವಿಶ್ವದಲ್ಲೇ ಗರಿಷ್ಠ ಸ್ಪೀಡ್ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. HyperFighter ಎಲೆಕ್ಟ್ರಿಕ್ ಬೈಕ್‌ನಲ್ಲಿ 20 kWh ಬ್ಯಾಟರಿ ಬಳಸಲಾಗಿದೆ. 200hp ಪವರ್ ಹೊಂದಿರುವ ಈ ಬೈಕ್ ಕೇವಲ 3 ಸೆಕೆಂಡ್‌ನಲ್ಲಿ 100 ಕಿ.ಮೀ ವೇಗ ತಲುಪಲಿದೆ.

Electric Bike 120 ಕಿ.ಮೀ ಮೈಲೇಜ್ ನೀಡಬಲ್ಲ ಆಕರ್ಷಕ ಸೈಬಾರ್ಗ್ ಯೋದಾ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಅನಾವರಣ!

ಈ ಬೈಕ್‌ನಲ್ಲಿ ಹಲವು ಅತ್ಯಾಧುನಿಕ ಫೀಚರ್ಸ್ ಸೇರಿಸಲಾಗಿದೆ. ರೇಡಾರ್, ಸೆನ್ಸಾರ್, 360 ಡಿಗ್ರಿ ಅಪಾಯ ಸೇರಿದಂತೆ ರಿಸ್ಕ್ ವಾರ್ನಿಂಗ್ ಸಿಸ್ಟಮ್ ಹೊಂದಿದೆ. ಇದೀಗ ಕೆನಾಡದಲ್ಲಿ ಈ ಬೈಕ್ ಭಾರಿ ಸದ್ದು ಮಾಡುತ್ತಿದೆ. ಶೀಘ್ರದಲ್ಲೇ ವಿಶ್ವದಲ್ಲೇ ಈ ಬೈಕ್ ಲಾಂಚ್ ಮಾಡಲು ಡ್ಯಾಮೋರ್ ಮೋಟಾರ್ಸ್ ಸಜ್ಜಾಗಿದೆ.

ರೇಸ್ ದೃಷ್ಟಿಯಲ್ಲಿಟ್ಟುಕೊಂಡು ನೂತನ ಬೈಕ್ ನಿರ್ಮಿಸಲಾಗಿದೆ. ಸಾಮಾನ್ಯ ಬಳಕೆಗೆ ಈ ಬೈಕ್ ಉತ್ತಮವಾಗಿದೆ. ಎಲೆಕ್ಟ್ರಿಕ್ ಬೈಕ್ ಆಗಿರುವ ಕಾರಣ ಇದರ ನಿರ್ವಹಣೆ ಬಲು ಸುಲಭವಾಗಿದೆ. ಸುಲಭ ಚಾರ್ಜಿಂಗ್ ಮೂಲಕ ಬ್ಯಾಟರಿ(Battery) ಚಾರ್ಜ್ ಆಗಲಿದೆ. ಬ್ಯಾಟರಿ ಸಂಪೂರ್ಣ ಬ್ಯಾಟರಿ ಚಾರ್ಜ್ ಆಗಲು ಎಷ್ಟು ಸಮಯ ತೆಗೆದುಕೊಳ್ಳಲಿದೆ ಅನ್ನೋ ಮಾಹಿತಿಯನ್ನು ಕಂಪನಿ ಬಹಿರಂಗಪಡಿಸಿಲ್ಲ. ಆದರೆ 20 ನಿಮಿಷದಲ್ಲಿ ಶೇಕಡಾ 60 ರಷ್ಟು ಬ್ಯಾಟರಿ ಚಾರ್ಜ್ ಆಗಲಿದೆ ಎಂದು ಕಂಪನಿ ಹೇಳಿದೆ.

Electric Cruiser Bike: ಭಾರತದ ಮೊದಲ ಕ್ರ್ಯೂಸರ್ ಎಲೆಕ್ಟ್ರಿಕ್ ಬೈಕ್ ಕೋಮಾಕಿ ಶೀಘ್ರದಲ್ಲೇ ಬಿಡುಗಡೆ, 250 KM ಮೈಲೇಜ್!

