Asianet Suvarna News Asianet Suvarna News

Electric Bike ಊಹೆಗೂ ಮೀರಿದ ಆಕರ್ಷಕ ಆರ್ಕ್ ವೆಕ್ಟರ್ ಎಲೆಕ್ಟ್ರಿಕ್ ಬೈಕ್ ಡೆಲಿವರಿ ಆರಂಭ, ಬೆಲೆ 91 ಲಕ್ಷ ರೂ!

  • ಇದು ವಿಶ್ವದ ಅತೀ ಆಕರ್ಷಕ, ಎಲೆಕ್ಟ್ರಿಕ್ ಬೈಕ್
  • ಅತೀ ದುಬಾರಿ ಎಲೆಕ್ಟ್ರಿಕ್ ಬೈಕ್, ಬೆಲೆ 91 ಲಕ್ಷ ರೂ
  • ಒಂದು ಬಾರಿ ಚಾರ್ಜ್ ಮಾಡಿದರೆ 322 ಕಿ.ಮೀ ಮೈಲೇಜ್
UK based Arc Vector electric bike set to start Deliver with hefty price tag of Rs 91 lakh ckm
Author
Bengaluru, First Published Jan 16, 2022, 8:49 PM IST

ಲಂಡನ್(ಜ.16): ಎಲೆಕ್ಟ್ರಿಕ್ ವಾಹನದ ತಂತ್ರಜ್ಞಾನ, ವಿನ್ಯಾಸಗಳು ನಮ್ಮ ಊಹೆಗೂ ಮೀರುವಂತಿದೆ. ಅತ್ಯಾಧುನಿಕ ಟೆಕ್ನಾಲಜಿ ಬಳಸಿ ಹೊಸ ಹೊಸ ಎಲೆಕ್ಟ್ರಿಕ್ ವಾಹನ(Electric Vehicle) ಮಾರುಕಟ್ಟೆ ಪ್ರವೇಶಿಸುತ್ತಿದೆ. ಇನ್ನು ವಿನ್ಯಾಸದಲ್ಲಿ ಒಂದನ್ನೊಂದು ಮೀರಿಸುವಂತ ಡಿಸೈನ್. ಈ ಸಾಲಿಗೆ ಇದೀಗ ಆರ್ಕ್ ವೆಕ್ಟರ್(Arc Vector) ಎಲೆಕ್ಟ್ರೈಕ್ ಬೈಕ್ ಸೇರಿಕೊಂಡಿದೆ. ಇದು ಅತೀ ಆಕರ್ಷಕ ವಿನ್ಯಾಸದ ಬೈಕ್. ಇಷ್ಟೇ ಅಲ್ಲ ಅತೀ ದುಬಾರಿ ಬೈಕ್. ಈ ಬೈಕ್ ಬೆಲೆ ಬರೋಬ್ಬರಿ 91 ಲಕ್ಷ ರೂಪಾಯಿ. ಇದೀಗ ಈ ಬೈಕ್ ಡೆಲಿವರಿ ಆರಂಭಗೊಂಡಿದೆ.

ಲಂಡನ್(London) ಮೂಲದ ಆರ್ಕ್ ವೆಹಿಕಲ್ಸ್ ಕಂಪನಿ ನೂತನ ಆರ್ಕ್ ವೆಕ್ಟರ್ ಎಲೆಕ್ಟ್ರಿಕ್ ಬೈಕ್ ಭಾರಿ ಸಂಚಲನ ಸೃಷ್ಟಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ನೂತನ ಆರ್ಕ್ ವೆಕ್ಟರ್ ಬೈಕ್ ಡೆಲಿವರಿ ಆರಂಭಿಸುತ್ತಿದೆ ಎಂದು ಕಂಪನಿ ಘೋಷಿಸಿದೆ. ಹೈಪರ್ ನೇಕೆಡ್ ಎಲೆಕ್ಟ್ರಿಕ್ ಬೈಕ್(Electric Bike) ಒಂದೇ ನೋಟಕ್ಕೆ ಬೈಕ್ ಪ್ರಿಯರ ಮನಸೂರೆಗೊಳ್ಳಲಿದೆ. ಕಾರಣ ಇದು ಹೊಸ ವಿನ್ಯಾಸ, ಹಾಗೂ ಹೊಸ ತಂತ್ರಜ್ಞಾನದ(Advance Tech) ಬೈಕ್ ಆಗಿದೆ.

Electric Bike 273KM ವೇಗ, 235 ಕಿ.ಮೀ ಮೈಲೇಜ್, ಮಾರುಕಟ್ಟೆಗೆ ಅತ್ಯಂತ ಆಕರ್ಷಕ ಬೈಕ್ ಅನಾವರಣ!

ಆರ್ಕ್ ವೆಕ್ಟರ್ ಎಲೆಕ್ಟ್ರಿಕ್ ಬೈಕ್ ಬೆಲೆ ಲಂಡನ್‌ನಲ್ಲಿ 90,000 GBP. ಇದನ್ನು ಭಾರತೀಯ ರೂಪಾಯಿಗಳಲ್ಲಿ 91 ಲಕ್ಷ ರೂಪಾಯಿ. ಇದು 2018-19ರಲ್ಲಿ ಬೈಕ್ ಅನಾವರಣದ ವೇಳೆ ಘೋಷಿಸಿದ ಬೆಲೆ. ಆದರೆ 2022ರಲ್ಲಿ ಈ ಬೈಕ್ ಡೆಲಿವರಿ ಆರಂಭಿಸಿದೆ. ಕಳೆದೆರಡು ವರ್ಷದಲ್ಲಿ ಎಲ್ಲಾ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಈ ಬೆಲೆ ಸರಿಸುಮಾರು 1 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