HyperFighter ಎಲೆಕ್ಟ್ರಿಕ್ ಬೈಕ್ ಬೆಲೆ:
ಗರಿಷ್ಠ ಮೈಲೇಜ್, ಗರಿಷ್ಠ ಸ್ಪೀಡ್ ಹೊಂದಿರುವ ಎಲೆಕ್ಟ್ರಿಕ್ ಬೈಕ್ ಖರೀದಿಗೆ ಇದೀಗ ಜನರು ಮುಗಿಬಿದ್ದಿದ್ದಾರೆ. ಅಮೆರಿಕದಲ್ಲಿ ನೂತನ ಬೈಕ್ ಬುಕಿಂಗ್ ಕೂಡ ಆರಂಭಗೊಂಡಿದೆ. ಇದರ ಬೆಲೆ 35,000 ಅಮೇರಿಕನ್ ಡಾಲರ್. ಭಾರತೀಯ ರೂಾಯಿಗಳಲ್ಲಿ 2,59,9240 ರೂಪಾಯಿ(ಎಕ್ಸ್  ಶೋ ರೂಂ). 

ಸುರಕ್ಷತೆ ಫೀಚರ್ಸ್:
HyperFighter ಎಲೆಕ್ಟ್ರಿಕ್ ಬೈಕ್ ಅತ್ಯಂತ ಸುರಕ್ಷತೆ ಬೈಕ್ ಎಂದು ಡ್ಯಾಮನ್ ಮೋಟಾರ್ಸ್ ಹೇಳಿದೆ. ಅತ್ಯಾಧುನಿಕ ಬ್ರೇಕಿಂಗ್ ಸಿಸ್ಟಮ್, ರಿಸ್ಕ್ ಅಲರಾಂ ಹೊಂದಿದೆ. ಇಷ್ಟೇ ಅಲ್ಲ, ನ್ಯಾವಿಗೇಶನ್ ಮೂಲಕ ರಸ್ತೆಯಲ್ಲಿನ ಹಂಪ್ ಸೇರಿದಂತೆ ಇತರ ಎಚ್ಚರಿಕೆಗಳನ್ನು ಇದು ಉಲ್ಲೇಖಿಸಲಿದೆ. 

Electric 2 Wheeler Sales ಕೇಂದ್ರದ ಸಬ್ಸಿಡಿಯಿಂದ ಹೊಸ ದಾಖಲೆ ನಿರ್ಮಾಣ, ವಾರಕ್ಕೆ 5,000 ಟು ವ್ಹೀಲರ್ ಸೇಲ್!

ಶೀಘ್ರದಲ್ಲಿ HyperFighter ಕೈಗೆಟುಕುವ ದರದಲ್ಲಿ ಬೈಕ್ 
ಡ್ಯಾಮನ್ ಮೋಟಾರ್ಸ್ ಬಿಡುಗಡೆ ಮಾಡಿರುವ HyperFighter ಬೈಕ್ 235 ಕಿಲೋಮೀಟರ್ ಮೈಲೇಜ್ ಹೊಂದಿದೆ. ಇದರ ಬೆಲೆಯು ದುಬಾರಿಯಾಗಿದೆ. ಹೀಗಾಗಿ ಕೈಗೆಟುಕುವ ದರದ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. 150 ರಿಂದ 170 ಕಿ.ಮೀ ಮೈಲೇಜ್ ನೀಡಲಿರುವ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. 1 ರಿಂದ 1.5 ಲಕ್ಷ ರೂಪಾಯಿ ಮೌಲ್ಯದ ಬೈಕ್ ಇದಾಗಿದ್ದು, ಜನಸಾಮಾನ್ಯರಿಗೂ ಬಳಕೆ ಮಾಡಬಹುದಾಗಿದೆ ಎಂದು ಡ್ಯಾಮನ್ ಮೋಟಾರ್ಸ್ ಹೇಳಿದೆ.
 

Follow Us:
Download App:
  • android
  • ios