ಹಲವು ಅಡೆತಡೆಗಳನ್ನು ಎದುರಿಸಿದ ಆರ್ಕ್ ವೆಹಿಕಲ್ಸ್ ಕಂಪನಿ 2019ರಲ್ಲಿ ದಿವಾಳಿಯಾಗಿತ್ತು. ಕಂಪನಿಯಲ್ಲಿ  ಹೂಡಿಕೆ ಮಾಡಿದ್ದ ಕೆಲವರು ದಿಢೀರ್ ಕಂಪನಿಯಿಂದ ದೂರ ಸರಿದಿದ್ದರು. ಇದರ ಜೊತೆಗೆ ಉತ್ಪಾದನೆ ಕಾಣದೆ ಇತರ ಆದಾಯಗಳಿಲ್ಲದೆ ಕಂಪನಿ ದಿವಾಳಿಯಾಗಿತ್ತು. ಹೀಗಾಗಿ ಆರ್ಕ್ ವೆಕ್ಟರ್ ಎಲೆಕ್ಟ್ರಿಕ್ ಬೈಕ್ ಉತ್ಪಾದನೆ ವಿಳಂಭವಾಗಿತ್ತು. 2020ರಲ್ಲಿ ಹೊಸ ಹೂಡಿಕೆದಾರರ ನೆರವಿನೊಂದಿಗೆ ಕಂಪನಿ ಮತ್ತೆ ಕಾರ್ಯಾರಂಭಗೊಂಡಿತು. ಇದೀಗ ಬೈಕ್ ಡೆಲಿವರಿ ಹಂತಕ್ಕೆ ತಲುಪಿದೆ.

Electric Bike 120 ಕಿ.ಮೀ ಮೈಲೇಜ್ ನೀಡಬಲ್ಲ ಆಕರ್ಷಕ ಸೈಬಾರ್ಗ್ ಯೋದಾ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಅನಾವರಣ!

ನೂತನ ಎಲೆಕ್ಟ್ರಿಕ್ ಬೈಕ್‌ನಲ್ಲಿ 95 kW (127 hp) ಪವರ್ ಎಲೆಕ್ಟ್ರಿಕ್ ಮೋಟಾರ್ ಬಳಸಲಾಗಿದೆ. ಬೈಕ್ ಗರಿಷ್ಠ ವೇಗ 200 ಕಿ.ಮೀ ಪ್ರತಿ ಗಂಟೆಗೆ. ಇನ್ನು 0 ಯಿಂದ 100 ಕಿ.ಮೀ ವೇಗ ತಲುಪಲ ಈ ಬೈಕ್ 3.2 ಸೆಕೆಂಡ್ ತೆಗೆದುಕೊಳ್ಳಲಿದೆ. 16.8-kWh ಬ್ಯಾಟರಿ ಪ್ಯಾಕ್ ಬಳಸಲಾಗಿದೆ. ಇದರಿಂದ ಒಂದು ಬಾರಿ ಚಾರ್ಜ್ ಮಾಡಿದರೆ 322 ಕಿಲೋಮೀಟರ್ ಮೈಲೇಜ್(Mileage) ನೀಡಲಿದೆ. ವಿಶೇಷ ಅಂದರೆ ಥರ್ಡ್ ಪಾರ್ಟಿ ಪರೀಕ್ಷೆ ವೇಳೆ ಈ ಬೈಕ್ 582 ಕಿಲೋಮೀಟರ್ ಮೈಲೇಜ್ ನೀಡಿದೆ ಎಂದು ವರದಿಯಾಗಿದೆ. ಆದರೆ ಕಂಪನಿ ಅಧಿಕೃತವಾಗಿ 322 ಕಿ.ಮೀ ಮೈಲೇಜ್ ರೇಂಜ್ ಎಂದಿದೆ. ಡಿಸಿ ಫಾಸ್ಟ್ ಚಾರ್ಜಿಂಗ್ ಮೂಲಕ ಈ ಬೈಕ್ 45 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ.

Electric 2 Wheeler Sales ಕೇಂದ್ರದ ಸಬ್ಸಿಡಿಯಿಂದ ಹೊಸ ದಾಖಲೆ ನಿರ್ಮಾಣ, ವಾರಕ್ಕೆ 5,000 ಟು ವ್ಹೀಲರ್ ಸೇಲ್!

ಸದ್ಯ ಈ ಬೈಕ್ ಲಂಡನ್‌ನಲ್ಲಿ ಮಾತ್ರ ಲಭ್ಯವಿದೆ. ಈಗಷ್ಟೇ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿರುವ ಆರ್ಕ್ ವೆಹಿಕಲ್ಸ್ ಇತರ ದೇಶದಲ್ಲಿ ಬೈಕ್ ವಿತರಣೆ ಕುರಿತು ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಹೀಗಾಗಿ ಈ ಬೈಕ್ ಇತರ ದೇಶಗಳಲ್ಲಿ ಮಾರಾಟ ಜಾಲ ಆರಂಭಿಸಲು ವರ್ಷಗಳೇ ಉರಳುವು ಸಾಧ್ಯತೆ ಇದೆ. ಲಂಡನ್‌ನಲ್ಲಿ ಇದೀಗ ಆರ್ಕ್ ವೆಕ್ಟರ್ ಎಲೆಕ್ಟ್ರಿಕ್ ಸೂಪರ್  ಬೈಕ್‌ಗೆ ಬಾರಿ ಭೇಡಿಕೆ ವ್ಯಕ್ತವಾಗಿದೆ.
 

Follow Us:
Download App:
  • android
  • ios